ಶೀಘ್ರವೇ ಯೂಟ್ಯೂಬ್‌ನಿಂದ ಕಣ್ಮರೆಯಾಗಲಿದೆ ಈ ಪ್ರಮುಖ ಫೀಚರ್!
ಪ್ರತಿ ತಿಂಗಳು 1.9 ಬಿಲಿಯನ್ ಬಳಕೆದಾರರನ್ನು ಹೊಂದಿರುವ ವೀಡಿಯೋ ನೋಡುವ ಫ್ಲ್ಯಾಟ್ ಫಾರ್ಮ್ ಆಗಿರುವ ಯೂಟ್ಯೂಬ್ ತನ್ನ ಒಂದು ಫೀಚರ್ ನ್ನು ಅಂತಿಮಗೊಳಿಸಲು ನಿರ್ಧರಿಸಿದೆ.

ಅನೊಟೇಷನ್ ಗೆ ಗುಡ್ ಬಾಯ್:
ಮೇ 2, 2017 ರಲ್ಲಿ ಪ್ರಕಟಿಸಿದ್ದ ಈ ಅನೋಟೇಷನ್ ಎಡಿಟರ್ ನ್ನು ಇದೀಗ ಗೂಗಲ್ ಮಾಲೀಕತ್ವದ ಯೂಟ್ಯೂಬ್ ತೆಗೆದುಹಾಕಲು ನಿರ್ಧರಿಸಿದೆ. ಇನ್ನು ಮುಂದೆ ಈ ಫೀಚರ್ ಲಭ್ಯವಿರುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ. ಯೂಟ್ಯೂಬ್ ನ ನಿರ್ಧಿಷ್ಟ ಪೇಜ್ ನಲ್ಲಿ ಈ ಬಗ್ಗೆ ಬರೆಯಲಾಗಿದೆ. ಜನವರಿ 15,2019 ರಿಂದ ಈ ವೈಶಿಷ್ಟ್ಯತೆ ಯೂಟ್ಯೂಬ್ ನಲ್ಲಿ ಲಭ್ಯವಿರುವುದಿಲ್ಲ.

ಏನೆಂದು ಬರೆಯಲಾಗಿತ್ತು?
"Update: We will stop showing existing annotations to viewers starting January 15, 2019. All existing annotations will be removed," ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ. ಅಂದರೆ ಸದ್ಯ ಲಭ್ಯವಿರು ಅನೊಟೇಷನ್ ಸೌಲಭ್ಯವು ನೋಡುಗರಿಗೆ ಜನವರಿ 15,2019 ರಿಂದ ಲಭ್ಯವಿರುವುದಿಲ್ಲ.
ಇದರರ್ಥ ಯೂಟ್ಯೂಬ್ ತನ್ನ ಅನೊಟೇಷನ್ ನ್ನು ವೀಡಿಯೋಗಳಿಂದ ತೆಗೆದುಹಾಕುತ್ತಿದ್ದು ಇದೇ ರೀತಿಯ ಇತರೆ ಟೂಲ್ ಗಳನ್ನು ತಂದು ವೀಡಿಯೋ ಒಳಗಿರುವ ಕಂಟೆಂಟ್ ಗಳನ್ನು ಪ್ರಮೋಟ್ ಮಾಡುವ ನಿರೀಕ್ಷೆ ಇದೆ ಉದಾಹರಣೆಗೆ ಕಾರ್ಡ್ಸ್ ಅಥವಾ ಎಂಡ್ ಸ್ಕ್ರೀನ್ ಇತ್ಯಾದಿ.
ಇದು ಖಂಡಿತ ಕೆಲವು ಯೂಟ್ಯೂಬ್ ಬಳಕೆದಾರರಿಗೆ ಸಂತಸದ ಸುದ್ದಿ ಅಲ್ಲದೇ ಇರಬಹುದು.ಆದರೆ ನೋಡುಗರಿಗೆ ಖಂಡಿತ ಆಗಾಗ ಯಾವುದೇ ಎಲಿಮೆಂಟ್ ಪಾಪ್ ಅಪ್ ಆಗುವುದು ವೀಡಿಯೋ ನೋಡುವಾಗ ತಪ್ಪುತ್ತದೆಯಲ್ಲ ಎಂಬ ಖುಷಿ ಇದೆ. ಒಟ್ಟಾರೆ ನೋಡುವಿಕೆಯ ಅನುಭವ ಉತ್ತಮಗೊಳ್ಳಲಿದೆ ಎಂಬ ಸಂತಸವಿದೆ.
ಪೋಸ್ಟ್ ನಲ್ಲಿ ಎಂಡ್ ಸ್ಕ್ರೀನ್ ಮತ್ತು ಕಾರ್ಡ್ಸ್ ಗಳನ್ನು ಸೇರಿಸಿಕೊಳ್ಳುವ ಪ್ರಕ್ರಿಯೆಯು ಬೆಳೆಯುತ್ತಿದೆ ಮತ್ತು ನೋಡುಗರ ಅನೊಟೇಷನ್ 70% ಇಳಿಮುಖವಾಗಿದೆ. ಅದೇ ಕಾರಣಕ್ಕೆ ನಾವು 2017 ಮೇ ನಲ್ಲಿ ಬಂದ ಈ ಅನೊಟೇಷನ್ ನ್ನು ನಿಲ್ಲಿಸುತ್ತಿದ್ದೇವೆ ಎಂದು ಪೋಸ್ಟ್ ನಲ್ಲಿ ಸೇರಿಸಲಾಗಿದೆ.
ಯೂಟ್ಯೂಬ್ ಈ ಅನೊಟೇಷನ್ ವೈಶಿಷ್ಟ್ಯತೆಯನ್ನು ನಿಲ್ಲಿಸಿದಾಗಿನಿಂದ ಯುಟ್ಯೂಬರ್ ಗಳು ಹೊಸದಾಗಿ ಅನೊಟೇಷನ್ ಸೇರಿವುದಾಗಲೀ ಅಥವಾ ಇರುವುದನ್ನು ಎಡಿಟ್ ಮಾಡುವುದಕ್ಕಾಗಲೀ ಅವಕಾಶವಿರುವುದಿಲ್ಲ ಬದಲಾಗಿ ಡಿಲೀಟ್ ಮಾಡುವುದಕ್ಕೆ ಮಾತ್ರವೇ ಅವಕಾಶವಿರುತ್ತದೆ.ಸದ್ಯ ಇರುವ ಅನೊಟೇಷನ್ ಗಳು ಡೆಸ್ಕ್ ಟಾಪ್ ಕಂಪ್ಯೂಟರ್ ನಲ್ಲಿ ಮುಂದುವರಿಯಲಿದೆ. ಆದರೆ ಜನವರಿ 15,2019 ರಿಂದ ಅದೂ ಕೂಡ ಇರುವುದಿಲ್ಲ.
ಡೆಸ್ಕ್ ಟಾಪ್ ವರ್ಷನ್ ಗೆ ಮಾತ್ರವೇ ಇದನ್ನು ಸೇರಿಸುವುದು ಮತ್ತು ಮೊಬೈಲ್ ವರ್ಷನ್ ನಲ್ಲಿ ಇಲ್ಲದೇ ಇರುವುದು ಯೋಗ್ಯ ವಿಚಾರವೇ ಆಗಿದೆ. ಆದರೆ ಕಾರ್ಡ್ಸ್ ಮತ್ತು ಎಂಡ್ ಸ್ಕ್ರೀನ್ ಗಳು ಮೊಬೈಲ್ ವರ್ಷನ್ ನಲ್ಲೂ ಕೂಡ ವಿಸಿಬಲ್ ಆಗಿರುತ್ತದೆ

60% ಮಂದಿಗೆ ಅನಗತ್ಯವಾಗಿದೆ:
ವಿಶ್ವವು ಮೊಬೈಲ್ ಡಿವೈಸ್ ಗಳಿಗೆ ಹೆಚ್ಚು ಅಂಟಿಕೊಂಡಿರದ ಕಾಲದಲ್ಲಿ ಯೂಟ್ಯೂಬ್ ಇದನ್ನು ಬಿಡುಗಡೆಗೊಳಿಸಿತ್ತು.ಇದೀಗ 60% ಮಂದಿ ಮೊಬೈಲ್ ನಲ್ಲಿ ಯೂಟ್ಯೂಬ್ ನೋಡುತ್ತಾರೆ ಮತ್ತು ಈ ಅನೊಟೋಷನ್ ನ ಅಗತ್ಯ ಅವರಿಗೆ ಇಲ್ಲ. ಎಂಡ್ ಸ್ಕ್ರೀನ್ ಗಳು ಮತ್ತು ಕಾರ್ಡ್ ಗಳು ಹೆಚ್ಚು ಆಕರ್ಷಕವಾಗಿರುತ್ತದೆ ಮತ್ತು ತಯಾರಿವುದಕ್ಕೂ ಸುಲಭವಾಗಿದೆ ಎಂದು ಅಭಿಪ್ರಾಯ ಪಟ್ಟಿದೆ ಯೂಟ್ಯೂಬ್.


Click it and Unblock the Notifications








