Home
Apps

ಜಿಯೋ ಹಾದಿ ಹಿಡಿದ ಐಡಿಯಾ: ಡಿಜಿಟಲ್ ಐಡಿಯಾ ಆಪ್ ಬಿಡುಗಡೆ

ಜಿಯೋ ಮಾದರಿಯಲ್ಲಿ ಡಿಜಿಟಲ್ ಐಡಿಯಾ ಆಪ್ ಮೂಲಕ ಐಡಿಯಾ ಸಹ ಮೂವಿಸ್, ಟಿವಿ, ಮೂಸ್ಸಿಕ್ ಮತ್ತು ಗೇಮಿಂಗ್ ಆಪ್ ಗಳು ಸೇರಿದಂತೆ ಹಲವು ಆಪ್‌ ಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

By Srinidhi

ಟೆಲಿಕಾಂ ವಲಯದಲ್ಲಿ ಹೊಸದೊಂದು ಅಲೆಯನ್ನು ಸೃಷ್ಟಿಸಿರುವ ಜಿಯೋ, ಕೇವಲ ಕರೆ ಮತ್ತು ಡೇಟಾ ಮಾತ್ರವಲ್ಲದೇ ಆಪ್‌ ವಿಚಾರದಲ್ಲಿಯೂ ಇತರೆ ಟೆಲಿಕಾಂ ಕಂಪನಿಗಳಿಗೂ ಮಾದರಿಯಾಗಿದ್ದು, ಜಿಯೋ ಹಾದಿಯನ್ನು ಅನುಸರಿಸಲು ಮುಂದಾಗಿರುವ ಐಡಿಯಾ ಸಹ ಜನವರಿ ತಿಂಗಳ ಕೊನೆಯಲ್ಲಿ 'ಡಿಜಿಟಲ್ ಐಡಿಯಾ' ಆಪ್ ಬಿಡುಗಡೆ ಮಾಡಲು ಮುಂದಾಗಿದೆ.

ಜಿಯೋ ಹಾದಿ ಹಿಡಿದ ಐಡಿಯಾ: ಡಿಜಿಟಲ್ ಐಡಿಯಾ ಆಪ್ ಬಿಡುಗಡೆ

ಓದಿರಿ: ಬೆಂಗಳೂರಲ್ಲಿ ಓಲಾ ಶೇರ್ ಮತ್ತು ಉಬರ್ ಪೂಲ್ ಬ್ಯಾನ್ ಆಗಲಿದೆ...!

ಜಿಯೋ ಮಾದರಿಯಲ್ಲಿ ಡಿಜಿಟಲ್ ಐಡಿಯಾ ಆಪ್ ಮೂಲಕ ಐಡಿಯಾ ಸಹ ಮೂವಿಸ್, ಟಿವಿ, ಮೂಸ್ಸಿಕ್ ಮತ್ತು ಗೇಮಿಂಗ್ ಆಪ್ ಗಳು ಸೇರಿದಂತೆ ಹಲವು ಆಪ್‌ ಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ರಿಲಯನ್ಸ್ ಜಿಯೋ ಈಗಾಗಲೇ ಈ ಹಾದಿಯಲ್ಲಿ ಯಶಸ್ಸು ಕಂಡಿದ್ದು, ಆದೆ ಮಾನದಂಡದ ಮೇಲೆ ಐಡಿಯಾ ಸಹ ಕಾರ್ಯ ನಿರ್ವಹಿಸಲಿದೆ.

ಈಗಾಗಲೇ ಜಿಯೋ ಜೊತೆಯಲ್ಲಿ ದರ ಸಮರಕ್ಕೆ ಇಳಿದಿರುವ ಐಡಿಯಾ, ತನ್ನ ಬಳಕೆದಾರರಿಗೆ ವಿವಿಧ ಡೇಡಾ ಆಫರ್‌ಗಳು ಮತ್ತು ಅನ್‌ಲಿಮಿಟೆಡ್ ಕಾಲಿಂಗ್ ಆಫರ್ ನೀಡುತ್ತಿದೆ, ಈಗ ಮತ್ತೊಂದು ಸುತ್ತಿನಲ್ಲಿ ಜಿಯೋ ವಿರುದ್ಧ ಸ್ಪರ್ಧೆಗೆ ನಿಂತಿರುವ ಐಡಿಯಾ ಆಪ್‌ಗಳನ್ನು ಬಿಡುಗಡೆ ಮಾಡಿ ಆ ಮೂಲಕ ಗ್ರಾಹಕರನ್ನು ಸೆಳೆಯುವ ಮನಸ್ಸು ಮಾಡುತ್ತಿದೆ.

ಜಿಯೋ ಹಾದಿ ಹಿಡಿದ ಐಡಿಯಾ: ಡಿಜಿಟಲ್ ಐಡಿಯಾ ಆಪ್ ಬಿಡುಗಡೆ

ಓದಿರಿ: ಬೆಂಗಳೂರಿಗೆ ಬರಲಿದೆ ಅತ್ಯಂತದ ವೇಗದ ಸಾರಿಗೆ ಹೈಪರ್‌ಲೂಪ್‌ ..!!!

ಈಗಾಗಲೇ ಮಾರುಕಟ್ಟೆಯಲ್ಲಿ ಏರ್‌ಟೆಲ್ ಹಾಗೂ ವೊಡೋಪೋನ್ ತಮ್ಮದೇ ಆಪ್‌ಗಳನ್ನು ಹೊಂದಿದ್ದು, ಏರ್‌ಟೆಲ್ ಮೈಯಕ್ ಮೂಸ್ಸಿಕ್ ಮತ್ತು ವೈಯಕ್ ಮೂವಿಸ್ ಆಪ್‌ಗಳನ್ನು ಬಿಡುಗಡೆ ಮಾಡಿದೆ. ಇದೇ ಮಾದರಿಯಲ್ಲಿ ವೊಡೋಪೋನ್ ಸಹ ವೊಡೋಪೋನ್ ಪ್ಲೇ ಆಪ್‌ ಅನ್ನು ಬಿಡುಗಡೆ ಮಾಡಿದೆ ಎನ್ನಲಾಗಿದೆ.

Best Mobiles in India

English summary
Idea Cellular has sent out media invites for a Monday, January 30 event where it will launch its ‘Digital Idea’ apps to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+