Home
Apps

ಜೈಲ್ ಬ್ರೇಕ್ ಮಾಡದೆ ಆ್ಯಪಲ್ ಐಫೋನಿನಲ್ಲಿ ಹಲವು ವಾಟ್ಸಪ್ ಖಾತೆಗಳನ್ನು ಉಪಯೋಗಿಸುವುದೇಗೆ?

ಆ್ಯಪಲ್ ಬಳಕೆದಾರರಿಗಿಲ್ಲೊಂದು ಸಿಹಿ ಸುದ್ದಿ ಇದೆ. ನಿಮ್ಮ ಮೊಬೈಲಿನಲ್ಲೀಗ ಹಲವು ವಾಟ್ಸಪ್ ಖಾತೆಗಳನ್ನು ಏಕಕಾಲದಲ್ಲಿ ಬಳಸಬಹುದು.

By Ashok

ಸದ್ಯಕ್ಕೆ, ವಾಟ್ಸಪ್ಪಿನಲ್ಲಿ ಒಂದು ಬಿಲಿಯನ್ನಿಗಿಂತಲೂ ಅಧಿಕ ಜನರು ಸಕ್ರಿಯರಾಗಿದ್ದಾರೆ ಎನ್ನಲಾಗುತ್ತಿದೆ; ಪ್ರಪಂಚದ ಅತಿ ಬಳಕೆಯ ಇನ್ಸ್ಟೆಂಟ್ ಮೆಸೇಜಿಂಗ್ ತಂತ್ರಾಂಶವಿದು.

ಇದರಲ್ಲಿ ನಿಮಗೆ ಬೇಕಾದ ಎಲ್ಲಾ ಸೌಕರ್ಯಗಳೂ ಇದೆ, ಮತ್ತು ಕಾಲಕಾಲಕ್ಕೆ ಹಲವಾರು ಹೊಸ ವಿಶೇಷತೆಗಳನ್ನು ಸೇರಿಸಲಾಗುತ್ತದೆ. 2016ರಲ್ಲಿ ವಾಟ್ಸಪ್ ಹತ್ತಕ್ಕೂ ಅಧಿಕ ವಿಶೇಷತೆಗಳನ್ನು ಸೇರಿಸಿತು.

ಓದಿರಿ: ಯಾವುದೇ ಟೆಲಿಕಾಂ'ನಿಂದ ಅನ್‌ಲಿಮಿಟೆಡ್ ಇಂಟರ್ನೆಟ್, ಟಾಕ್‌ಟೈಮ್‌ ಉಚಿತವಾಗಿ ಪಡೆಯುವುದು ಹೇಗೆ?

ಇಷ್ಟೆಲ್ಲ ಹೇಳಿದ ಮೇಲೆ ವಾಟ್ಸಪ್ಪಿನ ಕೊರತೆಯ ಬಗ್ಗೆಯೂ ಒಂದು ಮಾತು ಹೇಳಲೇ ಬೇಕಿದೆ. ಹೌದು! ಒಂದು ಮೊಬೈಲಿನಲ್ಲಿ ಹಲವು ವಾಟ್ಸಪ್ ಖಾತೆಗಳನ್ನು ಉಪಯೋಗಿಸಲಾಗದೇ ಇರುವುದು ಒಂದು ದೊಡ್ಡ ಕೊರತೆಯೇ ಹೌದು. ನಿಮ್ಮ ಬಳಿ ಆ್ಯಪಲ್ ಐಫೋನ್ ಇದ್ದರೆ ಇನ್ನೂ ಕಷ್ಟ.

ಓದಿರಿ: ಜಿಯೋ ಸಿಮ್ ಕುರಿತ ಸಮಸ್ಯೆಗಳಿಗೆ ಇಲ್ಲಿದೆ ಒಂದಿಷ್ಟು ಪರಿಹಾರ

ವಾಟ್ಸಪ್ ಅಧಿಕೃತವಾಗಿ ಇದನ್ನು ಹೊರತಂದಿಲ್ಲವಾದರೂ, ಕೂಲ್ ಪ್ಯಾಡ್ ನಂತಹ ಚೀನಾದ ಕೆಲವು ಸ್ಮಾರ್ಟ್ ಫೋನುಗಳು ಈ ವಿಶಿಷ್ಟತೆಯನ್ನು ಬಿಡುಗಡೆಗೊಳಿಸಿವೆ. ಆ್ಯಂಡ್ರಾಯ್ಡ್ ಫೋನಾದ ಕೂಲ್ ಪ್ಯಾಡ್ ನಲ್ಲಿ ಎರಡು ಖಾತೆ ಬಳಸುವ ಸೌಕರ್ಯವಿದೆ, ಒಂದು ವೇಳೆ ನಿಮ್ಮ ಬಳಿ ಐಫೋನ್ ಇದ್ದರೆ? ಒಂದೇ ಮೊಬೈಲಿನಲ್ಲಿ ಎರಡೆರಡು ವಾಟ್ಸಪ್ ಖಾತೆ ಉಪಯೋಗಿಸಬಹುದಾ? ಹೌದು ಎನ್ನುವುದೇ ನಮ್ಮ ಉತ್ತರ. ಅದು ಹೇಗೆ ಸಾಧ್ಯ ಎಂದು ಈ ಲೇಖನದಲ್ಲಿ ವಿವರಿಸಿದ್ದೇವೆ. ಒಮ್ಮೆ ನೋಡಿ.

ಹಂತ 1: ಆ್ಯಪ್ ಸ್ಟೋರ್ ನಿಂದ ವಾಟ್ಸಪ್ ಅನ್ನು ಡೌನ್ ಲೋಡ್ ಮಾಡಿಕೊ‍ಳ್ಳಿ.

ಹಂತ 1: ಆ್ಯಪ್ ಸ್ಟೋರ್ ನಿಂದ ವಾಟ್ಸಪ್ ಅನ್ನು ಡೌನ್ ಲೋಡ್ ಮಾಡಿಕೊ‍ಳ್ಳಿ.

ಮೊದಲಿಗೆ ಆ್ಯಪ್ ಸ್ಟೋರ್ ನಿಂದ ಅಧಿಕೃತ ವಾಟ್ಸಪ್ ತಂತ್ರಾಂಶವನ್ನು ಡೌನ್ ಲೋಡ್ ಮಾಡಿಕೊಳ್ಳಿ. ಈಗಾಗಲೇ ಇನ್ಸ್ಟಾಲ್ ಆಗಿದ್ದರೆ ಮುಂದಿನ ಹಂತಕ್ಕೆ ಹೋಗಿ.

ಹಂತ 2: ಸಫಾರಿ ಬ್ರೌಸರ್ ತೆಗೆದು ಕೆಳಗಿನ ಯು.ಆರ್.ಎಲ್ ಗೆ ಭೇಟಿ ಕೊಡಿ.

ಹಂತ 2: ಸಫಾರಿ ಬ್ರೌಸರ್ ತೆಗೆದು ಕೆಳಗಿನ ಯು.ಆರ್.ಎಲ್ ಗೆ ಭೇಟಿ ಕೊಡಿ.

ನಿಮ್ಮ ಐಫೋನಿನಲ್ಲಿ ಸಫಾರಿ ಬ್ರೌಸರ್ ತೆರೆದು ios.othman.tv ಎಂದು ಟೈಪಿಸಿ ಎಂಟರ್ ಒತ್ತಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ 3: ವಾಟ್ಸಪ್ ಪ್ಲಸ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಿ.

ಹಂತ 3: ವಾಟ್ಸಪ್ ಪ್ಲಸ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಿ.

ನಿಮಗೆ ಪರಿಚಯವಿಲ್ಲದ ಭಾಷೆಯ ಪುಟವೊಂದು ತೆರೆದುಕೊಳ್ಳುತ್ತದೆ. ಗಾಬರಿ ಬೇಡ. ಕೆಳಗೆ ಸ್ಕ್ರಾಲ್ ಮಾಡಿ, ವಾಟ್ಸಪ್ ಪ್ಲಸ್ ಕಾಣಿಸುತ್ತದೆ, ಅದರ ಮೇಲೆ ಕ್ಲಿಕ್ಕಿಸಿ.

ಹಂತ 4: ತಂತ್ರಾಂಶವನ್ನು ಇನ್ಸ್ಟಾಲ್ ಮಾಡಿ.

ಹಂತ 4: ತಂತ್ರಾಂಶವನ್ನು ಇನ್ಸ್ಟಾಲ್ ಮಾಡಿ.

ಪರದೆಯ ಮೇಲೆ ತಂತ್ರಾಂಶವನ್ನು ಇನ್ಸ್ಟಾಲ್ ಮಾಡಲು ಅನುಮತಿ ಕೇಳುತ್ತದೆ. ಇನ್ಸ್ಟಾಲ್ ಮೇಲೆ ಕ್ಲಿಕ್ಕಿಸಿ.

ಹಂತ 5: ಸೆಟ್ಟಿಂಗ್ಸ್ ಬದಲಿಸಿ.

ಹಂತ 5: ಸೆಟ್ಟಿಂಗ್ಸ್ ಬದಲಿಸಿ.

ತಂತ್ರಾಂಶವನ್ನು ಡೌನ್ ಲೋಡ್ ಮಾಡಿಕೊಂಡ ನಂತರ, ಸೆಟ್ಟಿಂಗ್ಸ್ ಗೆ ಹೋಗಿ > ಜೆನರಲ್ > ಪ್ರೊಫೈಲ್ ಗೆ ಹೋಗಿ "ಟ್ರಸ್ಟ್ ವಿ.ಎನ್.ಇ ಸಾಫ್ಟ್ ವೇರ್" ಮೇಲೆ ಕ್ಲಿಕ್ಕಿಸಿ. ಈಗ ನೋಡಿ! ನಿಮ್ಮ ಐಫೋನಿನಲ್ಲಿ ಹಲವು ವಾಟ್ಸಪ್ ಖಾತೆಗಳನ್ನು ಬಳಸಬಹುದು. ಈಗ ತಂತ್ರಾಂಶವನ್ನು ತೆರೆಯಿರಿ. ತಂತ್ರಾಂಶ ತೆರೆಯಲು ನಮ್ಮ ಸಹಾಯ ಬೇಡವೆಂದು ನಮ್ಮ ಅನಿಸಿಕೆ.

ಗಮನಿಸಿ: ಈ ತಂತ್ರ ನಿಮ್ಮ ಬಳಿ ಐ.ಒ.ಎಸ್ 9 ಅಥವಾ ಅದಕ್ಕಿಂತ ಉನ್ನತ ಸಾಫ್ಟ್ ವೇರ್ ಇದ್ದರೆ ಮಾತ್ರ ಕೆಲಸ ಮಾಡುತ್ತದೆ. ಜೊತೆಗೆ ಈ ಪ್ರಕ್ರಿಯೆಯಲ್ಲಿ ಯಾವುದೇ ತಪ್ಪುಗಳಾದಲ್ಲಿ ಅದಕ್ಕೆ ಗಿಝ್ ಬಾಟ್ ಹೊಣೆಯಾಗುವುದಿಲ್ಲ. ನಿಮ್ಮ ಎಚ್ಚರಿಕೆಯಲ್ಲಿ ಮುಂದುವರೆಯಿರಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
This simple trick allows you to run multiple WhatsApp accounts on your Apple iPhone. Read more to find out how.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+