ಮೈಕ್ರೋಸಾಫ್ಟ್ ಸ್ಕೈಪ್ ಲೈಟ್; ಮತ್ತೊಂದು ವಿಡಿಯೋ ಕಾಲಿಂಗ್ ಆಪ್
ಮೈಕ್ರೋಸಾಫ್ಟ್ ಕಂಪನಿ ಭಾರತೀಯ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ತನ್ನ ಸ್ಕೈಪ್ ವಿಡಿಯೊ ಕಾಲಿಂಗ್ ಆಪ್ ಅನ್ನು ಸರಳಿಕೃತಗೊಳಿಸಿದೆ.
ಮೈಕ್ರೋಸಾಫ್ಟ್ ಕಂಪನಿ ಭಾರತೀಯ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ತನ್ನ ಸ್ಕೈಪ್ ವಿಡಿಯೊ ಕಾಲಿಂಗ್ ಆಪ್ ಅನ್ನು ಸರಳಿಕೃತಗೊಳಿಸಿದ್ದು, ಸ್ಕೈಪ್ ಲೈಟ್ ಎಂಬ ಹೊಸದೊಂದು ರೂಪವನ್ನು ನೀಡಿ ಹೊಸದಾಗಿ ಆಪ್ ಅನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಎಲ್ಲಾ ಮೆಸೆಂಜಿಗ್ ಆಪ್ ಗಳಯ ವಿಡಿಯೋ ಕಾಲಿಂಗ್ ಮಾಡುವ ಅವಕಾಶವನ್ನು ನೀಡಿರುವ ಹಿನ್ನಲೆಯಲ್ಲಿ ಮೈಕ್ರೋಸಾಫ್ಟ್ ಹೊಸ ಮಾದರಿಯಲ್ಲಿ ಆಪ್ ಲಾಂಚ್ ಮಾಡಿದೆ.

ಓದಿರಿ: ಜಿಯೋ ಪ್ರೈಮ್ ಆಫರ್ ಹಿಂದಿನ ರಹಸ್ಯವೇನು..? ಪ್ರತಿ ದಿನಕ್ಕೆ 10 ರೂ. ಲೆಕ್ಕಾಚಾರ ಹೇಗೆ..?
ಸದ್ಯ ಮೈಕ್ರೋಸಾಫ್ಟ್ ಬಿಡುಗಡೆ ಮಾಡಿರುವ ಸ್ಕೈಪ್ ಲೈಟ್ ಕಡಿಮೆ ಗುಣಮಟ್ಟದ ಇಂಟರ್‌ನೆಟ್‌ನಲ್ಲೂ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಅಲ್ಲದೇ ಬಳಕೆ ಮಾಡಲು ಸರಳಿಕೃತವಾಗಿದೆ ಎನ್ನಲಾಗಿದೆ. ಈಗಾಗಲೇ ಆಂಡ್ರಾಯ್ಡ್ ಬಳಕೆದಾರಿಗೆ ಈ ಆಪ್ ಮುಕ್ತವಾಗಿದ್ದು, ಕಡಿಮೆ ನೆಟ್‌ವರ್ಕ್ ನಲ್ಲಿಯೂ ವಿಡಿಯೋ ಕಾಲಿಂಗ್ ಮಾಡಲು ಇದು ಸಹಾಯಕಾರಿಯಾಗಿಲಿದೆ.
ಅಲ್ಲದೇ ಸ್ಕೈಪ್ ಲೈಟ್ ನಿಮ್ಮ SMS ಆಪ್‌ಗಳ ಬದಲಾಗಿ ಬಳಸಬಹುದಾಗಿದ್ದು, ಈ ಆಪ್‌ನಲ್ಲಿ ನಾಲ್ಕು ಪ್ರಮುಖ ವಿಭಾಗಳಿದ್ದು, ಅದರಲ್ಲಿ ಪೋನ್‌ಬುಕ್, ಎಸ್‌ಎಂಎಸ್, ಡಯಲರ್ ಮತ್ತು ಬೂಟ್, ಈ ಆಪ್ ಮುಖಾಂತರವೇ ಎಸ್‌ಎಂಎಸ್ ಮತ್ತು ಕರೆ ಮಾಡಲುಬಹುದಾಗಿದೆ. ಬೂಟ್ ಟ್ಯಾಬ್ ವಿಡಿಯೋ ಕರೆ ಮಾಡಲು ಸಹಾಯಕಾರಿಯಾಗಲಿದೆ.

ಓದಿರಿ: ಹೊಸ ತಲೆಮಾರಿನ ರಿಚಾರ್ಜಬಲ್ ಬ್ಯಾಟರಿ: 1000 ಪಟ್ಟು ಅಧಿಕ ಬ್ಯಾಕಪ್
ಆಪ್ ಬಳಕೆ ಮಾಡಲು ಸುಲಭವಾಗಿದ್ದು, ಭಾರತದ ಏಳು ಸ್ಥಳೀಯ ಭಾಷೆಗಳಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದೆ. 2G ಯಲ್ಲಿಯೂ ಇದು ಕಾರ್ಯನಿರ್ವಹಿಸಲಿದೆ. ಒಟ್ಟಿನಲ್ಲಿ ಈಗಾಗಲೇ ಮಾರುಕಟ್ಟೆಯಲ್ಲಿರುವ ಹಲವರು ಆಪ್‌ಗಳ ನಡುವೆ ಈ ಆಪ್ ಹೇಗೆ ಖ್ಯಾತಿಯನ್ನು ಗಳಿಸಲಿದೆ ಎಂಬುದನ್ನು ಕಾದು ನೋಡಬೇಕು.


Click it and Unblock the Notifications








