ಮಗಳಿಗೆ ಐಫೋನ್ 8 ಕೊಡಿಸಲು ಭಾರತೀಯ ಮಾಡಿದ ಸಾಹಸ ಅಂತಿಂತದಲ್ಲ!
ಅಮೇರಿಕಾದ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಯಾದ ಐಫೋನ್ 8 ಮತ್ತು 8 ಪ್ಲಸ್ ಭಾರತದಲ್ಲಿ ಇನ್ನು ಕಾಣಿಸಿಕೊಂಡಿಲ್ಲ.ಆದರೆ ಪ್ರಮುಖ ದೇಶಗಳಲ್ಲಿ ಬಿಡುಗಡೆಯಾಗಿದೆ.
ಮಗಳ ಮದುವೆ ಎನ್ನುವುದು ತಂದೆಯ ಪಾಲಿಗೆ ಜೀವನದ ಅತೀ ದೊಡ್ಡ ಸಂಭ್ರಮ. ಇದನ್ನು ದೊಡ್ಡ ಪ್ರಮಾಣದಲ್ಲಿ ಸಂಭ್ರಮಿಸಲು ಮತ್ತು ಸದಾ ನೆನಪಿನಲ್ಲಿ ಉಳಿಯುವಂತೆ ಮಾಡಲು ಪ್ರತಿಯೊಬ್ಬ ತಂದೆಯೂ ಪ್ರಯತ್ನಿಸುತ್ತಾರೆ. ಹಾಗೆಯೇ ಇಲ್ಲೊಬ್ಬ ಉದ್ಯಮಿ ತನ್ನ ಮಗಳ ಮದುವೆಗೆ ಭಾರತದಲ್ಲಿ ದೊರೆಯದ ವಸ್ತುವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಮೂಲಕ ಸುದ್ದಿಯಾಗಿದ್ದಾರೆ.

ಓದಿರಿ: ಶಿಯೋಮಿಯಿಂದ ವೈರ್‌ಲೈಸ್ ಚಾರ್ಜರ್: ಅದುವೇ ಸಾಮಾನ್ಯ ಬೆಲೆಗೆ
ಸೆಪ್ಟೆಂಬರ್ 12ರಂದು ಅಮೇರಿಕಾದ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಯಾದ ಐಫೋನ್ 8 ಮತ್ತು 8 ಪ್ಲಸ್ ಭಾರತದಲ್ಲಿ ಇನ್ನು ಕಾಣಿಸಿಕೊಂಡಿಲ್ಲ. ಆದರೆ ಪ್ರಮುಖ ದೇಶಗಳಲ್ಲಿ ಬಿಡುಗಡೆಯಾಗಿದೆ. ಇದನ್ನು ಅರಿತು ಸಿಂಗಾಪುರದಲ್ಲಿ ದೊರೆಯುತ್ತಿದ್ದ ಈ ಫೋನ್ ಅನ್ನು ತನ್ನ ಮಗಳಿಗೆ ಕೊಡಬೇಕೆಂದು ಭಾರಿ ಸಾಹಸವನ್ನೇ ಮಾಡಿದ ಅಮಿನ್ ಅಹ್ಮದ್ ಧೋಲಿಯಾ ಸದ್ಯ ಸುದ್ದಿಯಲ್ಲಿದ್ದಾರೆ.

ಸಿಂಗಾಪುರಕ್ಕೆ ಪ್ರಯಾಣ:
ಎಲ್ಲರು ಸಿಂಗಾಪುರವನ್ನು ನೋಡಲು ಪ್ರಯಾಣ ಮಾಡಿದರೆ ಅಮಿನ್ ಅಹ್ಮದ್ ಧೋಲಿಯಾ ತನ್ನ ಮಗಳಿಗೆ ಐಫೋನ್ ಖರೀದಿಸಬೇಕು ಎನ್ನುವ ಒಂದೇ ಕಾರಣಕ್ಕೆ ಸಿಂಗಾಪುರಕ್ಕೆ ಹಾರಿದ್ದಾರೆ. ಅಲ್ಲಿನ ಪ್ರತಿಷ್ಠಿತ ಆಚರ್ಡ್ ರಸ್ತೆಯಲ್ಲಿರುವ ಆಪಲ್ ಸ್ಟೋರ್ ನಲ್ಲಿ ಗಂಟೆಗಟ್ಟಲೇ ಸರದಿಯಲ್ಲಿ ನಿಂತು ಐಫೋನ್ 8 ಖರೀದಿಸಿ ತಂದಿದ್ದಾರೆ.

ಇಬ್ಬರು ಮಕ್ಕಳಿಗೂ ಐಫೋನ್:
ಮೊದಲಿಗೆ ಐಫೋನ್ ಕೊಳ್ಳಬೇಕು ಎಂದು ಸರದಿ ಸಾಲಿನಲ್ಲಿ ನಿಲ್ಲುವವರ ಸಂಖ್ಯೆ ಕಡಿಮೆ ಇಲ್ಲ. ತನ್ನ ನೆಚ್ಚಿನ ನಟನ ಸಿನಿಮಾ ಬಿಡುಗಡೆ ದಿನ ಟೆಕೇಟ್ ಗಾಗಿ ಕ್ಯೂನಲ್ಲಿ ನಿಲ್ಲುವಂತೆ ಸತತ 13 ಗಂಟೆಗಳ ಕಾಲ ಕ್ಯೂನಲ್ಲಿ ನಿಂತಿದ್ದ ಅಮಿನ್ ಅಹ್ಮದ್ ಧೋಲಿಯಾ ಎರಡು ಐಫೋನ್ ಗಳನ್ನು ಖರೀದಿಸಿದ್ದು, ಒಂದನ್ನು ದೊಡ್ಡ ಮಗಳ ಮದುವೆಯ ಉಡುಗೊರೆಯಾಗಿ, ಇನ್ನೊಂದು ಎರಡನೇ ಮಗಳಿಗೆ ನೀಡಿದ್ದಾರೆ ಎನ್ನಲಾಗಿದೆ.

ಐಫೋನ್ ಗಾಗಿ ಸಿಂಗಾಪುರಕ್ಕೆ ಬಂದ ವಿದೇಶಿಗರು:
ಐಫೋನ್ 8 ಸ್ಮಾರ್ಟ್ ಫೋನ್ ವಿಶ್ವದ ಕೆಲವೇ ಕೆಲವು ದೇಶದ ಮಾರುಕಟ್ಟೆಯಲ್ಲಿ ಲಾಂಚ್ ಆಗಿದ್ದು, ಅದರಲ್ಲಿ ಸಿಂಗಾಪುರವೂ ಒಂದು. ಈ ಹಿನ್ನಲೆಯಲ್ಲಿ ಐಫೋನ್ ಖರೀದಿಸುವ ಸಲುವಾಗಿ ಅಮಿನ್ ಅಹ್ಮದ್ ಧೋಲಿಯಾ ಮಾದರಿಯಲ್ಲಿ ವಿದೇಶಿಗಳಿಂದ ಬಂದಿದ್ದವರ ಸಂಖ್ಯೆಯೇ ಹೆಚ್ಚಾಗಿತ್ತು ಎನ್ನಲಾಗಿದೆ.


Click it and Unblock the Notifications








