'ಗೂಗಲ್ ಅಲ್ಲೊ' ಆಪ್ ಬಳಸುವ ಮುನ್ನ ಈ 8 ಹಂತಗಳನ್ನು ಓದಿಕೊಳ್ಳಿ
ಪ್ರಖ್ಯಾತ ಮೆಸೇಜಿಂಗ್ ಆಪ್ ವಾಟ್ಸಾಪ್ ಬಳಕೆದಾರರಿಗೆ ಈಗಾಗಲೇ ಗೂಗಲ್‌ನ 'ಅಲ್ಲೊ' ಆಪ್ ಬಗ್ಗೆ ತಿಳಿದಿರಬಹುದು. ಅಂದಹಾಗೆ ಗೂಗಲ್‌ನ 'ಅಲ್ಲೊ' ಆಪ್ ಇನ್ನೂ ಪ್ರಖ್ಯಾತವಾಗಿಲ್ಲದೇ ಇರಬಹುದು. ಆದರೆ ಹೊಸ ಬ್ರ್ಯಾಂಡ್‌ನ ಮೆಸೇಜಿಂಗ್ ಆಪ್, ವಾಟ್ಸಾಪ್, ಐಮೆಸೇಜ್‌ಗೆ ಪ್ರತಿಸ್ಪರ್ಧಿಯಾಗಿ ಹೆಚ್ಚಿನ ವೈಯಕ್ತಿಕ ಅನುಭವ ನೀಡುವ ಆಪ್ ಆಗಿದೆ.
ಗೂಗಲ್ ಸರ್ಚ್‌ನಲ್ಲಿ ಕನ್ನಡ ಟೈಪ್ ಮಾಡುವುದು ಹೇಗೆ?
ಗೂಗಲ್ ತನ್ನ ಅಧಿಕೃತ ಬ್ಲಾಗ್‌ನಲ್ಲಿ, 'ಗೂಗಲ್ ಅಲ್ಲೊ' ಆಪ್ ಯೋಜನೆಗಳನ್ನು ಹಾಕಲು, ಮಾಹಿತಿ ಸರ್ಚ್ ಮಾಡಲು, ಸ್ಮಾರ್ಟರ್ ಚಾಟ್ ಅನುಭವ ನೀಡುವಲ್ಲಿ ಸಹಾಯಕವಾಗಲಿದೆ ಎಂದು ಹೇಳಿದೆ. ಆಕಸ್ಮಾತ್ ಎನಾದ್ರು ನಿಮಗೆ ಚಾಟಿಂಗ್ ಮಾಡಲು ಯಾರು ಸಿಗಲಿಲ್ಲ ಎಂದಲ್ಲಿ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಯಾಕಂದ್ರೆ ನೀವು ಗೂಗಲ್‌ನ ಡಿಜಿಟಲ್ ಅಸಿಸ್ಟಂಟ್ ಜೊತೆ ಮಾತನಾಡಬಹುದು. ನಿಮಗೆ ಯಾವಾಗಲು ಬೋರ್ ಆಗೋದಿಲ್ಲ.
'ಗೂಗಲ್ ಅಲ್ಲೊ (google allo)' ನಿಮಗೆ ಹೆಚ್ಚು ಕುತೂಹಲವನ್ನುಂಟು ಮಾಡಿದಲ್ಲಿ, ಅದನ್ನು ಬಳಸಲು ಪ್ರಾರಂಭಿಸುವ ಹಂತಗಳನ್ನು ಇಂದಿನ ಲೇಖನದಲ್ಲಿ ಓದಿರಿ.

ಹಂತ 1ː ಅಲ್ಲೊ'ಗೆ ಸೈನಪ್ ಆಗಿರಿ
ಅಂದಹಾಗೆ ಗೂಗಲ್ ಅಲ್ಲೋ ಆಫ್ ಆಂಡ್ರಾಯ್ಡ್ 4.0+ ಮತ್ತು ಐಓಎಸ್ 9.1+ ಓಎಸ್ ನಂತರದ ಡಿವೈಸ್‌ಗಳಿಗೆ ಲಭ್ಯವಿದೆ.
ಆಪ್ ಅನ್ನು ಪ್ಲೇ ಸ್ಟೊರ್‌ನಿಂದ ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿ. ನಂತರ ಅಲ್ಲೊ, ನಿಮ್ಮ ಕಾಂಟ್ಯಾಕ್ಟ್‌ಗಳು, ಮೆಸೇಜ್‌ಗಳು ಮತ್ತು ಲೋಕಲ್ ಸ್ಟೋರೇಜ್ ಆಕ್ಸೆಸ್ ಮಾಡುತ್ತದೆ. ಅಂದಹಾಗೆ ಒಮ್ಮೆ ನಿಯಮ ಮತ್ತು ಷರತ್ತುಗಳನ್ನು ಒಪ್ಪಿದ ನಂತರ ನಿಮ್ಮ ಮೊಬೈಲ್ ನಂಬರ್ ನೀಡಿ ವೆರಿಫಿಕೇಶನ್ ಪಡೆಯಿರಿ. ನಂತರ ಸೈನಪ್ ಆಗಿರಿ.

ಹಂತ 2ː ಪ್ರೊಫೈಲ್ ಕ್ರಿಯೇಟ್ ಮಾಡಿ
ಒಮ್ಮೆ ಮೇಲಿನ ಪ್ರಕ್ರಿಯೆಗಳನ್ನು ಮುಗಿಸಿದ ನಂತರ, ಪ್ರೊಫೈಲ್ ಕ್ರಿಯೇಟ್ ಮಾಡಲು ಕೇಳುತ್ತದೆ. ನಂತರ ನೀವು ಪ್ರೊಫೈಲ್ ಫೋಟೋ ಮತ್ತು ಹೆಸರು ನೀಡಿ.

ಹಂತ 3ː ಗೂಗಲ್ ಅಸಿಸ್ಟಂಟ್ ವೆಲ್ಕಮ್ ಮಾಡುತ್ತದೆ
ನಂತರ ನಿಮ್ಮ ಸ್ನೇಹಿತ ಅಲ್ಲೊ' ಆಪ್‌ನಲ್ಲಿ ಬರುತ್ತಾನೆ. ಸ್ನೇಹಿತ ಅಂದ್ರೆ ಇಲ್ಲಿ ಗೂಗಲ್ ಬೋಟ್(ಡಿಜಿಟಲ್ ಅಸಿಸ್ಟಂಟ್) ವೆಲ್ಕಮ್ ಮಾಡುತ್ತದೆ. ಅದರೊಂದಿಗೆ ಸಮಯ ಕಳೆಯಬಹುದು. ಅಲ್ಲದೇ ಹಲವು ಟಾಸ್ಕ್‌ಗಳನ್ನು ಸಹ ಅದು ಮಾಡುತ್ತದೆ.

ಹಂತ 4ː ಸ್ಮಾರ್ಟ್ ರೀಪ್ಲೇಗಳಿಂದ ಸಮಯ ಉಳಿಕೆ
ಗೂಗಲ್ ಅಲ್ಲೊ ಆಪ್‌ನಲ್ಲಿ 'ಸ್ಮಾರ್ಟ್' ರೀಪ್ಲೇಗಳು ನಿಮ್ಮ ಸಮಯವನ್ನು ಹೆಚ್ಚಾಗಿ ಉಳಿಸುತ್ತವೆ.
ಅಲ್ಲದೇ 'haha', 'LOL', ':-D' ಸ್ಮಾರ್ಟ್ ರೀಪ್ಲೇಗಳು ಸಹ ಬಹುಬೇಗ ಬಳಕೆಗೆ ಸಹಾಯವಾಗುತ್ತವೆ.

ಹಂತ 5ː ಪ್ರತಿಕ್ರಿಯೆಗಳನ್ನು ಫೋಟೋ, ಎಮೋಜಿ, ಸ್ಟಿಕ್ಕರ್‌ಗಳಿಂದ ನೀಡಿ
ವಾಟ್ಸಾಪ್ ರೀತಿಯಲ್ಲಿ ಅಲ್ಲದೇ, ಗೂಗಲ್ ಅಲ್ಲೊ'ದಲ್ಲಿ ಸ್ಟಿಕ್ಕರ್ ಮತ್ತು ಎಮೋಜಿಗಳು ಚಾಟಿಂಗ್ ಅನ್ನು ಹೆಚ್ಚು ಎಕ್ಸ್‌ಪ್ರೆಸ್ಸಿವ್ ಆಗಿ ಮಾಡುತ್ತವೆ. ಕೇವಲ '+' ಚಿಹ್ನೆ ಮೇಲೆ ಕ್ಲಿಕ್ ಮಾಡುವುದರಿಂದ ಸ್ಟಿಕ್ಕರ್‌ಗಳನ್ನು ಆಯ್ಕೆ ಮಾಡಿ ಸೆಂಡ್ ಮಾಡಬಹುದು.

ಹಂತ 6ː ಕೂಗು ಮತ್ತು ಪಿಸುಗುಡುವಿಕೆ ಮೂಲಕ ಚಾಟ್
ಗೂಗಲ್ ಅಲ್ಲೊ'ದಲ್ಲಿನ 'Volume' ಫೀಚರ್ ಪ್ರಾಥಮಿಕ ಮೆಸೇಜಿಂಗ್ ವಿಧದ ಆಪ್‌ಗಳಲ್ಲಿ ಇತರೆ ಆಪ್‌ಗಳಿಗಿಂತ ಹೆಚ್ಚು ವಿಶೇಷವಾಗಿದೆ. ಅಂದಹಾಗೆ ಈ ಫೀಚರ್ ಸ್ಕ್ರೀನ್‌ನಲ್ಲಿ ಪ್ರದರ್ಶನವಾಗುತ್ತದೆ. ಇದರ ಸೈಜ್ ಅನ್ನು ನೀವೇ ಸೆಟ್ ಮಾಡಬಹುದು. ದೊಡ್ಡ ಸೈಜ್ ಸೆಟ್ ಮಾಡಿದರೆ ಕೂಗುತ್ತಿದ್ದೀರಿ ಎಂದು ಅರ್ಥ, ಸಣ್ಣ ಸೈಜ್ ಸೆಟ್ ಮಾಡಿದರೆ ಪಿಸುಗುಡುತ್ತಿದ್ದೀರಿ ಎಂದು ಅರ್ಥ.

ಹಂತ 7ː ಗ್ರೂಪ್ ಚಾಟಿಂಗ್ ಆರಂಭಿಸಿ
ಗೂಗಲ್ ಅಲ್ಲೊ'ದಲ್ಲಿನ ಗ್ರೂಪ್ ಚಾಟಿಂಗ್ ಇತರೆ ಮೆಸೇಜಿಂಗ್ ಆಪ್‌ಗಳ ರೀತಿಯಲ್ಲಿಯೇ ಇರುತ್ತದೆ. ಗ್ರೂಪ್ ಚಾಟ್ ಆಪ್ಶನ್ ಆಯ್ಕೆ ಮಾಡಿದರೆ, ಯಾರನ್ನು ಚಾಟ್‌ಗೆ ಆಯ್ಕೆ ಮಾಡಬೇಕು ಎಂಬ ಆಯ್ಕೆ ಬರುತ್ತದೆ. ಹೆಸರು ನೀಡಿ, ನಂತರ 'avatar ಆಯ್ಕೆ ಮಾಡಿ 'done' ಟ್ಯಾಪ್ ಮಾಡಿ.

ಹಂತ 8ː ಅಜ್ಞಾತ ಮೋಡ್ (ಅಜ್ಞಾತ ಮೋಡ್)
ನಿಮ್ಮ ಚಾಟ್ ಕಾಣಿಸಬಾರದು ಎಂದಲ್ಲಿ? ಅಜ್ಞಾತ ಮೋಡ್‌ನಲ್ಲಿ ಆರಂಭಿಸಿ. ಆದರೆ ನಿಮ್ಮ ಚಾಟ್ ಒಂದು ಗಂಟೆ ನಂತರ ಸ್ವಯಂಕೃತವಾಗಿ ಡಿಲೀಟ್ ಆಗುತ್ತದೆ.


Click it and Unblock the Notifications








