ಬೆಂಗಳೂರಿಗರು ಆನ್‌ಲೈನ್‌ನಲ್ಲಿ ದಿನಸಿ ಕೊಳ್ಳಲು ''Terraa" ಆಪ್
ಬೆಂಗಳೂರಿನಲ್ಲಿ ಆನ್‌ಲೈನ್‌ನಲ್ಲಿ ದಿನಸಿ ಶಾಪಿಂಗ್ ಮಾಡಲು 'Terraa' ಎಂಬ ಹೊಸ ಅಪ್ಲಿಕೇಶನ್ ಲಾಂಚ್ ಆಗಿದೆ. ರಿಲಾಯನ್ಸ್ ಫ್ರೆಶ್ ಸಹಭಾಗಿತ್ವದೊಂದಿಗೆ ಲಾಂಚ್ ಆಗಿರುವ ಇದರಲ್ಲಿ ಮನೆಗಳಿಂದಲೇ ಕಂಫರ್ಟ್ ಆಗಿ ಗ್ರಾಹಕರು ತಮಗಿಷ್ಟವಾದ ದಿನಸಿಗಳನ್ನು ಸಮಂಜಸ ದರಗಳಲ್ಲಿ ಖರೀದಿಸಬಹುದಾಗಿದೆ.

ಅಪ್ಲಿಕೇಶನ್ ಗ್ರಾಹಕರಿಗೆ ವಯಕ್ತಿಕವಾಗಿ ಖರೀದಿಸುವಂತಹ ಎಲ್ಲಾ ರೀತಿಯ ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿದೆ. ಒಂದು ದಿನಸಿ ಆಯ್ಕೆ ಮಾಡಿದ ನಂತರ ಇತರೆ ವಸ್ತುಗಳನ್ನು ಆಯ್ಕೆಮಾಡಲು ಆಪ್ ಬಳಕೆದಾರರಿಗೆ ಸಲಹೆ ನೀಡುತ್ತದೆ. ಅಂದರೆ ಮಾಲ್‌ಗಳಲ್ಲಿ ಹೇಗೆ ಬೇಕಾದ ವಸ್ತುಗಳನ್ನೆಲ್ಲಾ ತೆಗೆದು ಕಾರ್ಟ್‌ಒಳಗೆ ಹಾಕುತ್ತಾರೋ ಹಾಗೆ ಅಪ್ಲಿಕೇಶನ್‌ನಲ್ಲಿಯೂ ಎಷ್ಟು ವಸ್ತುಗಳನ್ನು ಬೇಕಾದರೂ ಆಯ್ಕೆ ಮಾಡುತ್ತಾ ಸರಳವಾಗಿ ಖರೀದಿಸುವ ಫೀಚರ್ ಹೊಂದಿದೆ. ಈ ಅಪ್ಲಿಕೇಶನ್ ರಿಲಾಯನ್ಸ್ ಫ್ರೆಶ್ ಮತ್ತು ಗೊಜಾವಾಸ್ ಜೊತೆಗೆ ಸಹಭಾಗಿತ್ವ ಹೊಂದಿದೆ.
ಓದಿರಿ:ಬೆಂಗಳೂರು ಬಿಎಂಟಿಸಿ ಬಸ್ಸುಗಳಲ್ಲಿ ಉಚಿತ ವೈಫೈ
ಟೆಕ್ನೋಪ್ಯಾಕ್ ಅಧ್ಯಯನದ ಪ್ರಕಾರ, 'ಭಾರತದಲ್ಲಿ ಆನ್‌ಲೈನ್ ದಿನಸಿ ಶಾಫಿಂಗ್ ಅನ್ನು ಇನ್ನು ಅಧಿಕೃತವಾಗಿ ಇತರ ಮಾರುಕಟ್ಟೆಗಳಂತೆ ಕೈಗೊಂಡಿಲ್ಲ. ಕಾರಣ ದಿನಸಿ ಉತ್ಪನ್ನಗಳು ನಾಶವಾಗುವ ಹಿನ್ನೆಲೆಯಲ್ಲಿ ಈ ಉತ್ಪನ್ನಗಳ ಸಾಗಾಟ ಸರಪಳಿ ಕಡಿಮೆ ಇದೆ ಎನ್ನಲಾಗಿದೆ.

ಮೇಲಿನ ವಿಷಯಗಳ ಹಿನ್ನೆಲೆಯಲ್ಲಿ "Terraa" ಅಪ್ಲಿಕೇಶನ್ ಬೆಂಗಳೂರಿನಲ್ಲಿ ರಿಲಾಯನ್ಸ್ ಫ್ರೆಶ್ ಮತ್ತು ಕೋರಿಯರ್ ಸಂಸ್ಥೆಯಾದ ಗೋಜವಾಸ್ ನೊಂದಿಗೆ ಸಹಭಾಗಿತ್ವ ಹೊಂದಿದ್ದು, ತಾಜಾ ದಿನಸಿಗಳ ಜೊತೆಗೆ ಉತ್ತಮ ಗುಣಮಟ್ಟದ ದಿನಸಿ ಉತ್ಪನ್ನಗಳನ್ನು ವಿತರಣೆ ಮಾಡುವುದಾಗಿ ಹೇಳಿದೆ.
ಓದಿರಿ: ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಾಡುವ ಮಾಹಿತಿ ಏನು ?
"ದಿನಸಿ ಶಾಪಿಂಗ್ ಒಂದು ರೀತಿಯ ಗುಂಪು ನಡವಳಿಕೆಯಾಗಿದ್ದು, ಇವರಿಗೆ ಸುಲಭವಾಗಿ ಆನ್‌ಲೈನ್ ಖರೀದಿ ಮಾಡಲು ಹೊಸ ಮಾರ್ಗಗಳನ್ನು ನೀಡಲಾಗಿದೆ. ''Terraa" ಹೌಸ್ ಕಾರ್ಟ್ ಫೀಚರ್ ಹೊಂದಿದ್ದು, ರಿಯಲ್ ಟೈಮ್‌ನಲ್ಲಿ ಕುಟುಂಬ ಸದಸ್ಯರು, ಸ್ನೇಹಿತರು ಶಾಪಿಂಗ್ ಮಾಡಬಹುದಾಗಿದ್ದು, ದಿನಸಿ ಉತ್ಪನ್ನಗಳನ್ನು ಆಯ್ಕೆ ಮಾಡಿ, ಪುನಃ ತೆಗೆಯುವ ಅವಕಾಶ ಇದೆ'' ಎಂದು ಹೇಳಲಾಗಿದೆ. ಅಲ್ಲದೆ ಪ್ರಾಡಕ್ಟ್ ಐಕಾನ್ ಗಳನ್ನು ನೀಡಿದ್ದು, ಸ್ಟೋರ್ ಸೇಲ್ಫ್ ಅನುಭವ ತಿಳಿಯಲಿದೆ. ಅಲ್ಲಿ ಹೆಚ್ಚಿನ ಸಂಖ್ಯೆಯ ಉತ್ಪನ್ನಗಳು ದೊರೆಯಲಿವೆ" ಎಂದು ಆಪ್ಲಿಕೇಶನ್ ಅಭಿವೃದ್ದಿಗೊಳಿಸಿರುವ ಸೇತುರಾಮನ್ ವೈದೀಶ್ವರನ್ ಹೇಳಿದ್ದಾರೆ.

ಪ್ರಸ್ತುತದಲ್ಲಿ ಅಪ್ಲಿಕೇಶನ್ ಬೆಂಗಳೂರಿಗರಿಗೆ ಲಭ್ಯವಿದ್ದು, ಮುಂದಿನ ವರ್ಷದಲ್ಲಿ ಅದನ್ನು 90 ನಗರಗಳಿಗೆ ವಿಸ್ತರಿಸಲಾಗುತ್ತದೆ ಎನ್ನಲಾಗಿದೆ. ಗ್ರಾಹಕರ ಬಳಕೆಯ ಆಧಾರದ ಮೇಲೆ ಉತ್ತಮ ಆಫರ್ ನೀಡಲಾಗುತ್ತದೆ. ಅಪ್ಲಿಕೇಶನ್ ಅನ್ನು ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
* ಐಒಎಸ್ ಬಳಕೆದಾರರು ಆಪ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ.
* ಆಂಡ್ರಾಯ್ಡ್ ಬಳಕೆದಾರರು ಆಪ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ.


Click it and Unblock the Notifications








