ರೆಡಿಮಿ 4ಗೆ ನೇರಾ ಸ್ಪರ್ಧೆಯನ್ನು ನೀಡಲು ಬಂದಿದೆ ಯು ಯುರೇಕಾ: ಇಲ್ಲಿದೇ ಈ ಕುರಿತ ಸಂಪೂರ್ಣ ವಿವರ

Written By:

ಮೈಕ್ರೋಮಾಕ್ಸ್ ಈ ಹಿಂದೆ ಭಾರತೀಯಾ ಮಾರುಕಟ್ಟೆಯಲ್ಲಿ ಯುರೇಕಾ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿ ಹೊಸದೊಂದು ಟ್ರೆಂಡ್ ಹುಟ್ಟಿಹಾಕಿತ್ತು. ಸದ್ಯ ಇದೇ ಮಾದರಿಯಲ್ಲಿ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಶಿಯೋಮಿ ರೆಡ್‌ಮಿ 4ಗೆ ಸ್ಪರ್ಧೆ ನೀಡುವ ಸಲುವಾಗಿ ಯು ಯುರೇಕಾ ಬ್ಲಾಕ್ ಸ್ಮಾರ್ಟ್‌ಫೋನ್ಅನ್ನು ಲಾಂಚ್ ಮಾಡಿದೆ.

ರೆಡಿಮಿ 4ಗೆ ನೇರಾ ಸ್ಪರ್ಧೆಯನ್ನು ನೀಡಲು ಬಂದಿದೆ ಯು ಯುರೇಕಾ..!

ಮಾರುಕಟ್ಟೆಯಲ್ಲಿರುವ ಶಿಯೋಮಿ ರೆಡ್‌ಮಿ 4 ಮತ್ತು ಕೂಲ್ ಪ್ಯಾಡ್ ನೋಟ್ 3 ಲೈಟ್ ಸ್ಮಾರ್ಟ್‌ಫೋನುಗಳಿಗೆ ಯು ಯುರೇಕಾ ಬ್ಲಾಕ್ ನೇರಾವಾಗಿ ಸ್ಪರ್ಧೆಯನ್ನು ನೀಡಲಿದ್ದು, ರೂ.8,999ಕ್ಕೆ ಮಾರಾಟವಾಗುವ ಈ ಫೋನ್ ಜೂನ್.6 ರಿಂದ ಫ್ಲಿಪ್ ಕಾರ್ಟಿನಲ್ಲಿ ಸೇಲ್ ಆಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
5 ಇಂಚಿನ FHD ಡಿಸ್‌ಪ್ಲೇ:

5 ಇಂಚಿನ FHD ಡಿಸ್‌ಪ್ಲೇ:

ಮೆಟಲ್ ಬಾಡಿಯನ್ನು ಹೊಂದಿರುವ ಯು ಯುರೇಕಾ ಬ್ಲಾಕ್ ಸ್ಮಾರ್ಟ್‌ಫೋನಿನಲ್ಲಿ 5 ಇಂಚಿನ Full HD ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದಕ್ಕೆ 2.5D ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಸುರಕ್ಷತೆಯನ್ನು ನೀಡಲಾಗಿದೆ.

4GB RAM/32 GB ROM:

4GB RAM/32 GB ROM:

ಯು ಯುರೇಕಾ ಬ್ಲಾಕ್ ಫೋನಿನಲ್ಲಿ 1.4 GHz ಆಕ್ವಾ ಕೋರ್ ಸ್ನಾಪ್ ಡ್ರಾಗನ್ 430 ಪ್ರೋಸೆಸರ್ ಇದ್ದು, 4GB RAM ಅಳವಡಿಸಲಾಗಿದೆ. ಇದರೊಂದಿಗೆ 32 GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ. ಅಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 64GB ವರೆಗೂ ವಿಸ್ತರಿಸಿಕೊಳ್ಳುವ ಅವಕಾಶ ಇದೆ.

13 MP/ 8 MP ಕ್ಯಾಮೆರಾ:

13 MP/ 8 MP ಕ್ಯಾಮೆರಾ:

ಯು ಯುರೇಕಾ ಬ್ಲಾಕ್ ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ 13 MP ಕ್ಯಾಮೆರಾವನ್ನು ನೋಡಬಹುದಾಗಿದ್ದು, ಡ್ಯುಯಲ್ ಟೋನ್ LED ಫ್ಲಾಷ್ ನೀಡಲಾಗಿದೆ. ಮುಂಭಾಗದಲ್ಲಿ 8 MP ಕ್ಯಾಮೆರಾ ಇದ್ದು, LED ಫ್ಲಾಷ್ ಇದೆ.

ಇತರೇ ವಿಶೇಷತೆಗಳು:

ಇತರೇ ವಿಶೇಷತೆಗಳು:

ಇದರೊಂದಿಗೆ ಯು ಯುರೇಕಾ ಬ್ಲಾಕ್ ಫೋನಿನಲ್ಲಿ 3000mAh ಬ್ಯಾಟರಿಯನ್ನು ಕಾಣಬಹುದಾಗಿದೆ. ಅಲ್ಲದೇ ಆಂಡ್ರಾಯ್ಡ್ 6.0 ದಲ್ಲಿ ಕಾರ್ಯನಿರ್ವಹಿಸಲಿದೆ. ಫಿಂಗರ್ ಪ್ರಿಂಟ್ ಸ್ಕ್ಯಾನರ್ ಸಹ ನೀಡಲಾಗಿದೆ. 4G VoLTE ಸಪೋರ್ಟ್ ಮಾಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 Read more about:
English summary
Micromax's Yu Televentures, after a brief sabbatical, has launched the Yu Yureka Black smartphone in India. to Know more visit kannada.gixbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot