'ವಾಟ್ಸ್‌ಆಪ್ ಬ್ಲಾಕ್' ಫೇಸ್‌ಬುಕ್‌ಗೆ ಚೀನಾದಲ್ಲಿ ಮತ್ತೊಂದು ಸೋಲು
ಫೇಸ್‌ಬುಕ್ ಒಡೆತನದ ವಾಟ್ಸ್‌ಆಪ್ ಇಡೀ ವಿಶ್ವದಲ್ಲಿ ಅತೀ ಹೆಚ್ಚು ಜನರು ಬಳಕೆ ಮಾಡುವ ಸೋಶಿಯಲ್ ಮೇಸೆಜಿಂಗ್ ಆಪ್ ಎನ್ನುವ ಖ್ಯಾತಿಗೆ ಪಾತ್ರವಾಗಿದೆ.
ವಿಶ್ವ ಮಾರುಕಟ್ಟೆಯಲ್ಲಿ ಚೀನಾಗೆ ಹೆಚ್ಚಿನ ಆದ್ಯತೆ ಇದೆ, ಕಾರಣ ಇಲ್ಲಿನ ಜನಸಂಖ್ಯೆ. ಇದೇ ಕಾರಣಕ್ಕೆ ಎಲ್ಲಾ ಕಂಪನಿಗಳು ಚೀನಾಕ್ಕೆ ಕಾಲಿಡಲು ಹವಣಿಸುತ್ತಿರುತ್ತವೆ. ಇದೇ ಮಾದರಿಯಲ್ಲಿ ಸೋಶಿಯಲ್ ಮೀಡಿಯಾ ದೈತ್ಯ ಫೇಸ್‌ಬುಕ್ ಸಹ ಚೀನಾದಲ್ಲಿ ಮಾರುಕಟ್ಟೆಯನ್ನು ಸೃಷ್ಟಿಸಿಕೊಳ್ಳಲು ಮುಂದಾಗಿದೆ. ಆದರೆ ಪದೇ ಪದೇ ಸೋಲನುಭವಿಸುತ್ತಿದೆ.

ಓದಿರಿ: ಮಗಳಿಗೆ ಐಫೋನ್ 8 ಕೊಡಿಸಲು ಭಾರತೀಯ ಮಾಡಿದ ಸಾಹಸ ಅಂತಿಂತದಲ್ಲ!
ಫೇಸ್‌ಬುಕ್ ಒಡೆತನದ ವಾಟ್ಸ್‌ಆಪ್ ಇಡೀ ವಿಶ್ವದಲ್ಲಿ ಅತೀ ಹೆಚ್ಚು ಜನರು ಬಳಕೆ ಮಾಡುವ ಸೋಶಿಯಲ್ ಮೇಸೆಜಿಂಗ್ ಆಪ್ ಎನ್ನುವ ಖ್ಯಾತಿಗೆ ಪಾತ್ರವಾಗಿದೆ. ಒಂದು ವೇಳೆ ಇದು ಚೀನಾ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡರೆ ಬಳಕೆದಾರರ ಸಂಖ್ಯೆಯೂ ಡಬ್ಬಲ್ ಆಗಲಿದೆ. ಆದರೆ ಇದಕ್ಕೆ ಚೀನಾ ಸರಕಾರವೂ ಅವಕಾಶ ನೀಡುತ್ತಿಲ್ಲ.
ಸೆನ್ಸಾರ್ ಶಿಪ್ ಹೆಸರಿನಲ್ಲಿ ಚೀನಾದಲ್ಲಿ ವಾಟ್ಸ್‌ಆಪ್ ಅನ್ನು ಬ್ಲಾಕ್ ಮಾಡಲಾಗಿದೆ. ಈ ಹಿಂದೆ ವಾಟ್ಸ್‌ಆಪ್ ವಿಡಿಯೋ ಕಾಲಿಂಗ್ ಅನ್ನು ನಿಷೇಧಿಸಲಾಗಿತ್ತು. ಆದರೆ ಈ ಬಾರಿ ಆಡಿಯೋ ಫೈಲ್‌ಗಳನ್ನು, ವಿಡಿಯೋಗಳನ್ನು, ಆಡಿಯೋ ಚಾಟ್‌ಗಳನ್ನು ಮಾಡುವುದನ್ನು ನಿಷೇಧಿಸುವ ಮೂಲಕ ವಾಟ್ಸ್‌ಆಪ್ ಮೇಲೆ ಭಾರೀ ಪ್ರಮಾಣದ ಹಿಡಿತವನ್ನು ಸಾಧಿಸಲು ಮುಂದಾಗಿದೆ.

ಓದಿರಿ: ಐಫೋನ್ Xಗೆ ಸೆಡ್ಡು ಸ್ಯಾಮ್‌ಸಂಗ್‌ನಿಂದ ವಿಶ್ವದ ಮೊದಲ ಮಡಚುವ ಸ್ಮಾರ್ಟ್‌ಫೋನ್
ಈಗಾಗಲೇ ವಾಟ್ಸ್‌ಆಪ್ ಬದಲಿಗೆ ಚೀನಾದಲ್ಲಿ ವಿಚಾಟ್ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿದ್ದು, ಇದು ಚೀನಾ ನಿಯಮಗಳಿಗೆ ಅನುಸಾರವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ವಾಟ್ಸ್‌ಆಪ್ ತನ್ನ ಎನ್ಸ್ಕಿಪಟ್ ಸೇವೆಯಿಂದಾಗಿ ತೊಂದರೆಗೆ ಸಿಲುಕುತ್ತಿದೆ. ಈ ಹಿನ್ನಲೆಯಲ್ಲಿ ವಾಟ್ಸ್‌ಆಪ್ ಚೀನಾದಲ್ಲಿ ನಿಷೇಧಕ್ಕೆ ಒಳಗಾಗಿದೆ.


Click it and Unblock the Notifications