Subscribe to Gizbot

ಜಿಯೋ ಟಿವಿ ಆಪ್ ನಲ್ಲಿಯೇ ಲೈವ್ ಕ್ರಿಕೆಟ್ ಮ್ಯಾಚ್..! ಹೊಸ ಆಯ್ಕೆ..!

Posted By: -

ದೇಶದಲ್ಲಿ ಕ್ರಿಕೆಟ್ ಕ್ರೇಜ್ ಹೆಚ್ಚಾಗಿರುವುದು ನಿಮಗೆ ತಿಳಿದೆ. ಈ ಹಿನ್ನಲೆಯಲ್ಲಿ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಸೇವೆಯನ್ನು ನೀಡಬೇಕು ಎನ್ನುವ ಸಲುವಾಗಿ ಜಿಯೋ ಟಿವಿ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಮುಂಬರುವ ಟಿ20 ಕ್ರಿಕೆಟ್ ಸರಣಿಯ ಡಿಜಿಟಲ್ ಹಕ್ಕನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಬಳಕೆದಾರರಿಗೆ ಲೈವ್ ಮ್ಯಾಚ್ ನೋಡುವ ಅವಕಾಶವನ್ನು ಮಾಡಿಕೊಟ್ಟಿದೆ.

ಜಿಯೋ ಟಿವಿ ಆಪ್ ನಲ್ಲಿಯೇ ಲೈವ್ ಕ್ರಿಕೆಟ್ ಮ್ಯಾಚ್..! ಹೊಸ ಆಯ್ಕೆ..!

ಇದರಿಂದಾಗಿ ಇಂಡಿಯಾ-ಶ್ರೀಲಂಕಾ ಕ್ರಿಕೆಟ್ ಮ್ಯಾಚ್ ಅನ್ನು ನೀವು ಆಪ್ ನಲ್ಲಿಯೇ ನೋಡಬಹುದಾಗಿದೆ. ಮಾರ್ಚ್ 8 ರಿಂದ 18ರ ವರೆಗೆ ನಡೆಯಲಿರುವ ಕ್ರಿಕೆಟ್ ಪಂದ್ಯಗಳು ಜಿಯೋ ಟಿವಿ ಆಪ್ ನಲ್ಲಿಯೇ ಲೈವ್ ಆಗಿ ಬರಲಿದೆ ಎನ್ನಲಾಗಿದೆ. ಈ ಸರಣಿಯಲ್ಲಿ ಬ್ಲಾಂಗಾದೇಶವು ಸಹ ಕಾಣಿಸಿಕೊಂಡಿದೆ.

ಓದಿರಿ: ಶಾಕಿಂಗ್ ನ್ಯೂಸ್: ಜಿಯೋ ಹಿಂದಿಕ್ಕುವ ಭರದಲ್ಲಿ ಏರ್‌ಟೆಲ್‌ ನಿಂದ ಬಳಕೆದಾರರಿಗೆ ಮಹಾ ಮೋಸ..!

ಈಗಾಗಲೇ ಬೆಸ್ಟ್ ಮೊಬೈಲ್ ವಿಡಿಯೋ ಕಂಟೆಂಟ್ ಪ್ರಶಸ್ತಿಯನ್ನು ಪಡೆದುಕೊಂಡಿರುವ ಜಿಯೋ ಟಿವಿ, ತನ್ನ ಗರಿಗೆ ಮತ್ತೊಂದು ಹೊಸ ಗುಚ್ಚವನ್ನು ಸೇರಿಸಿಕೊಂಡಿದೆ. ಇದರಿಂದಾಗಿ ಜಿಯೋ ಟಿವಿ ಆಪ್ ಬಳಕೆದಾರರು ರಿಯಲ್ ಟೈಮ್ ನಲ್ಲಿ ಕ್ರಿಕೆಟ್ ಮ್ಯಾಚ್ ಲೈವ್ ನೋಡುವ ಅವಕಾಶವನ್ನು ಪಡೆದುಕೊಂಡಿದ್ದಾರೆ.

ಜಿಯೋ ಟಿವಿ ಆಪ್ ನಲ್ಲಿಯೇ ಲೈವ್ ಕ್ರಿಕೆಟ್ ಮ್ಯಾಚ್..! ಹೊಸ ಆಯ್ಕೆ..!

ಸುಮಾರು 575ಕ್ಕೂ ಹೆಚ್ಚು ಚಾನಲ್ ಗಳನ್ನು ನೀಡುತ್ತಿರುವ ಜಿಯೋ ಟಿವಿಯಲ್ಲಿ ಸುಮಾರು 15ಕ್ಕೂ ಹೆಚ್ಚಿನ ಭಾಷೆಯ ಲೈವ್ ಚಾನಲ್ ಗಳನ್ನು ನೋಡಬಹುದು. ಆದರೆ ಕ್ರಿಕೆಟ್ ಪ್ರಸಾರದ ಚಾನಲ್ ಗಳು ಲಭ್ಯವಿರಲಿಲ್ಲ. ಇದಕ್ಕಾಗಿಯೇ ಆಪ್ ನಲ್ಲಿಯೇ ಲೈವ್ ಮ್ಯಾಚ್ ಪ್ರಸಾರ ಮಾಡಲು ಮುಂದಾಗಿದೆ.

ಓದಿರಿ: ನಷ್ಟದಲ್ಲಿದ್ದರೂ ಐಡಿಯಾ ಕೊಟ್ಟ ಆಫರ್ ನಿಂದ ಜಿಯೋ-ಏರ್‌ಟೆಲ್‌ಗೆ ನಡುಕ..!

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
ದೇಶಿಯ ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ಚಾನಲ್ ಮತ್ತು ಬಳಕೆದಾರರನ್ನು ಹೊಂದಿರುವ ಆಪ್ ಜಿಯೋ ಟಿವಿಯಾಗಿದ್ದು, ಈ ಹೊಸ ಸೇವೆಯಿಂದ ಇನ್ನಷ್ಟು ಮಂದಿ ಜಿಯೋ ಆಪ್ ಬಳಕೆ ಮಾಡಲು ಮುಂದಾಗಲಿದ್ದಾರೆ., ಮತ್ತೊಮ್ಮೆ ಜಿಯೋ ಖ್ಯಾತಿ ಮುಗಿಲು ಮುಟ್ಟಲಿದೆ.
English summary
JioTV bags exclusive digital rights for the upcoming T20 cricket series Nidahas Trophy. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot