ಮೊಬೈಲ್ ಬ್ಯಾಟರಿ ಉಳಿಸಲು ಫೇಸ್‌ಬುಕ್‌ನಿಂದ ತಂತ್ರ.!
ಸ್ಮಾರ್ಟ್‌ಪೋನ್‌ಗಳಲ್ಲಿ ಬಳಸುವ ಆಪ್ ಗಳಲ್ಲಿ ಯಾವ ಆಪ್ ಗಳು ಹೆಚ್ಚಿನ ಬ್ಯಾಟರಿಯನ್ನು ಬಳಸಿಕೊಳ್ಳುತ್ತವೆ ಎಂಬುದನ್ನು ನೋಡಿದರೆ ಅದರಲ್ಲಿ ಮೊದಲ ಎರಡು ಸ್ಥಾನವನ್ನು ಅಲಂಕರಿಸುವುದು ಫೇಸ್‌ಬುಕ್ ಮತ್ತು ಮೆಸೆಂಜರ್ ಗಳು.
ದಿನೇ ದಿನೇ ಸ್ಮಾರ್ಟ್‌ಪೋನುಗಳಲ್ಲಿ ಫೇಸ್‌ಬುಕ್ ಆಪ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ಫೇಸ್‌ಬುಕ್ ಬಳಕೆದಾರರು ಆಪ್ ಬಳಸುವುದರಿಂದ ನಮ್ಮ ಪೋನಿ ಬ್ಯಾಟರಿ ವೇಗವಾಗಿ ಖಾಲಿಯಗಲಿದೆ ಎನ್ನುವ ಆರೋಪಕ್ಕೆ ಕೊನೆಯಾಡಲು ಫೇಸ್‌ಬುಕ್ ಮುಂದಾಗಿದೆ.

ಸ್ಮಾರ್ಟ್‌ಪೋನ್‌ಗಳಲ್ಲಿ ಬಳಸುವ ಆಪ್ ಗಳಲ್ಲಿ ಯಾವ ಆಪ್ ಗಳು ಹೆಚ್ಚಿನ ಬ್ಯಾಟರಿಯನ್ನು ಬಳಸಿಕೊಳ್ಳುತ್ತವೆ ಎಂಬುದನ್ನು ನೋಡಿದರೆ ಅದರಲ್ಲಿ ಮೊದಲ ಎರಡು ಸ್ಥಾನವನ್ನು ಅಲಂಕರಿಸುವುದು ಫೇಸ್‌ಬುಕ್ ಮತ್ತು ಮೆಸೆಂಜರ್ ಗಳು. ಈ ಹಿನ್ನಲೆಯಲ್ಲಿ ಫೇಸ್‌ಬುಕ್ ಬ್ಯಾಟರಿ ಬಳಕೆಯನ್ನು ಕಡಿಮೆ ಮಾಡುವ ಸಲುವಾಗಿಯೇ ತನ್ನ ಆಪ್ ನಲ್ಲಿ ಬದಾವಣೆಯನ್ನು ಮಾಡಿದೆ.
ಫೇಸ್‌ಬುಕ್ ಮತ್ತು ಮೇಸೆಂಜರ್ ಆಪ್ ಗಳು ಹೆಚ್ಚಿನ ಜಾಗವನ್ನು ಆಕ್ರಮಿಸುವುದಲ್ಲದೇ ನಿಮ್ಮ ಪೋನಿನ ಶೇ.20 % ನಷ್ಟು ಬ್ಯಾಟರಿಯನ್ನು ಬಳಸಿಕೊಳ್ಳುತ್ತಿತ್ತು. ಹಾಗಾಗಿ ಇದಕ್ಕೆ ಕಾರಣವಾಗಿದ್ದ ಬಗ್ ಅನ್ನು ತೆಗೆದು ಬ್ಯಾಟರಿ ಬಳಕೆಯನ್ನು ಕಡಿಮೆ ಮಾಡುವಲ್ಲಿ ಫೇಸ್‌ಬುಕ್ ಯಶಸ್ವಿಯಾಗಿದೆ.

ಓದಿರಿ: ಹೇಗಿದೆ ಲಿನೊವೋ..? ಪ್ಲೆಸ್ ಮತ್ತು ಮೈನಸ್ ಪಾಯಿಂಟ್‌ಗಳೇನು ಇಲ್ಲಿದೇ ನೋಡಿ..!
ಇದಕ್ಕಾಗಿ ಕಳೆದ ನವೆಂಬರ್ ನಿಂದ ಕಾರ್ಯ ಆರಂಭಿಸಿದ್ದ ಫೇಸ್‌ಬುಕ್ ಕೊನೆಗೂ ಬ್ಯಾಟರಿ ಬಳಸುವಿಕೆಯನ್ನು ಕಡಿಮೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದರಿಂದ ಆಂಡ್ರಾಯ್ಡ್ ಬಳಕೆದಾರರ ದೂರು ಕಡಿಮೆಯಾಗಲಿದೆ ಎನ್ನುವುದು ಫೇಸ್‌ಬುಕ್ ಆಶಯವಾಗಿದೆ.


Click it and Unblock the Notifications








