ಭಾರತ ಆಪ್‌ ಡೆವಲಪರ್‌ಗಳ ರಾಜಧಾನಿಯಾಗಲಿದೆ: ಯಾಹೂ ಫ್ಲಾರಿ

Written By:

ಸದ್ಯ ಭಾರತ ಡಿಜಿಟಲ್ ಲೋಕದ ಕಡೆಗೆ ಮುಖಮಾಡಿದೆ. ದೇಶದಲ್ಲಿ ಸ್ಮಾರ್ಟ್‌ಪೋನುಗಳ ಬಳಕೆ ವರ್ಷದಿಂದ ವರ್ಷಕ್ಕೆ ಏರುಗತಿಯಲ್ಲಿ ಸಾಗುತ್ತಿದ್ದು, ಆಪ್‌ಗಳನ್ನು ಬಳಸುವವರ ಸಂಖ್ಯೆ ಶೇ 43% ರಷ್ಟು ಏರಿಕೆಯಾಗಿದೆ. ಹೀಗಾಗಿ ಭಾರತೀಯ ಮಾರುಕಟ್ಟೆಯೂ ಆಪ್‌ ತಯಾರಕರಿಗೆ ಸ್ವರ್ಗವಾಗಲಿದೆ ಎಂದು ಯೂಹೂ ಓಡೆತದ ಫ್ಲಾರಿ ಅನಾಲಿಟಿಕ್ಸ್ ವರದಿಯೊಂದನ್ನು ನೀಡಿದೆ.

ಭಾರತ ಆಪ್‌ ಡೆವಲಪರ್‌ಗಳ ರಾಜಧಾನಿಯಾಗಲಿದೆ: ಯಾಹೂ ಫ್ಲಾರಿ

ಓದಿರಿ: ಜಿಯೋ ಪ್ರೈಮ್ ತಿಂಗಳ ರಿಜಾರ್ಜ್ 303 ರೂ. ಅಲ್ಲ, ಕೇವಲ 273 ರೂ....!!

ಯಾಹೂ ಓಡೆತನದ ಫ್ಲಾರಿ ಅನಾಲಿಟಿಕ್ಸ್ ನಡೆಸಿರುವ ಸಮೀಕ್ಷೆಯಂತೆ ಭಾರತ ಕೆಲವೇ ದಿನಗಳಲ್ಲಿ ಆಪ್‌ಗಳ ರಾಜಧಾನಿಯಾಗಲಿದ್ದು, ಮೊಬೈಲ್ ಆಪ್‌ಗಳ ತಯಾರಕರಿಗೆ ಭಾರತದಲ್ಲಿ ಹೊಸ ಹೊಸ ಪ್ರಯೋಗಕ್ಕೆ ಸಾಧ್ಯವಿದೆ. ಅಲ್ಲದೇ ಬಳಕೆದಾರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ ಎಂದನ್ನು ಫ್ಲಾರಿ ತನ್ನ ಅನಾಲಿಟಿಕ್ಸ್ ವರದಿಯ ಮೂಲಕ ಬಹಿರಂಗಪಡಿಸಿದೆ.

ಫ್ಲಾರಿ ವರದಿಯಲ್ಲಿ ಭಾರತದಲ್ಲಿ 5 ರಿಂದ 6.9 ಇಂಚಿನ ಸ್ಮಾರ್ಟ್‌ಪೋನುಗಳು ಹೆಚ್ಚಿನ ಸಂಖ್ಯೆಯಲ್ಲಿ ಬಳಕೆಯಾಗುತ್ತಿದ್ದು, ಇದನ್ನು ಪೋಬ್ಲೆಟ್ ಎಂದು ಕರೆದಿದ್ದು, ಇವುಗಳ ಸಂಖ್ಯೆ ಮಾರುಕಟ್ಟೆಯಲ್ಲಿ 61 % ಗಿಂತಲೂ ಅಧಿಕವಾಗಿದೆ ಎಂದು ತಿಳಿಸಿದೆ.

ಓದಿರಿ: ಸೆಲ್ಪಿ ಇತಿಹಾಸವನ್ನೇ ಬದಲಿಸಲಿರುವ ಓಪ್ಪೋ F3 ಪ್ಲಸ್ ಡುಯಲ್ ಸೆಲ್ಫಿ ಕ್ಯಾಮೆರಾ..!!

ಈ ಕುರಿತು ಮಾಹಿತಿ ನೀಡಿದ ಫ್ಲಾರಿ ನಿರ್ದೇಶಕ ಕ್ರಿಸ್ಟೋಫರ್, ಭಾರತದಲ್ಲಿ ಆಪ್‌ ಮಾರುಕಟ್ಟೆಯೂ ವಿಶ್ವದ ಎಲ್ಲಾ ಮಾರುಕಟ್ಟೆಯನ್ನು ಹಿಂದಿಕ್ಕಿ ಬೆಳೆಯುತ್ತಿದ್ದು, ಹಾಗಾಗಿ ಭಾರತವನ್ನು ಗುರಿಯಾಗಿರಿಸಿಕೊಂಡು ಆಪ್‌ಗಳ ತಯಾರಿಕೆ ಹೆಚ್ಚಾಗಬೇಕಿದೆ, ಇದಕ್ಕಾಗಿ ಆಪ್‌ ಡೆಲಪರ್‌ಗಳು ಭಾರತೀಯ ಮಾರುಕಟ್ಟೆಯ ಕುರಿತು ಅಧ್ಯಯನ ನಡೆಸುವುದು ಸೂಕ್ತ ಎಂದಿದ್ದಾರೆ.

ಇದಲ್ಲದೇ ಭಾರತದಲ್ಲಿ ಯಾವ ರೀತಿಯ ಆಪ್‌ಗಳು ಮತ್ತು ಯಾವ ವಿಭಾಗದ ಆಪ್‌ಗಳು ಇತ್ತೀಚಿನ ದಿನದಲ್ಲಿ ಹೆಚ್ಚು ಬಳಕೆಯಾಗುತ್ತಿವೆ ಎಂಬುದನ್ನು ತಿಳಿದುಕೊಳ್ಳಲು ಯೂಹೂ ಓಡೆತನದ ಫ್ಲಾರಿ, ಜಾಗತಿಕವಾಗಿ 940,000 ಆಪ್‌ಗಳು, 2.1 ಬಿಲಿಯನ್ ಪೋನುಗಳನ್ನು ಅಧ್ಯಯನಕ್ಕೆ ಗುರಿ ಪಡಿಸಿದ್ದು, ಅದೇ ಮಾದರಿಯಲ್ಲಿ ಭಾರತದಲ್ಲಿ ಲಭ್ಯವಿರುವ ಸುಮಾರು 58,000 ಆಪ್‌ಗಳು ಮತ್ತು 147 ಮಿಲಿಯನ್ ಫೋನುಗಳನ್ನು ತನ್ನ ಅಧ್ಯಯನಕ್ಕೆ ಬಳಕೆ ಮಾಡಿಕೊಂಡಿದೆ ಎನ್ನಲಾಗಿದೆ.

ಭಾರತ ಆಪ್‌ ಡೆವಲಪರ್‌ಗಳ ರಾಜಧಾನಿಯಾಗಲಿದೆ: ಯಾಹೂ ಫ್ಲಾರಿ

ಓದಿರಿ: ಹೇಗಿದೆ ಗೊತ್ತಾ 'ಆಂಡ್ರಾಯ್ಡ್ O'..?

ಫ್ಲಾರಿ ಹೇಳುವಂತೆ ಭಾರತದಲ್ಲಿ 2015ಕ್ಕೆ ಹೋಲಿಕೆ ಮಾಡಿದರೆ ಶೇ 92% ರಷ್ಟು ಬೆಳವಣಿಗೆ ಕಂಡುಬರುತ್ತಿದೆ. ಇದು ಜಾಗತೀಕವಾಗಿ ಭಾರತವನ್ನು ಗುರುತಿಸುವಂತೆ ಮಾಡುತ್ತಿದೆ. ಭಾರತದಲ್ಲಿ ಮೂಸ್ಸಿಕ್, ಮಿಡಿಯಾ ಮತ್ತು ಎಂಟರ್ಟೆನ್ ಮೆಂಟ್ ಆಪ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಅಭಿವೃದ್ಧಿ ಕಾಣುತ್ತಿದೆ. 2015ಕ್ಕೆ ಹೋಲಿಕೆ ಮಾಡಿದರೆ ಈ ಆಪ್‌ಗಳು ಶೇ. 188%ರಷ್ಟು ಅಭಿವೃದ್ಧಿಯನ್ನು ಕಂಡಿವೆ. ಇದಲ್ಲದೇ ಬಿಸನೆಸ್, ಫೈನನ್ಸ್ ಆಪ್‌ಗಳು ಹೆಚ್ಚು ಬಳಕೆಯಾಗುತ್ತಿವೆ ಎಂದು ತಿಳಿಸಿದೆ.

ಭಾರತ ಸೇರಿದಂತೆ ಏಪ್ಯಾ ರಾಷ್ಟ್ರಗಳಲ್ಲಿ ಸೋಶಿಯಲ್ ಆಪ್‌ ಗಳು ಮತ್ತು ಮೇಸೆಜಿಂಗ್ ಆಪ್‌ಗಳು ಜಾಗತಿಕ ಮಟ್ಟಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಬಳಕೆಯಾಗುತ್ತಿವೆ ಎಂದು ಫ್ಲಾರಿ ವರದಿಯೂ ತಿಳಿಸಿದೆ.

Read more about:
English summary
Flurry report shows indias app usage growing at 43 %. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot