Home
Social media

ಕದ್ದು ಮುಚ್ಚಿ ಯುಟ್ಯೂಬ್ ನಲ್ಲಿ ವಿಡಿಯೋ ನೋಡುವವರಿಗೆ ಇಲ್ಲೊಂದು ಹೊಸ ಆಯ್ಕೆ...!

By Srinidhi

ದೇಶಿಯ ಮಾರುಕಟ್ಟೆಯಲ್ಲಿ ಸಾಕಷ್ಟು ಖ್ಯಾತಿಯನ್ನು ಪಡೆದು ಕೊಂಡಿರುವ ವಿಡಿಯೋ ಆಪ್ ಗಳ ಸಾಲಿನಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಅದರಲ್ಲಿಯೂ ದೇಶದಲ್ಲಿ ಡೇಟಾ ಕ್ರಾಂತಿಯೂ ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವ ಕಾರಣ ಹೆಚ್ಚಿನ ಮಂದಿ ಯ್ಯೂಟೂಬ್ ಅನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲಿಯೂ ಸ್ಮಾರ್ಟ್ ಫೋನಿನಲ್ಲಿ ಆಪ್ ಮೂಲಕವೇ ಬಳಕೆ ಮಾಡಿಕೊಳ್ಳುವವರ ಸಂಖ್ಯೆಯೂ ಅತೀ ಹೆಚ್ಚಿನ ಪ್ರಮಾಣದಲ್ಲಿದೆ. ಈ ಹಿನ್ನಲೆಯಲ್ಲಿ ಗೂಗಲ್ ತನ್ನ ಆಪ್ ನಲ್ಲಿ ಹೊಸ ಮಾದರಿಯ ಆಯ್ಕೆಯನ್ನು ನೀಡಲು ಮುಂದಾಗಿದೆ.

ಕದ್ದು ಮುಚ್ಚಿ ಯುಟ್ಯೂಬ್ ನಲ್ಲಿ ವಿಡಿಯೋ ನೋಡುವವರಿಗೆ ಇಲ್ಲೊಂದು ಹೊಸ ಆಯ್ಕೆ...!

ಆಂಡ್ರಾಯ್ಡ್ ಡಿವೈಸ್ ಗಳಲ್ಲಿ ಯೂಟ್ಯೂಬ್ ಆಪ್ ಗಳನ್ನು ಬಳಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಇದಕ್ಕಾಗಿಯೇ ಆಪ್ ನಲ್ಲಿ ಹಲವು ಆಪ್ ಡೇಟ್ ಅನ್ನು ನೀಡುತ್ತಿದೆ. ಇದೇ ಮಾದರಿಯಲ್ಲಿ ಹೊಸದಾಗಿ ಇನ್ ಕಾಗ್ನಿಟೋ ಮೋಡ್ ಅನ್ನು ನೀಡುತ್ತಿದೆ. ಈಗಾಗಲೇ ಹಲವು ಬ್ರೌಸರ್ ಗಳಲ್ಲಿ ಕಾಣಬಹುದಾಗಿದ್ದ ಈ ಆಯ್ಕೆಯನ್ನು ಹೊಸದಾಗಿ ಯೂಟ್ಯೂಬ್ ಆಪ್ ನಲ್ಲಿ ನೀಡಲಾಗಿದೆ. ಇದರಿಂದಾಗಿ ಯೂಟ್ಯೂಬ್ ನಲ್ಲಿ ಸಿನಿಮಾ ನೋಡವವರ ಸಂಖ್ಯೆಯೂ ಅಧಿಕವಾಗಲಿದೆ.

ಇನ್ ಕಾಗ್ನಿಟೋ ಮೋಡ್:

ಇನ್ ಕಾಗ್ನಿಟೋ ಮೋಡ್:

ಈಗಾಗಲೇ ಗೂಗಲ್ ಬಿಡುಗಡೆ ಮಾಡಿರುವ ಬ್ರೌಸರ್ ಕ್ರೋಮ್ ಆಪ್ ನಲ್ಲಿ ಕಾಣಿಸಿಕೊಂಡಿದ್ದ ಇನ್ ಕಾಗ್ನಿಟೋ ಮೋಡ್ ಅನ್ನು ಯೂಟ್ಯೂಬ್ ನಲ್ಲಿಯೂ ಅಳವಡಿಸಲಾಗಿದ್ದು, ಇದರಿಂದಾಗಿ ಬಳಕೆದಾರರು ತಮ್ಮ ಹಿಸ್ಟರಿಯನ್ನು ಉಳಿಸದೆ ಮೊಬೈಲ್ ನಲ್ಲಿ ವಿಡಿಯೋಗಳನ್ನು ನೋಡಬಹುದಾಗಿದೆ. ಇದರಿಂದಾಗಿ ಯೂಟ್ಯೂಬ್ ಹಿಸ್ಟರಿಯೂ ಉಳಿದುಕೊಳ್ಳುವುದಿಲ್ಲ. ಇದರಿಂದಾಗಿ ವಿಡಿಯೋ ಅನುಭವವು ಉತ್ತಮವಾಗಿದೆ.

ಹಿಸ್ಟರಿ ಉಳಿಯುವುದಿಲ್ಲ:

ಹಿಸ್ಟರಿ ಉಳಿಯುವುದಿಲ್ಲ:

ಈ ಹೊಸ ಆಯ್ಕೆಯಿಂದಾಗಿ ಯೂಟ್ಯೂಬ್ ಬಳಕೆದಾರರಿಗೆ ಹೊಸ ಆಯ್ಕೆಯೂ ದೊರೆಯಲಿದೆ. ವಿಡಿಯೋ ನೋಡುವ ಸಂದರ್ಭದಲ್ಲಿ ಅದರ ಹಿಸ್ಟರಿ ಉಳಿಯುವುದಿಲ್ಲ ಮತ್ತು ಅದಕ್ಕೆ ಸಂಬಂಧಿಸಿದಂತೆ ಯಾವುದೇ ವಿಡಿಯೋಗಳು ನಿಮಗೆ ಕಾಣಿಸುವುದಿಲ್ಲ. ಮುಂದಿನ ಬಾರಿ ವಿಡಿಯೋ ನೋಡಲು ಬಂದ ಸಂದರ್ಭದಲ್ಲಿ ಹೊಸದಾಗಿ ವಿಡಿಯೋಗಳು ಕಾಣಿಸಿಕೊಳ್ಳಲಿದೆ.

ಹೊಸ ಅನುಭವ:

ಹೊಸ ಅನುಭವ:

ದಿನದಿಂದ ದಿನಕ್ಕೇ ಯುಟ್ಯೂಬ್ ನೋಡುವವರ ಸಂಖ್ಯೆಯೂ ಅಧಿಕವಾಗುತ್ತಿರುವ ಹಿನ್ನಲೆಯಲ್ಲಿ ಬಳಕೆದಾರರಿಗೆ ಹೊಸ ಅನುಭವನ್ನು ನೀಡಬೇಕು ಎನ್ನುವ ಕಾರಣಕ್ಕಾಗಿ ಈ ಹೊಸ ಆಯ್ಕೆಯನ್ನು ನೀಡುತ್ತಿದೆ. ಈ ಮಾದರಿಯಲ್ಲಿ ವಿಡಿಯೋ ವಿಕ್ಷಣೆಯೂ ಇನ್ನಷ್ಟು ಸುಲಭ ಸಾಧ್ಯವಾಗುತ್ತಿದೆ. ಇದರಿಂದಾಗಿ ಟ್ರೆಂಡ್ ವಿಡಿಯೋಗಳನ್ನು ವಿಕ್ಷೀಸುವುದು ಸುಲಭವಾಗಲಿದೆ.

ಆಪ್ ಡೇಟ್ ಮಾಡಿ:

ಆಪ್ ಡೇಟ್ ಮಾಡಿ:

ನೀವು ಸಹ ಇನ್ ಕಾಗ್ನಿಟೋ ಮೋಡ್ ನಲ್ಲಿ ವಿಡಿಯೋಗಳನ್ನು ನೋಡಬೇಕು ಎನ್ನುವ ಬಯಕೆಯನ್ನು ಹೊಂದಿದ್ದರೇ ಮೊದಲಿಗೆ ಪ್ಲೇ ಸ್ಟೋರಿ ನಲ್ಲಿ ಯೂಟ್ಯೂಬ್ ಆಪ್ ಅನ್ನು ಆಪ್ ಡೇಟ್ ಮಾಡಿಕೊಳ್ಳಬಹುದಾಗಿದೆ. ಹೊಸದಾಗಿ ದೊರೆಯುವ ಆಪ್ ಡೇಟ್ ನಲ್ಲಿ ಈ ಹೊಸ ಆಯ್ಕೆಯನ್ನು ಕಾಣಬಹುದಾಗಿದೆ. ಯಾವುದೇ ಅಡೆತಡೆ ಇಲ್ಲವೇ ವಿಡಿಯೋಗಳನ್ನು ನೋಡಬಹುದಾಗಿದೆ.

Best Mobiles in India

English summary
YouTube for Android's Incognito Mode Is Now Widely Rolling Out. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+