Home
ಸುದ್ದಿಜಾಲ

ಬೆಂಗಳೂರಲ್ಲಿ ಓಲಾ ಶೇರ್ ಮತ್ತು ಉಬರ್ ಪೂಲ್ ಬ್ಯಾನ್ ಆಗಲಿದೆ...!

ದೇಶದಲ್ಲಿ ಮಾರುಕಟ್ಟೆಯಲ್ಲಿ ಓಲಾಗೆ ಭಾರೀ ಬೇಡಿಕೆಯಿದ್ದು, ಎಲ್ಲಾ ಮಹಾನಗರಗಳಲ್ಲೂ ಸೇವೆಯನ್ನು ನೀಡುತ್ತಿದೆ.

By Srinidhi

ಸದ್ಯ ಕರ್ನಾಟಕದಲ್ಲಿ ಸದ್ದು ಮಾಡುತ್ತಿರುವ ಆಪ್ ಆಧಾರಿತ ಟ್ಯಾಕ್ಸಿ ಸೇವೆ ನೀಡುವ ಓಲಾ ಮತ್ತು ಉಬರ್ ಕಂಪನಿಗಳಿಗೆ ಮತ್ತೊಂದು ಸುತ್ತಿನ ಆಪತ್ತು ಎದುರಾಗಿದೆ ಎನ್ನಲಾಗಿದೆ. ಈ ಹಿಂದೆ ಗ್ರಾಹಕರಿಗೆ ಯಾವುದೇ ಅನಗತ್ಯ ಶುಲ್ಕಗಳನ್ನು ವಿಧಿಸುವಂತೆ ಇಲ್ಲ ಎಂದು ಸೂಚನೆ ನೀಡಿದ್ದ ರಾಜ್ಯ ಸರಕಾರ ಈ ಭಾರಿ ಓಲಾ ಶೇರ್ ಮತ್ತು ಉಬರ್ ಪೂಲ್ ಬ್ಯಾನ್ ಮಾಡುವ ಆಲೋಚನೆಯಲ್ಲಿದೆ ಎನ್ನಲಾಗಿದೆ.

ಬೆಂಗಳೂರಲ್ಲಿ ಓಲಾ ಶೇರ್ ಮತ್ತು ಉಬರ್ ಪೂಲ್ ಬ್ಯಾನ್ ಆಗಲಿದೆ...!

ಓದಿರಿ: ಜಿಯೋ ಕಾಲ್‌ಡ್ರಾಪ್‌ ಕಡಿಮೆಯಾಗಿದೆ: ಟ್ರಾಯ್‌

ದೇಶದಲ್ಲಿ ಮಾರುಕಟ್ಟೆಯಲ್ಲಿ ಓಲಾಗೆ ಭಾರೀ ಬೇಡಿಕೆಯಿದ್ದು, ಎಲ್ಲಾ ಮಹಾನಗರಗಳಲ್ಲೂ ಸೇವೆಯನ್ನು ನೀಡುತ್ತಿದೆ. ಇದೇ ಮಾದರಿಯಲ್ಲಿ ವಿದೇಶಗಳಲ್ಲಿ ತನ್ನ ಛಾಪು ಮೂಡಿಸಿರುವ ಉಬರ್ ಸಹ ಭಾರತದ ಪ್ರಮುಖ ನಗರಗಳಲ್ಲಿ ತನ್ನ ಸೇವೆಯನ್ನು ಉತ್ತಮಗೊಳಿಸುತ್ತಿದೆ. ಇದೇ ಉದ್ದೇಶದಿಂದ ಓಲಾ ಶೇರ್ ಸೇವೆಯನ್ನು ಮತ್ತು ಉಬರ್ ಪೂಲ್ ಸೇವೆಯನ್ನು ಆರಂಭಿಸಿದ್ದವು.

ಈ ಎರಡು ಕಂಪನಿಗಳಿಗೂ ಬೆಂಗಳೂರು ನಗರ ಅತೀ ದೊಡ್ಡ ಮಾರುಕಟ್ಟೆಯಾಗಿದ್ದು, ಹಾಗಾಗಿ ಅನೇಕ ಸೇವೆಗಳನ್ನು ಪರಿಚಯಿಸಿವೆ, ಆದರೆ ಕರ್ನಾಟಕ ರಾಜ್ಯ ಸಾರಿಗೆ ನಿಯಮದ ಪ್ರಕಾರ ಓಲಾ ಶೇರ್ ಮತ್ತು ಉಬರ್ ಪೂಲ್ ಸೇವೆಗಳು ನಿಯಮ ಬಾಹಿರವಾಗಿದೆ ಈ ಹಿನ್ನಲೆಯಲ್ಲಿ ಈ ಸೇವೆಯನ್ನು ಹಿಂಪಡೆಯುವಂತೆ ಎರಡು ಕಂಪನಿಗಳಿಗೂ ಈಗಾಗಲೇ ನೋಟಿಸ್ ನೀಡಲಾಗಿದೆ ಎನ್ನಲಾಗಿದೆ.

ಬೆಂಗಳೂರಲ್ಲಿ ಓಲಾ ಶೇರ್ ಮತ್ತು ಉಬರ್ ಪೂಲ್ ಬ್ಯಾನ್ ಆಗಲಿದೆ...!

ಓದಿರಿ: ನಿಮ್ಮ ಫೇಸ್‌ಬುಕ್ ಭದ್ರತೆಗೆ ಬಂದಿದೆ ಯುಎಸ್‌ಬಿ ಸೆಕ್ಯೂರಿಟಿ ಕೀ...!

ಈ ಸೇವೆಗಳು ಕಾಂಟ್ರೆಕ್ಟ್ ಕ್ಯಾರಿಯರ್ ಪರಿಮಿಟ್‌ನಲ್ಲಿ ನೆಡೆಯುತ್ತಿದ್ದು, ಇದರಲ್ಲಿ ಪ್ರಯಾಣಿಕರನ್ನು ಮಾರ್ಗ ಮಧ್ಯದಲ್ಲಿ ಇಳಿಸಿ ಮತ್ತು ಹತ್ತಿಸಿಕೊಳ್ಳುವುದನ್ನು ಮಾಡುತ್ತಿವೆ. ಆದರೆ ಈ ಪರ್ಮಿಟ್‌ನಲ್ಲಿ ಈ ರೀತಿ ಮಾಡುವುದು ನಿಯಮಬಾಹಿರವಾಗಿದೆ. ಈ ಹಿನ್ನಲೆಯಲ್ಲಿ ತಮ್ಮ ಟ್ಯಾಕ್ಸಿ ಸೇವೆಗಳ ಜೊತೆಯಲ್ಲಿ ನಡೆಸುತ್ತಿರುವ ಓಲಾ ಶೇರ್ ಮತ್ತು ಉಬರ್ ಪೂಲ್ ಅನ್ನು ನಿಲ್ಲಿಸಬೇಕಾಗಿದೆ.

Best Mobiles in India

English summary
According to the Karnataka transport laws, these services have contract carriage permits which do not allow them to pick-up or drop-off passengers enroute. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+