ಐಫೋನ್ Xಗೆ ಸೆಡ್ಡು ಸ್ಯಾಮ್‌ಸಂಗ್‌ನಿಂದ ವಿಶ್ವದ ಮೊದಲ ಮಡಚುವ ಸ್ಮಾರ್ಟ್‌ಫೋನ್
ಆಪಲ್ ಐಫೋನ್ X ಅನ್ನು ವಿಭಿನ್ನವಾಗಿ ಲಾಂಚ್ ಮಾಡಿರುವ ಹಿನ್ನಲೆಯಲ್ಲಿ ಸ್ಯಾಮ್‌ಸಂಗ್ ಸಹ ತನ್ನ ಗ್ಯಾಲೆಕ್ಸಿ S10ನಲ್ಲಿ ಫೋಲ್ಡಿಂಗ್ ಸ್ಕ್ರಿನ್ ಅಳವಡಿಸುವುದಲ್ಲದೇ ಅದನ್ನು ಮಡಚುವ ಸ್ಮಾರ್ಟ್‌ಫೋನ್ ರೀತಿಯಲ್ಲಿ ಬಿಡುಗಡೆ ಮಾಡಲಿದೆ.
OLED ಸ್ಕ್ರಿನ್ ಮೂಲಕ ವಿಶ್ವದ ಗಮನ ಸೆಳೆದಿದ್ದ ಸ್ಯಾಮ್‌ಸಂಗ್ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಈಗಾಗಲೆ ಸಾಕಷ್ಟು ಹೊಸ -ಹೊಸ ಆವಿಷ್ಕಾರವನ್ನು ಮಾಡಿರುವ ಸ್ಯಾಮ್‌ಸಂಗ್ ಇದೇ ಮೊದಲ ಬಾರಿಗೆ ಫೋಲ್ಡಿಂಗ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಮುಂದಾಗಿದೆ.

ಓದಿರಿ: ಜಿಯೋ ಫೋನ್ ಡಿಲಿವರಿ ಶುರು: ನಿಮ್ಮ ಮನೆಗೆ ಯಾವತ್ತು.!
ಈಗಾಗಲೇ ಆಪಲ್ ಐಫೋನ್ X ಅನ್ನು ವಿಭಿನ್ನವಾಗಿ ಲಾಂಚ್ ಮಾಡಿರುವ ಹಿನ್ನಲೆಯಲ್ಲಿ ಸ್ಯಾಮ್‌ಸಂಗ್ ಸಹ ತನ್ನ ಗ್ಯಾಲೆಕ್ಸಿ S10ನಲ್ಲಿ ಫೋಲ್ಡಿಂಗ್ ಸ್ಕ್ರಿನ್ ಅಳವಡಿಸುವುದಲ್ಲದೇ ಅದನ್ನು ಮಡಚುವ ಸ್ಮಾರ್ಟ್‌ಫೋನ್ ರೀತಿಯಲ್ಲಿ ಬಿಡುಗಡೆ ಮಾಡಲಿದೆ.

ಮೈಕ್ರೋ ಸಾಫ್ಟ್ ನೊಂದಿಗೆ:
ಮಡಚುವ ಸ್ಮಾರ್ಟ್‌ಫೋನ್ ಅನ್ನು ಅಭಿವೃದ್ಧಿ ಪಡಿಸಲು ಸ್ಯಾಮ್‌ಸಂಗ್ ಈಗಾಗಲೇ ಮೈಕ್ರೋಸಾಫ್ಟ್ ನೊಂದಿಗೆ ಕೈ ಜೋಡಿಸಿದೆ ಎನ್ನಲಾಗಿದೆ. ಇದಲ್ಲದೇ LG ಸಹ ಈ ವಿಷಯಲ್ಲಿ ಸ್ಯಾಮ್‌ಸಂಗ್‌ನೊಂದಿಗೆ ಕಾರ್ಯನಿರ್ವಹಿಸುತ್ತಿದೆ.

ಸ್ಯಾಮ್‌ಸಂಗ್ X ಎಂದು ಹೆಸರು:
ಈಗಾಗಲೇ ಮಡಚುವ ಸ್ಮಾರ್ಟ್‌ಫೋನ್ ಬಿಡುಗಡೆಗೆ ಅರ್ಜಿ ಸಲ್ಲಿಸಿರುವ ಸ್ಯಾಮ್‌ಸಂಗ್ ಈ ಫೋನಿನಗೆ ಸ್ಯಾಮ್‌ಸಂಗ್ X ಅಥಾವ X1 ಎಂದು ಹೆಸರಡಿವು ಸಾಧ್ಯತೆ ಇದೆ ಎನ್ನಲಾಗಿದೆ.

2019ಕ್ಕೆ ಆಗಮನ:
ಈಗಾಗಲೇ ಅರ್ಜಿ ಸಲ್ಲಿಸಿದರು ಈ ಫೋನ್ 2019ಕ್ಕೆ ಮಾರುಕಟ್ಟೆಗೆ ಕಾಲಿಡಲಿದೆ ಎನ್ನಲಾಗಿದೆ. ಆದರೆ ಈ ಫೋನಿನ ವಿಶೇಷತೆಗಳ ಹೆಚ್ಚಿನ ಮಾಹಿತಿಯೂ ಲಭ್ಯವಾಗಿಲ್ಲ ಎನ್ನಲಾಗಿದೆ.


Click it and Unblock the Notifications








