ಇನ್ಸ್ಟಾಗ್ರಾಂನಲ್ಲಿ ಮುಂದಿನ ವರ್ಷದಿಂದ ಶಾಪಿಂಗ್ ಕೂಡ ಮಾಡಬಹುದು!

|

ಫೇಸ್ ಬುಕ್ ಮಾಲೀಕತ್ವದ ಇನ್ಸ್ಟಾಗ್ರಾಂ ಮುಂದಿನ ವರ್ಷ ಅಂದರೆ 2019 ರಲ್ಲಿ ಭಾರತದಲ್ಲಿ ಶಾಪಿಂಗ್ ಫೀಚರ್ ನ್ನು ಬಿಡುಗಡೆಗೊಳಿಸುವ ಸಾಧ್ಯತೆ ಇದೆ. ಇನ್ಸ್ಟಾಗ್ರಾಂ ಆಪ್ ನಲ್ಲಿಯೇ ಗ್ರಾಹಕರಿಗೆ ತಮ್ಮ ಇಷ್ಟದ ವಸ್ತುಗಳನ್ನು ಖರೀದಿಸುವುದಕ್ಕೆ ಅವಕಾಶ ನೀಡಲಾಗುತ್ತದೆ.

ಆಪ್ ನಲ್ಲಿಯೇ ಖರೀದಿಗೆ ಅವಕಾಶ:

ಆಪ್ ನಲ್ಲಿಯೇ ಖರೀದಿಗೆ ಅವಕಾಶ:

ಪ್ರಾರಂಭಿಕವಾಗಿ ಖರೀದಿಸು ಅಥವಾ ಬುಯ್ ಬಟನ್ ನ್ನು ಕ್ಲಿಕ್ಕಿಸುವ ಮೂಲಕ ಅದು ಮಾರಾಟಗಾರರ ವೆಬ್ ಸೈಟ್ ಗೆ ನಿಮ್ಮನ್ನ ಕರೆದೊಯ್ಯುತ್ತದೆ.ಆದರೆ ಭವಿಷ್ಯದಲ್ಲಿ ಇನ್ಸ್ಟಾಗ್ರಾಂ ಆಪ್ ನ ಒಳಗಡೆಯೇ ಖರೀದಿಸುವಿಕೆಗೆ ಅವಕಾಶ ನೀಡಲಾಗುತ್ತದೆ.

46 ದೇಶಗಳಲ್ಲಿ ಈಗಾಗಲೇ ಲಭ್ಯವಿರುವ ಫೀಚರ್ :

46 ದೇಶಗಳಲ್ಲಿ ಈಗಾಗಲೇ ಲಭ್ಯವಿರುವ ಫೀಚರ್ :

ನವೆಂಬರ್ 2016 ರಲ್ಲಿ ಯುನೈಟೆಡ್ ಸ್ಟೇಟ್ಸ್ ನಲ್ಲಿ ಇನ್ಸ್ಟಾಗ್ರಾಂ ತನ್ನ ಶಾಪಿಂಗ್ ಫೀಚರ್ ನ ಪ್ರಾರಂಭಿಕ ಟ್ರಯಲ್ ರನ್ ನ್ನು ನಡೆಸಿದೆ ಮತ್ತು ಇದೀಗ ವಿಶ್ವದಾದ್ಯಂತ 46 ದೇಶಗಳಲ್ಲಿ ಇದು ಲಭ್ಯವಿದೆ.

ಭಾರತವೂ ಸೇರಿದಂತೆ ಜಾಗತಿಕವಾಗಿ ಬೇರೆಬೇರೆ ದೇಶಗಳಲ್ಲಿ ಈ ಫೀಚರ್ ನ್ನು ಮುಂದಿನ ದಿನಗಳಲ್ಲಿ ತರಲಾಗುತ್ತದೆ ಎಂದು ಇನ್ಸ್ಟಾಗ್ರಾಂನ ವಕ್ತಾರರು ತಿಳಿಸಿದ್ದಾರೆ ಎಂದು ಇಟಿಟೆಕ್ ವರದಿ ಮಾಡಿದೆ.

ಇನ್ಸ್ಟಾಗ್ರಾಂ ಶಾಪಿಂಗ್ ಹೇಗಿರುತ್ತದೆ?

ಇನ್ಸ್ಟಾಗ್ರಾಂ ಶಾಪಿಂಗ್ ಹೇಗಿರುತ್ತದೆ?

ಪ್ರತಿ ತಿಂಗಳು 90 ಮಿಲಿಯನ್ ಅಕೌಂಟ್ ನಲ್ಲಿ ಶಾಪಿಂಗ್ ಪೋಸ್ಟ್ ಟ್ಯಾಪ್ ಆಗುತ್ತದೆ ಎಂದು ಇನ್ಸ್ಟಾಗ್ರಾಂ ಹೇಳಿದೆ. ಪ್ರೊಡಕ್ಟ್ ಟ್ಯಾಬ್ ಅಥವಾ ಸ್ಟಿಕ್ಕರ್ ನ್ನು ಟ್ಯಾಪ್ ಮಾಡಿದ ನಂತರ ಇನ್ಸ್ಟಾಗ್ರಾಂನಲ್ಲಿ ಪ್ರೊಡಕ್ಟ್ ನ ವಿವರದ ಪೇಜ್ ಗೆ ಕರೆದುಕೊಂಡು ಹೋಗಲಾಗುತ್ತದೆ. ಅಲ್ಲಿಂದ, ಅವರು ವ್ಯಾಪಾರಿಗಳ ವೆಬ್ ಸೈಟ್ ಗೆ ತೆರಳಬಹುದು ಮತ್ತು ಪ್ರೊಡಕ್ಟ್ ನ್ನು ಸೇವ್ ಮಾಡಬಹುದು ಅಥವಾ ಇತರೆ ಪ್ರೊಡಕ್ಟ್ ಗಳನ್ನು ಇನ್ಸ್ಟಾಗ್ರಾಂನಲ್ಲಿ ಬ್ರೌಸ್ ಮಾಡಬಹುದು.

ಇನ್ಸ್ಟಾಗ್ರಾಂ ತನ್ನ ಸದಸ್ಯರಿಗೆ ಪ್ರತಿ ಇಮೇಜ್ ಅಥವಾ ವಿಡಿಯೋಗೆ 5 ಪ್ರೊಡಕ್ಟ್ ಗಳಿಗೆ ಮತ್ತು ಏರಿಳಿಗೆಗೆ 20 ಪ್ರೊಡಕ್ಟ್ ಗಳ ವರೆಗೆ ಟ್ಯಾಗ್ ಮಾಡಲು ಅವಕಾಶ ನೀಡುತ್ತದೆ. ಸ್ಟೋರೀಸ್ ನಲ್ಲಿ ಮಾರಾಟಗಾರರು ಪ್ರೊಡಕ್ಟ್ ಗಳನ್ನು ಪ್ರೊಡಕ್ಟ್ ಸ್ಟಿಕ್ಕರ್ ಬಳಸಿ ವೀಡಿಯೋ ಅಥವಾ ಇಮೇಜ್ ಗಳ ಮೂಲಕ ಸೇರಿಸುವುದಕ್ಕೆ ಅವಕಾಶವಿರುತ್ತದೆ.

200 ಮಿಲಿಯನ್ ಅಕೌಂಟ್ ಗಳಲ್ಲಿ ಖರೀದಿ:

200 ಮಿಲಿಯನ್ ಅಕೌಂಟ್ ಗಳಲ್ಲಿ ಖರೀದಿ:

ಟ್ಯಾಗ್ ಆಗಿರುವ ಪ್ರೊಡಕ್ಟ್ ಜೊತೆಗಿನ ಪೋಸ್ಟ್ ನ್ನು ಮಾರಾಟಗಾರರ ಜೊತೆಗೆ ಹಂಚಿಕೊಳ್ಳಬಹುದು. 200 ಮಿಲಿಯನ್ ಅಕೌಂಟ್ ಗಳು ಪ್ರತಿ ದಿನ ಭೇಟಿ ನೀಡುವಲ್ಲಿ ಅದನ್ನು ಗಮನಿಸಬಹುದು.

ಒನ್ ಕ್ಲಿಕ್ ಪೇಮೆಂಟ್ ಗೆ ಪ್ಲಾನ್:

ಒನ್ ಕ್ಲಿಕ್ ಪೇಮೆಂಟ್ ಗೆ ಪ್ಲಾನ್:

2019 ರಿಂದ ಇನ್ಸ್ಟಾಗ್ರಾಂ ಆಪ್ ನ ಒಳಗಡೆಯೇ ಪೇಮೆಂಟ್ ಪ್ರಕ್ರಿಯೆ ನಡೆಸುವುದಕ್ಕೂ ಕೂಡ ಚಿಂತನೆ ನಡೆಸಿದೆ ಅಂದರೆ ಬಳಕೆದಾರರು ಆಪ್ ನಿಂದ ಹೊರಗಡೆ ಹೋಗದೆಯೇ ಪಾವತಿ ಪ್ರಕ್ರಿಯೆ ನಡೆಸಲು ಅನುಮತಿ ನೀಡುವ ಅವಕಾಶ ಇನ್ಸ್ಟಾಗ್ರಾಂನಲ್ಲಿ ಲಭ್ಯವಾಗಲಿದೆ.

ಇಕಾಮರ್ಸ್ ಪ್ರದರ್ಶನದ ಅಭಿವೃದ್ಧಿ:

ಇಕಾಮರ್ಸ್ ಪ್ರದರ್ಶನದ ಅಭಿವೃದ್ಧಿ:

ಇಕಾಮರ್ಸ್ ಪ್ರದರ್ಶನವನ್ನು ಇನ್ಸ್ಟಾಗ್ರಾಂ ದಿನದಿಂದ ದಿನಕ್ಕೆ ಹೆಚ್ಚಿಸುತ್ತದೆ ಎಂದು ನಂಬಲಾಗಿದ್ದು ಶಾಪಿಂಗ್ ಪ್ರೊಸೆಸ್ ನ್ನು ಇನ್ನಷ್ಟು ಸರಳೀಕರಿಸುವ ನಿರೀಕ್ಷೆ ಇದೆ. ಕೇವಲ ಒಂದೇ ಕ್ಲಿಕ್ ನಲ್ಲಿ ಖರೀದಿದಾರರು ಪ್ರೊಡಕ್ಟ್ ಪೇಜ್ ಗೆ ತೆರಳಿ ಅದನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳುವ ಸದವಕಾಶ ನೀಡುತ್ತದೆ ಎಂದು ನಂಬಲಾಗಿದೆ. ಇದು ಹುಡುಕಾಟದ ಸಮಯ ಮತ್ತು ಶಾಪಿಂಗ್ ಸಮಯದಲ್ಲಿ ನಡೆಯುವ ಹಲವಾರು ಕ್ಲಿಕ್ ಗಳನ್ನು ಕಡಿಮೆ ಗೊಳಿಸುವ ಉದ್ದೇಶ ಹೊಂದಿದ್ದು ಒಟ್ಟಾರೆ ಆದಾಯ ಮತ್ತು ಕಂಪೆನಿಯ ಏಳಿಗೆಗೆ ನೆರವಾಗುವ ಸಾಧ್ಯತೆ ಇದೆ.

Best Mobiles in India

English summary
You will be able to shop on Instagram from next year

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X