ಮಾರುಕಟ್ಟೆಯಲ್ಲಿ ಮೇಲುಗೈಗಾಗಿ ಶ್ಯೋಮಿ ಹೊಸ ತಂತ್ರ

By Prasad
|

ಶ್ಯೋಮಿ ಭಾರತದಲ್ಲಿ ಮಾತ್ರವಲ್ಲದೆ ವಿವಿಧ ದೇಶಗಳಲ್ಲಿ ಕೂಡ ತನ್ನ ಹೊಸ ಡಿವೈಸ್‌ಗಳ ಮೂಲಕ ಕೋಲಾಹಲವನ್ನು ಎಬ್ಬಿಸುತ್ತಿದೆ. ಶ್ಯೋಮಿ ರೀಟೈಲ್ ಮಾರುಕಟ್ಟೆಗಳನ್ನು ಎಲ್ಲಿಯಾದರೂ ತಲುಪಿದಲ್ಲಿ ಇದು ಮಾರಾಟದಲ್ಲಿ ಹೊಸ ದಾಖಲೆಯನ್ನು ದಾಖಲಿಸುವುದು ನಿಜವಾಗಿದೆ.

ಇದನ್ನೂ ಓದಿ: ಆಂಡ್ರಾಯ್ಡ್ ಫೋನ್‌ನ ಭದ್ರತೆಗೆ ಸೂಪರ್ ಟಿಪ್ಸ್

ಶ್ಯೋಮಿ ಭಾರತದ ಮುಖ್ಯಸ್ಥ ಮನು ಜೈನ್ ಹೇಳುವಂತೆ ಕಂಪೆನಿಯ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಪ್ರತೀ ವಾರ 2 ಅಥವಾ 3 ಲಕ್ಷ ಗ್ರಾಹಕರು ನೋಂದಾಯಿಸುತ್ತಿದ್ದು ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇ ಯಂದು 1.75 ಲಕ್ಷ ಯೂನಿಟ್‌ಗಳಷ್ಟು ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿವೆ. ರೆಡ್ಮೀ ನೋಟ್ 4 ಜಿ ಮಾಡೆಲ್ ಅನ್ನು ಸದ್ಯದಲ್ಲೇ ಏರ್‌ಟೆಲ್ ಮಳಿಗೆಗಳಲ್ಲಿ ಬಿಡುಗಡೆಗೊಳಿಸುವ ಇರಾದೆ ಕಂಪೆನಿಗಿದೆ. ಶ್ಯೋಮಿ ರೆಡ್ಮೀ ನೋಟ್, ಎಮ್‌ಐ 3 ಮತ್ತು ರೆಡ್ಮೀ 1 ಎಸ್ ಮಾಡೆಲ್‌ಗಳನ್ನು ಭಾರತದಲ್ಲಿ ಒದಗಿಸುತ್ತಿದೆ.

ಶ್ಯೋಮಿಯ ಉತ್ಪನ್ನ ಇನ್ನು ಏರ್‌ಟೆಲ್ ಮಳಿಗೆಗಳಲ್ಲೂ

ಭಾರತದಲ್ಲಿ ಶ್ಯೋಮಿ ಗ್ರಾಹಕರಿಗೆ ಅತಿ ಪ್ರಿಯವಾದ ಫೋನ್ ಆಗಿದ್ದು ಫೋನ್‌ಗಳು ಮಾರಾಟವಾಗುವುದನ್ನು ನೋಡುತ್ತಿರುವಾಗಲೇ ಈ ಅಂಶ ದೃಢಪಡುತ್ತದೆ. ಇನ್ನು ಶ್ಯೋಮಿ ಗೂಗಲ್ ಒನ್ ಫೋನ್ ಮ್ಯಾನುಫೇಕ್ಚರಿಂಗ್ ಯೋಜನೆಯಲ್ಲಿ ಭಾಗವಹಿಸುತ್ತಿದ್ದು ಶ್ಯೋಮಿ ಭಾರತದಲ್ಲಿ ತನ್ನ ಉತ್ಪನ್ನಗಳನ್ನು ಫ್ಲ್ಯಾಶ್ ಸೇಲ್ಸ್/ಡೀಲ್ ಆಫ್ ದ ಡೇ ವಿಧಾನಗಳ ಮೂಲಕ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ ಮಾಡುವ ಉಪಾಯದಲ್ಲಿದೆ. ಇನ್ನು ಕಂಪೆನಿಯು ಆಫ್‌ಲೈನ್‌ನಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡಲು ಏರ್‌ಟೆಲ್‌ನೊಂದಿಗೆ ಕೈಜೋಡಿಸಲಿದೆ.

Best Mobiles in India

English summary
This article tells about Xiaomi is creating sensation not only in India but also in various countries with its new models.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X