ಹೊಸ ಮೊಬೈಲ್‌ಗೆ ವಾಟ್ಸಾಪ್‌ನ ಹಳೆಯ ಮೆಸೇಜ್, ಮೀಡಿಯ ಡಾಟಾ ವರ್ಗಾವಣೆ ಹೇಗೆ?

By Suneel
|

ವಾಟ್ಸಾಪ್ ದಿನನಿತ್ಯ ಅತಿ ಹೆಚ್ಚು ಬಳಸುವ ಸ್ಮಾರ್ಟ್‌ಫೋನ್‌ ಆಪ್. ವಾಟ್ಸಾಪ್‌ ಅನ್ನು ಗೆಳೆಯರೊಂದಿಗೆ ಯಾವಾಗಲು ಮೆಸೇಜ್‌ ಮೂಲಕ ಸಂವಹಿಸಲು ಮತ್ತು ಆಗಾಗ ಇಮೇಜ್‌ಗಳನ್ನು ಶೇರ್ ಮಾಡಲು ಸಹ ಬಳಸುತ್ತೇವೆ.

ಹೊಸ ಮೊಬೈಲ್‌ಗೆ ವಾಟ್ಸಾಪ್‌ನ ಹಳೆಯ ಮೆಸೇಜ್, ಮೀಡಿಯ ಡಾಟಾ ವರ್ಗಾವಣೆ ಹೇಗೆ?

ಫೇಸ್‌ಬುಕ್ ಮಾಲೀಕತ್ವದ ವಾಟ್ಸಾಪ್‌ ಇತ್ತೀಚೆಗೆ ಡಾಕ್ಯುಮೆಂಟ್‌ ಶೇರ್‌ ಸಪೋರ್ಟ್ ಫೀಚರ್‌ ಅನ್ನು ಅಭಿವೃದ್ದಿಪಡಿಸಿದೆ.

ಅಂದಹಾಗೆ ವಾಟ್ಸಾಪ್‌ನಲ್ಲಿ ಕೆಲವು ಹಳೆಯ ಮೆಸೇಜ್‌ ಮತ್ತು ಮೀಡಿಯ ಡಾಟಾವನ್ನು ಕಳೆದುಕೊಂಡಲ್ಲಿ ಅಥವಾ ಹೊಸ ಫೋನ್‌ ಬಳಸಲು ಪ್ರಾರಂಭಿಸಿದಾಗ ಹಳೆಯ ಫೋನ್‌ನಲ್ಲಿನ ವಾಟ್ಸಾಪ್‌ ಮೆಸೇಜ್ ಮತ್ತು ಮೀಡಿಯಗಳನ್ನು ಹೊಸ ಫೋನ್‌ಗೆ ವರ್ಗಾವಣೆ ಮಾಡಿಕೊಳ್ಳುವುದು ಹೇಗೆ ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.

ಹೊಸ ಮೊಬೈಲ್‌ಗೆ ವಾಟ್ಸಾಪ್‌ನ ಹಳೆಯ ಮೆಸೇಜ್, ಮೀಡಿಯ ಡಾಟಾ ವರ್ಗಾವಣೆ ಹೇಗೆ?

ನಿಮ್ಮ ಡಾಟಾವನ್ನು ಗೂಗಲ್‌ ಡ್ರೈವ್‌ ಅಥವಾ ಐಕ್ಲೌಡ್‌ಗೆ ಬ್ಯಾಕಪ್‌ ಮಾಡಿಕೊಳ್ಳಿ

ಸುಲಭವಾಗಿ ವಾಟ್ಸಾಪ್‌ ಚಾಟ್‌ ಮತ್ತು ಮೀಡಿಯ'ಗಳನ್ನು ಆಂಡ್ರಾಯ್ಡ್‌ನಲ್ಲಿನ ಗೂಗಲ್‌ ಡ್ರೈವ್‌ಗೆ ಅಥವಾ ಐಕ್ಲೌಡ್‌ ಡ್ರೈವ್‌ಗೆ ಬ್ಯಾಕಪ್‌ ಮಾಡಿಕೊಳ್ಳಬಹುದು. ಅಥವಾ ಇತರೆ ಹೊಸ ಫೋನ್‌ಗೆ ವರ್ಗಾವಣೆ ಸಹ ಮಾಡಿಕೊಳ್ಳಬಹುದು.

24 ಗಂಟೆಗಳಲ್ಲಿ ನಿಮ್ಮ ವಾಟ್ಸಾಪ್ ಪ್ರೊಫೈಲ್ ಯಾರು ನೋಡಿದ್ದಾರೆ ಚೆಕ್‌ ಮಾಡುವುದು ಹೇಗೆ?

ಹೊಸ ಮೊಬೈಲ್‌ಗೆ ವಾಟ್ಸಾಪ್‌ನ ಹಳೆಯ ಮೆಸೇಜ್, ಮೀಡಿಯ ಡಾಟಾ ವರ್ಗಾವಣೆ ಹೇಗೆ?

ಗೂಗಲ್‌ ಡ್ರೈವ್‌ಗೆ ಡಾಟಾ ಬ್ಯಾಕಪ್‌ ಮಾಡಿಕೊಳ್ಳುವುದು ಹೇಗೆ?
ಒಪನ್ WhatsApp > Menu > Settings > Chats > Chat backup. ನಂತರದಲ್ಲಿ ನೀವು Backup to Google Drive ಎಂಬ ಆಪ್ಶನ್‌ ಅನ್ನು ಪಡೆಯುತ್ತೀರಿ. ಅದನ್ನು ಟ್ಯಾಪ್‌ ಮಾಡಿ.

ಡಾಟಾ ಬ್ಯಾಕಪ್‌ಗಾಗಿ ನೀವು ಗೂಗಲ್‌ ಖಾತೆ ಲಿಂಕ್ ಅನ್ನು ಕೇಳಲ್ಪಡುತ್ತೀರಿ. ನಿಮ್ಮ ವಿವರಗಳನ್ನು ನೀಡಿ. ಯಾವುದೇ ಸಮಯದಲ್ಲಿ ಬ್ಯಾಕಪ್‌ ಪ್ರಾರಂಭವಾಗಬಹುದು.

ಬ್ಯಾಕಪ್‌ನಿಂದ ಡಾಟಾ ರೀಸ್ಟೋರ್ ಮಾಡುವುದು ಹೇಗೆ?
ಈ ಪ್ರಕ್ರಿಯೆ ಸುಲಭವಾದದ್ದು. ಹೊಸ ಫೋನ್‌ಗೆ ವಾಟ್ಸಾಪ್‌ ಇನ್‌ಸ್ಟಾಲ್‌ ಮಾಡಲು ಪ್ರಾರಂಭಿಸಿದಾಗ 'Restore your chats' ಎಂಬ ಆಯ್ಕೆ ಪಡೆಯುತ್ತೀರಿ. ಅದನ್ನು ಟ್ಯಾಪ್‌ ಮಾಡಿ. ರೀಸ್ಟೋರ್ ಆರಂಭವಾಗದಿದ್ದಲ್ಲಿ, ಇತರೆ ಮೊಬೈಲ್ ನಂಬರ್‌ ಅಥವಾ ಗೂಗಲ್‌ ಖಾತೆಯನ್ನು ನೀಡಬೇಕು. ನಂತರ ನೀವು ಹೊಸ ಫೋನ್‌ನಲ್ಲಿ ಹಳೆಯ ಮೆಸೇಜ್‌ ಮತ್ತು ಮೀಡಿಯ ಬ್ಯಾಕಪ್‌ ಪಡೆಯಬಹುದು.

Best Mobiles in India

English summary
How to Transfer WhatsApp Messages and Media to Your New Smartphone. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X