Home
Tablets

ಎಂಟ್ರಿ ಕೊಡ್ತು ಹೊಸ ಟ್ಯಾಬ್: ಸ್ಟನ್ನಿಂಗ್‌ ಡಿಸೈನ್‌.. ಒಮ್ಮೆ ಚಾರ್ಜ್ ಮಾಡಿದ್ರೆ, 12 ಗಂಟೆ ಕಿರಿಕಿರಿ ಇರಲ್ಲ!

ಮಾರುಕಟ್ಟೆಗೆ ಸದ್ದಿಲ್ಲದೆ ಎಂಟ್ರಿ ಕೊಡ್ತು ಹೊಸ ಟ್ಯಾಬ್. ಒಮ್ಮೆ ಚಾರ್ಜ್ ಮಾಡಿದ್ರೆ, 12 ಗಂಟೆಗಳವರೆಗೆ ಕಿರಿಕಿರಿ ಇರಲ್ಲ! ಈ ಹೊಸ ಟ್ಯಾಬ್ ಸಖತ್‌ ಸ್ಟೈಲಿಶ್‌ ಆಗಿದೆ. ಇದರ ಡಿಸೈನ್ ಹಾಗೂ ಫೀಚರ್ಸ್ ಟ್ಯಾಬ್‌ ಪ್ರಿಯರನ್ನು ಸೆಳೆಯುತ್ತಿದೆ. ಹೌದು, ಮಾರುಕಟ್ಟೆಯಲ್ಲಿ ನೀವು ವಿವಿಧ ಮಾದರಿಯ ಟ್ಯಾಬ್ಲೆಟ್‌ಗಳನ್ನು ಕಾಣಬಹುದು. ಆದರೆ, ಲೆನೋವೊ (Lenovo) ಕಂಪನಿ ಇದೇ ಮೊದಲ ಬಾರಿಗೆ ಅತ್ಯಾಕರ್ಷಕ ಫೀಚರ್ಸ್‌ನ ರಗಡ್‌ ಟ್ಯಾಬ್ಲೆಟ್‌ ಬಿಡುಗಡೆ ಮಾಡಿದೆ. ಇದರ ಡಿಸೈನ್‌ ಸ್ಟನ್ನಿಂಗ್‌ ಆಗಿದೆ. ಮುಖ್ಯವಾಗಿ, ಕೈಗೆಟುಕುವ ಬೆಲೆಯಲ್ಲಿ ಅತ್ಯುತ್ತಮ ಟ್ಯಾಬ್ ಹುಡುಕುತ್ತಿರುವ ಗ್ರಾಹಕರಿಗೆ ಈ ಹೊಸ ಟ್ಯಾಬ್‌ ಪರ್ಫೆಕ್ಟ್ ಆಯ್ಕೆಯಾಗಿದೆ.

ಹೌದು, ಲೆನೊವೊ ಕಂಪನಿ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಸ್ಮಾರ್ಟ್‌ ಟ್ಯಾಬ್ಲೆಟ್‌ ವಲಯದಲ್ಲಿಯೂ ಸೈ ಎನಿಸಿಕೊಂಡಿದೆ. ಸೈಲೆಂಟ್‌ ಆಗಿಯೇ Lenovo Tab K11 Plus ಟ್ಯಾಬ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಕಂಪನಿಯು ಈ ಟ್ಯಾಬ್ಲೆಟ್ ಅನ್ನು ಹಲವು ಉತ್ತಮ ವಿಶೇಷತೆಗಳೊಂದಿಗೆ ಲಾಂಚ್ ಮಾಡಿದೆ. ಇದು 11.45 ಇಂಚಿನ ಡಿಸ್ಪ್ಲೇ ಮತ್ತು ಹೆಚ್ಚಿನ ರಿಫ್ರೆಶ್ ರೇಟ್ ಹೊಂದಿದೆ. 8600mAh ಬಿಗ್‌ ಬ್ಯಾಟರಿ ಬ್ಯಾಕಪ್ ಒಳಗೊಂಡಿದೆ. ಈ ಟ್ಯಾಬ್‌ನ ಮತ್ತಷ್ಟು ವಿಶೇಷತೆಗಳನ್ನು ತಿಳಿಯಲು ಮುಂದೆ ಓದಿ.

ಎಂಟ್ರಿ ಕೊಡ್ತು ಹೊಸ ಟ್ಯಾಬ್: ಒಮ್ಮೆ ಚಾರ್ಜ್ ಮಾಡಿದ್ರೆ 12 ಗಂಟೆ ಕಿರಿಕಿರಿ ಇರಲ್ಲ

Lenovo Tab K11 Plusನ ವಿಶೇಷತೆಗಳು

Lenovo Tab K11 Plus ಟ್ಯಾಬ್ಲೆಟ್‌ 11.45 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇದು 2K ರೆಸಲ್ಯೂಶನ್ ಅನ್ನು ಬೆಂಬಲಿಸುತ್ತದೆ. ಡಿಸ್ಲ್ಪೇ 90 Hzನ ರಿಫ್ರೆಶ್ ದರವನ್ನು ಹೊಂದಿದೆ. ಇದು 400nits ವರೆಗೆ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಒದಗಿಸುತ್ತದೆ. ಕಂಪನಿಯು 4GB ನಿಂದ 8GB ವರೆಗಿನ RAM ರೂಪಾಂತರಗಳನ್ನು ಪರಿಚಯಿಸಿದೆ. ಇದು 13MP ಕ್ಯಾಮೆರಾ ಹೊಂದಿದೆ. 8600mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ ಮತ್ತು 20 ವ್ಯಾಟ್ ಚಾರ್ಜರ್ ಅಡಾಪ್ಟರ್ ಅನ್ನು ನೀಡಲಾಗಿದೆ.

ಕ್ಯಾಮೆರಾ: ಈ ಹೊಸ ಟ್ಯಾಬ್‌ನ ಕ್ಯಾಮೆರಾ ಬಗ್ಗೆ ಹೇಳುವುದಾದರೆ, ಕಂಪನಿಯು ಹಿಂಭಾಗದಲ್ಲಿ 13MP ಕ್ಯಾಮೆರಾ ಅಳವಡಿಸಿದೆ. ಜೊತೆಗೆ, ವಿಡಿಯೋ ಕರೆ ಮತ್ತು ಸೆಲ್ಫಿಗಾಗಿ ಮುಂಭಾಗದಲ್ಲಿ 8MP ಕ್ಯಾಮೆರಾವನ್ನು ಒದಗಿಸಿದೆ.

ಸ್ಟೋರೇಜ್: ಈ ಟ್ಯಾಬ್ಲೆಟ್‌ನ ಮೂಲ ರೂಪಾಂತರವು 4GB RAM ನೊಂದಿಗೆ ಪ್ರಾರಂಭವಾಗುತ್ತದೆ. 64GB ಸ್ಟೋರೇಜ್‌ನೊಂದಿಗೆ ಜೋಡಿಸಲಾಗಿದೆ. ಅದರ ನಂತರ, 6GB RAM ಜೊತೆಗೆ 128GB ಸ್ಟೋರೇಜ್ ಮತ್ತು 8GB RAM ಜೊತೆಗೆ 256GB ಸ್ಟೋರೇಜ್ ಅನ್ನು ಒದಗಿಸಲಾಗಿದೆ. ಇದರಲ್ಲಿರುವ ಸ್ಟೋರೇಜ್ ಪ್ರಕಾರವು UFS 2.2 ಆಗಿದೆ. ಮತ್ತು ನಿಮಗೆ ಇದರಲ್ಲಿ ಮೈಕ್ರೋ SD ಕಾರ್ಡ್‌ನ ಬೆಂಬಲವನ್ನು ಸಹ ನೀಡಲಾಗುತ್ತಿದೆ.

ಬ್ಯಾಟರಿ: Lenovo Tab K11 Plusನಲ್ಲಿ ಸ್ನಾಪ್‌ಡ್ರಾಗನ್ 680 ಚಿಪ್‌ಸೆಟ್ ಅನ್ನು ಅಳವಡಿಸಲಾಗಿದೆ. ಬ್ಯಾಟರಿ ಬ್ಯಾಕಪ್ ಬಗ್ಗೆ ಹೇಳುವುದಾದರೆ, ಇದು 8600mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ ಮತ್ತು 20 ವ್ಯಾಟ್ ಚಾರ್ಜರ್ ಅಡಾಪ್ಟರ್ ಅನ್ನು ಸಹ ಹೊಂದಿದೆ.

ಕನೆಕ್ಟಿವಿಟಿ ಆಯ್ಕೆಗಳು: ಇದರಲ್ಲಿ USB ಟೈಪ್-C ಪೋರ್ಟ್ ಅನ್ನು ಚಾರ್ಜ್ ಮಾಡಲು ಒದಗಿಸಲಾಗಿದೆ. ಈ ಟ್ಯಾಬ್ಲೆಟ್ ಅನ್ನು ಒಂದೇ ಬಾರಿ ಚಾರ್ಜ್ ಮಾಡಿದರೆ 12 ಗಂಟೆಗಳ ಕಾಲ ಬಳಸಬಹುದು ಎಂದು ಕಂಪನಿ ಹೇಳಿದೆ. ಟ್ಯಾಬ್ಲೆಟ್‌ನ ಧ್ವನಿ ಗುಣಮಟ್ಟ ಉತ್ತಮವಾಗಿದೆ. ಇದು ಡಾಲ್ಬಿ ಅಟ್ಮಾಸ್‌ನೊಂದಿಗೆ ಬೆಂಬಲಿತವಾದ 4 ಸ್ಪೀಕರ್‌ಗಳನ್ನು ಹೊಂದಿದೆ. ಜೊತೆಗೆ, 2 ಮೈಕ್ರೊಫೋನ್‌ಗಳನ್ನು ಸಹ ಸೇರಿಸಲಾಗಿದೆ.

Lenovo Tab K11 Plus ಬೆಲೆ ಎಷ್ಟು?

ಲೆನೊವೊ ಕಂಪನಿಯು ಅಧಿಕೃತ ವೆಬ್‌ಸೈಟ್‌ನಲ್ಲಿ Lenovo Tab K11 Plus ಬೆಲೆಯ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಆದರೆ, ಕಂಪನಿಯು ಈ ಟ್ಯಾಬ್ಲೆಟ್ ಅನ್ನು ಬಜೆಟ್‌ನಲ್ಲಿ ಮಾತ್ರ ಪರಿಚಯಿಸಿದೆ ಎಂದು ಹೇಳಲಾಗಿದೆ. ಬಜೆಟ್‌ ಬೆಲೆಯಲ್ಲಿ ಭರಫೂರ ಫೀಚರ್ಸ್‌ ಬಯಸುವ ಟ್ಯಾಬ್‌ ಪ್ರಿಯರಿಗೆ ಈ ಹೊಸ ಟ್ಯಾಬ್‌ ಉತ್ತಮ ಆಯ್ಕೆಯಾಗಿದೆ.

ಇತ್ತೀಚೆಗೆ Lenovo Tab Plus ಟ್ಯಾಬ್ ಬಿಡುಗಡೆ

ಲೆನೋವೊ ಕಂಪನಿ ಇತ್ತೀಚೆಗೆ ಹೊಸ Lenovo Tab Plus ಟ್ಯಾಬ್ ಅನ್ನು ಪರಿಚಯಿಸಿತ್ತು. ಇದು 11.5-ಇಂಚಿನ ಡಿಸ್ಪ್ಲೇ, 90Hz ರಿಫ್ರೆಶ್ ದರ ಮತ್ತು 450nits ಬ್ರೈಟ್‌ನೆಸ್ ಹೊಂದಿದೆ. ಈ ಟ್ಯಾಬ್ಲೆಟ್‌ ಆಕ್ಟಾ-ಕೋರ್ MediaTek Helio G99 6nm ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಇದು 8,600mAh ಬ್ಯಾಟರಿಯನ್ನು ಹೊಂದಿದೆ. ಜೊತೆಗೆ 45 ವ್ಯಾಟ್ ವೈರ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದು 8MP ಆಟೋಫೋಕಸ್ ಹಿಂಬದಿಯ ಕ್ಯಾಮೆರಾ ಮತ್ತು ಮತ್ತು 8MP ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.

Best Mobiles in India

English summary
Lenovo has announced a new budget tablet in the global market. The model has been named Lenovo Tab K11 Plus. The tablet received a display with IPS-matrix, 11.45″ diagonal, 90Hz refresh rate and 2K resolution.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+