ಆಗಸ್ಟ್ 23ಕ್ಕೆ ಮಿಜು ಎಂ6 ನೋಟ್ ಸ್ಮಾರ್ಟ್ಫೋನ್ ಲಾಂಚ್!!

Posted By: Staff

ತೀವ್ರ ಕುತೂಹಲ ಹುಟ್ಟಿಸಿರುವ ಮಿಜು ಎಂ6 ನೋಟ್ ಸ್ಮಾರ್ಟ್ಫೋನ್ ನಿರೀಕ್ಷೆಯಂತೆ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜುಗೊಂಡಿದೆ. ಇದೇ ಆಗಸ್ಟ್ 23ರಂದು ಬೀಜಿಂಗ್ನ ಪರ್ಫಾರ್ಮಿಂಗ್ ಆರ್ಟ್ಸ್ ಸೆಂಟರ್ ನಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯುವ ಅದ್ಧೂರಿ ಸಮಾರಂಭದಲ್ಲಿ ಲೋಕಾರ್ಪಣೆಗೊಳಿಸಲು ಕಂಪನಿ ಸನ್ನದ್ಧಗೊಂಡಿದೆ. ಈ ಕುರಿತು ಮಾಧ್ಯಮದವರಿಗೆ ಅಧಿಕೃತ ಆಹ್ವಾನವನ್ನೂ ನೀಡಲಾಗಿದೆ. ಆಹ್ವಾನ ಪತ್ರಿಕೆಯಲ್ಲಿ ಮಿಜು ಎಂ6 ನೋಟ್ ಬಿಡುಗಡೆಗೊಳಿಸುವುದಾಗಿ ಸ್ಪಷ್ಟವಾಗಿ ತಿಳಿಸಲಾಗಿದೆ.

ಆಗಸ್ಟ್ 23ಕ್ಕೆ ಮಿಜು ಎಂ6 ನೋಟ್ ಸ್ಮಾರ್ಟ್ಫೋನ್ ಲಾಂಚ್!!

ಓದಿರಿ: ನಿಮ್ಮ ಮಕ್ಕಳು ಸ್ಮಾರ್ಟ್‌ಫೋನಿನಲ್ಲಿ ಗೇಮ್ ಆಡುತ್ತಿರುವರೇ? ಹಾಗಿದ್ರೆ ಈ ಸ್ಟೋರಿ ಓದಲೇ ಬೇಕು.!!

ಈ ಸ್ಮಾರ್ಟ್ಫೋನ್ ವಿಶೇಷತೆ ಬಗ್ಗೆ ಆನ್ಲೈನ್ ನಲ್ಲಿ ಎರಡು ಬಾರಿ ವಿಷಯ ಹರಿದಾಡಿ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿತ್ತು. ಇದರ ಸ್ಪೆಕ್ಸ್ ಹಾಗೂ ವೈಶಿಷ್ಟ್ಯತೆಗಳ ಬಗ್ಗೆ ಹೆಚ್ಚು ಪ್ರಚಲಿತಗೊಂಡು ಸುದ್ದಿ ಮಾಡಿತ್ತು. ಗ್ರಾಹಕರ ನಿರೀಕ್ಷೆಯನ್ನು ಗರಿಗೆದರಿಸಿತ್ತು. ಈ ಹಿಂದೆ ಸೆಪ್ಟೆಂಬರ್ ತಿಂಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುತ್ತದೆ ಎಂಬ ಸುಳಿವು ದೊರಕಿತ್ತು. ಅಂತೆಯೇ ಸೆಪ್ಟೆಂಬರ್ ವೇಳೆಗೆ ಮಾರುಕಟ್ಟೆಯಲ್ಲಿ ಸಿಗುವುದು ಬಹುತೇಕ ಖಚಿತವಾಗಿದೆ.

ಸಾಕಷ್ಟು ಸದ್ದು ಮಾಡಿದ್ದ ಈ ಸ್ಮಾರ್ಟ್ಫೋನ್ ವಿಶೇಷತೆಗಳ ಬಗ್ಗೆ ನಾವಿಲ್ಲಿ ತಿಳಿಸಿಕೊಡುತ್ತೇವೆ. ಮಾಲಿ-ಟಿ 880 ಜಿಪಿಯು ಜತೆಗೂಡಿದ ಮೀಡಿಯಾ ಟೆಕ್ ಹೆಲಿಯೊ ಪಿ25 ಪ್ರೊಸೆಸರ್ ಒಳಗೊಂಡಿದೆ. ಈ ಸ್ಮಾರ್ಟ್ಫೋನ್ ಎರಡು ಬಗೆಯ ಮೆಮೊರಿ ರೂಪಾಂತರವನ್ನು ಹೊಂದಿರುವುದು ವಿಶೇಷ.

ಓದಿರಿ: ಏರ್‌ಟೆಲ್, ವೊಡಾ, ಐಡಿಯಾ ಆಫರ್‌ಗಳಿಗೆ ಕುತ್ತು: ಟ್ರಾಯ್‌ನಿಂದ ಹೊಸ ನೀತಿ.!!

Xiaomi Redmi 4 Features !! ರೆಡ್‌ಮಿ 4 ಫೀಚರ್ಸ್ ಏನೇನಿದೆ? ಇಲ್ಲಿದೆ ಡಿಟೇಲ್ಸ್!!

3 ಜಿಬಿ ರಾಮ್ ಮತ್ತು 32 ಜಿಬಿ ಡೀಫಾಲ್ಟ್ ಸಂಗ್ರಹಣಾ ಸಾಮರ್ಥ್ಯ ಹಾಗೂ 4 ಜಿಬಿ ರಾಮ್ ಮತ್ತು 64 ಜಿಬಿ ಆಂತರಿಕ ಶೇಖರಣಾ ಸಾಮರ್ಥ್ಯವಿರುವ ಎರಡು ಬಗೆಯ ಸ್ಟೋರೆಜ್ ಹೊಂದಿದೆ. 4000ಎಂಎಎಚ್ ಬ್ಯಾಟರಿ ಒಳಗೊಂಡಿದೆ. 5.5-ಇಂಚಿನ ಐಪಿಎಸ್ ಎಲ್ಸಿಡಿ ಫುಲ್ ಎಚ್ಡಿ ಡಿಸ್ಪ್ಲೆ ಮತ್ತು ಹಿಂಭಾಗದ ಡ್ಯುಯಲ್ ಕ್ಯಾಮೆರಾಗಳನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಕ್ಸಿಯೋಮಿ ರೆಡ್ಮಿ ಪ್ರೋನಂತೆ, ಮಿಜು ಎಂ6 ನೋಟ್ನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಸೋನಿ ಐಎಂಎಕ್ಸ್ 258 ಸಂವೇದಕವನ್ನು ಒಳಗೊಂಡಿದೆ ಎನ್ನಲಾಗುತ್ತಿದೆ. ಇದು ಪ್ರಾಯಶಃ ಮೆಟಲ್ ಯುನಿಬಾಡಿ ಹೊಂದಿದೆ ಎಂಬ ಸುಳಿವು ಹೊರಬಿದ್ದಿದೆ.

ಆಗಸ್ಟ್ 23ಕ್ಕೆ ಮಿಜು ಎಂ6 ನೋಟ್ ಸ್ಮಾರ್ಟ್ಫೋನ್ ಲಾಂಚ್!!

ಮಿಜು ಎಂ6 ನೋಟ್ ವೈಶಿಷ್ಟ್ಯತೆಗಳನ್ನು ಗಮನಿಸಿದಾಗ ಕಡಿಮೆ ಮಧ್ಯಮ ಆಂಡ್ರಾಯ್ಡ್ ಹ್ಯಾಂಡ್ಸೆಟ್ ಎಂದರೆ ತಪ್ಪಾಗಲಾರದು. ಭಾರತೀಯ ಮಾರುಕಟ್ಟೆಯಲ್ಲಿ 15 ಸಾವಿರ ರೂ.ಗಳ ಸರಾಸರಿಯಲ್ಲಿ ಸ್ಪರ್ಧೆಗೆ ಇಳಿದಿರುವ ಕ್ಸಿಯೋಮಿ, ಲೆನೋವೋ, ಮೊಟೋರೋಲಾ ಕಂಪನಿಗಳ ಮಾರುಕಟ್ಟೆ ದರಕ್ಕೆ ಪ್ರತಿಸ್ಪರ್ಧೆ ಒಡ್ಡುವ ನಿಟ್ಟಿನಲ್ಲಿ ಈ ಸ್ಮಾರ್ಟ್ಫೋನ್ ದರ ನಿಗದಿಯಾಗುವ ಸಾಧ್ಯತೆಯಿದೆ.

Read more about:
English summary
ಮಿಜು ಎಂ6 ನೋಟ್ ಆ.23ಕ್ಕೆ ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ. ಬೀಜಿಂಗ್ನ ಪರ್ಫಾರ್ಮಿಂಗ್ ಆರ್ಟ್ಸ್ ಸೆಂಟರ್ ನಲ್ಲಿ ನಡೆಯುವ ಸಮಾರಂಭದಲ್ಲಿ ಲೋಕಾರ್ಪಣೆಗೊಳ್ಳಲಿದೆ.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot