ವಾಟ್ಸಾಪ್‌ನ 15 ಸೀಕ್ರೇಟ್‌ ಫೀಚರ್‌ಗಳು; ಬಳಕೆದಾರರು ತಿಳಿಯಲೇಬೇಕು!!

By Suneel
|

ವಾಟ್ಸಾಪ್ ಅನ್ನು ಫೇಸ್‌ಬುಕ್ ಒಂದು ಸಣ್ಣ ಸ್ಟಾಟಪ್‌ ಆಗಿ ಆರಂಭಿಸಿತು. ಆದರೆ ಇಂದು ಪ್ರಪಂಚದಲ್ಲಿಯೇ ಅತಿ ಹೆಚ್ಚು ಜನ ಬಳಸುವ ಇನ್‌ಸ್ಟಾಂಟ್‌ ಮೆಸೇಜಿಂಗ್‌ ಆಪ್‌ ವಾಟ್ಸಾಪ್‌. ಪ್ರಸ್ತುತದಲ್ಲಿ 1 ಶತಕೋಟಿಗಿಂತಲೂ ಹೆಚ್ಚು ಜನರು ವಾಟ್ಸಾಪ್‌ ಮೆಸೇಜಿಂಗ್ ಆಪ್‌ ಅನ್ನು ದಿನನಿತ್ಯವೂ ಬಳಸುತ್ತಾರೆ.

ವಾಟ್ಸಾಪ್‌ ಇತ್ತೀಚೆಗೆ ಗೂಢಲಿಪೀಕರಣ ಫೀಚರ್‌ ಅನ್ನು ಸಹ ಅಪ್‌ಡೇಟ್‌ ಮಾಡಿದೆ. ಈ ಫೀಚರ್ ಉಪಯೋಗ ಏನು ಎಂಬುದನ್ನು ಸಹ ಈಗಾಗಲೇ ಗಿಜ್‌ಬಾಟ್‌ ಓದುಗರು ತಿಳಿದಿದ್ದೀರಿ.

ಆದರೆ ದಿನನಿತ್ಯ ವಾಟ್ಸಾಪ್ ಬಳಸುವ ಬಳಕೆದಾರರಿಗೆ ವಾಟ್ಸಾಪ್‌ನ ಕೆಲವು ಸೀಕ್ರೇಟ್‌ ಫೀಚರ್‌ಗಳು ತಿಳಿದಿಲ್ಲ. ವಾಟ್ಸಾಪ್‌ನಲ್ಲೇ ನಿಮಗೆ ತಿಳಿಯದಂತೆ ಹೈಡ್ ಆಗಿರುವ ಅಂತಹ ವಾಟ್ಸಾಪ್ ಸೀಕ್ರೇಟ್‌ ಫೀಚರ್‌ಗಳು(whatsapp secret features) ಯಾವುವು ಎಂದು ಇಂದಿನ ಲೇಖನದಲ್ಲಿ ಓದಿ ತಿಳಿಯಿರಿ.

ಇಂಟರ್ನೆಟ್ ಸಂಪರ್ಕವಿಲ್ಲದೆ ವಾಟ್ಸಾಪ್ ಬಳಸುವುದು ಹೇಗೆ?

1

1

ವಾಟ್ಸಾಪ್‌ನಲ್ಲಿ ಒಂದೇ ಮೆಸೇಜ್‌ ಅನ್ನು ಹಲವರಿಗೆ ಕಳುಹಿಸಬಹುದು. ಆ ಮೆಸೇಜ್‌ ಅನ್ನು ಇತರರಿಗೂ ಸೆಂಡ್‌ ಮಾಡಿರುವ ಬಗ್ಗೆ ಯಾರಿಗೂ ತಿಳಿಯುವುದಿಲ್ಲ.
ವಾಟ್ಸಾಪ್ ಚಾಟ್‌ಗೆ ಹೋಗಿ>>ವಾಟ್ಸಾಪ್‌ನ ಬಲಭಾಗದ ಟಾಪ್‌ನಲ್ಲಿ ಕ್ಲಿಕ್‌ ಮಾಡಿ>>New Broadcast ಆಯ್ಕೆ ಮಾಡಿ>>ಕಾಂಟ್ಯಾಕ್ಟ್‌ಗಳನ್ನು ಆಡ್‌ ಮಾಡಿ>> ಮೆಸೇಜ್‌ ಟೈಪಿಸಿ>> ಸೆಂಡ್‌ ಮಾಡಿ.

2

2

ವಾಟ್ಸಾಪ್‌ನಲ್ಲಿ ಸೆಂಡ್ ಮಾಡುವ ಟೆಕ್ಸ್ಟ್‌ ಅನ್ನು ವಿವಿಧ ಫಾರ್ಮ್ಯಾಟ್‌ಗಳಲ್ಲಿ ಸಿಂಬಲ್‌ ಅನ್ನು ಟೆಕ್ಸ್ಟ್‌ ಮೊದಲಿಗೆ ಮತ್ತು ನಂತರ ಟೈಪಿಸಿ ಕಳುಹಿಸಬಹುದಾಗಿದೆ. ಉದಾಹರಣೆಗೆ ಟೆಕ್ಸ್ಟ್‌ ಬೋಲ್ಡ್ ಆಗಬೇಕಾದಲ್ಲಿ *NATURE*, ಇಟಾಲಿಕ್‌ಗಾಗಿ -NATURE-, ಸ್ಟ್ರೈಕ್‌ಥ್ರೂಗಾಗಿ ~NATURE~ ಎಂದು ಟೈಪಿಸಬೇಕು.

3

3

ವಾಟ್ಸಾಪ್‌ನಲ್ಲಿ ನಿಮ್ಮ ಜೊತೆ ಹೆಚ್ಚು ಚಾಟ್‌ ಮಾಡಿದವರು ಯಾರು ಎಂದು ತಿಳಿಯಲು ಸೆಟ್ಟಿಂಗ್ಸ್‌>>ಅಕೌಂಟ್‌>>ಸ್ಟೋರೇಜ್‌ ಯುಸೇಜ್‌.
ಇಲ್ಲಿ ಹೆಚ್ಚು ಚಾಟ್‌ ಮಾಡಿದವರು ಯಾರು ಎಂದು ತಿಳಿಯುತ್ತದೆ.

4

4

ವಾಟ್ಸಾಪ್‌ ಎಷ್ಟು ಡೇಟಾ ಬಳಸಿಕೊಂಡಿದೆ ಎಂದು ತಿಳಿಯಲು ಸೆಟ್ಟಿಂಗ್ಸ್‌>>ಡಾಟಾ>>ನೆಟ್‌ವರ್ಕ್‌ ಯುಸೇಜ್‌.
ಡಾಟಾ ಬಳಕೆ ಕಡಿಮೆ ಬಳಕೆ ಆಗುವಂತೆ ವ್ಯವಸ್ಥೆ ಮಾಡಬಹುದು.

5

5

ಕೆಲವು ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಆಗಾಗ ಚಾಟಿಂಗ್‌ ನಿರಂತರವಾಗಿರುತ್ತೆ. ಅದು ಕಿರಿಕಿರಿಯು ಸಹ ನಿಮಗೆ. ಅಂತಹ ಸಂದರ್ಭದಲ್ಲಿ ಕೆಲವು ನಿರ್ಧಿಷ್ಟ ಸಮಯದ ವರೆಗೆ ಆ ಗ್ರೂಪ್‌ ಅನ್ನು ಮ್ಯೂಟ್‌ ಮಾಡಬಹುದು. ಚಾಟ್‌>>ಸೆಲೆಕ್ಟ್‌ ಗ್ರೂಪ್‌>>ಮ್ಯೂಟ್‌>>ಮ್ಯೂಟ್‌ ಅವಧಿ ಆಯ್ಕೆ ಮಾಡಿ.

6

6

ಕೆಲವೊಮ್ಮೆ ಹಲವರನ್ನು ವಾಟ್ಸಾಪ್‌ ಗ್ರೂಪ್‌ನಲ್ಲಿ ಆಡ್‌ ಮಾಡಲಾಗಿರುತ್ತದೆ. ಅಪರಿಚಿತ ಬಳಕೆದಾರರು ನಿಮ್ಮ ಬಗ್ಗೆ, ನಿಮ್ಮ ಚಾಟ್‌ ಅನ್ನು ಓದದಂತೆ, ಪ್ರೊಫೈಲ್‌ ಪಿಕ್‌ ನೋಡದಂತೆ ನಿಯಂತ್ರಣ ಹೊಂದಲು ಸೆಟ್ಟಿಂಗ್ಸ್‌>>ಅಕೌಂಟ್ಸ್‌>>ಪ್ರೈವೆಸಿ(privacy) ಕ್ಲಿಕ್ಕಿಸಿ ಅಲ್ಲಿ ಪ್ರೊಫೈಲ್‌, ಫೋಟೋ, ಕಾಂಟ್ಯಾಕ್ಟ್‌ ಅನ್ನು ಕೇವಲ 'my contacts' ಎಂದು ಆಯ್ಕೆ ಮಾಡಿ. ಇದರಿಂದ ನಿಮ್ಮ ಫೋನ್‌ಬುಕ್‌ನಲ್ಲಿ ಸೇವ್‌ ಆಗಿರುವ ಕಾಂಟ್ಯಾಕ್ಟ್‌ಗಳು ಮಾತ್ರ ನೋಡಲು ಸಾಧ್ಯವಾಗುತ್ತದೆ. ಅದು ಕೇವಲ ಆನ್‌ಲೈನ್‌ನಲ್ಲಿ ಇದ್ದಾಗ ಮಾತ್ರ ಸಾಧ್ಯವಾಗುತ್ತದೆ.

7

7

ಗೂಗಲ್‌ ಡ್ರೈವ್‌ನಿಂದ ನೇರವಾಗಿ ವಾಟ್ಸಾಪ್‌ ಚಾಟ್‌ಗೆ ಡಾಕುಮೆಂಟ್‌ ಶೇರ್‌ ಮಾಡಬಹುದು. ಶೇರ್‌ ಡಾಕುಮೆಂಟ್ ಆಯ್ಕೆ ಮಾಡಿ >> ನಂತರ ಎಲ್ಲಿಂದ ಡಾಕುಮೆಂಟ್ ಶೇರ್‌ ಮಾಡಬೇಕು ಎಂಬುದನ್ನು ಸೆಲೆಕ್ಟ್‌ ಮಾಡಬೇಕಾಗುತ್ತದೆ. ಇಲ್ಲಿ ಗೂಗಲ್‌ ಡ್ರೈವ್‌ನಿಂದಲೂ ಸಹ ಶೇರ್‌ ಮಾಡಬಹುದು.

8

8

ಮೆಸೇಜ್‌ ಅನ್ನು ಸ್ವೀಕರಿಸಿದ ನಂತರ ಅದನ್ನು ಓಪನ್‌ ಮಾಡದೆ, ಹೋಮ್‌ ಸ್ಕ್ರೀನ್‌ನಲ್ಲೂ ಸಹ ಡಿಸ್‌ಮಿಸ್‌ ಮಾಡದೆ ಮೊಬೈಲ್‌ನಲ್ಲಿ ಏರ್‌ಪ್ಲೇನ್‌ ಮೋಡ್‌ ಆನ್‌ ಮಾಡಿ ನಂತರ ಓದಿರಿ.

9

9

ಸೆಟ್ಟಿಂಗ್‌>>ಚಾಟ್ಸ್‌>>ಟರ್ನ್‌ ಆಫ್‌ ಸೇವ್‌ ಇನ್‌ಕಮಿಂಗ್ ಮೀಡಿಯಾ.

10

10

ಯಾವುದಾದರೂ ಕಾರ್ಯಕ್ರಮವನ್ನು ದಿನಾಂಕ ಸಹಿತ ನೆನಪು ಮಾಡುವಂತೆ ವ್ಯವಸ್ಥೆಗೊಳಿಸಲು ವಾಟ್ಸಾಪ್‌ನಲ್ಲಿ ಬಂದ ವಾರ ಮತ್ತು ದಿನಾಂಕ ಸಹಿತ ಇರುವ ಟೆಕ್ಸ್ಟ್‌ ಅನ್ನು ಕ್ಯಾಲೆಂಡರ್‌ಗೆ ಹೈಪರ್‌ಲಿಂಕ್‌ ಮಾಡಿ. ಈವೆಂಟ್‌ ಕ್ರಿಯೇಟ್‌ ಮಾಡಿ. ಚಿತ್ರ ನೋಡಿ.

11

11

ಇದು ಆಂಡ್ರಾಯ್ಡ್‌ ಫೋನ್ ಇದ್ದವರಿಗೆ ಮಾತ್ರ ಸಾಧ್ಯ. ಫೋನ್‌ ಸ್ಕ್ರೀನ್‌ನಲ್ಲಿ ನೀವು ವಯಕ್ತಿಕವಾಗಿ ಚಾಟ್ ಮಾಡುವವರ ಪ್ರತ್ಯೇಕ ಐಕಾನ್ ಅನ್ನು ಅವರ ಫೋಟೋ ಸಹಿತ ಶಾರ್ಟ್‌ಕಟ್‌ ಮಾಡಿಕೊಳ್ಳಬಹುದು. ವಾಟ್ಸಾಪ್‌ ಓಪನ್ ಮಾಡದೆ ಅವರಿಗೆ ಮಾತ್ರ ರೀಪ್ಲೇ ಮಾಡಬಹುದು. ಸೆಟ್ಟಿಂಗ್ಸ್‌>>ನೋಟಿಫೀಕೇಶನ್ಸ್‌>>ಛೂಸ್‌ ಅಲ್ವೇಸ್‌ ಶೋ ಪಾಪಪ್‌. ಈ ರೀತಿ ಆಯ್ಕೆಯಿಂದ ಲಾಕ್‌ ಸ್ಕ್ರೀನ್‌ನಿಂದಲೇ ರೀಪ್ಲೇ ಮಾಡಬಹುದು.

12

12

ಕಂಪ್ಯೂಟರ್‌ನಲ್ಲೇ ವಾಟ್ಸಾಪ್‌ ಮೆಸೇಜ್‌ ಕಳುಹಿಸಬಹುದು ಮತ್ತು ಸ್ವೀಕರಿಸಬಹುದು. ಕಂಪ್ಯೂಟರ್‌ನಲ್ಲಿ ವಾಟ್ಸಾಫ್‌ ಬಳಸಲು web.whatsapp.com ಎಂದು ಕಂಪ್ಯೂಟರ್‌ ಬ್ರೌಸರ್‌ನಲ್ಲಿ ಟೈಪಿಸಿ ಓಪನ್‌ ಮಾಡಿ. ನಂತರ ಫೋನ್‌ನಲ್ಲಿನ ವಾಟ್ಸಾಪ್‌ ಓಪನ್‌ ಮಾಡಿ ಸೆಟ್ಟಿಂಗ್ಸ್‌>>ವಾಟ್ಸಾಪ್‌ ವೆಬ್‌ ಆಯ್ಕೆ ಮಾಡಿ. ನಂತರ QR ಕೋಡ್‌ ಸ್ಕ್ಯಾನ್‌ ಮಾಡಿ.
ಖಾಯಂಆಗಿ ವಾಟ್ಸಾಪ್‌ ಅನ್ನು ಕಂಪ್ಯೂಟರ್‌ನಲ್ಲಿ ಬಳಸಲು ವಾಟ್ಸಾಪ್‌ ಡೆಸ್ಕಟಾಪ್‌ ಅಪ್ಲಿಕೇಶನ್‌ ಅನ್ನು ಸಹ ಡೌನ್‌ಲೋಡ್‌ ಮಾಡಿಕೊಳ್ಳಿ.

13

13

ಕಂಪ್ಯೂಟರ್‌ ಮತ್ತು ಫೋನ್‌ ನಡುವೆ ಫೈಲ್‌ ವರ್ಗಾವಣೆ ಮಾಡಲು ಸೆಲ್ಫ್‌ ಮೆಸೇಜ್‌ ಮಾಡಿಕೊಳ್ಳಬಹುದು. ಉದಾಹರಣೆಗೆ ನಿಮ್ಮನ್ನು ಸೇರಿದಂತೆ ಇತರೆ ಒಬ್ಬ ಸ್ನೇಹಿತನನ್ನು ಸೇರಿಸಿ ಗ್ರೂಪ್‌ ಕ್ರಿಯೇಟ್ ಮಾಡಿ. ನಂತರ ಆತನನ್ನು ರಿಮೂವ್‌ ಮಾಡಿ. ಆ ಗ್ರೂಪ್‌ಗೆ ಫೈಲ್‌ ಸೆಂಡ್‌ ಮಾಡುವುದರಿಂದ ನಿಮಗೆ ನೀವೇ ಫೈಲ್‌ ಶೇರಿಂಗ್‌ ಮಾಡಿಕೊಳ್ಳಬಹುದು.

14

14

ವಾಟ್ಸಾಪ್‌ ಐಕಾನ್‌ಗಳಲ್ಲಿ ಕೆಂಪು ಹೃದಯದ ಎಮೋಜಿ ಸೆಂಡ್‌ ಮಾಡಿದರೆ ಅದು ಬೃಹತ್‌ ದೊಡ್ಡ ಎಮೋಜಿ ಆಗಿ ಬೀಟಿಂಗ್‌ ಸಹ ಆಗುತ್ತದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಆಂಟಿವೈರಸ್‌ ಇಲ್ಲದೇ ಕಂಪ್ಯೂಟರ್‌ನಲ್ಲಿ ವೈರಸ್‌ ರಿಮೂವ್‌ ಹೇಗೆ?ಆಂಟಿವೈರಸ್‌ ಇಲ್ಲದೇ ಕಂಪ್ಯೂಟರ್‌ನಲ್ಲಿ ವೈರಸ್‌ ರಿಮೂವ್‌ ಹೇಗೆ?

ಆಂಡ್ರಾಯ್ಡ್‌ ಬಳಕೆದಾರರಿಗಾಗಿ ಅತ್ಯುತ್ತಮ ಜನರಲ್‌ ನಾಲೆಡ್ಜ್‌ ಆಪ್‌ಗಳು ಆಂಡ್ರಾಯ್ಡ್‌ ಬಳಕೆದಾರರಿಗಾಗಿ ಅತ್ಯುತ್ತಮ ಜನರಲ್‌ ನಾಲೆಡ್ಜ್‌ ಆಪ್‌ಗಳು

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
15 secret WhatsApp features that everyone should know about. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X