ಜಿಯೋಗೆ ಕಾಲ್ ಕನೆಕ್ಷನ್ ನೀಡದ ಏರ್‌ಟೆಲ್, ವೊಡೋಪೋನ್ ಮತ್ತು ಐಡಿಯಾಗೆ 3,050 ಕೋಟಿ ದಂಡ ವಿಧಿಸಲು ಮುಂದಾದ ಟ್ರಾಯ್... !

ಏರ್‌ಟೆಲ್, ವೊಡೋಪೋನ್ ಮತ್ತು ಐಡಿಯಾ ಕಂಪನಿಗಳು ತಮ್ಮ ನೆಟ್‌ವರ್ಕ್ ನಿಂದ ರಿಲಯನ್ಸ್ ಮಾಲೀಕತ್ವದ ಜಿಯೋ ಗೆ ಕರೆ ಮಾಡುವ ವ್ಯವಸ್ಥೆಯನ್ನು ಸರಿಯಾದ ರೀತಿಯಲ್ಲಿ ಉದ್ದೇಶ ಪೂರ್ವಕವಾಗಿ ಕಲ್ಪಿಸದ ಹಿನ್ನಲೆಯಲ್ಲಿ ಈ ದಂಡ ವಿಧಿಸಲು ಮುಂದಾಗಿದೆ.

|

ಟೆಲಿಕಾಂ ನಿಯಂತ್ರಣ ಮಂಡಲಿ ಟ್ರಾಯ್ ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಏರ್‌ಟೆಲ್, ವೊಡೋಪೋನ್ ಮತ್ತು ಐಡಿಯಾಗೆ ಟೆಲಿಕಾಂ ಕಂಪನಿಗಳಿಗೆ 3,050 ಕೋಟಿ ರೂ ಮೊತ್ತದ ದಂಡವನ್ನು ವಿಧಿಸಿದೆ.

ಜಿಯೋಗೆ ಕಾಲ್ ಕನೆಕ್ಷನ್ ನೀಡದ ಏರ್‌ಟೆಲ್, ವೊಡೋಪೋನ್ ಮತ್ತು ಐಡಿಯಾಗೆ ದಂಡ

ಓದಿರಿ: 24 MP ಕ್ಯಾಮೆರಾ ಹೊಂದಿರುವ ನೋಕಿಯಾ 8 ಫೆಭ್ರವರಿ 26ಕ್ಕೆ ಲಾಂಚ್

ಏರ್‌ಟೆಲ್, ವೊಡೋಪೋನ್ ಮತ್ತು ಐಡಿಯಾ ಕಂಪನಿಗಳು ತಮ್ಮ ನೆಟ್‌ವರ್ಕ್ ನಿಂದ ರಿಲಯನ್ಸ್ ಮಾಲೀಕತ್ವದ ಜಿಯೋ ಗೆ ಕರೆ ಮಾಡುವ ವ್ಯವಸ್ಥೆಯನ್ನು ಸರಿಯಾದ ರೀತಿಯಲ್ಲಿ ಉದ್ದೇಶ ಪೂರ್ವಕವಾಗಿ ಕಲ್ಪಿಸದ ಹಿನ್ನಲೆಯಲ್ಲಿ ಈ ದೊಡ್ಡ ಮಟ್ಟದ ದಂಡವನ್ನು ವಿಧಿಸುವಂತೆ ಟ್ರಾಯ್ ಸಲಹೆ ನೀಡಿದೆ.

ಇದರಲ್ಲಿ ವೊಡೋಪೋನ್ ಮತ್ತು ಏರ್‌ಟೆಲ್‌ಗೆ ಕ್ರಮವಾಗಿ ರೂ. 1,050 ಕೋಟಿ ಮತ್ತು ಐಡಿಯಾ ಸೆಲ್ಯುಲರ್ ಕಂಪನಿಗೆ ರೂ. 950 ಕೋಟಿ ದಂಡ ವಿಧಿಸಲು ಟ್ರಾಯ್ ಮುಂದಾಗಿದೆ.

ಜಿಯೋಗೆ ಕಾಲ್ ಕನೆಕ್ಷನ್ ನೀಡದ ಏರ್‌ಟೆಲ್, ವೊಡೋಪೋನ್ ಮತ್ತು ಐಡಿಯಾಗೆ ದಂಡ

ಓದಿರಿ: ರೂ.8490ಕ್ಕೆ 4G ಸಪೋರ್ಟ್ ಮಾಡುವ ಸ್ಯಾಮ್‌ಸಂಗ್ ಗ್ಯಾಲಕ್ಸಿ J2 Ace

ಈ ಮೂರು ಕಂಪನಿಗಳು ಟ್ರಾಯ್‌ ನಿಯಾಮವಳಿಯನ್ನು ಮುರಿದಿವೆ. ಜಿಯೋ ಉಚಿತ ಕಾಲ್ ಸೌಲಭ್ಯ ನೀಡಿದ್ದ ಕಾರಣ ಈ ಕಂಪನಿಗಳು ಜಿಯೋ ನಿಂದ ಕರೆ ಸ್ವೀಕರಿಸುವ ಸಂದರ್ಭದಲ್ಲಿ ಉದ್ದೇಶ ಪೂರ್ವಕವಾಗಿಯೇ ಕಾಲ್ ಡ್ರಾಪ್ ಆಗುವಂತೆ ಮಾಡಿದ್ದವು. ಈ ಹಿನ್ನಲೆಯಲ್ಲಿ ಜಿಯೋ ನೀಡಿದ್ದ ದೂರಿನ ಅನ್ವಯ ಈ ಕ್ರಮಕ್ಕೆ ಟ್ರಾಯ್ ಮುಂದಾಗಿದೆ ಎನ್ನಲಾಗಿದೆ.

Best Mobiles in India

Read more about:
English summary
TRAI had recommended Rs 1,050 crore penalty on Airtel and Vodafone and Rs 950 crore on Idea for high rate of call failures and congestion at interconnect points for Reliance Jio. to konw more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X