Subscribe to Gizbot

ಕೇವಲ 349 ರೂ.ಗೆ ಏರ್‌ಟೆಲ್ ಪ್ರಕಟಿಸಿದೆ ಪ್ರತಿದಿನ 3GB ಡೇಟಾ ಆಫರ್!!

Written By:

ಟೆಲಿಕಾಂ ಪ್ರಪಂಚದಲ್ಲಿ ದಿಗ್ಗಜ ಕಂಪೆನಿಯಾಗಿ ಬೆಳೆಯುತ್ತಿರುವ ರಿಲಾಯನ್ಸ್ ಜಿಯೋ ಆಡಿಸಿದಂತೆ ಇತರೆ ಎಲ್ಲಾ ಟೆಲಿಕಾಂ ಕಂಪೆನಿಗಳು ಆಡುತ್ತಿರುವುದು ನಿಮಗೆಲ್ಲಾ ಗೊತ್ತೇ ಇದೆ. ಜಿಯೋ ಒಂದು ನೂತನ ಆಫರ್ ಅನ್ನು ಪರಿಚಯಿಸಿದ ನಿಮಿಷಗಳಲ್ಲಿಯೇ ಇತರೆ ಟೆಲಿಕಾಂ ಕಂಪೆನಿಗಳು ಆ ಆಫರ್ ಅನ್ನು ಪ್ರಕಟಿಸಿ ನಿಟ್ಟುಸಿರು ಬಿಡುತ್ತಿವೆ.

ಈ ಮೊದಲು ಜಿಯೋ ಬಗ್ಗೆ ಡೋಂಟ್ ಕೇರ್ ಎನ್ನುತ್ತಿದ್ದ ಏರ್‌ಟೆಲ್ ಕೂಡ ಜಿಯೋ ಪುಂಗಿಗೆ ತಾಳಹಾಕುತ್ತಿದೆ. ಕೇವಲ ಒಂದು ವಾರದ ಹಿಂದಷ್ಟೆ ಜಿಯೋ ಐಪಿಎಲ್ ಕ್ರಿಕೆಟ್ ಪ್ಯಾಕ್ ವಿರುದ್ದವಾಗಿ ಆಫರ್ ಬಿಡುಗಡೆ ಮಾಡಿದ್ದ ಏರ್‌ಟೆಲ್, ಇದೀಗ ಪ್ರತಿದಿನ 2GB ಮತ್ತು 3GB ಡೇಟಾ ಹೊಂದಿರುವ ಆಫರ್ ಅನ್ನು ಅತ್ಯಂತ ಕಡಿಮೆ ಬೆಲೆಗೆ ಬಿಡುಗಡೆ ಮಾಡಿದೆ.

ಕೇವಲ 349 ರೂ.ಗೆ ಏರ್‌ಟೆಲ್ ಪ್ರಕಟಿಸಿದೆ ಪ್ರತಿದಿನ 3GB ಡೇಟಾ ಆಫರ್!!

ಏರ್‌ಟೆಲ್ 249 ರೂಪಾಯಿ ಮತ್ತು 349 ರೂಪಾಯಿಗಳಿಗೆ ನೂತನವಾಗಿ ಎರಡೂ ಆಫರ್‌ಗಳನ್ನು ನೀಡಿರುವುದು ಈ ಮೊದಲು ಇದ್ದ ಆಫರ್‌ನಲ್ಲಿ ಸ್ವಲ್ಪ ಬದಲಾವಣೆಯಾಗಿದೆ. ಈ ಮೊದಲು 249 ರೂಪಾಯಿಗಳಿಗೆ ಪ್ರತಿದಿನ 1.5GB ಡೇಟಾ ಆಫರ್‌ ಅನ್ನು ನೀಡಿದ್ದ ಏರ್‌ಟೆಲ್, ಇದೀಗ 249 ರೂ.ಗೆ ಪ್ರತಿದಿನ 2GB ಡೇಟಾವನ್ನು ಪ್ರಕಟಿಸಿ ಜಿಯೋಗೆ ಸೆಡ್ಡುಹೊಡೆದಿದೆ.

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT

ಹಾಗಾಗಿ, ಇನ್ಮುಂದೆ ಏರ್‌ಟೆಲ್‌ನ ಎಲ್ಲಾ 3G ಮತ್ತು 4G ಪ್ರೀಪೇಯ್ಡ್ ಬಳಕೆದಾರರು 249 ರೂಪಾಯಿ ಏರ್‌ಟೆಲ್ ಪ್ಯಾಕ್ ರೀಚಾರ್ಜ್ ಮಾಡಿಸಿದರೆ, ಪ್ರತಿದಿನ 2GB ಡೇಟಾ, ದೇಶದಾಧ್ಯಂತ ಅನ್‌ಲಿಮಿಟೆಡ್ ಕರೆಗಳು ಹಾಗೂ ಪ್ರತಿದಿನ ನೂರು ಉಚಿತ ಎಸ್‌ಎಮ್‌ಎಸ್‌ಗಳನ್ನು ಮಾಡುವ ಸೌಲಭ್ಯವನ್ನು ಸಂಪೂರ್ಣ 28 ದಿನಗಳ ವ್ಯಾಲಿಡಿಟಿಯಲ್ಲಿ ಪಡೆದುಕೊಳ್ಳಲಿದ್ದಾರೆ.

ಕೇವಲ 349 ರೂ.ಗೆ ಏರ್‌ಟೆಲ್ ಪ್ರಕಟಿಸಿದೆ ಪ್ರತಿದಿನ 3GB ಡೇಟಾ ಆಫರ್!!

ಇನ್ನು ಏರ್‌ಟೆಲ್‌ನ 349 ಪ್ರಿಪೇಯ್ಡ್ ಯೋಜನೆ ಕೂಡ ಇದೀಗ ದಿನಕ್ಕೆ ಪ್ರತಿದಿನ 3 ಜಿಬಿ ನೀಡುತ್ತದೆ. ಒಟ್ಟು 84 ಜಿಬಿ ಡೇಟಾ ಹೊಂದಿರುವ ಏರ್‌ಟೆಲ್‌ನ 349 ರೂ. ಆಫರ್‌ನಲ್ಲಿ ಏರ್‌ಟೆಲ್‌ನ ಎಲ್ಲಾ 3G ಮತ್ತು 4G ಪ್ರೀಪೇಯ್ಡ್ ಬಳಕೆದಾರರುತಿದಿನ 3 GB ಡೇಟಾ, ದೇಶದಾಧ್ಯಂತ ಅನ್‌ಲಿಮಿಟೆಡ್ ಕರೆಗಳು ಹಾಗೂ ಪ್ರತಿದಿನ ನೂರು ಉಚಿತ ಎಸ್‌ಎಮ್‌ಎಸ್‌ಗಳನ್ನು ಮಾಡುವ ಸೌಲಭ್ಯವನ್ನು ಸಂಪೂರ್ಣ 28 ದಿನಗಳ ವ್ಯಾಲಿಡಿಟಿಯಲ್ಲಿ ಪಡೆದುಕೊಳ್ಳಲಿದ್ದಾರೆ.

ಓದಿರಿ: ಯಾವ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆ ಎಂದು ಮೊಬೈಲ್‌ನಲ್ಲಿಯೇ ತಿಳಿಯುವುದು ಹೇಗೆ?

ಓದಿರಿ: ಮೊಬೈಲ್‌ನಲ್ಲಿಯೇ ಜಿಪಿಎಸ್ ಇದ್ದರೂ ವಾಹನಗಳಲ್ಲಿ ಪ್ರತ್ಯೇಕ ಜಿಪಿಎಸ್ ಸಾಧನದ ಅವಶ್ಯಕತೆ ಏನು?

English summary
you could say that Bharti Airtel had just made a massive price of its Rs 349 plan. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot