ಭಾರತದಲ್ಲಿ ಟ್ರೆಂಡ್ ಸೃಷ್ಟಿಸಿರುವ ಟಾಪ್ 5 'ಡ್ಯುಯಲ್ ಕ್ಯಾಮೆರಾ' ಬಜೆಟ್ ಸ್ಮಾರ್ಟ್‌ಫೋನ್ಸ್ ಲೀಸ್ಟ್ ಇಲ್ಲಿದೆ!!

ಒಂದು ಸ್ಮಾರ್ಟ್‌ಫೋನ್ ಖರೀದಿಸಿಬೇಕು ಎಂದರೆ ನೋಡಬೇಕಾದ ಅಂಶಗಳು ನೂರಾರಿವೆ. ಅದರಲ್ಲಿ ಸ್ಮಾರ್ಟ್‌ಫೋನಿನ ಪ್ರಸ್ತುತ ಟ್ರೆಂಡ್ ಯಾವುದು ಎಂಬುದು ಕೂಡ ಬಹುಮುಖ್ಯ. ಪ್ರಸ್ತುತ ಹೆಚ್ಚು ಮಾರಾಟವಾಗುತ್ತಿರುವ ಸ್ಮಾರ್ಟ್‌ಪೋನ್ ಯಾವುದು?

|

ಒಂದು ಸ್ಮಾರ್ಟ್‌ಫೋನ್ ಖರೀದಿಸಿಬೇಕು ಎಂದರೆ ನೋಡಬೇಕಾದ ಅಂಶಗಳು ನೂರಾರಿವೆ. ಅದರಲ್ಲಿ ಸ್ಮಾರ್ಟ್‌ಫೋನಿನ ಪ್ರಸ್ತುತ ಟ್ರೆಂಡ್ ಯಾವುದು ಎಂಬುದು ಕೂಡ ಬಹುಮುಖ್ಯ. ಪ್ರಸ್ತುತ ಹೆಚ್ಚು ಮಾರಾಟವಾಗುತ್ತಿರುವ ಸ್ಮಾರ್ಟ್‌ಪೋನ್ ಯಾವುದು? ಆ ಸ್ಮಾರ್ಟ್‌ಫೋನ್ ಹೊಂದಿರುವ ಫೀಚರ್ಸ್ ಯಾವುವು? ಆ ಫೋನಿನ ವಿಶೇಷತೆಗಳೇನು ಎಂಬುದೆಲ್ಲವೂ ಸ್ಮಾರ್ಟ್‌ಪೋನ್ ಖರೀದಿಗೆ ಬಹುಮುಖ್ಯ ಅಂಶಗಳಾಗುತ್ತವೆ.

ಕೆಲವೇ ದಿನಗಳ ಹಿಂದೆ ನಾವು ಖರೀದಿಸಬೇಕು ಎಂದುಕೊಂಡ ಒಂದು ಸ್ಮಾರ್ಟ್‌ಫೊನ್ ಫೀಚರ್ಸ್ ನಾವು ಖರೀದಿಸುವ ವೇಳೆಗೆ ಹಳೆಯ ಫೀಚರ್ಸ್ ಆಗಿರುತ್ತವೆರುತ್ತದೆ.! ಪ್ರತಿದಿನವೂ ಒಂದೊಂದು ಸ್ಮಾರ್ಟ್‌ಪೋನ್ ಬಿಡುಗಡೆಯಾಗುತ್ತಿರುವುದರಿಂದ ಒಂದಕ್ಕಿಂತ ಮತ್ತೊಂದು ಸ್ಮಾರ್ಟ್‌ಫೋನ್ ಹೆಚ್ಚು ಫೀಚರ್ಸ್ ಹೊತ್ತು ಮಾರುಕಟ್ಟೆಗೆ ಎಂಟ್ರಿ ನೀಡುವುದು ಮೊಬೈಲ್ ಮಾರುಕಟ್ಟೆಯ ಸಾಮಾನ್ಯ ಲಕ್ಷಣವಾಗಿದೆ.!

ಭಾರತದಲ್ಲಿ ಟ್ರೆಂಡ್ ಸೃಷ್ಟಿಸಿರುವ ಟಾಪ್ 5 'ಡ್ಯುಯಲ್ ಕ್ಯಾಮೆರಾ' ಬಜೆಟ್ ಫೋನ್ಸ್

ಕೇವಲ 3 ತಿಂಗಳ ಹಿಂದಿನವರೆಗೂ ಟ್ರೆಂಡ್‌ನಲ್ಲಿದ್ದ ರೆಡ್‌ ಮಿ ನೋಟ್ 4, ಮೊಟೊ ಜಿ5 , ಗ್ಯಾಲಾಕ್ಸಿ ಜೆ7 ಮತ್ತು ಹಾನರ್ 6ಎಕ್ಸ್‌ನಂತಹ ಸ್ಮಾರ್ಟ್‌ಫೋನ್‌ಗಳು ಬೆಲೆ ಕಳೆದುಕೊಂಡರೂ ಪ್ರಸ್ತುತ ಅವುಗಳನ್ನು ಖರೀದಿಸುವವರು ಯಾರು ಇಲ್ಲ.! ಹಾಗಾಗಿ, ಪ್ರಸ್ತುತ ಟ್ರೆಂಡ್ ಸೃಷ್ಟಿಸಿರುವ 20ಸಾವಿರ ರೂ. ಒಳಗಿನ 5 ಸ್ಮಾರ್ಟ್‌ಫೋನ್‌ಗಳನ್ನು ನಾವಿಲ್ಲಿ ಪಟ್ಟಿ ಮಾಡಿದ್ದೇವೆ. ವಿಶೇಷವೆಂದರೆ ಈ ಎಲ್ಲಾ ಸ್ಮಾರ್ಟ್‌ಪೋನ್‌ಗಳು ಡ್ಯುಯಲ್ ರಿಯರ್ ಕ್ಯಾಮೆರಾಗಳನ್ನು ಹೊಂದಿವೆ.

ಶಿಯೋಮಿ ರೆಡ್‌ಮಿ ನೋಟ್ 5 ಪ್ರೊ!!

ಶಿಯೋಮಿ ರೆಡ್‌ಮಿ ನೋಟ್ 5 ಪ್ರೊ!!

ಇತ್ತೀಚಿಗಷ್ಟೆ ಶಿಯೋಮಿ ಕಂಪೆನಿ ಬಿಡುಗಡೆ ಮಾಡಿದ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿರುವ ಬಜೆಟ್ ಸ್ಮಾರ್ಟ್‌ಫೋನ್ ಶಿಯೋಮಿ ರೆಡ್‌ಮಿ ನೋಟ್ 5 ಪ್ರೊ ಭಾರತದಲ್ಲಿ ಈಗ ಟ್ರೆಂಡ್ ಸೃಷ್ಟಿಸಿರುವ ನಂ.1 ಸ್ಮಾರ್ಟ್‌ಫೋನ್.! 18: 9 ಪ್ರದರ್ಶನ, ಡ್ಯುಯಲ್ ರಿಯರ್ ಕ್ಯಾಮೆರಾ, ಕ್ವಾಲ್ಕಮ್ ಸ್ನಾಪ್ಡ್ರಾಗನ್ 636 ಪ್ರೊಸೆಸರ್ , 6GB RAM ಆಯ್ಕೆಯನ್ನು 64GB ಆಂತರಿಕ ಸ್ಟೋರೇಜ್‌ನಂತಹ ಫೀಚರ್ಸ್ ಹೊತ್ತಿರುವ ಈ ಸ್ಮಾರ್ಟ್‌ಫೋನಿನ ಬೆಲೆ ಲ್ಲಿ 6 ಜಿಬಿ ರಾಮ್ + 64 ಜಿಬಿ ಶೇಖರಣಾ ಆಯ್ಕೆಗೆ 16,999 ರೂ.ಗಳಾಗಿವೆ.

Xiaomi Redmi Note 5 Pro ಮಾರಾಟದ ದಿನಾಂಕ ಫಿಕ್ಸ್!! ಫುಲ್ ಡೀಟೆಲ್ಸ್!!
ಹಾನರ್ 9 ಲೈಟ್!!

ಹಾನರ್ 9 ಲೈಟ್!!

18:9 ಆಕಾರ ಅನುಪಾತದ 2160x1080 ಪಿಕ್ಸೆಲ್ ರೆಸೆಲ್ಯೂಷನ್ ಹೊಂದಿರುವ 5.65-ಇಂಚಿನ ಫುಲ್ ಹೆಚ್‌ಡಿ + ಫುಲ್ ವೀವ್ ಡಿಸ್‌ಪ್ಲೇ, ಹಿಸಿಲಿಕಾನ್ ಕಿರಿನ್ 659 ಆಕ್ಟಾ-ಕೋರ್ ಪ್ರೊಸೆಸರ್, ಆಂಡ್ರಾಯ್ಡ್ ಓರಿಯೊ 8.0 , 2.36 GHz ಮತ್ತು 1.7GHz ಶಕ್ತಿಯ ನಾಲ್ಕು ಕೋರ್ ಕ್ಲಾಕ್ ಮತ್ತು ಹಿಂಬಾಗದಲ್ಲಿ ಡ್ಯುಯಲ್ ಕ್ಯಾಮೆರಾ ಹೊಂದಿರುವ ಹಾನರ್ 9 ಲೈಟ್ ಸ್ಮಾರ್ಟ್‌ಪೋನ್ ಭಾರತದಲ್ಲಿ ಟ್ರೆಂಡ್ ಸೃಷ್ಟಿಸಿರುವ ಎರಡನೇ ಸ್ಮಾರ್ಟ್‌ಫೋನ್ ಆಗಿದೆ. 4GB ಮತ್ತು 64 ಜಿಬಿ ಶೇಖರಣಾ ರೂಪಾಂತರದ ಈ ಸ್ಮಾರ್ಟ್‌ಫೋನ್ ಬೆಲೆ 14,999 ರೂ.ಗಳಾಗಿವೆ.

ಮೋಟೋ G5 ಎಸ್ ಪ್ಲಸ್!!

ಮೋಟೋ G5 ಎಸ್ ಪ್ಲಸ್!!

ಮೋಟೋ G5 ಸ್ಮಾರ್ಟ್ಪೋನಿನ ಮುಂದಿನ ಸರಣಿ ಸ್ಮಾರ್ಟ್‌ಫೋನ್ ಮೋಟೋ G5 ಎಸ್ ಪ್ಲಸ್ ಭಾರತದಲ್ಲಿ ಹೆಚ್ಚು ಟ್ರೆಂಡ್ ಸೃಷ್ಟಿಸಿರುವ ಮೂನೇ ಬಜೆಟ್ ಸ್ಮಾರ್ಟ್‌ಪೋನ್ ಆಗಿದೆ. 13 + 13 ಎಂಪಿ ಡ್ಯುಯಲ್ ಕ್ಯಾಮೆರಾಗಳು, 5.5 ಇಂಚಿನ ಪೂರ್ಣ ಹೆಚ್‌ಡಿ ಡಿಸ್‌ಪ್ಲೇ, 2.0 GHz ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 625 ಪ್ರೊಸೆಸರ್ , 3,000 mAh ಬ್ಯಾಟರಿ , 4GB RAM ಮತ್ತು 64GB ಆಂತರಿಕ ಮೆಮೊರಿ ಹೊಂದಿರುವ ಮೋಟೋ G5s ಪ್ಲಸ್ ಸ್ಮಾರ್ಟ್‌ಫೋನ್ ಬೆಲೆ 14,999 ರೂಪಾಯಿಗಳಾಗಿವೆ.

ಶಿಯೋಮಿ ಎಂಐ ಎ1!!

ಶಿಯೋಮಿ ಎಂಐ ಎ1!!

ಶಿಯೋಮಿ ಕಂಪೆನಿಯ ಮೊದಲ ಆಂಡ್ರಾಯ್ಡ್ ಒನ್ ಪೋನ್ ಎಂಬ ಹೆಗ್ಗಳಿಕೆ ಪಡೆದಿರುವ ಶಿಯೋಮಿ ಎಂಐ ಎ1 ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ, ಸ್ಟಾಕ್ ಆಂಡ್ರಾಯ್ಡ್ ಯುಐ , ಆಕ್ಟಾ-ಕೋರ್ ಸ್ನಾಪ್ಡ್ರಾಗನ್ 625 ಪ್ರೊಸೆಸರ್, ಹೆಡ್ಫೋನ್ ಆಂಪ್ಲಿಫೈಯರ್ 4GB RAM ಮತ್ತು 64GB ಮೆಮೊರಿಯೊಮದಿಗೆ ಭಾರತದಲ್ಲಿ ಟ್ರೆಂಡ್ ಸೃಷ್ಟಿಸಿರುವ ನಾಲ್ಕನೇ ಸ್ಮಾರ್ಟ್‌ಫೋನ್ ಆಗಿದೆ.
ಶಿಯೋಮಿ ಎಂಐ A1 ಸ್ಮಾರ್ಟ್‌ಪೋನ್ ಅನ್ನು ರೂ. 13,999ಗಳಿಗೆ ಖರೀದಿಸಬಹುದುದಾಗಿದೆ.

ಲೆನೊವೊ ಕೆ8 ನೋಟ್!!

ಲೆನೊವೊ ಕೆ8 ನೋಟ್!!

1920x1080p ರೆಸಲ್ಯೂಶನ್ ಮತ್ತು ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ ರಕ್ಷಣೆ ಹೊಂದಿರುವ 5.5-ಇಂಚಿನ ಫುಲ್‌ ಹೆಚ್‌ಡಿ ಡಿಸ್ಪ್ಲೇ , 4,000 mAh ಬ್ಯಾಟರಿ, 3 ಜಿಬಿ / 4 ಜಿಬಿ ರಾಮ್ ಮತ್ತು 32 ಜಿಬಿ / 64 ಜಿಬಿ ಆಂತರಿಕ ಶೇಖರಣಾ ಮೆಮೊರಿ ಹೊತ್ತು ಮಾರುಕಟ್ಟೆಗೆ ಬರುತ್ತಿರುವ ಲೆನೊವೊ ಕೆ8 ನೋಟ್ ಡ್ಯುಯಲ್ ಕ್ಯಾಮೆರಾ ಹೊಂದಿರಲಿದೆ. ಹಾಗಾಗಿ, ಭಾರತದಲ್ಲಿ ಹೆಚ್ಚು ಟ್ರೆಂಡ್ ಸೃಷ್ಟಿಸಿರುವ ಟಾಪ್ 5ನೇ ಸ್ಮಾರ್ಟ್‌ಫೋನ್ ಇದಾಗಿದ್ದು, 4 ಜಿಬಿ RAM ರೂಪಾಂತರದ ಸ್ಮಾರ್ಟ್‌ಫೋನ್ ಬೆಲೆ 12,500 ರೂ.ಗಳಾಗಿರಲಿದೆ.

Best Mobiles in India

English summary
Here is a list of top budget Android smartphones available in the market with a dual camera setup.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X