Subscribe to Gizbot

ಆಡೋಬ್ ಸ್ಕ್ಯಾನರ್ ಇದ್ರೆ ಸಾಕು: ಸ್ಮಾರ್ಟ್‌ಫೋನ್‌ನಲ್ಲೇ ಎಲ್ಲವನ್ನು ಸ್ಕ್ಯಾನ್ ಮಾಡಬಹುದು..!!!

Written By:

ಅಡೋಬ್ ನಿಂದ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಡ್ಯಾಕ್ಯೂಮೆಂಟ್ ಸ್ಕ್ಯಾನರ್ ಆಪ್ ವೊಂದನ್ನು ಲಾಂಚ್ ಮಾಡಿದೆ. ಸದ್ಯದ ದಿನದಲ್ಲಿ ಪ್ರತಿಯೊಬ್ಬರು ತಮ್ಮ ಕೈನಲ್ಲಿರುವ ಸ್ಮಾರ್ಟ್‌ಫೋನ್‌ನಲ್ಲಿಯೇ ಟೆಕ್ಸಟ್ ಡ್ಯಾಕ್ಯೂಮೆಂಟ್ ಗಳನ್ನು ಸ್ಕ್ಯಾನ್ ಮಾಡುತ್ತಿದ್ದಾರೆ.

ಸ್ಮಾರ್ಟ್‌ಫೋನ್‌ನಲ್ಲಿ ಆಡೋಬ್ ಸ್ಕ್ಯಾನರ್ ಇದ್ರೆ ಸಾಕು

ಓದಿರಿ: ಜಿಯೋ ಆರಂಭದ ನಂತರ ಭಾರತದಲ್ಲಿ 1 GB ಡೇಟಾ ಬೆಲೆ ಎಷ್ಟಾಗಿದೆ ಗೊತ್ತಾ..? ಕೇಳಿದ್ರೆ ಆಶ್ಚರ್ಯಪಡುತ್ತೀರಾ..!!!

ಈ ಹಿನ್ನಲೆಯಲ್ಲಿ ಸದ್ಯ ಮಾರುಕಟ್ಟೆಯಲ್ಲಿ ಸಾಕಷ್ಟು ಅಪ್ ಗಳು ಲಭ್ಯವಿದೆ. ಇದರೊಂದಿಗೆ ಅಡೋಬ್ ಸಹ ಹೊಸ ಆಪ್ ಬಿಟ್ಟಿದೆ. ಇದು ಸ್ಕ್ಯಾನಿಂಗ್ ಮಾಡುವ ಹೊಸ ಅನುಭವನ್ನು ನೀಡಲಿದೆ. ಒಮ್ಮೆ ನೀವು ಇದನ್ನು ಬಳಕೆ ಮಾಡಿದರೆ ಮತ್ತೊಮ್ಮೆ ಬೇರೆ ಆಪ್ ಬಳಸುವುದೇ ಇಲ್ಲ ಎನ್ನಬಹುದು.

ಅಡೋಬ್ ಹೊಸದಾಗಿ ಬಿಡುಗಡೆ ಮಾಡಿರುವ ಸ್ಕ್ಯಾನರ್ ಆಪ್ ಉಚಿತವಾಗಿ ಲಭ್ಯವಿರಲಿದೆ. ಇದರಲ್ಲಿ ನೀವು ಸ್ಕ್ಯಾನ್ ಮಾಡುವ ಡ್ಯಾಕ್ಯೂಮೆಂಟ್ ಗಳನ್ನು ಒಂದರ ಹಿಂದೆ ಒಂದರಂತೆ ಸ್ಕ್ಯಾನ್ ಮಾಡಿ ಪಿಡಿಎಫ್ ಫೈಲ್ ಆಗಿ ಕನರ್ವಟ್ ಮಾಡಬಹುದಾಗಿದೆ. ಇದಕ್ಕಾಗಿ ಆಡೋಬ್ ಮೆಕ್ರೋಸಾಫ್ಟ್ ಲೆನ್ಸ್ ಸಹಾಯವನ್ನು ಮಾಡಿದೆ.

ಸ್ಮಾರ್ಟ್‌ಫೋನ್‌ನಲ್ಲಿ ಆಡೋಬ್ ಸ್ಕ್ಯಾನರ್ ಇದ್ರೆ ಸಾಕು

ಓದಿರಿ: ರೆಡಿಮಿ 4ಗೆ ನೇರಾ ಸ್ಪರ್ಧೆಯನ್ನು ನೀಡಲು ಬಂದಿದೆ ಯು ಯುರೇಕಾ: ಇಲ್ಲಿದೇ ಈ ಕುರಿತ ಸಂಪೂರ್ಣ ವಿವರ

ಆಡೋಬ್ ಆಪ್ ನಲ್ಲಿ ಇರುವ ಸ್ಕ್ಯಾನರ್ ಟೆಕ್ಟ್‌ಗಳನ್ನು ಆಟೋಮೆಟಿಕ್ ಆಗಿ ಸ್ಕ್ಯಾನ್ ಮಾಡಲಿದೆ. ರೆಸಿಪ್ಟ್, ನೋಟ್ಸ್, ಡ್ಯಾಕ್ಯೂಮೆಂಟ್, ಪಿಚ್ಚರ್, ಬಿಸ್‌ನೆಸ್ ಕಾರ್ಡ್, ವೈಟ್ ಬೋರ್ಡ್‌ ಗಳನ್ನು ಸ್ಕ್ಯಾನ್‌ಗಳನ್ನು ಮಾಡಲು ಇದು ಸಹಾಯಕಾರಿಯಾಗಿದೆ.

ಆಡೋಬ್ ಈಗಾಗಲೇ ಡೆಸ್ಕ್‌ಟಾಪ್ ನಲ್ಲಿ ಪಿಡಿಎಫ್ ಗಳನ್ನು ಕ್ರಿಯೆಟ್ ಮಾಡುವುದರಲ್ಲಿ ಸಾಕಷ್ಟು ಹೆಸರು ಮಾಡಿದ್ದು, ಅದನ್ನು ಸರಿಯಾದ ಆಪ್ ಮಾದರಿಯಲ್ಲಿ ತಯಾರಿಸಿ ಸ್ಮಾರ್ಟ್‌ಫೋನ್ ಬಳಕೆದಾರರಿಗೂ ನೀಡಲು ಮುಂದಾಗಿದೆ.

 

Read more about:
English summary
Adobe on Wednesday launched its document scanning app called Adobe Scan. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot