Subscribe to Gizbot

ಸಾಲ ಬೇಕಾ..? 'ನೀವು ಕೇಳಿದಷ್ಟು ಸಾಲವನ್ನು ಕ್ಷಣ ಮಾತ್ರದಲ್ಲಿ ನೀಡುವ ಆಪ್'

Written By:

ಸಾಲ ಎನ್ನುವುದು ಇಂದಿನ ದಿನದಲ್ಲಿ ಹೊಸ ರೂಪವನ್ನು ಪಡೆದುಕೊಳ್ಳುತ್ತಿದೆ. ಮೊದಲು ಯಾರ ಬಳಿಯಾದರು ಬೇಡಬೇಕಾಗಿತ್ತು, ನಂತರ ಬ್ಯಾಂಕಿನಲ್ಲಿ ಗೋಗರೆಯಬೇಕಾಗಿತ್ತು. ಆದರೆ ಕಾಲ ಬದಲಾಗಿದೆ. ಸಾಲ ಬೇಕಿದ್ದರೇ ಒಂದು ಆಪ್ ಇನ್‌ಸ್ಟಾಲ್ ಮಾಡಿಕೊಂಡರೆ ಸಾಕಾಗಿದೆ.

ಸಾಲ ಬೇಕಾ..? 'ನೀವು ಕೇಳಿದಷ್ಟು ಸಾಲವನ್ನು ಕ್ಷಣ ಮಾತ್ರದಲ್ಲಿ ನೀಡುವ ಆಪ್'

ಓದರಿ: SMS ಮೂಲಕ ಜಿಯೋ ಫೋನ್ ಬುಕ್ ಮಾಡುವುದು ಹೇಗೆ..?

ನಿಮಗೆ ಸಾಲ ಈಗ ಸ್ಮಾರ್ಟ್‌ಫೋನಿನಲ್ಲಿಯೇ ದೊರೆಯಲಿದ್ದು, ಇದಕ್ಕಾಗಿ ನೀವು 'ಮನಿಟ್ಯಾಪ್' ಎಂಬ ಆಪ್ ಇನ್‌ಸ್ಟಾಲ್ ಮಾಡಿಕೊಳ್ಳಬೇಕಾಗಿದೆ. ಈ ಆಪ್ ನಿಮಗೆ ಸಾಲ ನೀಡುವುದಲ್ಲದೇ ಕಡಿಮೆ ಬಡ್ಡಿ ದರವನ್ನು ವಿಧಿಸಲಿದೆ ಎನ್ನಲಾಗಿದೆ. ಇದರಿಂದಾಗಿ ನೀವು ಬ್ಯಾಂಕಿನಿಂದ ಮುಂದೆ ಕೈ ಕಟ್ಟಿ ನಿಲ್ಲುವುದು ತಪ್ಪಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಪ್ ಬಳಕೆ ಹೇಗೆ..?

ಆಪ್ ಬಳಕೆ ಹೇಗೆ..?

ಮನಿಟ್ಯಾಪ್ ಆಪ್ ಡೌನ್‌ಲೋಡ್‌ ಮಾಡಿಕೊಂಡ ನಿಮ್ಮ ಹೆಸರು, ವಿಳಾಸದ ವಿವರವನ್ನು ನೀಡಿ ರಿಜಿಸ್ಟರ್ ಆಗಬೇಕು. ನಿಮ್ಮ ಫೋಟೊ ಅಪ್‌ಲೋಡ್‌ ಮಾಡಬೇಕು. ಪ್ಯಾನ್‌ ಕಾರ್ಡ್, ಮನೆ ವಿಳಾಸ ನೀಡಬಬೇಕು. ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ನೀಡಿದ ನಂತರ ಐದು ನಿಮಿಷದಲ್ಲಿಯೇ ಸಾಲ ದೊರೆಯಲಿದೆ.

ಯಾರಿಗೆ ಸಾಲ ಸಿಗುತ್ತೇ..?

ಯಾರಿಗೆ ಸಾಲ ಸಿಗುತ್ತೇ..?

ಪ್ರತಿ ತಿಂಗಳು ಕನಿಷ್ಠ ರೂ. 20,000ಕ್ಕಿಂತ ಹೆಚ್ಚಿನ ವೇತನ ಪಡೆಯುವವರು ಮನಿಟ್ಯಾಪ್ ಆಪ್ ನಿಂದ ಸಾಲ ಪಡೆಯಲು ಅರ್ಹರಾಗಿರುತ್ತಾರೆ. 20,000ಕ್ಕಿಂತ ಹೆಚ್ಚಿನ ವೇತನ ಪಡೆದರೆ ನೀವು ಸಾಲವನ್ನು ಸ್ವೀಕರಿಸಬಹುದು.

ಬಡ್ಡಿ ಏಷ್ಟು..?

ಬಡ್ಡಿ ಏಷ್ಟು..?

ಸಾಲದ ಮೊತ್ತ ಆಧರಿಸಿ ಶೇ 1.25 ರಿಂದ ಶೇ 1.5ರವರೆಗೆ ಬಡ್ಡಿದರವನ್ನು ನಿಗದಿಮಾಡಲಾಗಿದೆ. ಮೂರು ತಿಂಗಳಿನಿಂದ ಮೂರು ವರ್ಷಗಳ ಸಾಲ ಮರುಪಾವತಿ ಅವಧಿ ನೀಡಲಾಗಿದೆ.

ಎಲ್ಲಿ ಲಭ್ಯವಿದೆ..?

ಎಲ್ಲಿ ಲಭ್ಯವಿದೆ..?

ಬೆಂಗಳೂರು, ದೆಹಲಿ, ಮುಂಬೈ, ಹೈದರಾಬಾದ್‌ ಮತ್ತು ಚೆನ್ನೈ ನಗರಗಳಲ್ಲಿ ಮನಿಟ್ಯಾಪ್ ಆಪ್ ನಿಂದ ನೆರವಿನಿಂದ ಸಾಲ ಪಡೆಯಬಹುದು. ಮುಂದಿನ ಕೆಲವೇ ತಿಂಗಳುಗಳಲ್ಲಿ ದೇಶದ ಎಲ್ಲಾ ನಗರಗಳಿಗೂ ವಿಸ್ತರಣೆ ಮಾಡುವ ಯೋಜನೆಯನ್ನು ಹೊಂದಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಓದಿರ: ಸ್ವಾತಂತ್ರ ದಿನಾಚರಣೆಗೆ ಗಿಫ್ಟ್ ಕೊಟ್ಟ ಅಂಬಾನಿ: ರೂ.70ಕ್ಕೆ ವರ್ಷ ಪೂರ್ತಿ ಅನ್‌ಲಿಮಿಟೆಡ್ ಡೇಟಾ.!!

Read more about:
English summary
Bengaluru-based fintech start-up MoneyTap has launched an app-based credit line for consumers to get instant credit in a total of six taps on the app. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot