ಫೇಕ್ ಫೇಸ್‌ಬುಕ್‌ ಖಾತೆ ಕಂಡುಹಿಡಿಯುವುದು ಹೇಗೆ? 5 ಸೂಚನೆಗಳು!

Written By:

5 ಶತಕೋಟಿ ಫೇಸ್‌ಬುಕ್‌ ಖಾತೆಗಳಲ್ಲಿ ಭಾಗಶಃ 20-30 ಶೇಕಡ ಫೇಕ್(ನಕಲಿ) ಫೇಸ್‌ಬುಕ್‌ ಖಾತೆಗಳು ಇವೆ. ಅಥವಾ ಅದಕ್ಕಿಂತಲೂ ಹೆಚ್ಚು ಫೇಕ್‌ ಫೇಸ್‌ಬುಕ್‌ ಖಾತೆಗಳು ಸಹ ಇರಬಹುದು.

ಶಾಶ್ವತವಾಗಿ ಫೇಸ್‌ಬುಕ್‌ ಖಾತೆ ಡಿಲೀಟ್‌ ಮಾಡುವುದು ಹೇಗೆ?

ಅಂದಹಾಗೆ ಫೇಕ್‌ ಫೇಸ್‌ಬುಕ್‌ ಖಾತೆಗಳನ್ನು ಕೆಲವು ಮುಗ್ಧರು ಹಲವು ಉಪಯೋಗಗಳಿಗಾಗಿ ಕ್ರಿಯೇಟ್‌ ಮಾಡಿದರೆ, ಬಹಸಂಖ್ಯಾತರು ಮಾತ್ರ ಫೇಕ್‌ ಫೇಸ್‌ಬುಕ್ ಖಾತೆಗಳನ್ನು ಇತರರಿಗೆ ಮೋಸ ಮಾಡಲು ಅಥವಾ ಇತರೆ ವಂಚನೆ ಕೃತ್ಯಗಳಿಗಾಗಿಯೇ ಕ್ರಿಯೇಟ್‌ ಮಾಡಿರುತ್ತಾರೆ. ಹಲವರಿಗೆ ಈಗಾಗಲೇ ಫೇಕ್ ಫೇಸ್‌ಬುಕ್‌ ಖಾತೆಗಳನ್ನು ಪತ್ತೆ ಹಚ್ಚಿ ಡಿಲೀಟ್ ಮಾಡಲು ದಾರಿಗಳಿವೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಆದರೆ ಪ್ರಸ್ತುತ ಹಲವರಿಗೆ ತಿಳಿದಿರುವುದು ಮಾತ್ರ ಯಾವುದಾದರು ವರದಿ ನೋಡಿಯೋ ಅಥವಾ ಪ್ರೊಫೈಲ್‌ ಪರಿಶೀಲನೆ ನಡೆಸಿದಾಗ ಮಾತ್ರ ಫೇಕ್ ಖಾತೆಗಳನ್ನು ಪತ್ತೆಹಚ್ಚುವುದು.

ಅಂದಹಾಗೆ ಇಂದಿನ ಲೇಖನದಲ್ಲಿ ಫೇಕ್ ಫೇಕ್‌ಬುಕ್‌(Facebook) ಖಾತೆ ಎಂದು ಪತ್ತೆಹಚ್ಚಲು ಇರುವ 5 ಸೂಚನೆಗಳನ್ನು ತಿಳಿಸುತ್ತಿದ್ದೇವೆ. ಅವುಗಳು ಯಾವುವು ಎಂದು ಕೆಳಗಿನ ಲೇಖನದ ಸ್ಲೈಡರ್‌ಗಳನ್ನು ಓದಿ ತಿಳಿಯಿರಿ.

ಫೇಸ್‌ಬುಕ್‌ ಹ್ಯಾಕ್ ಆಗಿರುವುದನ್ನು ಕಂಡುಹಿಡಿಯುವುದು ಹೇಗೆ? ಸುರಕ್ಷತೆ ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಪ್ರೊಫೈಲ್‌ ಇಮೇಜ್‌ ಟಿನ್‌ಐ'ನಲ್ಲಿದೆಯೇ ಚೆಕ್‌ ಮಾಡಿ

ಪ್ರೊಫೈಲ್‌ ಇಮೇಜ್‌ ಟಿನ್‌ಐ'ನಲ್ಲಿದೆಯೇ ಚೆಕ್‌ ಮಾಡಿ

ಅಪರಿಚಿತರಿಂದ ಫ್ರೆಂಡ್‌ ರಿಕ್ವೆಸ್ಟ್‌ ಪಡೆದಾಗ ಪ್ರೊಫೈಲ್‌ ಇಮೇಜ್‌ ಟಿನ್‌ಐ'ನಲ್ಲಿದೆಯೇ ಎಂಬುದನ್ನು ಮರೆಯದೇ ಚೆಕ್ ಮಾಡಿ. ಅಲ್ಲದೇ ಪ್ರೊಫೈಲ್ ಇಮೇಜ್‌ ಅನ್ನು ಡೌನ್‌ಲೋಡ್‌ ಮಾಡಿ Tineeye(Reverse image search) ವೆಬ್‌ ಬ್ರೌಸರ್‌ಗೆ ಅಪ್‌ಲೋಡ್‌ ಮಾಡಿ. ವೆಬ್‌ಸೈಟ್‌ ನಿಮಗೆ ಇಮೇಜ್‌ ಅನ್ನು ಯಾವುದಾದರೂ ವೆಬ್‌ನಿಂದ ತೆಗೆದುಕೊಂಡಿದ್ದಲ್ಲಿ ಮಾಹಿತಿ ನೀಡುತ್ತದೆ. ಈ ರೀತಿಯಲ್ಲಿ ಫೇಕ್ ಪ್ರೊಫೈಲ್‌ ಅನ್ನು ಚೆಕ್‌ ಮಾಡಬಹುದು.

ಟೈಮ್‌ಲೈನ್ ಪರಿಶೀಲನೆ

ಟೈಮ್‌ಲೈನ್ ಪರಿಶೀಲನೆ

ಸಾಮಾನ್ಯವಾಗಿ ಫೇಕ್ ಫೇಸ್‌ಬುಕ್ ಖಾತೆ ಆಗಿದ್ದಲ್ಲಿ, ಅದಕ್ಕೆ ಹೆಚ್ಚಿನದಾಗಿ ಏನನ್ನು ಅಪ್‌ಲೋಡ್‌ ಮಾಡುವುದಿಲ್ಲ. ಟೈಮ್‌ಲೈನ್‌ ಖಾಲಿ ಇದ್ದಲ್ಲಿ ಅಥವಾ ಅಸ್ಪಷ್ಟ ಚಿತ್ರಗಳು ಮತ್ತು ಪೋಸ್ಟ್‌ಗಳನ್ನು ಹೊಂದಿದ್ದಲ್ಲಿ, ನಂತರ ನೀವು ಇದು ಫೇಕ್‌ ಖಾತೆ ಎಂದು ತಿಳಿಯಬಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 ಅವರ ಬಗ್ಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ

ಅವರ ಬಗ್ಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ

ಹಲವು ಮೋಸಗಾರರು ಮತ್ತು ಫೇಕ್‌ ಖಾತೆ ಕ್ರಿಯೇಟ್‌ ಮಾಡಿದವರು ಅವರ ಬಗ್ಗೆ ಹೆಚ್ಚಿನ ಮಾಹಿತಿ ಅಪ್‌ಲೋಡ್ ನೀಡಿರುವುದಿಲ್ಲ. 'About' ಟ್ಯಾಬ್ ಹೆಚ್ಚಿನ ಮಾಹಿತಿ, ಪ್ರೊಫೈಲ್‌ ಬಗ್ಗೆ ಮಾಹಿತಿ ನೀಡಿಲ್ಲ ಎಂದರೆ ಅದು ಫೇಕ್ ಖಾತೆ ಆಗಿರುತ್ತದೆ.

 ಬಹುಶಃ ಹುಟ್ಟಿದ ದಿನಾಂಕ ಜನವರಿ 1

ಬಹುಶಃ ಹುಟ್ಟಿದ ದಿನಾಂಕ ಜನವರಿ 1

ಇದು ಇನ್ನೊಂದು ಸಾಮಾನ್ಯ ಫೇಕ್ ಖಾತೆಯ ಸೂಚನೆ ಆಗಿದೆ. ಹಾಗೆ ಹಾಸ್ಯಮಯವು ಆಗಿದೆ. ಆದರೆ ಇದೇ ನಿಜ. ಹೆಚ್ಚಿನ ಫೇಕ್‌ ಫೇಸ್‌ಬುಕ್ ಖಾತೆ ಹುಟ್ಟಿದ ದಿನಾಂಕವು ಜನವರಿ 1 ಆಗಿರುತ್ತದೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹುಡುಗಿಯರ ಪ್ರೊಫೈಲ್‌ ಬಗ್ಗೆ ಎಚ್ಚರವಾಗಿರಿ

ಹುಡುಗಿಯರ ಪ್ರೊಫೈಲ್‌ ಬಗ್ಗೆ ಎಚ್ಚರವಾಗಿರಿ

ಹಲವು ಫೇಕ್ ಫೇಸ್‌ಬುಕ್‌ ಖಾತೆಗಳ ಪ್ರೊಫೈಲ್ ಫೋಟೋಗಳು ಸುಂದರ ಹುಡುಗಿಯರದ್ದಾಗಿರುತ್ತದೆ. ಇಂತಹ ಪ್ರೊಫೈಲ್‌ಗಳಲ್ಲಿ ಫೋನ್ ನಂಬರ್‌ ಸಹ ಇರುತ್ತದೆ. ಅಂದಹಾಗೆ ಹುಡುಗಿಯರು ಸಾರ್ವಜನಿಕ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ಗೆ ಫೋನ್ ನಂವರ್‌ ಕೊಡುವುದೇ ವಿರಳ. ಆದ್ದರಿಂದ ಇಂತಹ ಖಾತೆಗಳು ಫೇಕ್‌ ಖಾತೆಗಳೇ ಆಗಿರುತ್ತವೆ.

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

 

English summary
How To Check A Fake Facebook Profile ː 5 Signs to know. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot