ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಸೂಪರ್ ಟ್ಯಾಬ್ಲೆಟ್‌: ಒಂದಲ್ಲ ಎರಡು..!

|

ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್ ಮತ್ತು ಫೀಚರ್ ಫೋನ್‌ ಗಳು ಸಾಕಷ್ಟು ಸದ್ದು ಮಾಡುತ್ತಿದೆ. ಸದ್ಯ ಇದೇ ಸಾಲಿಗೆ ಸೇರಿಕೊಳ್ಳಲಿದೆ ಟ್ಯಾಬ್ಲೆಟುಗಳು. ಏಕೆಂದರೆ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಮಾರಾಟವಾಗಲಿದೆ. ಶೀಘ್ರವೇ ಮಾರುಕಟ್ಟೆಯಲ್ಲಿ ಅಲ್ಕಾಟೆಲ್ ಮತ್ತು ಐಬಾಲ್ ಹೊಸ ಮಾದರಿಯ ಟ್ಯಾಬ್ಲೆಟ್ ಗಳು ಸದ್ದು ಮಾಡಲಿದೆ.

ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಸೂಪರ್ ಟ್ಯಾಬ್ಲೆಟ್‌: ಒಂದಲ್ಲ ಎರಡು..!

ಬಾರ್ಸಿಲೋನದಲ್ಲಿ ನಡೆಯಲಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಸಮಾವೇಶದಲ್ಲಿ ಅಲ್ಕಾಟೆಲ್ ಮತ್ತು ಐಬಾಲ್ ಹೊಸ ಮಾದರಿಯ ಟ್ಯಾಬ್ಲೆಟ್ ಗಳನ್ನು ಬಿಡುಗಡೆ ಮಾಡಲಿದೆ ಎನ್ನಲಾಗಿದ್ದು, ರೂ.10000ಕ್ಕೆ ಉತ್ತಮ ಗುಣಮಟ್ಟದ ಟ್ಯಾಬ್ಲೆಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಕಾಣಿಸಿಕೊಳ್ಳಲಿದೆ.

ಅಲ್ಕಾಟೆಲ್ A3 10 Wi-Fi:

ಅಲ್ಕಾಟೆಲ್ A3 10 Wi-Fi:

ಆಂಡ್ರಾಯ್ಡ್ ಲಾಲಿಪಾಪ್ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುವ ಅಲ್ಕಾಟೆಲ್ A3 10 Wi-Fi ಟ್ಯಾಬ್ಲೆಟ್ ನಲ್ಲಿ 10 ಇಂಚಿನ HD ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಅಲ್ಲದೇ 1.3GHz ವೇಗದ ಕ್ವಾಡ್ ಕೋರ್ ಮೀಡಿಯಾ ಟೆಕ್ ಪ್ರೋಸೆಸರ್ ಜೊತೆಗೆ 1GB RAM ಅನ್ನು ವೇಗದ ಕಾರ್ಯಚರಣೆಗೆ ಅಳವಡಿಸಿದ್ದು. ಅಲ್ಲದೇ 5MP ಹಿಂಭಾಗದ ಕ್ಯಾಮೆರಾ ಮತ್ತು 2 MP ಮುಂಭಾಗದ ಕ್ಯಾಮೆರಾವನ್ನು ನೋಡಬಹುದಾಗಿದೆ.

ಅಲ್ಕಾಟೆಲ್ A3 10 Wi-Fi ವಿಶೇಷತೆ:

ಅಲ್ಕಾಟೆಲ್ A3 10 Wi-Fi ವಿಶೇಷತೆ:

16GB ಇಂಟರ್ನಲ್ ಮೆಮೊರಿಯೊಂದಿಗೆ ಕಾಣಿಸಿಕೊಳ್ಳುವ ಈ ಟ್ಯಾಬ್ಲೆಟ್, 32GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಹೊಂದಿದೆ. Wi-Fi ಕನೆಷನ್ ಲಭ್ಯವಿದ್ದು, 4060mAh ಬ್ಯಾಟರಿ ಈ ಟ್ಯಾಬ್ ನಲ್ಲಿ ನೀಡಲಾಗಿದೆ.

ಐಬಾಲ್ ಸ್ಲೈಡ್ ಎಂಝೊ V 8:

ಐಬಾಲ್ ಸ್ಲೈಡ್ ಎಂಝೊ V 8:

ಆಂಡ್ರಾಯ್ಡ್ 7.0 ನೌಗಟ್ ನಲ್ಲಿ ಐಬಾಲ್ ಸ್ಲೈಡ್ ಎಂಝೊ V 8 ಕಾರ್ಯನಿರ್ವಹಿಸಲಿದ್ದು, 7 ಇಂಚಿನ HD ಡಿಸ್‌ ಪ್ಲೇಯನ್ನು ಹೊಂದಿದೆ. ಕ್ವಾಡ್ ಕೋರ್ ಪ್ರೋಸೆಸರ್ ನೊಂದಿಗೆ 2GB RAM ಅನ್ನು ನೀಡಲಿದೆ. ಅಲ್ಲದೇ 5MP ಹಿಂಭಾಗದ ಕ್ಯಾಮೆರಾ ಮತ್ತು 2 MP ಮುಂಭಾಗದ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಐಬಾಲ್ ಸ್ಲೈಡ್ ಎಂಝೊ V 8 ವಿಶೇಷತೆ:

ಐಬಾಲ್ ಸ್ಲೈಡ್ ಎಂಝೊ V 8 ವಿಶೇಷತೆ:

16GB ಇಂಟರ್ನಲ್ ಮೆಮೊರಿಯೊಂದಿಗೆ ಕಾಣಿಸಿಕೊಳ್ಳುವ ಈ ಟ್ಯಾಬ್ಲೆಟ್, 32GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಹೊಂದಿದೆ. Wi-Fi ಕನೆಷನ್ ಲಭ್ಯವಿದ್ದು, ಬ್ಲೂಟೂತ್ ಸಹ ಇದರಲ್ಲಿದೆ. 3500mAh ಬ್ಯಾಟರಿ ಈ ಟ್ಯಾಬ್ ನಲ್ಲಿ ನೀಡಲಾಗಿದೆ.

ಬೆಲೆ:

ಬೆಲೆ:

ಈ ಎರಡು ಟ್ಯಾಬ್‌ ಗಳು ಅತ್ಯಂತ ಕಡಿಮೆ ಬೆಲೆಗೆ ದೊರೆಯುತ್ತಿದೆ ಎನ್ನಲಾಗಿದೆ. ಅಲ್ಕಾಟೆಲ್ A3 10 Wi-Fi ರೂ. 6,999ಕ್ಕೆ ಮಾರಾಟವಾಗುತ್ತಿದ್ದು, ಇದರೊಂದಿಗೆ ಐಬಾಲ್ ಸ್ಲೈಡ್ ಎಂಝೊ V 8 ರೂ.8,999ಕ್ಕೆ ಮಾರಾಟವಾಗುತ್ತಿದೆ.

ರೆಡ್‌ಮಿ ನೋಟ್ 4 ನಲ್ಲಿರೋ ಈ ಫೀಚರ್ಸ್ ಯಾರೂ ಬಳಸುತ್ತಿಲ್ಲ.!!

ಓದಿರಿ: ಯಾರಿಗೂ ನಿಮ್ಮ ನಂಬರ್ ತಿಳಿಯದಂತೆ ಕಾಲ್ ಮಾಡುವುದು ಹೇಗೆ..?

Most Read Articles
Best Mobiles in India

English summary
Alcatel A3 10 Wi-Fi, iBall Slide Enzo V8 Tablets Launched in India. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X