Home
Apps

ರಕ್ತದಾನಕ್ಕಾಗಿ 'ಬ್ಲಡ್‌ ಫಾರ್‌ ಶ್ಯೂರ್' ಅಪ್ಲಿಕೇಶನ್‌

By Suneel

ಅಪ್ಲಿಕೇಶನ್‌ಗಳು ಇಂದು ಕೇವಲ ವಾಣಿಜ್ಯೀಕರಣವನ್ನು ಅಭಿವೃದ್ದಿಗೊಳಿಸಲು ಅಥವಾ ಮನರಂಜನೆಗೆ ಮಾತ್ರ ಅನುಕೂಲವಾಗುತ್ತಿವೆ ಎಂದುಕೊಂಡರೆ ತಪ್ಪು. ಕಾರಣ ಇಂದು ಅಪ್ಲಿಕೇಶನ್‌ಗಳು ಜೀವವನ್ನು ರಕ್ಷಿಸಲು ಸಹ ಸಹಾಯಕಾರಿಯಾಗಿವೆ.

ಓದಿರಿ: ನಾನು ಅಪ್ಲಿಕೇಶನ್ ಬಳಸಿ ಉಚಿತ ಕರೆಮಾಡಿ

ಪ್ರಪಂಚದಲ್ಲಿ ಎಷ್ಟೇ ರೀತಿಯ ಟೆಕ್ನಾಲಜಿಗಳು ಬೆಳವಣಿಗೆ ಆದರೂ ಸಹ ಮಾನವ ಸಂಪನ್ಮೂಲವೇ ಅತಿಮುಖ್ಯವಾಗಿದೆ. ಅದನ್ನು ಅರಿತ ಟೆಕ್‌ ಅಭಿವೃದ್ದಿಗಾರರು ಇಂದು ಮನುಷ್ಯರನ್ನು ಹಲವು ಸಂದರ್ಭಗಳ ಪ್ರಾಣಾಪಾಯದಿಂದ ರಕ್ಷಿಸಲು "ಬ್ಲಡ್‌ ಫಾರ್‌ ಶ್ಯೂರ್" ಎಂಬ ಅಪ್ಲಿಕೇಶನ್‌ ಅಭಿವೃದ್ದಿ ಪಡಿಸಿದ್ದಾರೆ. ಈ ಅಪ್ಲಿಕೇಶನ್‌ ರಕ್ತದಾನಕ್ಕೆ ಶೀರ್ಘವಾಗಿ ಸಹಾಯಕಾರಿಯಾಗುತ್ತದೆ.

ಓದಿರಿ:ಕ್ಯಾನ್ಸರ್‌ ಸಂಶೋಧನೆಗೆ ವೋಡಾಫೋನ್‌ ಡ್ರೀಮ್‌ಲ್ಯಾಬ್ ಅಪ್ಲಿಕೇಶನ್‌

ಹೌದು, ಇಂದು ಹಲವು ವೇಳೆಯ ಅಪಘಾತದಿಂದಾಗಿ ಎಷ್ಟೋ ವ್ಯಕ್ತಿಗಳು ರಕ್ತದ ಕೊರತೆಯಿಂದಾಗಿ ಜೀವ ಕಳೆದುಕೊಂಡಿದ್ದಾರೆ. ಅಪಘಾತವಾದ ಸಂದರ್ಭದಲ್ಲಿ ಡಾಕ್ಟರ್ ಇಂತ ಗ್ರೂಪ್‌ನ ರಕ್ತ ಬೇಕು ಎಂದ ತಕ್ಷಣ ಎಲ್ಲಾ ಸಮಯದಲ್ಲೂ ಬ್ಲಡ್‌ ಬ್ಯಾಂಕ್‌ನಲ್ಲೂ ಸಿಗುವುದಿಲ್ಲ, ಹಾಗೆ ಹುಡುಕಿದರೂ ಗೂಗಲ್‌ನಲ್ಲೂ ಸಿಗುವುದಿಲ್ಲ. ಇಂತಹ ಸಂದರ್ಭದಲ್ಲಿ ರಕ್ತ ಸಿಗುವಷ್ಟರೊಳಗೆ ವ್ಯಕ್ತಿ ಪ್ರಾಣವೇ ಇರುವುದಿಲ್ಲ. ಈ ಸಮಸ್ಯೆಗೆ ಪರಿಹಾರವಾಗಿ ಬೆಂಗಳೂರು ಮೂಲದ ಅರೇರಾ ಟೆಕ್ನಾಲಜೀಸ್‌ನ ಯುವಕರು "ಬ್ಲಡ್‌ ಫಾರ್‌ ಶ್ಯೂರ್" ಅಪ್ಲಿಕೇಶನ್‌ ಅಭಿವೃದ್ದಿಪಡಿಸಿದ್ದಾರೆ. ಹಾಗಾದರೆ ಇದು ಹೇಗೆ ಸಹಾಯವಾಗುತ್ತದೆ, ತುರ್ತುಪರಿಸ್ಥಿತಿಗಳಲ್ಲಿ ನಾವು ರಕ್ತ ಬೇಕಾದಲ್ಲಿ ಹೇಗೆ ಪಡೆಯಬಹುದು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರವನ್ನು ಈ ಲೇಖನ ಓದಿ ತಿಳಿದುಕೊಳ್ಳಿ.

"ಬ್ಲಡ್‌ ಫಾರ್ ಶ್ಯೂರ್‌" ಆಪ್‌

ಈ ಅಪ್ಲಿಕೇಶನ್‌ ಅನ್ನು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ "ಬ್ಲಡ್‌ ಫಾರ್‌ ಶ್ಯೂರ್‌" ಎಂದು ಟೈಪ್‌ ಮಾಡಿ ಹುಡುಕಿದರೆ ಲಭ್ಯವಿದ್ದು, ನಿಮ್ಮ ಡಿವೈಸ್‌ಗಳಿಗೆ ಇನ್ಸ್ಟಾಲ್‌ ಮಾಡಿ ಕೊಳ್ಳಿ. ಇದರಲ್ಲಿ ರಕ್ತ ಬೇಕಾದವರು ನಿಮ್ಮ ಸುತ್ತಾ ಮುತ್ತಾ ಇರುವ ರಕ್ತದಾನಿಗಳ ವಿವರ ಪಡೆದುಕೊಳ್ಳಬಹುದಾಗಿದೆ.
ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಬ್ಲಡ್‌ ಫಾರ್ ಶ್ಯೂರ್ ಆಫ್‌ ಮೂಲಕ ರಕ್ತದಾನ

ಬ್ಲಡ್‌ ಫಾರ್ ಶ್ಯೂರ್ ಆಫ್‌ ಮೂಲಕ ರಕ್ತದಾನ

ಈ ಅಪ್ಲಿಕೇಶನ್‌ ಮೂಲಕ ರಕ್ತದಾನ ಮಾಡುವವರು ತಮ್ಮ ಹೆಸರು, ರಕ್ತದ ಗುಂಪು, ನೀವಿರುವ ಪ್ರದೇಶದ ಹೆಸರು ಹೀಗೆ ವಿವರವನ್ನು ನೋಂದಾಯಿಸಿಕೊಳ್ಳಿ. ಇದರಲ್ಲಿ ಬ್ಲಡ್‌ ಬ್ಯಾಂಕ್‌ಗಳು ವಿವರವನ್ನು ಸಹ ನೀಡಿರಲಾಗುತ್ತದೆ.

ರಕ್ತದಾನ ಉಚಿತ

ರಕ್ತದಾನ ಉಚಿತ

ಈ ಅಪ್ಲಿಕೇಶನ್‌ನಲ್ಲಿ ರಕ್ತದಾನ ಮಾಡುವುದಾಗಿ ನೋಂದಾಯಿಸಿಕೊಂಡವರು ಉಚಿತವಾಗಿ ರಕ್ತವನ್ನು ನೀಡಲಿದ್ದು, ರಕ್ತ ಪಡೆದವರು ಯಾವುದೇ ರೀತಿಯ ಹಣ ನೀಡಬೇಕಿಲ್ಲ ಎಂದು ಅರೇರಾ ಟೆಕ್ನಾಲಜೀಸ್ ಸಿಇಒ ಪ್ರವೀಣ್‌ ಹೇಳಿದ್ದಾರೆ. ಹಾಗೂ ಆನ್‌ಲೈನ್ ಟ್ಯಾಕ್ಸಿ ಬುಕ್ಕಿಂಗ್‌ ಆಗುವುದರಿಂದ ಯಾವುದೇ ರೀತಿಯ ಹಣ ವ್ಯಯಿಸುವ ಅಗತ್ಯವಿಲ್ಲ.

ಅಪ್ಲಿಕೇಶನ್‌ ಫೀಚರ್

ಅಪ್ಲಿಕೇಶನ್‌ ಫೀಚರ್

* ಬ್ಲಡ್‌ ಫಾರ್ ಶ್ಯೂರ್ ಆಪ್‌ ಸಂಗ್ರಹಣಾ ಸಾಮರ್ಥ್ಯ 8MB ಇದ್ದು, ಸಾಮಾನ್ಯ ಸ್ಮಾರ್ಟ್‌ಫೋನ್‌ಗಿಗೆ ಇನ್ಸ್ಟಾಲ್‌ ಆಗಲು ಸಮಸ್ಯೆ. ಆದರೆ ಆಂಡ್ರಾಯ್ಡ್‌ 4.1 ಓಎಸ್‌ ನಂತಹ ಸ್ಮಾರ್ಟ್‌ಫೋನ್‌ಗಳಲ್ಲಿ ಇನ್ಸ್ಟಾಲ್‌ ಮಾಡಬಹುದಾಗಿದೆ.

ಆಪ್‌ ಬಳಕೆದಾರರು

ಆಪ್‌ ಬಳಕೆದಾರರು

ಕೇವಲ 20 ದಿನಗಳಲ್ಲಿ ಈಗಾಗಲೇ 1000-5000 ವರೆಗೂ ಬಳಕೆದಾರರು ಇನ್ಸ್ಟಾಲ್‌ ಮಾಡಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: [email protected]

Best Mobiles in India

English summary
Blood For sure is the social app for saving life during medical emergency. The app helps people to find the active blood donors and blood banks nearby them during emergency.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+