Just In
- 9 hrs ago
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- 18 hrs ago
Samsung Galaxy: ಕೇವಲ 44 ರೂ. ಗಳ ಇಎಮ್ಐನಲ್ಲಿ ಖರೀದಿಸಿ ಗ್ಯಾಲಕ್ಸಿ A14 5G ಫೋನ್!
- 21 hrs ago
ಗ್ರಾಹಕರೇ ಈ ಕಡಿಮೆ ಬೆಲೆಯ ಪ್ಲ್ಯಾನ್ ರೀಚಾರ್ಜ್ ಮಾಡಿದ್ರೂ, ಉಚಿತ ಡೇಟಾ ಲಭ್ಯ!
- 1 day ago
WhatsApp: ವಾಟ್ಸಾಪ್ ಮ್ಯಾಕ್ಒಎಸ್ (MacOS) ಆ್ಯಪ್ ಬಿಡುಗಡೆ! ಇದನ್ನು ಬಳಸುವುದು ಹೇಗೆ?
Don't Miss
- Movies
ಡಾಲಿ ಧನಂಜಯ್ ಅಭಿನಯದ ಪ್ಯಾನ್ ಇಂಡಿಯಾ ಚಿತ್ರಕ್ಕೆ ಟೈಟಲ್ ಫಿಕ್ಸ್
- News
ವಿಜಯಪುರದ ಆಲಮೇಲದಲ್ಲಿ ನೂರಾರು ಮಕ್ಕಳಿಗೆ ದಡಾರ: ಎಚ್ಚರಿಕೆ ವಹಿಸಲು ಜಿಲ್ಲಾಡಳಿತ ಮನವಿ
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
10 ರೂ ಪಾವತಿಸಿ ಅನ್‌ಲಿಮಿಟೆಡ್ ಸಿನಿಮಾಗಳನ್ನು ನೋಡಿರಿ
ಇಂಟರ್ನೆಟ್‌ನಲ್ಲಿ ಇಂಗ್ಲೀಷ್ ಸಿನಿಮಾಗಳನ್ನು ನೋಡಬೇಕೆಂದರೆ ಅಪರಿಪಿತ ಸೇವೆಗಳನ್ನ ನೀಡುವ ಹಲವು ಅಪ್ಲಿಕೇಶನ್‌ಗಳಿವೆ. ಅವುಗಳಲ್ಲಿ ಕೆಲವು ಜಾಹಿರಾತು ಸಹಿತ ಉಚಿತ ಸಿನಿಮಾಗಳನ್ನು ಪ್ರದರ್ಶಿಸಿದರೆ, ಇನ್ನೂ ಕೆಲವು ಆಪ್‌ಗಳಲ್ಲಿ ಸಿನಿಮಾ ನೋಡಲು ಹಣ ಪಾವತಿಸಬೇಕಾಗುತ್ತದೆ.
ಇಂಗ್ಲೀಷ್ ಅಂತರರಾಷ್ಟ್ರೀಯ ಭಾಷೆ. ಎಲ್ಲರೂ ಸಹ ಹೆಚ್ಚಾಗಿ ಇಂಗ್ಲೀಷ್ ಸಿನಿಮಾಗಳು ಉಚಿತವಾಗಿದ್ದರೂ ಸಹ ನೋಡಲು ಬಯಸುವುದಿಲ್ಲ. ಆದರೆ ಸ್ಥಳೀಯ ಭಾಷೆಗಳ ಸಿನಿಮಾಗಳು ಉಚಿತವಾಗಿ ದೊರೆತಲ್ಲಿ ಯಾರು ಸಹ ನೋಡಲು ನಿರಾಕರಿಸುವುದಿಲ್ಲ.
ನಾವು ಇಂದು ನಿಮಗೆ ಪರಿಚಯಿಸುತ್ತಿರುವ ಆಪ್‌ನಲ್ಲಿ ಸ್ಥಳೀಯ ಭಾಷೆಗಳ ಸಿನಿಮಾಗಳನ್ನು ನೋಡಬಹುದಾಗಿದ್ದು, ದಿನ ಒಂದಕ್ಕೆ ಕೇವಲ ಒಂದು ರೂಪಾಯಿ ರಿಚಾರ್ಜ್ ಮಾಡಿಸಿದರೆ ಸಾಕು. ಅಥವಾ ತಿಂಗಳಿಗೆ 30 ರೂಪಾಯಿ ಪಾವತಿಸಿ ಸಬ್‌ಸ್ಕ್ರೈಬ್ ಸಹ ಆಗಬಹುದಾಗಿದೆ. ವಿಶೇಷ ಅಂದ್ರೆ ಈ ಆಪ್‌ನಲ್ಲಿರುವ ಸಿನಿಮಾಗಳನ್ನು HD ಫಾರ್ಮ್ಯಾಟ್‌ನಲ್ಲಿ ಡೌನ್‌ಲೋಡ್ ಸಹ ಮಾಡಬಹುದಾಗಿದೆ. ಈ ವಿಶೇಷ ಆಪ್ ಯಾವುದು, ಆಪ್‌ನ ಇತರೆ ಫೀಚರ್‌ಗಳೇನು, ಬಳಸುವುದು ಹೇಗೆ?, ಯಾವ ಯಾವ ಭಾಷೆಗಳ ಸಿನಿಮಾಗಳು ಲಭ್ಯ ಎಂಬಿತ್ಯಾದಿ ಮಾಹಿತಿಗಾಗಿ ಲೇಖನದ ಸ್ಲೈಡರ್‌ಗಳನ್ನು ಓದಿರಿ.
ಇಂಟರ್ನೆಟ್ ಇಲ್ಲದಿದ್ದರೂ ವಾಟ್ಸಾಪ್ ಬಳಕೆ ಹೇಗೆ?

FastFilmz (ಫಾಸ್ಟ್‌ಫಿಲ್ಮ್ಜ್)
ಪ್ರಸ್ತುತದಲ್ಲಿ ಈ ಆಪ್ ತಮಿಳು 150 ಸಿನಿಮಾಗಳ ಸಣ್ಣ ಗ್ರಂಥಾಲಯವಾಗಿದೆ. ಅಲ್ಲದೇ ತೆಲುಗು ಸಿನಿಮಾಗಳನ್ನು ಆಪ್‌ನಲ್ಲಿ ಸೇರಿಸಲು ಯೋಜನೆ ರೂಪಿಸಲಾಗಿದೆ ಮತ್ತು ಇತರೆ ಸ್ಥಳೀಯ ಭಾಷೆಗಳ ಸ್ಟಾರ್ ನಟರ ಸಿನಿಮಾಗಳನ್ನು ಸಹ ಅಪ್‌ಲೋಡ್ ಮಾಡಲಾಗುತ್ತದೆಯಂತೆ.

ಪಾವತಿಸಿ ಬಳಸಬೇಕಾದ ಆಪ್
FastFilmz(ಫಾಸ್ಟ್‌ಫಿಲ್ಮ್ಜ್), ಅಪ್ಲಿಕೇಶನ್ ಬಳಸಲು ಸರಳವಾಗಿದ್ದು, ಹಣ ಪಾವತಿಸಿ ಸಿನಿಮಾಗಳನ್ನು ನೋಡಬಹುದಾಗಿದೆ. ಆದರೆ ಸಿನಿಮಾಗಳನ್ನು ನೋಡಲು ತಿಂಗಳ ಸಬ್‌ಸ್ಕ್ರಿಬ್‌ಸನ್ ಪಡೆಯಬಹುದಾಗಿದೆ. ಅಥವಾ ದಿನ ಒಂದಕ್ಕೆ ಒಂದು ರೂಪಾಯಿ ರೀಚಾರ್ಜ್ ಪಡೆದು ದಿನವೆಲ್ಲ ಸಿನಿಮಾಗಳನ್ನು ನೋಡಬಹುದಾಗಿದೆ.

ತಿಂಗಳ ಯೋಜನೆಗಳು
FastFilmz(ಫಾಸ್ಟ್‌ಫಿಲ್ಮ್ಜ್) ಬಳಕೆದಾರರು ತಿಂಗಳ ಯೋಜನೆ ರೂ.30 ಪಾವತಿಸಿ ಸಬ್‌ಸ್ಕ್ರೈಬ್ ಪಡೆಯಬಹುದಾಗಿದೆ. ಅಥವಾ 10 ದಿನಗಳಿಗೆ ರೂ.10 ಪಾವತಿಸಿ ಪ್ಯಾಕ್ ಪಡೆಯಬಹುದಾಗಿದೆ.

ಸಿನಿಮಾ ಸಂಖ್ಯೆಗಳ ಮಿತಿಯಿಲ್ಲ
ಅಂದಹಾಗೆ ದಿನ ಒಂದಕ್ಕೆ ಇಂತಿಷ್ಟೇ ಸಿನಿಮಾಗಳನ್ನು ನೋಡಬೇಕು ಎಂದು ನಿರ್ಬಂಧವಿಲ್ಲ. ಎಷ್ಟು ಸಿನಿಮಾಗಳನ್ನು ಬೇಕಾದರು ನೋಡಬಹುದು ಹಾಗೂ ಡೌನ್‌ಲೋಡ್ ಸಹ ಮಾಡಬಹುದಾಗಿದೆ.

ಸೇವೆ ನಿಜವಾಗಿಯೂ ಅಪರಿಮಿತವಾಗಿದೆ
FastFilmz(ಫಾಸ್ಟ್‌ಫಿಲ್ಮ್ಜ್) ಆಪ್‌ನ ಸೇವೆ ನಿಜವಾಗಿಯೂ ಅಪರಿಮಿತವಾಗಿದ್ದು, ಯಾವುದೇ ಜಾಹಿರಾತುಗಳಿರುವುದಿಲ್ಲ. FastFilmz ಆಪ್ ಪ್ರಸ್ತುತದಲ್ಲಿ ಏರ್‌ಟೆಲ್, ಏರ್‌ಸೆಲ್, ವೊಡಾಫೋನ್ ಮತ್ತು ಐಡಿಯಾ ಟೆಲಿಕಾಂಗಳೊಂದಿಗೆ ಒಪ್ಪಂದಮಾಡಿಕೊಂಡಿದೆ.

ಆಪ್‌ನಲ್ಲಿ 6 ವಿಭಾಗಗಳು
FastFilmz(ಫಾಸ್ಟ್‌ಫಿಲ್ಮ್ಜ್) ಆಪ್ ಸ್ಟಾರ್‌ಗಳು, ದೃಶ್ಯಗಳು, ಹೊಸ ಸಿನಿಮಾ ಆಗಮನ, ಶೋಕೇಸ್, ಎಕ್ಸ್‌ಪ್ಲೋರ್ ಮತ್ತು ಮೈ ಡೌನ್‌ಲೋಡ್ ಎಂಬ 6 ವಿಭಾಗಗಳನ್ನು ಹೊಂದಿದೆ. ಸ್ಟಾರ್ ವಿಭಾಗದಲ್ಲಿ ಯಾವ ಯಾವ ಸ್ಟಾರ್ ನಟರ ಸಿನಿಮಾಗಳು ಇವೆ ಎಂಬುದನ್ನು ನೋಡಬಹುದು, ಶೋಕೇಸ್‌ನಲ್ಲಿ ವಿಶಾಲ ಪೋಸ್ಟರ್‌ಗಳನ್ನು ಮತ್ತು ಲಿಂಕ್‌ಗಳನ್ನು ನೋಡಬಹುದಾಗಿದೆ.

ಸ್ಟಾರ್ ವಿಭಾಗ
FastFilmz ಆಪ್‌ನಲ್ಲಿ ಪ್ರಸ್ತುತದಲ್ಲಿ 150 ಸಿನಿಮಾಗಳಿದ್ದು, ರಜಿನಿಕಾಂತ್, ಜಯಂ ರವಿ, ವಿಜಯ್, ತ್ರಿಶಾ ಮತ್ತು ಇತರರ ಸಿನಿಮಾಗಳಿವೆ. ಪ್ರತಿವಾರ ಸಿನಿಮಾಗಳನ್ನು ಅಪ್‌ಲೋಡ್ ಮಾಡಲಾಗುತ್ತದೆ. ಆಪ್‌ಗೆ ಇತ್ತೀಚೆಗೆ 2008 ರ ಸಿನಿಮಾ 'ಕುಸೇಲನ್' ಅನ್ನು ಅಪ್‌ಲೋಡ್ ಮಾಡಲಾಗಿದೆ.

ವೀಡಿಯೋ ಗುಣಮಟ್ಟ
ಯಾವುದೇ ಒಂದು ವೀಡಿಯೊ ಕ್ಲಿಕ್ ಮಾಡಿದರೆ, ವೀಡಿಯೊ ಗುಣಮಟ್ಟದ ಫಾರ್ಮ್ಯಾಟ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಸಿನಿಮಾ ಫೈಲ್‌ನ ಸೈಜ್ ಅನ್ನು ಸಹ ಆಪ್ ತೋರಿಸುತ್ತದೆ. ನಂತರ ನಿಮ್ಮ ಡಾಟಾ ಕನೆಕ್ಟಿವಿಟಿ ಆಧಾರದಲ್ಲಿ ಸಿನಿಮಾ ಡೌನ್‌ಲೋಡ್ ಮತ್ತು ಸ್ಟ್ರೀಮಿಂಗ್ ಬಗ್ಗೆ ನಿರ್ಣಯ ಮಾಡುಬಹುದಾಗಿದೆ.
ಅಪ್ಲಿಕೇಶನ್‌ನ ಫೇಸ್‌ಬುಕ್ ಪೇಜ್ >> www.facebook.com/FastFilmz/

2G ನೆಟ್‌ವರ್ಕ್
ಬಳಕೆದಾರರು ಸಿನಿಮಾ ಫೈಲ್ 176MB ವರೆಗೂ ಇದ್ದಲ್ಲಿ 2G ನೆಟ್‌ವರ್ಕ್ ನಲ್ಲಿ ಯಾವುದೇ ಸಮಸ್ಯೆ ಇಲ್ಲದೇ ಸಿನಿಮ ವೀಕ್ಷಿಸಬಹುದಾಗಿದೆ. ಆಪ್‌ನಲ್ಲಿ ಇತರೆ ಭಾಷೆಗಳನ್ನು ಅಪ್‌ಲೋಡ್ ಮಾಡಲಾಗುವುದು ಮತ್ತು ಸಬ್‌ಟೈಟಲ್ ಅನ್ನು ಸಹ ಸಿನಿಮಾಗಳಿಗೆ ನೀಡಲಾಗುವುದು ಎಂದು ಹೇಳಲಾಗಿದೆ.

ಆಪ್ ಕಾರ್ಯನಿರ್ವಹಣೆ ಹೇಗೆ?
ಆಪ್ ಓಪನ್ ಮಾಡಿ ಉಚಿತ ಎಸ್‌ಎಂಎಸ್ ಕೋಡ್‌ನಿಂದ ಲಾಗಿನ್ ಆಗಿರಿ>> 14 ದಿನಗಳು ಉಚಿತವಾಗಿ ಟ್ರಯಲ್‌ಗಾಗಿ ಬಳಸಿ >> ಸಿನಿಮಾಗಳನನು ನೋಡಿರಿ ಮತ್ತು ವೀಡಿಯೊ ಡೌನ್‌ಲೋಡ್ ಮಾಡಿರಿ>> ವೀಡಿಯೊ ಫಾರ್ಮ್ಯಾಟ್ ಸಹ ಆಯ್ಕೆ ಮಾಡಿಕೊಳ್ಳಿರಿ>> 14 ದಿನಗಳ ನಂತರ ರೀಚಾರ್ಜ್ ಮಾಡಿಸಲು ಆಪ್‌ನ ಹೋಮ್ ಸ್ಕ್ರೀನ್‌ನಲ್ಲಿ ಗುಲಾಬಿ ಬಣ್ಣದ 'FastFilmz' ಕ್ಲಿಕ್ ಮಾಡಿ ರೀಚಾರ್ಜ್ ಸೆಲೆಕ್ಟ್ ಮಾಡಿರಿ.
ಅಪ್ಲಿಕೇಶನ್‌ಗಾಗಿ ಕ್ಲಿಕ್ಕಿಸಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470