ಮತ್ತೆ ಶುರುವಾಯಿತು ಬ್ಲೂ ವೇಲ್‌ ಕಾಟ: ಮಕ್ಕಳಿಗೆ ಲ್ಯಾಪ್‌ಟಾಪ್‌-ಮೊಬೈಲ್‌ ಕೊಡುವ ಮುನ್ನ ಎಚ್ಚರ..!

Written By:

ದೇಶಾದ್ಯಂತ ಬ್ಲೂ ವೇಲ್ ಗೇಮ್ ಚಾಲೆಂಜ್ ಕುರಿತು ಜಾಗೃತಿ ಮೂಡಿಸುವ ಕಾರ್ಯ ಜೋರಾಗಿ ನಡೆಯುತ್ತಿದೆ. ಆದರೆ ಈ ಕುರಿತು ಯುವ ಸಮುಹವು ಎಚ್ಚೆತ್ತುಕೊಳ್ಳುವಂತೆ ಕಾಣುತ್ತಿಲ್ಲ. ಇದೇ ಆಟಕ್ಕೆ ಮತ್ತೊಬ್ಬ ಯುವಕ ಆಂಧ್ರಪ್ರದೇಶದ ಪ್ರಾಣ ಅರ್ಪಿಸಿದ್ದಾನೆ.

 ಮಕ್ಕಳಿಗೆ ಲ್ಯಾಪ್‌ಟಾಪ್‌-ಮೊಬೈಲ್‌ ಕೊಡುವ ಮುನ್ನ ಎಚ್ಚರ..!

ಮುತ್ತಿನ ನಗರಿ ಹೈದರಬಾದ್ ನಲ್ಲಿ ಪದವಿ ಓದುತ್ತಿರುವ ವಿದ್ಯಾರ್ಥಿಯೊಬ್ಬ ಬ್ಲೂ ವೇಲ್ ಗೇಮ್ ಚಟಕ್ಕೆ ಬಿದ್ದು, ತನ್ನ ಮುಖವನ್ನು ಪ್ಲಾಸ್ಟಿಕ್ ಕವರ್ ನಿಂದ ಮುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಪ್ರಕರಣವನ್ನು ನೋಡಿದರೆ ಬ್ಲೂ ವೇಲ್ ಗೇಮ್ ಪ್ರಭಾವದಿಂದ ಮತ್ತಷ್ಟು ಸಾವು-ನೋವು ಸಂಭವಿಸುವ ಸಾಧ್ಯತೆ ಇದೆ.

ಓದಿರಿ: ಹೊಸ ವರ್ಷಕ್ಕೆ ಶಾಕಿಂಗ್ ಗಿಫ್ಟ್: ಸಾವಿರಾರು ಫೋನ್‌ಗಳಲ್ಲಿ ಇಂದಿನಿಂದ ವಾಟ್ಸ್‌ಆಪ್ ವರ್ಕ್ ಆಗಲ್ಲ

19 ವರ್ಷದ ಬಿ.ಟೆಕ್ ವಿದ್ಯಾರ್ಥಿ ವರುಣ್ ಆತ್ಮಹತ್ಯೆಗೆ ಶರಣಾದ ಯುವಕ ಎನ್ನಲಾಗಿದೆ. ಕಳೆದ ಕೆಲವು ದಿನಗಳಿಮದ ಬ್ಲೂವೇಲ್ ಗೇಮ್‌ ಆಟ ಆಡುವುದಕ್ಕೆ ಶುರು ಮಾಡಿದ್ದ ಈ ಯುವಕ ಆಟದ ಕೊನೆಯ ಹಂತವಾಗಿ ತನ್ನ ಜೀವನ್ನು ಕಳೆದುಕೊಂಡಿದ್ದಾನೆ ಎನ್ನಲಾಗಿದೆ.

Blue Whale - ಬ್ಲೂ ವೇಲ್ ನಿಮ್ಮ ಮಕ್ಕಳ ಜೀವ ತೆಗೆಯಲಿದೆ ಎಚ್ಚರ..!!
 ಮಕ್ಕಳಿಗೆ ಲ್ಯಾಪ್‌ಟಾಪ್‌-ಮೊಬೈಲ್‌ ಕೊಡುವ ಮುನ್ನ ಎಚ್ಚರ..!

ವರುಣ್ ಬ್ಲೂ ವೇಲ್ ಗೇಮ್ ಚಾಲೆಂಜ್ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಪೊಲೀಸರು ಅನುಮಾನ ವ್ಯಕ್ತ ಪಡಿಸಿದ್ದು, ಆತ ಬಳಕೆ ಮಾಡುತ್ತಿದ್ದ ಲ್ಯಾಪ್ ಟಾಪ್ ಅನ್ನು ವಶಕ್ಕೆ ಪಡೆಯಲಾಗಿದೆ. ಆ ಲ್ಯಾಪ್‌ಟಾಪ್‌ನಲ್ಲಿಯೇ ವರುಣ್ ಬ್ಲೂವೇಲ್ ಗೇಮ್ ಆಡುತ್ತಿದ್ದ ಎನ್ನಲಾಗಿದೆ.

ಓದಿರಿ: ಭಾರತದಲ್ಲಿ ಜಿಯೋನೇ ಬೆಸ್ಟ್‌: ಸ್ಪೀಡ್ ಇಲ್ಲ ಅನ್ನುವವರೇ ಇಲ್ನೋಡಿ..!

English summary
online suicide game Blue Whale Challenge. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot