Subscribe to Gizbot

ಟ್ರೂಕಾಲರ್‌ನಲ್ಲಿ ಹೊಸ ಫೋನ್‌ ನಂಬರ್‌ ಎಡಿಟ್ ಹೇಗೆ?

Written By:

ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಫೇಸ್‌ಬುಕ್‌ ಮತ್ತು ವಾಟ್ಸಾಪ್‌ ನಂತರ ಅತಿ ಹೆಚ್ಚು ಪ್ರೀತಿಯ ಆಪ್‌ ಎಂದರೆ 'ಟ್ರೂಕಾಲರ್(Truecaller)'. ಈ ಬಗ್ಗೆ ಯಾವುದೇ ಸಂಶಯ ಬೇಡ.

ಅತಿ ಹೆಚ್ಚು ಕಾಂಟ್ಯಾಕ್ಟ್‌ಗಳ ಡಾಟಾ ಹೊಂದಿರುವ ಟ್ರೂಕಾಲರ್‌ ಆಪ್‌ ಅಪರಿಚಿತ ನಂಬರ್‌ಗಳಿಂದ ಕರೆ ಬಂದಾಗ ವಿವರಗಳು ಮತ್ತು ಹೆಸರನ್ನು ಸಹ ಪ್ರದರ್ಶಿಸುತ್ತದೆ. ಟ್ರೂಕಾಲರ್ ಆಪ್‌ ಅನ್ನು ಪ್ರಪಂಚದ ವಿಂಡೊ ಎಂದು ಕರೆಯಬಹುದು. ಟ್ರೂಕಾಲರ್ ಆಪ್‌ ಅನ್ನು ನಿಮ್ಮ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿ ನಿಮ್ಮ ನಂಬರ್‌ನಿಂದ ಖಾತೆ ಕ್ರಿಯೇಟ್ ಮಾಡಿದಲ್ಲಿ, ನಿಮ್ಮ ಹೆಸರು ಮತ್ತು ನಂಬರ್‌ನ ವಿವರ ಟ್ರೂಕಾಲರ್ ಆಪ್‌ ಡಾಟಾಬೇಸ್ ಪಟ್ಟಿಯಲ್ಲಿ ಸೇವ್‌ ಆಗಿಬಿಡುತ್ತದೆ.

ಟ್ರೂಕಾಲರ್ ಆಪ್‌ನಲ್ಲಿ ನಂಬರ್ ರಿಮೂವ್‌ ಮಾಡಲು ಈ ಹಂತಗಳನ್ನು ಪಾಲಿಸಿ

ಟ್ರೂಕಾಲರ್‌ನಲ್ಲಿ ಹೊಸ ಫೋನ್‌ ನಂಬರ್‌ ಎಡಿಟ್ ಹೇಗೆ?

ಟ್ರೂಕಾಲರ್‌ನಲ್ಲಿ ನಿಮ್ಮ ನಂಬರ್‌ ಸೇರದೇ ಇದ್ದಲ್ಲಿ, ಸೇರಿಯೂ ತಪ್ಪು ಹೆಸರು ತೋರಿಸುತ್ತಿದ್ದಲ್ಲಿ, ಸ್ವಯಂಕೃತವಾಗಿ ನೀವೇ ನಂಬರ್‌ ಮತ್ತು ಹೆಸರನ್ನು ಸುಲಭವಾಗಿ ಆಡ್‌ ಮಾಡಬಹುದು. ಅದು ಹೇಗೆ ಎಂದು ಈ ಕೆಳಗಿನ ಹಂತಗಳನ್ನು ಗಮನಿಸಿ.

ಟ್ರೂಕಾಲರ್‌ನಲ್ಲಿ ಹೊಸ ಫೋನ್‌ ನಂಬರ್‌ ಎಡಿಟ್ ಹೇಗೆ?

ಹಂತ 1: ಹಳೆಯ ನಂಬರ್‌ ಅನ್ನು ಡಿಆಕ್ಟಿವೇಟ್‌ ಮಾಡಿ 

ಟ್ರೂಕಾಲರ್ ಆಪ್‌ ಓಪನ್‌ ಮಾಡಿ Settings>> About Truecaller>>Deactivate account ಕ್ಲಿಕ್ ಮಾಡಿ

ಟ್ರೂಕಾಲರ್‌ನಲ್ಲಿ ಹೊಸ ಫೋನ್‌ ನಂಬರ್‌ ಎಡಿಟ್ ಹೇಗೆ?

ಹಂತ 2: ಹೊಸ ನಂಬರ್ ಅನ್ನು ವೆರಿಫೈ ಮಾಡಿ
ನಂತರ ನಿಮ್ಮ ಹೊಸ ನಂಬರ್‌ ನೀಡಿ, ವೆರಿಫೈ ಮಾಡಿ. ಟ್ರೂಕಾಲರ್‌ನಲ್ಲಿ ಕೇವಲ ಒಂದು ನಂಬರ್‌ ಅನ್ನು ಮಾತ್ರ ವೆರಿಫೈ ಮಾಡಬಹುದು.

ಟ್ರೂಕಾಲರ್‌ನಲ್ಲಿ ಹೊಸ ಫೋನ್‌ ನಂಬರ್‌ ಎಡಿಟ್ ಹೇಗೆ?

ಹಂತ 3: ನಂಬರ್‌ ಎಡಿಟ್‌ ಮಾಡಿ
Menu>>Edit Profile>> ನಿಮ್ಮ ನಂಬರ್‌ ಮೇಲೆ ಟ್ಯಾಪ್‌ ಮಾಡಿ ಮತ್ತು ನಂತರ 'Continue' ಮೇಲೆ ಟ್ಯಾಪ್ ಮಾಡಿ.

 

English summary
There is no doubt that after Facebook and WhatsApp, TrueCaller is the most loved app of all mobile users when it comes to calling. To know how to Edit Your Phone Number in Truecaller, visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot