ಕ್ಯಾನ್ಸರ್‌ ಸಂಶೋಧನೆಗೆ ವೋಡಾಫೋನ್‌ ಡ್ರೀಮ್‌ಲ್ಯಾಬ್ ಅಪ್ಲಿಕೇಶನ್‌

By Suneel
|

ಸ್ಮಾರ್ಟ್‌ಫೊನ್‌ಗಳು ಇಂದು ಎಲ್ಲಾ ಕ್ಷೇತ್ರಗಳಲ್ಲೂ ಅತ್ಯುತ್ತಮ ಅನುಕೂಲ ನೀಡುತ್ತಿವೆ. ಮೆಡಿಕಲ್‌ ಮತ್ತು ಆರೋಗ್ಯ ಕ್ಷೇತ್ರದಲ್ಲೂ ಹೆಚ್ಚು ಸಹಾಯಕವಾಗುತ್ತಿವೆ. ಇದಕ್ಕೆ ಉದಾಹರಣೆಯಾಗಿ ವೋಡಾಫೋನ್ ಫೌಂಡೇಶನ್ ಸಹಭಾಗಿತ್ವದಲ್ಲಿ ಆಸ್ಟ್ರೇಲಿಯಾ ಈಗ ಕ್ಯಾನ್ಸರ್‌ ಸಮಸ್ಯೆ ಗುಣಪಡಿಸಲು ಸಂಶೋಧನೆಗೆ ಸಹಾಯಕವಾಗುವ ಆಂಡ್ರಾಯ್ಡ್‌ ಅಪ್ಲಿಕೇಶನ್‌ ಒಂದನ್ನು ಅಭಿವೃದ್ದಿ ಪಡಿಸಿದೆ. ಈ ಅಪ್ಲಿಕೇಶನ್‌ ಎಲ್ಲಾ ದೇಶಗಳಿಗೂ ಉಪಯೋಗವಾದರೆ ಹಲವು ವಿಧಧ ಕ್ಯಾನ್ಸರ್‌ಗಳನ್ನು ಗುಣಪಡಿಸಲು ಸಹಾಯಕವಾಗುತ್ತದೆ.

ಓದಿರಿ: ಟೆಕ್‌ ಜಗತ್ತಿನ ಅಚ್ಚರಿ ಗ್ಯಾಜೆಟ್ಸ್‌ಗಳು : ಮಾನವನ ಕೈಯಲ್ಲಿ

Dream Lab ಅಪ್ಲಿಕೇಶನ್‌

Dream Lab ಅಪ್ಲಿಕೇಶನ್‌

ಈ ಮೊಬೈಲ್‌ ಅಪ್ಲಿಕೇಶನ್‌ ಕ್ಯಾನ್ಸರ್‌ ಸಂಶೋಧನೆಗೆ ಸಹಾಯ ಮಾಡುತ್ತದೆ.

ಸೂಪರ್‌ ಕಂಪ್ಯೂಟರ್

ಸೂಪರ್‌ ಕಂಪ್ಯೂಟರ್

ಆಸ್ಟ್ರೇಲಿಯಾ ಗಾರ್ವೆನ್ ಮೆಡಿಕಲ್‌ ಸಂಶೋಧನಾ ಸಂಸ್ಥೆ ಮತ್ತು ವೋಡಾಫೋನ್‌ ಫೌಂಡೇಶನ್ ಸೂಪರ್ ಕಂಪ್ಯೂಟರ್‌ ತಯಾರಿಸಲು ನಿರ್ಧರಿಸಿದ್ದು, ಅದು ಉಚಿತವಾಗಿ ನಿಮ್ಮ ಸ್ಮಾರ್ಟ್‌ಫೋನ್‌ ಪವರ್‌ ಬಳಸಿಕೊಂಡು ಕ್ಯಾನ್ಸರ್‌ ಸಂಶೋಧನೆ ವೇಗಗೊಳಿಸಲಿದೆ.

ಕ್ಯಾನ್ಸರ್‌ ಸಂಶೋಧನೆ ವೇಗಗೊಳಿಸುವುದು ಹೇಗೆ ?

ಕ್ಯಾನ್ಸರ್‌ ಸಂಶೋಧನೆ ವೇಗಗೊಳಿಸುವುದು ಹೇಗೆ ?

ಎಲ್ಲರೂ ಸಹ ಉಚಿತವಾದ ಆಂಡ್ರಾಯ್ಡ್ ಮೊಬೈಲ್‌ DreamLAB ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕಷ್ಟೆ.

ಕ್ಯಾನ್ಸರ್‌ ವಿಧ ಆಯ್ಕೆ ಮಾಡಿ

ಕ್ಯಾನ್ಸರ್‌ ವಿಧ ಆಯ್ಕೆ ಮಾಡಿ

ಅಪ್ಲಿಕೇಶನ್‌ನಲ್ಲಿ ಹಲವು ರೀತಿಯ ಕ್ಯಾನ್ಸರ್‌ಗಳಲ್ಲಿ ಯಾವ ವಿಧಧ ಕ್ಯಾನ್ಸರ್‌ ಸಂಶೋಧನೆಗೆ ಸಹಾಯ ಮಾಡುತ್ತೀರಿ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು

ಡೋನೇಟ್ ಮೊಬೈಲ್‌ ನೆಟ್‌ವರ್ಕ್‌

ಡೋನೇಟ್ ಮೊಬೈಲ್‌ ನೆಟ್‌ವರ್ಕ್‌

ಎಷ್ಟು ಮೊಬೈಲ್‌ ನೆಟ್‌ವರ್ಕ್‌ ಅಥವಾ ವೈಫೈ ಡಾಟಾ ಡೋನೇಟ್‌ ಮಾಡುತ್ತೀರ ಎಂಬುದರ ಬಗ್ಗೆ ನಾಮನಿರ್ಧೇಶನ ಮಾಡಬೇಕು.

ವಿಜ್ಞಾನಿಗಳಿಗೆ ಅನುಕೂಲ

ವಿಜ್ಞಾನಿಗಳಿಗೆ ಅನುಕೂಲ

ಉಚಿತ ಪವರ್ ಪ್ರಕ್ರಿಯೆ ಅಮೇರಿಕದ ಗಾರ್ವೆನ್‌ ಸಂಸ್ಥೆಯ ವಿಜ್ಞಾನಿಗಳಿಗೆ ಕ್ಯಾನ್ಸರ್‌ ಸಂಶೋಧನೆ ಬಗ್ಗೆ ತಿಳಿಯಲು ಸಹಾಯವಾಗುತ್ತಿದೆ.

 DreamLab ಅಪ್ಲಿಕೇಶನ್

DreamLab ಅಪ್ಲಿಕೇಶನ್

DreamLab ಅಪ್ಲಿಕೇಶನ್ ಸಹಾಯದಿಂದ ಹಲವು ವಿಧಧ ಕ್ಯಾನ್ಸರ್‌ಗಳನ್ನು ಸಂಪೂರ್ಣವಾಗಿ ಗುಣಪಡಿಸುವ ಬಗ್ಗೆ ಗಾರ್ವೆನ್‌ ಮೆಡಿಕಲ್‌ ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಹೇಳಿದ್ದಾರೆ.

 1,00,000 DreamLab ಅಪ್ಲಿಕೇಶನ್

1,00,000 DreamLab ಅಪ್ಲಿಕೇಶನ್

ಸಂಸ್ಥೆಯ ಪ್ರಕಾರ 1,00,000 DreamLab ಅಪ್ಲಿಕೇಶನ್‌ಗಳು ಮೊಬೈಲ್‌ಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಕ್ಯಾನ್ಸರ್‌ ಸಂಶೋಧನಾ ಗುಂಪು ಪ್ರಸ್ತುತಕ್ಕಿಂತ 3,000 ಪಟ್ಟು ವೇಗದಲ್ಲಿ ಡಾಟಾ ಪ್ರೋಸೆಸ್‌ ಮಾಡಲು ಅವಕಾಶ ಹೊಂದಿದ್ದಾರೆ.

DreamLab‌ ಆಸ್ಟ್ರೇಲಿಯನ್ನರಿಗೆ ಮಾತ್ರ

DreamLab‌ ಆಸ್ಟ್ರೇಲಿಯನ್ನರಿಗೆ ಮಾತ್ರ

DreamLab ಅಪ್ಲಿಕೇಶನ್‌ ಆಸ್ಟ್ರೇಲಿಯಾದ ಎಲ್ಲಾ ಆಂಡ್ರಾಯ್ಡ್‌ ಬಳಕೆದಾರರಿಗೆ ಮಾತ್ರ ಲಭ್ಯವಿದ್ದು, ಗೂಗಲ್‌ ಪ್ಲೇಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬೇಕಿದೆ.

ಭಾರತಕ್ಕೆ ಯಾವಾಗ ?

ಭಾರತಕ್ಕೆ ಯಾವಾಗ ?

ಆಸ್ಟ್ರೇಲಿಯಾದ ಈ ಅಪ್ಲಿಕೇಶನ್‌ ಭಾರತಕ್ಕೂ ಬಂದರೆ ಕ್ಯಾನ್ಸರ್‌ ಸಂಬಂಧ ಪಟ್ಟಂತೆ ಆರೋಗ್ಯ ಗುಣಪಡಿಸಲು ಸಹಾಯಕವಾಗಲಿದೆ.

Most Read Articles
Best Mobiles in India

English summary
Imagine that your idle phone is helping power cancer research as you hit the sack. With a new app, Australia's Garvan Institute of Medical Research and the Vodafone Foundation want to create a "supercomputer" that will use the free power from your smartphone to help speed up cancer research.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X