ಫೋನ್‌ನಲ್ಲಿ ಕಾಂಟ್ಯಾಕ್ಟ್ ಸೇವ್ ಆಗಿಲ್ಲದಿದ್ದರೂ, ವಾಟ್ಸಾಪ್ ಮೆಸೇಜ್ ಸೆಂಡ್ ಹೇಗೆ?
ನಿಮ್ಮ ಫೋನ್‌ನಲ್ಲಿ ನಿರ್ಧಿಷ್ಟ ಕಾಂಟ್ಯಾಕ್ಟ್ ನಂಬರ್ ಸೇವ್ ಆಗಿದ್ದರೇ ಮಾತ್ರ ವಾಟ್ಸಾಪ್ ಮೆಸೇಜ್ ಸೆಂಡ್ ಮಾಡಲು ಸಾಧ್ಯ. ಇಂದಿನ ಲೇಖನದಲ್ಲಿ ನಂಬರ್ ಸೇವ್ ಆಗಿಲ್ಲದಿದ್ದರೂ, ವಾಟ್ಸಾಪ್ ಮೆಸೇಜ್ ಸೆಂಡ್ ಮಾಡುವುದು ಹೇಗೆ ಎಂದು ತಿಳಿಯಿರಿ.
ಡೌಟೇ ಬೇಡ. ಕಲಿಯುಗದಲ್ಲಿ ಪ್ರಪಂಚದಾದ್ಯಂತ ಹೆಚ್ಚು ಇಷ್ಟಪಡುವ ಮೆಸೇಜಿಂಗ್ ಆಪ್ ಯಾವುದು ಎಂದು ಕೇಳಿದರೆ ಎಲ್ಲರೂ ಸಹ ಹೇಳುವುದು ವಾಟ್ಸಾಪ್. ಡೆವೆಲಪರ್‌ಗಳು ವಾಟ್ಸಾಪ್ ಅನ್ನು ಅಭಿವೃದ್ದಿಪಡಿಸಲು ಇನ್ನೆಷ್ಟು ಶ್ರಮ ಪಟ್ಟಿರಬಹುದು ಎಂದು ಹಾಗೆ ಒಮ್ಮೆ ವಾಟ್ಸಾಪ್ ಬಳಸುವವರು ಸಹ ಆಲೋಚಿಸಿ. ವಾಟ್ಸಾಪ್ ಇಂದು ಯಾರು ಸಹ ಬ್ರೇಕ್ ಹಾಕಲಾಗದ ಅತಿದೊಡ್ಡ ಫೋರ್ಸ್.
ಸ್ಮಾರ್ಟ್‌ಫೋನ್ ಹೊಂದಿರುವ ಬಹುಸಂಖ್ಯಾತರು ಇಂದು ವಾಟ್ಸಾಪ್ ಅನ್ನು ದಿನನಿತ್ಯ ಬಳಸುವುದರಲ್ಲಿ ಯಾವುದೇ ಡೌಟ್ ಇಲ್ಲ. ಯಾರೋ ತುಂಬ ಪರಿಚಿತರು, ಆದರೆ ವಾಟ್ಸಾಪ್‌ನಲ್ಲಿ ಕರೆ ಮಾಡಿದಾಗ ಅವರ ಕಾಂಟ್ಯಾಕ್ಟ್ ನಂಬರ್ ವಾಟ್ಸಾಪ್‌ನಲ್ಲಿ ಸೇವ್ ಆಗಿಲ್ಲದಿದ್ದಲ್ಲಿ, ಪರಿಚಿತ ನಂಬರ್ ಸಹ ಅಪರಿಚಿತ ನಂಬರ್ ಆಗಿ ಕಾಣಿಸುತ್ತದೆ. ಅದೇ ಅಪರಿಚಿತ ನಂಬರ್‌ನಿಂದ ಕರೆ ಬಂದು ಹಲವು ಮಾಹಿತಿಗಳನ್ನು ಶೇರ್ ಮಾಡಲು ಕೇಳಿದಾಗ ಖಂಡಿತ ಯಾರು ಸಹ ನೀಡುವುದಿಲ್ಲ.
24 ಗಂಟೆಗಳಲ್ಲಿ ನಿಮ್ಮ ವಾಟ್ಸಾಪ್ ಪ್ರೊಫೈಲ್ ಯಾರು ನೋಡಿದ್ದಾರೆ ಚೆಕ್ ಮಾಡುವುದು ಹೇಗೆ?
ಅಂದಹಾಗೆ ಇಂದಿನ ಲೇಖನದಲ್ಲಿ ವಾಟ್ಸಾಪ್‌ನಲ್ಲಿ(WhatsApp) ನಿರ್ದಿಷ್ಟ ನಂಬರ್ ಫೋನ್‌ನಲ್ಲಿ ಸೇವ್ ಆಗಿಲ್ಲದಿದ್ದರೂ, ಆ ನಂಬರ್‌ಗೆ ಮೆಸೇಜ್ ಕಳುಹಿಸುವುದು ಹೇಗೆ ಎಂದು ತಿಳಿಸುತ್ತಿದ್ದೇವೆ. ಹೇಗೆ ಎಂದು ಲೇಖನದ ಸ್ಲೈಡರ್‌ನಲ್ಲಿ ಓದಿ ತಿಳಿಯಿರಿ.
ವಾಟ್ಸಾಪ್‌ನ 15 ಸೀಕ್ರೇಟ್ ಫೀಚರ್‌ಗಳು; ಬಳಕೆದಾರರು ತಿಳಿಯಲೇಬೇಕು!!

ನಂಬರ್ ಅನ್ನು ಕೀಪ್ಯಾಡ್‌ನಲ್ಲಿ ಟೈಪ್ ಮಾಡಿ
ಮೊದಲ ಹಂತದಲ್ಲಿ, ನೀವು ಯಾವ ನಂಬರ್‌ಗೆ ಮೆಸೇಜ್ ಸೆಂಡ್ ಮಾಡಬೇಕೋ ಆ ನಂಬರ್ ಅನ್ನು ಕೀ ಪ್ಯಾಡ್‌ನಲ್ಲಿ ಟೈಪ್ ಮಾಡಿ.
ಸೂಚನೆ: ನಂಬರ್ ಟೈಪ್ ಮಾಡಲು ನಿಮ್ಮ ಫೋನ್ ಡಯಲರ್ ಬಳಸಿ.

ಮೆನು ಬಟನ್ ಪ್ರೆಸ್ ಮಾಡಿ
ಮೊಬೈಲ್ ನಂಬರ್ ಎಂಟರ್ ಮಾಡಿದ ನಂತರ, ಡಯಲರ್‌ನಲ್ಲಿ ಮೆನು ಬಟನ್ ಪ್ರೆಸ್ ಮಾಡಿ. ಮೆನು ಬಟನ್ ಪ್ರೆಸ್ ಮಾಡಿದ ನಂತರ ಕಾಂಟ್ಯಾಕ್ಟ್, ಸೆಂಡ್ ಮೆಸೇಜ್‌ನಂತಹ ಹಲವು ಆಪ್ಶನ್‌ಗಳು ತೆರೆದುಕೊಳ್ಳುತ್ತವೆ.
ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸೆಂಡ್ ಮೆಸೇಜ್ ಆಪ್ಶನ್ ಬಟನ್ ಮೇಲೆ ಕ್ಲಿಕ್ ಮಾಡಿ
ಈ ಹಂತದಲ್ಲಿ 'ಸೆಂಡ್ ಮೆಸೇಜ್ ಆಪ್ಶನ್' ಮೇಲೆ ಕ್ಲಿಕ್ ಮಾಡಿ. ಆಪ್ಶನ್ ಕ್ಲಿಕ್ ಮಾಡಿದ ನಂತರ 'Send a WhatsApp message, send a text message' ಆಪ್ಶನ್‌ಗಳಿರುವ ಸ್ಕ್ರೀನ್ ಓಪನ್ ಆಗುತ್ತದೆ.

'Send a WhatsApp message' ಆಪ್ಶನ್ ಮೇಲೆ ಕ್ಲಿಕ್ ಮಾಡಿ
ಇದು ಕೊನೆಯ ಹಂತವಾಗಿದ್ದು, 'Send a WhatsApp message' ಆಪ್ಶನ್ ಮೇಲೆ ಕ್ಲಿಕ್ ಮಾಡಿ. ಇದು ವಾಟ್ಸಾಪ್ ಅಪ್ಲಿಕೇಶನ್‌ಗೆ ಡೈರೆಕ್ಟ್ ಮಾಡುತ್ತದೆ. ಈ ರೀತಿಯಲ್ಲಿ ನೀವು ನಿರ್ದಿಷ್ಟ ನಂಬರ್ ವಾಟ್ಸಾಪ್‌ನಲ್ಲಿ ಸೇವ್ ಆಗಿಲ್ಲದಿದ್ದರೂ ಮೆಸೇಜ್ ಸೆಂಡ್ ಮಾಡಬಹುದು.
ಸೂಚನೆ: ಈ ಪ್ರಕ್ರಿಯೆ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ವರ್ಕ್ ಆಗುವುದಿಲ್ಲ. ಆದರೆ ಕೆಲವೊಂದು ಸ್ಮಾರ್ಟ್‌ಫೋನ್‌ಗಳಲ್ಲಿ ವರ್ಕ್ ಆಗುತ್ತದೆ.


Click it and Unblock the Notifications








