ಫೋನ್ ಪೇನಿಂದ ಬಳಕೆದಾರಿಗೆ ಮತ್ತೊಂದು ಹೊಸ ಸೇವೆ..!
ದೇಶದಲ್ಲಿ ಡಿಜಿಟಲ್ ವ್ಯವಹಾರವೂ ಹೆಚ್ಚಾಗುತ್ತಿದ್ದು, ಇದೇ ಮಾದರಿಯಲ್ಲಿ ಡಿಜಿಟಲ್ ಪೇಮೆಂಟ್ ಆಪ್ ಗಳ ಭರಾಟೆಯೂ ಅಧಿಕವಾಗಿದೆ. ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪೇಮೆಂಟ್ ಆಪ್ ಆಗಿರುವ ಫೋನ್ ಪೇ ಮೊದಲ ಬಾರಿಗೆ ಪಾಲುದಾರಿಕೆಯನ್ನು ಮಾಡಿಕೊಂಡಿದ್ದು, ಇಂಡಿಯನ್ ಆಯಿಲ್ ಕಾರ್ಪೋರೆಷನ್ ಲಿಮಿಟೆಡ್ ನೊಂದಿಗೆ ಕೈ ಜೋಡಿಸಲು ಮುಂದಾಗಿದೆ. ಈ ಮೂಲಕ ಬಳಕೆದಾರರಿಗೆ ಹೊಸದೊಂದು ಆಯ್ಕೆಯನ್ನು ನೀಡಲಿದೆ.

ಇಂಡಿಯನ್ ಆಯಿಲ್ ಕಾರ್ಪೋರೆಷನ್ ಲಿಮಿಟೆಡ್ ನೊಂದಿಗೆ ಕೈ ಜೋಡಿಸಿರುವ ಫೋನ್ ಪೇ, ಬಂಕ್ ಗಳಲ್ಲಿ ಪೇಟ್ರೋಲ್ ಹಾಕಿಸಿಕೊಂಡ ನಂತರದಲ್ಲಿ ಹಣವನ್ನು ಪಾವತಿಸಲು ತನ್ನ ಬಳಕೆದಾರರಿಗೆ ಅವಕಾಶವನ್ನು ಮಾಡಿಕೊಡಲಿದೆ. ಇದರಿಂದಾಗಿ ಗ್ರಾಹಕರು ಕಾರ್ಡ್ ನೀಡಿ ಹಣ ಪಾವತಿ ಮಾಡುವುದು ಶೀಘ್ರವೇ ತಪ್ಪಲಿದೆ ಎನ್ನಲಾಗಿದೆ.
ಓದಿರಿ: ಜಿಯೋಗೆ ಮಾರಕವಾಗಲಿದೆ ಐಡಿಯಾ-ಫ್ಲಿಪ್‌ಕಾರ್ಟ್ ಪಾಲುದಾರಿಕೆ: ಲಿಮಿಟ್ ಇಲ್ಲದ ಡೇಟಾ ಪ್ಲಾನ್..!
ಈಗಾಗಲೇ ಗ್ರಾಹಕರು ಪೇಟ್ರೋಲ್ ಬಂಕ್ ಗಳಲ್ಲಿ ಕಾರ್ಡ್ ಮೂಲಕ ಹಣವನ್ನು ಪಾವತಿ ಮಾಡುತ್ತಿದ್ದಾರೆ. ಇನ್ನು ಮುಂದೇ ಪೋನ್ ಪೇ ವ್ಯಾಲೆಟ್ ನಿಂದಲೇ ಹಣವನ್ನು ಪಾವತಿ ಮಾಡಬಹುದಾಗಿದೆ. ಸದ್ಯ ಸೇವೆ ಮೊದಲಿಗೆ ಬೆಂಗಳೂರಿನಲ್ಲಿ ಮಾತ್ರವೇ ಆರಂಭವಾಗಿದೆ. ಶೀಘ್ರವೇ ದೇಶದ ಎಲ್ಲಕಡೆಗಳಲ್ಲಿಯೂ ಫೋನ್ ಪೇ ತನ್ನ ಸೇವೆಯನ್ನು ವಿಸ್ತರಿಸಲಿದೆ.

ದಿನೇ ದಿನೇ ಮಾರುಕಟ್ಟೆಯಲ್ಲಿ ಮೊಬೈಲ್ ವ್ಯಾಲೆಟ್ ಗಳ ಸಂಖ್ಯೆಯೂ ಅಧಿಕವಾಗುತ್ತಿದ್ದು, ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಹೆಚ್ಚಿನ ಆಯ್ಕೆಯನ್ನು ನೀಡಿದ ಆಪ್ ಗಳು ಮಾತ್ರವೇ ಮಾರುಕಟ್ಟೆಯಲ್ಲಿ ಉಳಿಯುತ್ತಿವೆ. ಹಿನ್ನಲೆಯಲ್ಲಿ ಫೋನ್ ಪೇ ಗ್ರಾಹಕರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲು ಈ ಹೊಸ ಪಾಲುದಾರಿಕೆಯನ್ನು ಮಾಡಿಕೊಡಲು ಮುಂದಾಗಿದೆ.
ಓದಿರಿ: ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಸೂಪರ್ ಟ್ಯಾಬ್ಲೆಟ್: ಒಂದಲ್ಲ ಎರಡು..!
ಇಂಡಿಯನ್ ಆಯಿಲ್ ಕಾರ್ಪೋರೆಷನ್ ಲಿಮಿಟೆಡ್ ನೊಂದಿಗೆ ಫೋನ್ ಪೇ ಒಪ್ಪಂದವನ್ನು ಮಾಡಿಕೊಂಡಿರುವುದರಿಂದ ಬಳಕೆದಾರರಿಗೆ ಆಕರ್ಷಕ ಆಫರ್ ಗಳನ್ನು ನೀಡಬಹುದು ಎಂದು ಊಹಿಸಲಾಗಿದೆ. ನೀವು ಈ ಲಾಭವನ್ನು ಪಡೆದುಕೊಳ್ಳಲು ಶೀಘ್ರವೇ ಈ ಆಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಿ.


Click it and Unblock the Notifications








