ಹೇಗಿದೆ ಗೊತ್ತಾ 'ಆಂಡ್ರಾಯ್ಡ್ O'..?

ಗೂಗಲ್ ಈಗಾಗಲೇ ಆಂಡ್ರಾಯ್ಡ್ 8 'O' ಆವೃತ್ತಿಯನ್ನು ಅಭಿವೃದ್ದಿಪಡಿಸಲು ಮುಂದಾಗಿದೆ.

|

ಸದ್ಯ ಆಂಡ್ರಾಯ್ಡ್ 7 ನ್ಯಾಗಾದ ನಿರೀಕ್ಷೆಯಲ್ಲಿರುವ ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿ ಬಂದಿದೆ. ಗೂಗಲ್ ಈಗಾಗಲೇ ಆಂಡ್ರಾಯ್ಡ್ 8 'O' ಆವೃತ್ತಿಯನ್ನು ಅಭಿವೃದ್ದಿಪಡಿಸಲು ಮುಂದಾಗಿದ್ದು, ಆಂಡ್ರಾಯ್ಡ್ 'O' ಡೆವಲಪರ್ ಪ್ರಿವಿವ್ಯೂ ಅನ್ನು ಬಿಡುಗಡೆ ಮಾಡಿದೆ.

ಹೇಗಿದೆ ಗೊತ್ತಾ 'ಆಂಡ್ರಾಯ್ಡ್ O' ..?

ಓದಿರಿ: ಜಿಯೋ ಪ್ರೈಮ್ ತಿಂಗಳ ರಿಜಾರ್ಜ್ 303 ರೂ. ಅಲ್ಲ, ಕೇವಲ 273 ರೂ....!!

ಇದಲ್ಲದೇ 'O' ಎಂದರೆ ಏನು? ಎಂಬುದನ್ನು ಗೂಗಲ್ ಇದುವರೆಗೂ ತಿಳಿಸಿಲ್ಲ. ಇದು ಓರಿಯೋ ಆದರು ಆಗಿರಬಹುದು ಇಲ್ಲವೇ ಈ ಹಿಂದಿನಂತೆ 'O' ನಿಂದ ಶುರುವಾಗುವಂತಹ ಯಾವುದಾದರು ಸಿಹಿ ತಿಂಡಿಯ ಹೆಸರಾಗಿರಬಹುದು ಎನ್ನಲಾಗಿದೆ. ಅಲ್ಲದೇ ಗೂಗಲ್ ಹೊಸ ಹೆಸರನ್ನು ಇಡಲು ಸಲಹೆಗಳನ್ನು ಸಹ ಗ್ರಾಹಕರು ನೀಡಬಹುದಾಗಿದೆ.

ಆಂಡ್ರಾಯ್ಡ್ 'O' ಡೆವಲಪರ್ ಪ್ರಿವಿವ್ಯೂ ಸದ್ಯ ಗೂಗಲ್ ಪೋನುಗಳಿಗೆ ಮಾತ್ರ ಲಭ್ಯವಿದೆ ಎನ್ನಲಾಗಿದ್ದು, ಗೂಗಲ್ ನೆಕ್ಸಸ್‌ 5X, 6P ಮತ್ತು ಪ್ಲೇಯರ್, ಜೊತೆಗೆ ಗೂಗಲ್ ಪಿಕ್ಸಲ್, ಪಿಕ್ಸಲ್ C, ಮತ್ತು ಪಿಕ್ಸಲ್ XL ಪೋನುಗಳಿಗೆ ಮಾತ್ರ ದೊರೆಯುತ್ತಿದೆ.

ಆಂಡ್ರಾಯ್ಡ್ 'O'ನಲ್ಲಿ ಗೂಗಲ್ ಸಾಕಷ್ಟು ಬದಾಲವಣೆಯನ್ನು ಮಾಡಿದ್ದು, ನೋಟಿಫಿಕೇಷನ್ ಚಾನಲ್ಸ್ ಎಂಬ ಹೊಸ ಫಿಚರ್ ನೀಡಿದ್ದು, ನೋಟಿಫಿಕೇಷನ್ ಮೇಲೆ ಸಾಕಷ್ಟು ನಿಯಂತ್ರವನ್ನು ಹೊಂದಲು ಇದು ಸಹಾಯಕಾರಿಯಾಗಿದೆ.

ಹೇಗಿದೆ ಗೊತ್ತಾ 'ಆಂಡ್ರಾಯ್ಡ್ O' ..?

ಓದಿರಿ: ಕಂಪ್ಯೂಟರ್ ವೇಗ ಹೆಚ್ಚಿಸಲು ಪೆನ್‌ಡ್ರೈವ್ ಅನ್ನೇ RAM ಆಗಿ ಬಳಸುವುದು ಹೇಗೆ..?

ಇದಲ್ಲದೇ ಸ್ಮಾರ್ಟ್‌ಪೋನಿನ ಬ್ಯಾಟರಿ ಉಳಿಸುವ ಸಲುವಾಗಿಯೂ ಆಂಡ್ರಾಯ್ಡ್ 'O' ಸಾಕಷ್ಟು ಬದಾಲವಣೆಯನ್ನು ಗೂಗಲ್ ಮಾಡಲು ಮುಂದಾಗಿದೆ. ಬ್ಯಾಕ್ ಗ್ರೌಂಡಿನಲ್ಲಿರುವ ಆಪ್‌ಗಳು ರನ್ ಆಗುತ್ತಿದ್ದರು ಹೆಚ್ಚಿನ ಬ್ಯಾಟರಿಯನ್ನು ಬಳಸದಂತೆ ಮಾಡಿದೆ.

ಆಪಲ್ ISO ಗಳಲ್ಲಿ ಇರುವಂತೆ ಆಯ್ಕೆಯನ್ನು ಹೆಚ್ಚಾಗಿ ಗೂಗಲ್ ಈ ಬಾರಿ ಕಾಪಿ ಮಾಡಿದೆ ಎನ್ನುವ ಮಾತು ಕೇಳಿಬರುತ್ತಿದ್ದರೂ, ತನ್ನ ಗ್ರಾಹಕರಿಗೆ ಉತ್ತಮ ಸೌಲಭ್ಯವನ್ನು ನೀಡಲು ಗೂಗಲ್ ಮುಂದಾಗಿದೆ.

Best Mobiles in India

Read more about:
English summary
While most Android users in the market are still waiting to upgrade their phones to Android 7 Nougat, Google has already released a developer preview of Android O. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X