ಕೂಲಿಂಗ್ ಗ್ಲಾಸ್‌ನಲ್ಲಿ ಮೊಬೈಲ್ ಚಾರ್ಜ್ ಮಾಡಿ
ಈ ಹಿಂದೆ ವಿವಿಧ ರೀತಿಯಲ್ಲಿ ಮೊಬೈಲ್ ಚಾರ್ಜ್ ಮಾಡುವ ಚಾರ್ಜ್‌ರ್‌ಗಳ ಸುದ್ದಿಯನ್ನು ನೀವು ಓದರಿಬಹುದು.ಈಗ ಕೂಲಿಂಗ್ ಗ್ಲಾಸ್‌ನಿಂದಲೂ ಮೊಬೈಲ್‌ನ್ನು ಚಾರ್ಜ್ ಮಾಡಬಹುದಂತೆ. ಹೆಮ್ಮೆ ವಿಚಾರವೆನೆಂದರೆ ಭಾರತೀಯ ಮೂಲದ ಅಮೆರಿಕದ ಸಂಶೋಧಕರು ಈ ಸೋಲಾರ್ ಕೂಲಿಂಗ್ ಗ್ಲಾಸ್‌ನ್ನು ಅಭಿವೃದ್ಧಿ ಪಡಿಸಿದ್ದಾರೆ.
ಸಯಾಲಿ ಕಲುಸ್ಕರ್(Sayalee Kaluskar) ತಮ್ಮ ಪ್ರೊಜೆಕ್ಟ್ ವರ್ಕ್‌ಗಾಗಿ ರಮಿರೋ ರಮಿರೋಜ್(Ramiro Ramirez) ಜೊತೆ ಸೇರಿ ಈ ಹೊಸ ಕೂಲಿಂಗ್ ಗ್ಲಾಸ್‌ನ್ನು ಸಂಶೋಧನೆ ಮಾಡಿದ್ದಾರೆ.ಈ ಕೂಲಿಂಗ್ ಗ್ಲಾಸ್‌ನ ಎರಡು ಕಡೆ ಸೋಲಾರ್ ಪ್ಯಾನೆಲ್ ಇದೆ. ಈ ಪ್ಯಾನೆಲ್‌ನ್ನು ಸಂಜೆಯಾದ ಕೂಡಲೇ ಸ್ಮಾರ್ಟ್‌ಫೋನ್‌ಗೆ ಕನೆಕ್ಟ್ ಮಾಡಿದರೆ ಚಾರ್ಜ್ ಆಗುತ್ತದೆ.
ಕನ್ನಡಕವನ್ನು ತಯಾರಿಸುವ ರೇಬಾನ್ ಕಂಪೆನಿಯ ಉತ್ಪನ್ನವಾಗಿ ಈ ಹೊಸ ಸೋಲಾರ್ ಗ್ಲಾಸ್ ಮಾರುಕಟ್ಟೆಗೆ ಬರಲಿದ್ದು ವಿಶ್ವದೆಲ್ಲೆಡೆಯಿಂದ ಈ ಹೊಸ ಸಂಶೋಧನೆಗೆ ಪ್ರಶಂಸೆ ವ್ಯಕ್ತವಾಗಿದೆ.
ಇದನ್ನೂ ಓದಿ: ಸಂಗೀತಾ ಪ್ರಿಯರಿಗಾಗಿ ಸೋಲಾರ್ ಹೆಡ್‌ಫೋನ್ ಮೊಬೈಲ್ ಚಾರ್ಜರ್
ವಿಡಿಯೋ ವೀಕ್ಷಿಸಿ: ಎಚ್‌ಪಿ ಪ್ರಿಂಟರ್‌ನಲ್ಲಿ ಪ್ರಿಂಟ್,ಸ್ಕ್ಯಾನ್,ಫ್ಯಾಕ್ಸ್ ಮಾಡಿ

ಕೂಲಿಂಗ್ ಗ್ಲಾಸ್‌ನಲ್ಲಿ ಮೊಬೈಲ್ ಚಾರ್ಜ್ ಮಾಡಿ
ಸೋಲಾರ್ ಪ್ಯಾನೆಲ್

ಕೂಲಿಂಗ್ ಗ್ಲಾಸ್‌ನಲ್ಲಿ ಮೊಬೈಲ್ ಚಾರ್ಜ್ ಮಾಡಿ
ಐಫೋನ್ ಚಾರ್ಜ್ ಆಗುತ್ತಿರುವುದು
ಕೂಲಿಂಗ್ ಗ್ಲಾಸ್‌ನಲ್ಲಿ ಮೊಬೈಲ್ ಚಾರ್ಜ್ ಮಾಡಿ
ವಿಡಿಯೋ ವೀಕ್ಷಿಸಿ

ಕೂಲಿಂಗ್ ಗ್ಲಾಸ್‌ನಲ್ಲಿ ಮೊಬೈಲ್ ಚಾರ್ಜ್ ಮಾಡಿ
ಸೋಲಾರ್ ಪ್ಯಾನೆಲ್


Click it and Unblock the Notifications





