ನಷ್ಟದಲ್ಲಿದ್ದರೂ ಐಡಿಯಾ ಕೊಟ್ಟ ಆಫರ್ ನಿಂದ ಜಿಯೋ-ಏರ್‌ಟೆಲ್‌ಗೆ ನಡುಕ..!

|

ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಜೋರಾಗಿ ನಡೆಯುತ್ತಿರುವ ದರ ಸಮರವೂ ಸಾಕಷ್ಟು ಗ್ರಾಹಕರಿಗೆ ಲಾಭವನ್ನು ಮಾಡಿಕೊಟ್ಟಿದೆ. ಜಿಯೋ ಉತ್ತಮ ಸೇವೆಗಳನ್ನು ಗ್ರಾಹಕರಿಗೆ ನೀಡುತ್ತಿರುವ ಮಾದರಿಯಲ್ಲಿಯೇ ಉಳಿದ ಟೆಲಿಕಾಂ ಕಂಪನಿಗಳು ಬಳಕೆದಾರರಿಗೆ ಕಡಿಮೆ ಬೆಲೆಗೆ ಉತ್ತಮ ಸೇವೆಯನ್ನು ನೀಡುತ್ತಿವೆ, ಇದೇ ಮಾದರಿಯಲ್ಲಿ ಟೆಲಿಕಾಂ ಮಾರುಕಟ್ಟೆಯಲ್ಲಿ ನಷ್ಟದ ಹಾದಿಯನ್ನು ಹಿಡಿದುರುವ ಐಡಿಯಾ ಸೆಲ್ಯೂಲರ್ ಬೊಂಬಾಟ್ ಆಫರ್ ವೊಂದನ್ನು ಘೋಷಣೆ ಮಾಡಿದೆ.

ನಷ್ಟದಲ್ಲಿದ್ದರೂ ಐಡಿಯಾ ಕೊಟ್ಟ ಆಫರ್ ನಿಂದ ಜಿಯೋ-ಏರ್‌ಟೆಲ್‌ಗೆ ನಡುಕ..!

ಐಡಿಯಾ ಈ ಬಾರಿ ದೊಡ್ಡ ಮಟ್ಟದ ಆಫರ್ ನೀಡಲು ಮುಂದಾಗಿದ್ದು, ಹೆಚ್ಚಿನ ವ್ಯಾಲಿಡಿಟಿಯನ್ನು ನೀಡುವುದರೊಂದಿಗೆ ಹೆಚ್ಚಿನ ಡೇಟಾವನ್ನು ಬಳಕೆದಾರರಿಗೆ ನೀಡುವಂತಹ ಆಫರ್ ಗಳನ್ನು ಮಾರುಕಟ್ಟೆಗೆ ಪರಿಚಯ ಮಾಡಿದ್ದು, ಈ ಮೂಲಕ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲು ಮುಂದಾಗಿದೆ. ಜಿಯೋ ಮತ್ತು ಏರ್‌ಟೆಲ್ ಸೆಡ್ಡು ಹೊಡೆಯಲು ಈ ಯೋಜನೆಯನ್ನು ಮಾಡಿದೆ.

ರೂ.897 ಪ್ಲಾನ್:

ರೂ.897 ಪ್ಲಾನ್:

ಹೆಚ್ಚಿನ ಡೇಟಾ ಅವಶ್ಯಕತೆ ಇದೆ ಎನ್ನುವವರಿಗಾಗಿಯೇ ಐಡಿಯಾ ಲಾಂಚ್ ಮಾಡಿರುವ ಸ್ಪೆಷಲ್ ಆಫರ್ ಇದು. ಇದರಲ್ಲಿ ಬಳಕೆದಾರರಿಗೆ 84 ದಿನಗಳ ವ್ಯಾಲಿಡಿಟಿ ದೊರೆಯಲಿದ್ದು, ಇದರೊಂದಿಗೆ ಪ್ರತಿ ನಿತ್ಯ 2 GB 4G ವೇಗದ ಡೇಟಾ ಲಭ್ಯವಿರಲಿದೆ.

ರೂ.1197 ಪ್ಲಾನ್:

ರೂ.1197 ಪ್ಲಾನ್:

ಈ ಪ್ಲಾನ್‌ನಲ್ಲಿ ಬಳಕೆದಾರರು 84 ದಿನಗಳ ವ್ಯಾಲಿಡಿಟಿಯನ್ನು ಪಡೆದುಕೊಳ್ಳಲಿದ್ದು, ಇದರೊಂದಿಗೆ ಪ್ರತಿ ನಿತ್ಯ 2.5 GB 4G ವೇಗದ ಡೇಟಾವನ್ನು ಬಳಕೆ ಮಾಡಿಕೊಳ್ಳಲು ಐಡಿಯಾ ಅವಕಾಶವನ್ನು ಮಾಡಿಕೊಡಲಿದೆ ಎನ್ನಲಾಗಿದೆ.

ರೂ 697 ಪ್ಲಾನ್:

ರೂ 697 ಪ್ಲಾನ್:

ಇದರಲ್ಲಿ ಬಳಕೆದಾರರಿಗೆ 70 ದಿನಗಳ ವ್ಯಾಲಿಡಿಟಿಯೂ ದೊರೆಯಲಿದ್ದು, ಪ್ರತಿ ನಿತ್ಯ 1.5 GB 4G ಡೇಟಾ ಬಳಕೆಗೆ ಲಭ್ಯವಿರಲಿದೆ. ಇದು ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ.

ಎಷ್ಟು ಡೇಟಾ..?

ಎಷ್ಟು ಡೇಟಾ..?

ರೂ.697ಕ್ಕೆ 105 GB ಡೇಟಾ ಬಳಕೆಗೆ ದೊರೆಯಲಿದೆ. ರೂ.897ರಲ್ಲಿ ಬಳಕೆದಾರರಿಗೆ 140GB ಡೇಟಾವನ್ನು ಲಭ್ಯವಾಗಲಿದೆ. ರೂ.1197 ರಿಚಾರ್ಜ್ ಮಾಡಿಸಿಕೊಳ್ಳುವ ಬಳಕೆದಾರರು 175 GB ಡೇಟಾವನ್ನು ಬಳಕೆಗೆ ಪಡೆದುಕೊಳ್ಳಲಿದ್ದಾರೆ.

ನಿಮ್ಮ Aadhaar ದುರುಪಯೋಗವಾಗಿದೆಯೇ..? ಪತ್ತೆ ಹಚ್ಚುವುದು ಹೇಗೆ..?
4G ಬಳಕೆದಾರರಿಗೆ ಮಾತ್ರ:

4G ಬಳಕೆದಾರರಿಗೆ ಮಾತ್ರ:

ಮೇಲೆ ನೀಡಿರುವ ಆಫರ್ ಗಳು ಕೇವಲ 4G ಬಳಕೆದಾರರಿಗೆ ಮಾತ್ರ ಎನ್ನಲಾಗಿದೆ. 3G ನೆಟ್‌ವರ್ಕ್ ಬಳಕೆದಾರರು ಈ ಆಫರ್ ನಿಂದ ವಂಚಿತವಾಗಿದ್ದಾರೆ.

Best Mobiles in India

English summary
Idea Cellular Prepaid Plans Now Offering 2GB and 2.5GB Data Per Day. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X