ಸ್ವಾತಂತ್ರ ದಿನಾಚರಣೆಗೆ ಗಿಫ್ಟ್ ಕೊಟ್ಟ ಅಂಬಾನಿ: ರೂ.70ಕ್ಕೆ ವರ್ಷ ಪೂರ್ತಿ ಅನ್‌ಲಿಮಿಟೆಡ್ ಡೇಟಾ.!!
ರಿಲಯನ್ಸ್ ಬಳಕೆದಾರರಿಗೆ ಕೇವಲ 70 ರೂ.ಗೆ ಒಂದು ವರ್ಷ ಅನ್‌ಲಿಮಿಟೆಡ್ ಡೇಟಾ ಆಫರ್ ನೀಡಲಾಗಿದ್ದು, ಟೆಲಿಕಾಂ ಕಂಪನಿಗಳು ಈ ಆಫರ್ ನಿಂದ ತಲೆ ಕೆಡಿಸಿಕೊಂಡಿವೆ.
ರಿಲಯನ್ಸ್ ಮಾಲೀಕ ಅನಿಲ್ ಅಂಬಾನಿ ತನ್ನ ಸಹೋದರನ್ನು ಮೀರಿಸುವ ಆಫರ್ ವೊಂದನ್ನು ನೀಡಿದ್ದಾರೆ. ರಿಲಯನ್ಸ್ ಬಳಕೆದಾರರಿಗೆ ಕೇವಲ 70 ರೂ.ಗೆ ಒಂದು ವರ್ಷ ಅನ್‌ಲಿಮಿಟೆಡ್ ಡೇಟಾ ಆಫರ್ ನೀಡಲಾಗಿದ್ದು, ಟೆಲಿಕಾಂ ಕಂಪನಿಗಳು ಈ ಆಫರ್ ನಿಂದ ತಲೆ ಕೆಡಿಸಿಕೊಂಡಿವೆ. ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಡೇಟಾ ಕಿ ಆಜಾದಿ ಎನ್ನುವ ಹೊಸ ಆಫರ್ ನೀಡಲು ಮುಂದಾಗಿದೆ.

ಓದಿರಿ: ಚೀನಾ ಫೋನ್ ಖರೀದಿಸುವ ಮುನ್ನ ಎಚ್ಚರ: ಯುವಕನ ಜೇಬಿನಲ್ಲೇ ಹತ್ತಿ ಉರಿದ ನೋಟ್ ಸ್ಮಾರ್ಟ್‌ಫೋನ್.!!
ಟ್ವೀಟರ್ ಮೂಲಕ ಈ ಹೊಸ ಸೇವೆಯ ಬಗ್ಗೆ ಮಾಹಿತಿ ನೀಡಿರುವ ರಿಲಯನ್ಸ್, ತನ್ನ ಬಳಕೆದಾರಿಗೆ ಅತೀ ಕಡಿಮೆ ಬೆಲೆಗೆ ಒಂದು ವರ್ಷ ಪೂರ್ತಿ ಡೇಟಾ ನೀಡುವ ಘೋಷಣೆಯನ್ನು ಮಾಡಿದ್ದು, ಇದರೊಂದಿಗೆ ಟಾಕ್ ಟೈಮ್ ಸಹ ನೀಡಲಿದೆ. ಬನ್ನಿ ಈ ಆಫರ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ.

ರೂ.70ಕ್ಕೆ ಅನ್‌ಲಿಮಿಟೆಡ್ ಡೇಟಾ:
ರಿಲಯನ್ಸ್ ರೂ.70ಕ್ಕೆ ರೀಚಾರ್ಜ್ ಮಾಡಿಸಿದರೆ ಒಂದು ವರ್ಷ ಅನ್‌ಲಿಮಿಟೆಡ್ ಡೇಟಾವನ್ನು ನೀಡುವುದಾಗಿ ತಿಳಿಸಿದ್ದು, ಇದು 2G ವೇಗದ ಇಂಟೆರ್ನೆಟ್ ಸೇವೆಯಾಗಿರಲಿದೆ.

ಟಾಕ್ ಟೈಮ್ ಸಹ ಇದೆ;
ಇದಲ್ಲದೇ ರೂ.70ಕ್ಕೆ ರೀಚಾರ್ಜ್ ಮಾಡಿಸಿದ ಸಂದರ್ಭದಲ್ಲಿ ರೂ.56 ಟಾಕ್ ಟೈಮ್ ಸಹ ದೊರೆಯಲಿದೆ ಎನ್ನಲಾಗಿದೆ. ಇದರಿಂದಾಗಿ ಗ್ರಾಹಕರಿಗೆ ಡಬ್ಬಲ್ ಲಾಭವಾಗಲಿದೆ. ಅಣ್ಣನ ವಿರುದ್ಧವಾಗಿ ತೊಡೆ ತಟ್ಟಿರುವ ರಿಲಯನ್ಸ್ ಈ ಹೊಸ ಆಫರ್ ನೀಡಲು ಮುಂದಾಗಿದೆ.

ಆದರೆ 2G ಡೇಟಾ:
ಇದು ಒಂದು ಹಿನ್ನಡೆ ಎಂದರೆ ತಪ್ಪಾಗುವುದಿಲ್ಲ. 2G ವೇಗದ ಡೇಟಾವನ್ನು ಇಂದು ಯಾರು ಸಹ ಬಳಕೆ ಮಾಡಿಕೊಳ್ಳುತ್ತಿಲ್ಲ, ಕಡಿಮೆ ವೆಚ್ಚಕ್ಕೆ 4G ವೇಗದ ಸೇವೆಯೇ ದೊರೆಯುತ್ತಿರುವುದು ಇದಕ್ಕೆ ಕಾರಣವಾಗಿದೆ.


140 ಮಿಲಿಯನ್ ಬಳಕೆದಾರರು:
ಇದಲ್ಲದೇ ಸುಮಾರು 140 ಮಿಲಿಯನ್ ಮಂದಿ ರಿಲಯನ್ಸ್ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಂಪನಿಯೂ ಇದೆ ಸಂದರ್ಭದಲ್ಲಿ ತಿಳಿಸಿದೆ. ಈ ಆಫರ್ ಮೂಲಕ ಮತ್ತಷ್ಟು ಜನರನ್ನು ಸೆಳೆಯುವ ಪ್ರಯತ್ನವನ್ನು ಮಾಡಲು ಮುಂದಾಗಿದೆ.


Click it and Unblock the Notifications








