Subscribe to Gizbot

ಜಿಯೋ ಆರಂಭದ ನಂತರ ಭಾರತದಲ್ಲಿ 1 GB ಡೇಟಾ ಬೆಲೆ ಎಷ್ಟಾಗಿದೆ ಗೊತ್ತಾ..? ಕೇಳಿದ್ರೆ ಆಶ್ಚರ್ಯಪಡುತ್ತೀರಾ..!!!

Written By:

ರಿಲಯನ್ಸ್ ಮಾಲೀಕತ್ವದ ಜಿಯೋ ಸೇವೆಯನ್ನು ಆರಂಭಿಸಿದ ನಂತರದಲ್ಲಿ ಭಾರತದಲ್ಲಿ ಸಾಕಷ್ಟು ಬದಲಾವಣೆಗಳು ಆಗಿದೆ. ಅದುವೇ ಟೆಲಿಕಾಂ ವಲಯದಲ್ಲಿ ಈ ಹಿಂದೆ ಎಂದು ಕಾಣದಂತಹ ಸ್ಪರ್ಧೆ ಏರ್ಪಟ್ಟಿದ್ದು, ಜಿಯೋ ದಾಳಿಗೆ ನಡುಗಿದ ಇತರೆ ಟೆಲಿಕಾಂ ಕಂಪನಿಗಳು ಗ್ರಾಹಕರನ್ನು ಉಳಿಸಿಕೊಳ್ಳಲು ಹೊಸ ಹೊಸ ಆಫರ್ ಗಳನ್ನು ದರ ಕಡಿತಗಳನ್ನು ಘೊಷಣೆ ಮಾಡಿದನ್ನು ಕಾಣಬಹುದಾಗಿದೆ.

ಜಿಯೋ ಆರಂಭದ ನಂತರ ಭಾರತದಲ್ಲಿ 1 GB ಡೇಟಾ ಬೆಲೆ ಎಷ್ಟಾಗಿದೆ ಗೊತ್ತಾ..?

ಓದಿರಿ: ರೆಡಿಮಿ 4ಗೆ ನೇರಾ ಸ್ಪರ್ಧೆಯನ್ನು ನೀಡಲು ಬಂದಿದೆ ಯು ಯುರೇಕಾ: ಇಲ್ಲಿದೇ ಈ ಕುರಿತ ಸಂಪೂರ್ಣ ವಿವರ

ಇದೇ ಮಾದರಿಯಲ್ಲಿ ಜಿಯೋ ಮೊದಲಿಗೆ ಉಚಿತ ಹೈ ಸ್ಪಿಡ್ ಡೇಟಾವನ್ನು ಬಳಕೆದಾರರಿಗೆ ನೀಡಲು ಮುಂದಾಗಿತ್ತು. ಇದರಿಂದಲೇ ಜಿಯೋ ಬಳಕೆದಾರರ ಸಂಖ್ಯೆ 10 ಕೋಟಿಯನ್ನು ದಾಟಿತ್ತು. ಇದರಿಂದಾಗಿ ಇತರೆ ಕಂಪನಿಗಳು ದರ ಇಳಿಕೆ ಮತ್ತು ಉಚಿತ ಡೇಟಾವನ್ನು ನೀಡಲು ಮುಂದಾದವು, 1GB ಡೇಟಾ ಬೆಲೆ ಶೇ. 70% ಕಡಿಮೆ ಬೆಲೆಗೆ ದೊರೆಯುವಂತೆ ಆಯ್ತು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒಂದು GB ಡೇಟಾಕ್ಕೆ $0.33:

ಒಂದು GB ಡೇಟಾಕ್ಕೆ $0.33:

ಸದ್ಯ ಬಿಡುಗಡೆಯಾಗಿರುವ ಇಂಟರ್ನೆಟ್ ಟ್ರೆಂಡ್ ರಿಪೋರ್ಟ್ ಮಾಹಿತಿಯಂತೆ ಮಾರ್ಚ್ 31ರ ವರೆಗೆ ಭಾರತದಲ್ಲಿ ಹೈ ಸ್ಪೀಡ್ ಡೇಟಾ ಬೆಲೆಯೂ $0.33 ಆಗಿತ್ತು. ಆಂದರೆ ರೂ.33ಕ್ಕೆ ಒಂದು GB ಡೇಟಾ ದೊರೆಯುತ್ತಿದೆ ಎನ್ನಲಾಗಿದೆ.

ಜಿಯೋ ಬರುವ ಮೊದಲು ರೂ.300 ಇತ್ತು:

ಜಿಯೋ ಬರುವ ಮೊದಲು ರೂ.300 ಇತ್ತು:

ದೇಶದಲ್ಲಿ ಜಿಯೋ ಆರಂಭಕ್ಕೂ ಮುನ್ನ ಒಂದು GB ಹೈ ಸ್ಪಿಡ್ ಡೇಟಾ ಬೆಲೆಯೂ ರೂ.300 ಆಗಿತ್ತು ಎನ್ನಲಾಗಿದೆ. ಆದರೆ ಜಿಯೋ ಸೇವೆ ಆರಂಭಿಸಿ 7 ತಿಂಗಳಲ್ಲಿ ಈ ಬೆಲೆಯೂ ರೂ.33 ಆಗಿದೆ. ಇದೆಲ್ಲವೂ ಜಿಯೋ ದಿಂದಲೇ ಸಾಧ್ಯವಾಗಿರುವುದು.

200 ಮಿಲಿಯನ್ ನಿಂದ 1.3 ಬಿಲಿಯನ್:

200 ಮಿಲಿಯನ್ ನಿಂದ 1.3 ಬಿಲಿಯನ್:

2016ರಲ್ಲಿ ಭಾರತದಲ್ಲಿ 200 ಮಿಲಿಯನ್ GB ಡೇಟಾವನ್ನು ಮಾತ್ರವೇ ಬಳಸಲಾಗುತ್ತಿತು. ಆದರೆ ಜಿಯೋ ಆರಂಭವಾದ ನಂತರದಲ್ಲಿ 1.3 ಮಿಲಿಯನ್ GB ಡೇಟಾವನ್ನು 2017ರ ಮಾರ್ಚ್ 31ರ ವರೆಗೆ ಬಳಸಿಕೊಳ್ಳಲಾಗಿದೆ. ಇದೊಂದು ಜಾಗತಿಕವಾಗಿ ಗುರುತಿಸಿರುವ ಅತೀ ದೊಡ್ಡ ಬೆಳವಣಿಗೆಯಾಗಿದೆ.

ವಿಶ್ವದಲ್ಲೇ ಅತೀ ಹೆಚ್ಚು ಡೇಟಾ ಬಳಕೆ:

ವಿಶ್ವದಲ್ಲೇ ಅತೀ ಹೆಚ್ಚು ಡೇಟಾ ಬಳಕೆ:

ಭಾರತೀಯರು ಸದ್ಯ ಇಡೀ ವಿಶ್ವದಲ್ಲೇ ಅತೀ ಹೆಚ್ಚು ಡೇಟಾವನ್ನು ಬಳಕೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಭಾರತೀಯರು 150 ಬಿಲಿಯನ್ ಗಂಟೆಗಳ ಇಂಟರ್ನೆಟ್ ಬಳಕೆ ಮಾಡಿದರೆ, ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್ ನಲ್ಲಿ 115 ಬಿಲಿಯನ್ ಗಂಟೆಗಳ ಕಾಲ ಇಂಟರ್‌ನೆಟ್ ಬಳಕೆ ಮಾಡಲಾಗುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Reliance Jio’s launch has resulted in a massive cut in data prices, and the average cost of 1GB data by all telcos stood at $ 0.33 at the end of March 31. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot