ತಿಳಿಯದೂರಿಗೆ ಪ್ರವಾಸಕ್ಕೆ ಹೋದರೆ ಬೇಕೆಬೇಕು ''ಇನ್‌ಸ್ಟಾ ಗೈಡ್'' ಆಪ್!!
ಯಾರೂ ಹೇಳಿದ ಅಥವಾ ನೀವು ಕೇಳಿ ತಿಳಿದುಕೊಂಡಿರುವ ದೂರದೂರಿಗೆ ಪ್ರವಾಸಕ್ಕೆ ತೆರಳಿ ಅಲ್ಲಿನ ಪ್ರಕೃತಿ, ದೇವಸ್ಥಾನ ಮತ್ತು ಅಲ್ಲಿರುವ ವಿಶೇಷ ಸ್ಥಳಗಳಿಗೆ ಭೇಟಿ ನೀಡುವುದೇ ಆನಂದ ಎನ್ನಬಹುದು. ಆದರೆ, ನಮಗೆ ತಿಳಿಯದ ಜಾಗಕ್ಕೆ ನಾವು ಗೂಗಲ್ ಮ್ಯಾಪ್ ನೋಡಿ ಪ್ರವಾಸಕ್ಕೆ ಹೋದರೆ ಅಲ್ಲಿ ಆಗಬಹುದಾದ ಅನಾಹುತಗಳು ಕೂಡ ಹೆಚ್ಚಾಗಿಯೇ ಇರುತ್ತವೆ.
ಯಾರನ್ನೋ ಆ ಸ್ಥಳದ ಬಗ್ಗೆ ಕೇಳಿ ತಿಳಿದುಕೊಂಡು ಅಲ್ಲಿಗೆ ಹೋಗುವ ನಮಗೆ ಅಲ್ಲಿ ಏನು ನೋಡಬೇಕು, ಅಲ್ಲಿನ ಸ್ಥಳ ಏನೆಲ್ಲಾ ವಿಶೇಷತೆಗಳನ್ನು ಸರಿಯಾಗಿ ತಿಳಿದಿರುವುದಿಲ್ಲ. ಇನ್ನು ಇಲ್ಲಿಗೆ ಬಂದಿರುವವರು ಹೊಸಬರು ಎಂದು ತಿಳಿದ ತಕ್ಷಣವೇ ಕೆಲವರು ನಾವು ಗೈಡ್‌ಗಳು ಎಂದು ಪರಿಚಯಿಸಿಕೊಂಡು ಮೋಸ ಮಾಡುವವರ ಸಂಖ್ಯೆಯೇ ಹೆಚ್ಚಾಗಿರುತ್ತದೆ.

ಹಾಗಾಗಿ, ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಯು ಟೂರಿಸ್ಟ್ ಗೈಡ್‌ಗಳ ಮಾಹಿತಿಗಾಗಿ ನೂತನ ಇನ್‌ಸ್ಟಾ ಗೈಡ್ ಆಪ್ ಅಭಿವೃದ್ಧಿಪಡಿಸಿದೆ. ನೀವು ಯಾವುದೇ ಸ್ಥಳಕ್ಕೆ ತೆರಳಿದರೂ ಅಲ್ಲಿ ನಿಮಗೆ ಬಹುಬೇಗ ಮಾಹಿತಿಯನ್ನು ನೀಡುವಂತಹ ಗೈಡ್‌ಗಳ ಅನುಕೂಲ ಕಲ್ಪಿಸುವ ಸಲುವಾಗಿ ಇನ್‌ಸ್ಟಾ ಗೈಡ್ ಆಪ್ ಅನ್ನು ಅಭಿವೃದ್ಧಿಪಡಿಸಿಸಲಾಗಿದೆ.
ಸರ್ಕಾರದಿಂದ ಮಾನ್ಯತೆ ಪಡೆದ ಟೂರಿಸ್ಟ್ ಗೈಡ್‌ಗಳ ಮಾಹಿತಿ ಮತ್ತು ಅವರ ಸಂಪರ್ಕ ಸಂಖ್ಯೆಯನ್ನು ಇನ್‌ಸ್ಟಾ ಗೈಡ್ ಆಪ್‌ನಲ್ಲಿ ನಮೂದಿಸಲಾಗಿದೆ. ಈ ಆಪ್ ಮೂಲಕ ಪ್ರವಾಸಿಗರು ಯಾವ ಭಾಷೆಯ ಗೈಡ್‌ಗಳು ಯಾವ ಸ್ಥಳದಲ್ಲಿ, ಯಾವ ಸಮಯಕ್ಕೆ ಸಿಗುತ್ತಾರೆ ಎಂಬೆಲ್ಲಾ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಪಡೆಯಬಹುದಾಗಿದೆ.

ಈ ಆಪ್ ಮೂಲಕ ಗೈಡ್‌ಗಳ ಸಂಪರ್ಕ ಪಡೆದು ಆರಾಮವಾಗಿ ದೇಶ ಸುತ್ತಬಹುದು. ಇದರಿಂದ ನಕಲಿ ಗೈಡ್‌ಗಳಿಂದ ಪ್ರವಾಸಿಗರು ಮೋಸ ಹೋಗುವುದು ತಪ್ಪುತ್ತದೆ ಮತ್ತು ಪ್ರವಾಸಿಗರಿಗೂ ಭದ್ರತೆ ದೊರೆಯುತ್ತದೆ. ಐಒಎಸ್ ಮತ್ತು ಆಂಡ್ರಾಯ್ಡ್ ಮಾದರಿಯಲ್ಲಿ ಲಭ್ಯವಿರುವ ಈ ಆಪ್ ಅನ್ನು ಪ್ರವಾಸಿಗರು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಓದಿರಿ: ಕೇವಲ 349 ರೂ.ಗೆ ಏರ್‌ಟೆಲ್ ಪ್ರಕಟಿಸಿದೆ ಪ್ರತಿದಿನ 3GB ಡೇಟಾ ಆಫರ್!!
ಓದಿರಿ: 15 ಸಾವಿರ ರೂ.ಗಳಲ್ಲಿ ಖರೀದಿಸಿ ಈ ಟಾಪ್ 5 'ಡ್ಯುಯಲ್ ಕ್ಯಾಮೆರಾ' ಸ್ಮಾರ್ಟ್‌ಫೋನ್ಸ್!!


Click it and Unblock the Notifications








