ನಾನು ಅಪ್ಲಿಕೇಶನ್ ಬಳಸಿ ಉಚಿತ ಕರೆಮಾಡಿ

By Shwetha
|

ಇತ್ತೀಚಿನ ದಿನಗಳಲ್ಲಿ ಮೊಬೈಲ್‌ಗಳನ್ನು ಸಾಕಷ್ಟು ಜನರು ಬಳಸಿಕೊಳ್ಳುತ್ತಿದ್ದಾರೆ, ಮೊಬೈಲ್ ಬಳಕೆ ಅಷ್ಟೊಂದು ಅಡ್ಡಿಯನ್ನುಂಟು ಮಾಡುವುದಿಲ್ಲ ಆದರೆ ಮೊಬೈಲ್‌ಗೆ ರೀಚಾರ್ಜ್ ಮಾಡುವುದು ಮತ್ತು ಆ ರೀಚಾರ್ಜ್ ಹಲವಾರು ರೀತಿಯಲ್ಲಿ ಖರ್ಚಾಗುವುದು ನಮಗೆ ತಲೆನೋವನ್ನು ತರುತ್ತದೆ.

ಓದಿರಿ: ಭಾರತವನ್ನು ಮುಳುಗಿಸುತ್ತಿರುವ ಚೀನಾ ಸ್ಮಾರ್ಟ್‌ಫೋನ್‌ಗಳು!!!

ಇತ್ತೀಚೆಗೆ ಮೊಬೈಲ್ ಆಪರೇಟರ್‌ಗಳಾದ ಏರ್‌ಟೆಲ್, ವೊಡಾಫೋನ್, ಬಿಎಸ್‌ಎನ್‌ಎಲ್ ಕರೆಗೆ ದರವನ್ನು ನಿಗದಿಪಡಿಸುತ್ತಿದ್ದಾರೆ. ಇನ್ನು ಸ್ಮಾರ್ಟ್‌ಫೋನ್‌ಗಳನ್ನು ನಾವು ಬಳಸುತ್ತಿದ್ದೇವೆ ಎಂದಾದಲ್ಲಿ ಫೇಸ್‌ಬುಕ್, ವಾಟ್ಸಾಪ್, ವಾಟ್ಸಾಪ್ ಪ್ಲಸ್ ಅನ್ನು ಬಳಸಿ ಇಂಟರ್ನೆಟ್ ಮುಖಾಂತರ ಕರೆಗಳನ್ನು ಮಾಡಬಹುದಾಗಿದೆ.

ಓದಿರಿ: ಒಡೆದ ಫೋನ್ ಪರದೆಗೆ ಖರ್ಚಿಲ್ಲದ ಪರಿಹಾರ

ಆದರೆ ಇಂಟರ್ನೆಟ್‌ನ ಬಳಕೆಯಿಲ್ಲದೆ ಉಚಿತವಾಗಿ ಕರೆಮಾಡಬಹುದಾದ ಅಪ್ಲಿಕೇಶನ್ ಕುರಿತ ಮಾಹಿತಿಯನ್ನು ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸುತ್ತಿದ್ದೇವೆ. ನಾನು ಅಪ್ಲಿಕೇಶನ್‌ನಿಂದ ಈ ಅಪ್ಲಿಕೇಶನ್ ಹೊಂದಿರುವವರು ಅನಿಯಮಿತ ಕರೆ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದ್ದು ಆಫ್‌ಲೈನ್‌ನಲ್ಲಿಯೇ ಇದು ವಾರಕ್ಕೆ 15 ನಿಮಿಷ ಉಚಿತ ಕರೆ ಸೌಲಭ್ಯವನ್ನು ಒದಗಿಸುತ್ತಿದೆ.

ಅನಿಯಮಿತ ಕರೆ ಸೌಲಭ್ಯ

ಅನಿಯಮಿತ ಕರೆ ಸೌಲಭ್ಯ

ಲ್ಯಾಂಡ್‌ಲೈನ್ ಅಥವಾ ರಾಷ್ಟ್ರೀಯ ಕರೆಗಳನ್ನು ಮಾಡಬಹುದಾಗಿದೆ. ಆಂಡ್ರಾಯ್ಡ್‌ಗಾಗಿಯೇ ಈ ಅಪ್ಲಿಕೇಶನ್ ಅನ್ನು ವಿಶೇಷವಾಗಿ ವಿನ್ಯಾಸಪಡಿಸಲಾಗಿದೆ. ಅಪ್ಲಿಕೇಶನ್ ಲಿಂಕ್: https://play.google.com/store/apps/details?id=com.gentaycom.nanu

ನಾನು ಅಪ್ಲಿಕೇಶನ್

ನಾನು ಅಪ್ಲಿಕೇಶನ್

ಅತ್ಯುತ್ತಮ ಕರೆ ಮಾಡಬಹುದಾದ ಅಪ್ಲಿಕೇಶನ್ ನಾನು ಅಪ್ಲಿಕೇಶನ್ ಆಗಿದ್ದು ಇಂಟರ್ನೆಟ್‌ನ ಅಗತ್ಯವಿಲ್ಲ. ವೆಬ್‌ಸೈಟ್ ಲಿಂಕ್:http://www.hellonanu.com/

2 ಜಿ ಕನೆಕ್ಟಿವಿಟಿ

2 ಜಿ ಕನೆಕ್ಟಿವಿಟಿ

2 ಜಿ ಕನೆಕ್ಟಿವಿಟಿಯಲ್ಲೂ ಈ ನಾನು ಅಪ್ಲಿಕೇಶನ್ ಇಂಟರ್ನೆಟ್‌ನ ಸಹಾಯವಿಲ್ಲದೆ ಕಾರ್ಯನಿರ್ವಹಿಸುತ್ತಿದೆ.

ಆಫ್‌ಲೈನ್‌ನಲ್ಲಿ ಕರೆಮಾಡುವ ವ್ಯವಸ್ಥೆ

ಆಫ್‌ಲೈನ್‌ನಲ್ಲಿ ಕರೆಮಾಡುವ ವ್ಯವಸ್ಥೆ

ನಾನು ಸಿಇಒ ಹೇಳುವಂತೆ, ಆಫ್‌ಲೈನ್‌ನಲ್ಲಿ ಕರೆಮಾಡುವ ವ್ಯವಸ್ಥೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು ಬೇರೆ ಬೇರೆ ದೇಶಗಳಿಗೂ ಈ ವ್ಯವಸ್ಥೆಯನ್ನು ಹರಡಿಸುವ ಇರಾದೆ ಇವರಿಗಿದೆ.

ನೋಕಿಯಾ 1100

ನೋಕಿಯಾ 1100

ಈ ಅಪ್ಲಿಕೇಶನ್ ಕಾರ್ಯನಿರ್ವಹಿಸಲು ಸ್ಮಾರ್ಟ್‌ಫೋನೇ ಬೇಕೇಂದೇನಿಲ್ಲ ನೋಕಿಯಾ 1100 ದಲ್ಲೂ ಈ ಅಪ್ಲಿಕೇಶನ್ ಕಾರ್ಯನಿರ್ವಹಿಸುತ್ತದೆ.

ಕ್ಲೌಡ್ ಕಾಲ್ ಕಾನ್ಸೆಪ್ಟ್

ಕ್ಲೌಡ್ ಕಾಲ್ ಕಾನ್ಸೆಪ್ಟ್

ಕ್ಲೌಡ್ ಕಾಲ್ ಕಾನ್ಸೆಪ್ಟ್ ಆಧರಿಸಿ ಈ ಕರೆ ಇದ್ದು ನಿಜಕ್ಕೂ ಇದು ಅತಿಸರಳವಾಗಿದೆ

ಫ್ಲಿಕಾಲ್ ಕಸ್ಟಮರ್ ಸರ್ವೀಸ್‌

ಫ್ಲಿಕಾಲ್ ಕಸ್ಟಮರ್ ಸರ್ವೀಸ್‌

ಫ್ರಿಕಾಲ್ ಕಸ್ಟಮರ್ ಸರ್ವೀಸ್‌ಗೆ ನೀವು ಮೊದಲು ಮಿಸ್‌ಡ್ ಕರೆ ಕೊಡಬೇಕಾಗುತ್ತದೆ, ಅವರು ಹಿಂತರುಗಿ ನಿಮಗೆ ಕರೆಮಾಡುತ್ತಾರೆ ಮತ್ತು ಗ್ರಾಹಕ ಮೊಬೈಲ್ ಸಂಖ್ಯೆಯನ್ನು ಅವರು ಸ್ವೀಕರಿಸುತ್ತಾರೆ ಅವರಿಗೆ ನೀವು ಸಂಖ್ಯೆಯನ್ನು ನೀಡಿದರೆ ಸಾಕು ಮತ್ತು ರಿಸೀವರ್‌ಗೆ ಕರೆಯನ್ನು ಅವರು ಡೈವರ್ಟ್ ಮಾಡುತ್ತಾರೆ.

ಫ್ರಿಕಾಲ್ ಅಪ್ಲಿಕೇಶನ್

ಫ್ರಿಕಾಲ್ ಅಪ್ಲಿಕೇಶನ್

ಫ್ರಿಕಾಲ್ ಅಪ್ಲಿಕೇಶನ್ ವಿಂಡೋಸ್ ಫೋನ್‌ಗಾಗಿ ಇದೆ.

ಫ್ರಿ ಕಾಲ್ ವೆಬ್‌ಸೈಟ್

ಫ್ರಿ ಕಾಲ್ ವೆಬ್‌ಸೈಟ್

ಈ ಸೇವೆಯನ್ನು ಬಳಸಲು ನಿಮ್ಮ ಮೊಬೈಲ್ ಸಂಖ್ಯೆಯನ್ನು ಫ್ರಿ ಕಾಲ್ ವೆಬ್‌ಸೈಟ್ http://freekall.in ಗೆ ನೋಂದಾಯಿಸಬೇಕಾಗುತ್ತದೆ.

ಹೊರದೇಶಗಳಿಗೂ ಉಚಿತ ಕರೆ

ಹೊರದೇಶಗಳಿಗೂ ಉಚಿತ ಕರೆ

ಈ ಅಪ್ಲಿಕೇಶನ್ ಬಳಸಿ ಹೊರದೇಶಗಳಿಗೂ ಉಚಿತ ಕರೆಯನ್ನು ಮಾಡಬಹುದಾಗಿದೆ.

Best Mobiles in India

English summary
Making free phone calls over the Internet is no big deal. Apps such as FaceTime, Viber, Skype and many more let you do that. But none of these work well, or not at all, on 2G networks - which are common in India. Free Android app Nanu is here to change that.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X