ನೋಕಿಯಾದಿಂದ 18.4 ಇಂಚಿನ QHD ಡಿಸ್‌ಪ್ಲೇ ಹೊಂದಿರುವ ಟಾಬ್ಲೆಟ್ ಬಿಡುಗಡೆ...!
ನೋಕಿಯಾ 18.4 ಇಂಚಿನ ಟಾಬ್ಲೆಟ್‌ವೊಂದನ್ನು ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ.
ಮತ್ತೆ ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಠಿಸುವ ಸಲುವಾಗಿ ನೂತನ ಸ್ಮಾರ್ಟ್‌ಪೋನುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವ ನೋಕಿಯಾ, ಸ್ಮಾರ್ಟ್‌ಪೋನಿನೊಂದಿಗೆ ಫೀಚರ್ ಪೋನುಗಳನ್ನು ಪರಿಚಯಿಸುವುದಾಗಿ ತಿಳಿಸಿತ್ತು. ಆದರೆ ಮೂಲಗಳ ಪ್ರಕಾರ ನೋಕಿಯಾ ಸ್ಮಾರ್ಟ್‌ಪೋನಿನೊಂದಿಗೆ ಟಾಬ್ಲೆಟ್‌ಗಳನ್ನು ಪರಿಚಯಿಸಲಿದೆ ಎನ್ನುವ ಸುದ್ದಿಯೊಂದು ಲಭ್ಯವಾಗಿದೆ.

ಓದಿರಿ..! ಡೆಸ್ಕ್‌ಟಾಪ್ ಫೇಸ್‌ಬುಕ್‌ನಲ್ಲಿ ಆಗಿದೆ ಭಾರೀ ಬದಲಾವಣೆ..! ನೋಡಿದ್ರಾ..?
ಸದ್ಯ 'ನೋಕಿಯಾ 8' ಹೆಸರಿನ ಸ್ಮಾರ್ಟ್‌ಪೋನನ್ನು ಪರಿಚಯಿಸಿರುವ ನೋಕಿಯಾ ಇನ್ನು ಕೆಲವೇ ದಿನಗಳಲ್ಲಿ 'ನೋಕಿಯಾ P1' ಎನ್ನುವ ಸ್ಮಾರ್ಟ್‌ಪೋನನ್ನು ಬಿಡುಗಡೆ ಮಾಡಲಿದೆ. ಇದರೊಂದಿಗೆ ನೋಕಿಯಾ 18.4 ಇಂಚಿನ ಟಾಬ್ಲೆಟ್‌ವೊಂದನ್ನು ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ.
ಸದ್ಯ ಈ ಟಾಬ್ಲೆಟ್‌ಗೆ ಹೆಸರು ಮಾತ್ರ ಗೌಪ್ಯವಾಗಿದ್ದು, 18.4 ಇಂಚಿನ ಪರದೆಯನ್ನು ಈ ಟಾಬ್ಲೆಟ್ 2560×1440p ರೆಸಲ್ಯೂಶನ್ ಗುಣಮಟ್ಟವನ್ನು ಹೊಂದಿದೆ ಎನ್ನಲಾಗಿದೆ. ವೇಗದ ಕಾರ್ಯ ನಿರ್ವಹಣೆಗಾಗಿ ಇದರಲ್ಲಿ 2.2GHz ವೇಗ ಆಕ್ವಾಕೋರ್ ಕ್ವಾಲ್ಕಮ್ ಸ್ನಾಪ್ ಡ್ಯಾಗನ್ 835 ಚಿಪ್ ಸೆಟ್ ಅಳವಡಿಸಲಾಗಿದೆ. ಇದಲ್ಲದೇ Adreno 540 GPU ಮತ್ತು 4GB RAM ಸಹ ಇದರಲ್ಲಿದೆ. ಜೊತೆಗೆ 64GB ಇಂಟರ್‌ನಲ್ ಮೆಮೊರಿ ಸಹ ಇದೆ.

ಓದಿರಿ..: ಜಿ-ಮೇಲ್ ಆಕೌಂಟ್ ಸಹ ಸೇಫ್ ಆಲ್ವಾ.? ಯಾಹೂ ಆಯ್ತು ಜಿ-ಮೇಲ್ ಮೇಲೆ ಬಿತ್ತು ಹ್ಯಾಕರ್ಸ್ ಕಣ್ಣು
ನೋಕಿಯಾದ ಈ ಟಾಬ್ಲೆಟ್‌ನಲ್ಲಿ ಪೋಟೋಗ್ರಫಿಗೆ ನೆರವಾಗುವಂತಹ ಹಿಂಭಾಗದಲ್ಲಿ 12MP ಕ್ಯಾಮೆರಾ ಇದೆ, ಇದರಲ್ಲಿ 3840×2160 p ರೆಸಲ್ಯೂಸನ್‌ನಲ್ಲಿ Ultra HD ವಿಡಿಯೋ ರೆಕಾರ್ಡ್ ಮಾಡಬಹುದು. ಇದರೊಂದಿಗೆ LED ಫ್ಲಾಷ್ ಸಹ ಇದರಲ್ಲಿದೆ. ಮುಂಭಾಗದಲ್ಲಿಯೂ 12MP ಕ್ಯಾಮೆರಾ ಇದ್ದು, ಅದು ಸಹ ಉತ್ತಮ ಗುಣಮಟ್ಟದ ವಿಡಿಯೋ ರೆಕಾರ್ಡ್ ಮಾಡಬಹುದಾಗಿದೆ.
ಈ ಟಾಬ್ಲೆಟ್ ಆಂಡ್ರಾಯ್ಡ್ 7.0 ನ್ಯಾಗಾದಲ್ಲಿ ನಡೆಯಲಿದ್ದು, 4G LTE ಸೋಪೋರ್ಟ್ ಮಾಡಲಿದೆ. Wi-Fi, Bluetooth, GPS ಮತ್ತು ಒಂದು SIM ಹಾಕುವ ಸಾಧ್ಯತೆಯನ್ನು ಹೊಂದಿದೆ.


Click it and Unblock the Notifications








