Subscribe to Gizbot

ಜಿಯೋಗೆ ಮಾರಕವಾಗಲಿದೆ ಐಡಿಯಾ-ಫ್ಲಿಪ್‌ಕಾರ್ಟ್ ಪಾಲುದಾರಿಕೆ: ಲಿಮಿಟ್ ಇಲ್ಲದ ಡೇಟಾ ಪ್ಲಾನ್..!

Written By:

ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋದೊಂದಿಗಿನ ಸ್ಪರ್ಧೆಯಲ್ಲಿ ನಷ್ಟಕ್ಕೆ ಗುರಿಯಾಗಿರುವ ಐಡಿಯಾ ಕಂಪನಿಯೂ ಮಾರುಕಟ್ಟೆಯಲ್ಲಿ ಹೊಸ ಗ್ರಾಹಕರನ್ನು ಸೆಳೆಯುವ ಸಲುವಾಗಿ ಹೊಸ ಪ್ರಯತ್ನವೊಂದಕ್ಕೆ ಕೈ ಹಾಕಿದೆ. ಆನ್‌ಲೈನ್ ಶಾಪಿಂಗ್ ತಾಣ ಫ್ಲಿಪ್‌ಕಾರ್ಟಿನೊಂದಿಗೆ ಒಪ್ಪಂದವೊಂದನ್ನು ಮಾಡಿಕೊಂಡಿದ್ದು, ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಸ್ಮಾರ್ಟ್‌ಫೋನ್‌ಗಳೊಂದಿಗೆ ಬೆಸ್ಟ್ ಡೀಲ್ ನೀಡಲಿದೆ.

ಐಡಿಯಾ-ಫ್ಲಿಪ್‌ಕಾರ್ಟ್ ಪಾಲುದಾರಿಕೆ: ಲಿಮಿಟ್ ಇಲ್ಲದ ಡೇಟಾ ಪ್ಲಾನ್..!

ಈಗಾಗಲೇ ಹಲವು ಸ್ಮಾರ್ಟ್‌ಫೋನ್‌ ತಯಾರಿಕ ಕಂಪನಿಗಳೊಂದಿಗೆ ಟೆಲಿಕಾಂ ಕಂಪನಿಗಳು ಒಪ್ಪಂದವನ್ನು ಮಾಡಿಕೊಳ್ಳುವುದು ಸಾಮಾನ್ಯವಾಗಿದ್ದು, ಈ ಬಾರಿ ಐಡಿಯಾ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಫ್ಲಿಪ್‌ಕಾರ್ಟಿನೊಂದಿಗೆಯೇ ಕೈ ಜೋಡಿಸಲಿದೆ. ಇದರಿಂದಾಗಿ ಫ್ಲಿಪ್‌ ಕಾರ್ಟ್‌ ಮತ್ತು ಐಡಿಯಾ ಎರಡಕ್ಕೂ ಲಾಭವಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕ್ಯಾಷ್ ಬ್ಯಾಕ್ ಇನ್ನು ಹಲವು:

ಕ್ಯಾಷ್ ಬ್ಯಾಕ್ ಇನ್ನು ಹಲವು:

ಐಡಿಯಾ ಹೊಸದಾಗಿ ಸ್ಮಾರ್ಟ್‌ಫೋನ್‌ ಕೊಳ್ಳುವವರಿಗೆ ಆಫರ್ ಬಿಡುಗಡೆ ಮಾಡಿದ್ದು, ಇದರಲ್ಲಿ ರೂ.191 ಮತ್ತು ರೂ.256 ಪ್ಲಾನ್‌ಗಳಿದ್ದು, ಇದಲ್ಲದೇ ಕ್ಯಾಷ್ ಬ್ಯಾಕ್, ಡೇಟಾ ಲಾಭ ಸೇರಿದಂತೆ ವಿಶೇಷ ರಿಯಾಯಿತಿಗಳನ್ನು ನೀಡುವಂತಹ ಆಫರ್ ಗಳನ್ನು ಕಾಣಬಹುದಾಗಿದೆ.

ಲಿಮಿಟ್ ಇಲ್ಲದ ಆಫರ್:

ಲಿಮಿಟ್ ಇಲ್ಲದ ಆಫರ್:

ಇದಲ್ಲದೇ ಐಡಿಯಾ ತನ್ನ ಬಳಕೆದಾರರಿಗೆ ರೂ.356 ಪ್ಲಾನ್ ನೀಡಲಿದ್ದು, ಇದರಲ್ಲಿ ಬಳಕೆದಾರರಿಗೆ 30GB ಡೇಟಾ ಬಳಕೆಗೆ ದೊರೆಯಲಿದ್ದು, ಇದರಲ್ಲಿ ಯಾವುದೇ ಮಿತಿ ಇಲ್ಲದೇ ಡೇಟಾವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಉಚಿತ ಕರೆಗಳನ್ನು ಮಾಡಬಹುದಾಗಿದೆ.

ಇನ್ನೊಂದು ಆಫರ್:

ಇನ್ನೊಂದು ಆಫರ್:

ಇದಲ್ಲದೇ ರೂ.191ಕ್ಕೆ ರಿಚಾರ್ಜ್ ಮಾಡಿಸಿಕೊಂಡರೆ 10GB ಡೇಟಾ ಬಳಕೆಗೆ ದೊರೆಯಲಿದ್ದು, ಇದರಲ್ಲಿಯೂ ಬಳಕೆದಾರರಿಗೆ ಯಾವುದೇ ಮಿತಿಯನ್ನು ವಿಧಿಸಲಾಗಿಲ್ಲ. ಒಂದೇ ದಿನಬೇಕಾದರು ಇಷ್ಟು ಡೇಟಾವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

How to Sharing a Mobile Data Connection with Your PC (KANNADA)
ಎಲ್ಲಾ ಬ್ರಾಂಡ್:

ಎಲ್ಲಾ ಬ್ರಾಂಡ್:

ಐಡಿಯಾ ಈ ಬಾರಿ ಫ್ಲಿಪ್ ಕಾರ್ಟ್‌ನಲ್ಲಿರುವ 4G ಸ್ಮಾರ್ಟ್‌ಫೋನ್‌ಗಳ ಮೇಲೆ ಈ ಆಫರ್ ನೀಡಲಿದ್ದು, ಲಿನೊವೊ, ಮೊಟೊರೊಲಾ ಮತ್ತು ಪ್ಯಾನಸೋನಿಕ್ ಫೋನ್‌ಗಳ ಮೇಲೆ ಹೆಚ್ಚಿನ ಲಾಭವನ್ನು ಕಾಣಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Idea partners with Flipkart to offer best deals on 4G smartphones. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot