ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಾಡುವ ಮಾಹಿತಿ ಏನು ?

By Suneel
|

ತಂತ್ರಜ್ಞಾನ ಅಭಿವೃದ್ದಿಗೊಂಡಂತೆ ಕಂಪ್ಯೂಟರ್‌ ಬಳಕೆ ಪ್ರಾಥಮಿಕ ಶಿಕ್ಷಣದಿಂದಲೂ ಒಂದು ರೀತಿಯಲ್ಲಿ ಅವಶ್ಯಕವಾಗಿ ಮಾರ್ಪಡುತ್ತಿದೆ. ಅಂತೆಯೇ ಇಂದು ಸಾಮಾನ್ಯ ಮೊಬೈಲ್‌ಗಳಲ್ಲೂ ಇಂಟರ್ನೆಟ್‌ ಬಳಕೆ ಹೆಚ್ಚಿದ್ದು, ಇನ್ನು ಸ್ಮಾರ್ಟ್‌ಫೋನ್‌ ಮತ್ತು ಕಂಪ್ಯೂಟರ್‌ ಬಳಕೆ ಮಾಡುವವರನ್ನು ಕೇಳಬೇಕೆ? ಇವರಿಗಂತೂ ಇಂಟರ್ನೆಟ್‌ ಬೇಕೆ ಬೇಕು.

ಓದಿರಿ: ಬೆಂಗಳೂರು ಬಿಎಂಟಿಸಿ ಬಸ್ಸುಗಳಲ್ಲಿ ಉಚಿತ ವೈಫೈ

ದಿನನಿತ್ಯ ತಮ್ಮ ಸ್ಮಾರ್ಟ್‌ಫೋನ್‌ ಮತ್ತು ಕಂಪ್ಯೂಟರ್‌ಗಳಲ್ಲಿ ಇಂಟರ್ನೆಟ್‌ ಬಳಸುವ ಇವರು ಹಾಗಾದರೆ ಹೆಚ್ಚಿನದಾಗಿ ಏನನ್ನು ಸರ್ಚ್‌ ಮಾಡುತ್ತಾರೆ ಅಥವಾ ಪ್ರಪಂಚದಾದ್ಯಂತ ಹೆಚ್ಚು ಬಳಸಲ್ಪಡುತ್ತಿರುವ ವೆಬ್‌ಸೈಟ್‌ ಯಾವುವು ಎಂಬ ಪ್ರಶ್ನೆ ಉದ್ಬವವಾಗುವುದರಲ್ಲಿ ಸಂಶಯವೇ ಇಲ್ಲ. ಈ ಸಂಶಯಕ್ಕೆ ಪರಿಹಾರವನ್ನು ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿದೆ. ಗೂಗಲ್‌ ತನ್ನ ವಾರ್ಷಿಕ ಪಟ್ಟಿಯಲ್ಲಿ ಪ್ರಪಂಚದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇಂಟರ್ನೆಟ್‌ ಬಳಕೆದಾರರು ಏನನ್ನು? ಎಷ್ಟು ಶೇಕಡ ಹುಡುಕಾಡುತ್ತಾರೆ ಎಂಬ ವರದಿ ನೀಡಿದೆ.

ಈ ಲೇಖನದ ಸ್ಲೈಡರ್‌ಗಳಲ್ಲಿ ಜನರು ನಿಜವಾಗಲೂ ಗೂಗಲ್‌ ನಲ್ಲಿ ಏನನ್ನೂ ಸರ್ಚ್‌ ಮಾಡುತ್ತಾರೆ ಎಂಬುದನ್ನು ತಿಳಿಯಿರಿ.

ಫೇಸ್‌ಬುಕ್‌ ಟಾಪ್‌

ಫೇಸ್‌ಬುಕ್‌ ಟಾಪ್‌

ಗೂಗಲ್‌ನಲ್ಲಿ ಶೇಕಡ 100 ರಷ್ಟು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಅನ್ನು ಸರ್ಚ್‌ ಮಾಡುತ್ತಾರೆ.

ಗೂಗಲ್‌ 2ನೇ ಸ್ಥಾನದಲ್ಲಿ

ಗೂಗಲ್‌ 2ನೇ ಸ್ಥಾನದಲ್ಲಿ

ಜಗತ್ತಿನ ಬೃಹತ್‌ ಮಾಹಿತಿ ಸರ್ಚ್‌ ಇಂಜಿನ್ ಫೇಸ್‌ಬುಕ್‌ ನಂತರದ ಸ್ಥಾನದಲ್ಲಿ ಬಳಸಲ್ಪಡುತ್ತಿದ್ದು, ಶೇಕಡ 80 ಸರ್ಚ್‌ ಆಗುತ್ತದೆ.

ಯೂ (YOU) ಶೇಕಡ 65

ಯೂ (YOU) ಶೇಕಡ 65

ಗೂಗಲ್‌ ಮತ್ತು ಫೇಸ್‌ಬುಕ್‌ ನಂತರದಲ್ಲಿ YOU ಎಂಬ ಪದವನ್ನು ಶೇಕಡ 65 ರಷ್ಟು ಸರ್ಚ್‌ ಮಾಡಲಾತ್ತದೆ.

ಯೂಟ್ಯೂಬ್‌( YOUTUBE)

ಯೂಟ್ಯೂಬ್‌( YOUTUBE)

ಗೂಗಲ್‌ ಬಿಡುಗಡೆ ಮಾಡಿರುವ ವಾರ್ಷಿಕ ಪಟ್ಟಿಯಲ್ಲಿ ವಿಡಿಯೋ ತಾಣ ಯೂಟ್ಯೂಬ್‌ ಶೇಕಡ 60 ರಷ್ಟು ಸರ್ಚ್‌ ಆಗುವುದರ ಬಗ್ಗೆ ಮಾಹಿತಿ ವರದಿಯಾಗಿದೆ.

CRAIGSLIST ಶೇಕಡ 50

CRAIGSLIST ಶೇಕಡ 50

CRAIGSLIST ಕ್ಲಾಸಿಫೈಡ್‌ ಜಾಹಿರಾತು ವೆಬ್‌ಸೈಟ್‌ ಆಗಿದ್ದು, ಜಾಬ್ಸ್‌, ಹೌಸಿಂಗ್‌, ವಯಕ್ತಿಕ, ಫಾರ್‌ ಸೇಲ್‌, ಸೇವೆ, ಕಂಮ್ಯುನಿಟಿ, ಗಿಗ್, ಅರ್ಜಿದಾರರು, ಚರ್ಚೆ, ಮಾರಾಟ ವಸ್ತುಗಳು ಮತ್ತು ವಿಕಿಪೀಡಿಯ ಎಂಬ ಇತರ ವಿಭಾಗಗಳನ್ನು ಹೊಂದಿದೆ. ಈ ವೆಬ್‌ಸೈಟ್‌ ಶೇಕಡ 50 ರಷ್ಟು ಸರ್ಚ್‌ ಆಗುತ್ತದೆ.

 PORN  ಶೇಕಡ 44

PORN ಶೇಕಡ 44

ಗೂಗಲ್‌ನಲ್ಲಿ PORN ಎಂಬ ಅಶ್ಲೀಲ ಪದವು ಶೇಕಡ 40 ರಷ್ಟು ಸರ್ಚ್‌ ಆಗುವ ಬಗ್ಗೆ ಗೂಗಲ್‌ ತನ್ನ ವಾರ್ಷಿಕ ಪಟ್ಟಿಯಲ್ಲಿ ಹೇಳಿದೆ.

 WEATHER ಶೇಕಡ 44

WEATHER ಶೇಕಡ 44

ಪ್ರಕೃತಿಯಲ್ಲಿನ ಹವಾಮಾನಕ್ಕೆ ಸಂಬಂಧ ಪಟ್ಟ ಮಾಹಿತಿ ತಿಳಿಯಲು WEATHER ಎಂಬ ಪದವನ್ನು ಶೇಕಡ 40 ರಷ್ಟು ಬಳಸಿ ಮಾಹಿತಿ ಸರ್ಚ್‌ ಮಾಡುತ್ತಾರೆ.

YAHOO ಶೇಕಡ 35

YAHOO ಶೇಕಡ 35

YAHOO ಜಾಗತಿಕವಾಗಿ ವೆಬ್ ಪೋರ್ಟಲ್ ಎಂದು ಹೆಸರುವಾಸಿಯಾಗಿದ್ದು, ಇದು ಸರ್ಚ್‌ ಇಂಜಿನ್‌ ಆಗಿದೆ. ಅಲ್ಲದೇ ಯಾಹೂ ಮೇಲ್‌, ಯಾಹೂ ಡಿಕ್ಷನರಿ ಹೊಂದಿದೆ. ಇದು ಜಾಗತಿಕವಾಗಿ ಶೇಕಡ 35 ಸರ್ಚ್‌ ಆಗುತ್ತಿದೆ.

NEWS ಶೇಕಡ 30

NEWS ಶೇಕಡ 30

ಜಾಗತಿಕವಾಗಿ NEWS ಎಂಬ ಪದವು ಶೇಕಡ 30 ರಷ್ಟು ಹುಡುಕಾಟವಾಗುತ್ತದೆ.

SEX ಶೇಕಡ 25

SEX ಶೇಕಡ 25

ಗೂಗಲ್‌ ಸರ್ಚ್‌ನಲ್ಲಿ SEX ಎಂಬ ಪದವು ಶೇಕಡ 25 ಹುಡುಕಾಟವಾಗುವ ಬಗ್ಗೆ ಗೂಗಲ್‌ ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ.

AMAZON ಶೇಕಡ 25

AMAZON ಶೇಕಡ 25

ಆನ್‌ಲೈನ್‌ ಮಾರುಕಟ್ಟೆಯಲ್ಲಿ ಬೃಹತ್‌ ಗ್ರಾಹಕರನ್ನು ಹೊಂದಿರುವ AMAZON ಜಾಗತಿಕವಾಗಿ ಶೇಕಡ 25 ರಷ್ಟು ಸರ್ಚ್‌ ಆಗುತ್ತದೆ.

GAMES ಶೇಕಡ 20

GAMES ಶೇಕಡ 20

ಇಂದು ಸ್ಮಾರ್ಟ್‌ಫೋನ್‌ ಮತ್ತು ಕಂಪ್ಯೂಟರ್‌ಗಳು ಮಾಹಿತಿಗಷ್ಟೇ ಅಲ್ಲದೇ ಮನರಂಜನೆಯ ಪ್ರಮುಖ ವಸ್ತುಗಳಾಗಿದ್ದು ಇವುಗಳಲ್ಲಿ ಆನ್‌ಲೈನ್ ಗೇಮ್‌ ಬಳಸುವವರು ಅಧಿಕವಾಗಿದ್ದು, GAME ಎಂದು ಹಾಗೂ GAME ವೆಬ್‌ಸೈಟ್‌ಗಳನ್ನು ಶೇಕಡ 20 ರಷ್ಟು ಜಾಗತಿಕವಾಗಿ ಹುಡುಕಾಟ ನೆಡೆಸುತ್ತಾರೆ.

Best Mobiles in India

English summary
The clear winner around the world is "facebook," which is funny given that you could just as easily type facebook.com into a URL bar. "google" and "youtube" are also popular and likewise amusing.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X