ಜಿಯೋ ಬಳಕೆದಾರರೇ ಇಲ್ಲಿ ನೋಡಿ..!!! ನಿಮಗೊಂದು ಅಪ್ಢೇಟ್ ಇದೆ..!!!!
ಮೂವಿಗಾಗಿ, ವಿಡಿಯೋಗಾಗಿ, ಮ್ಯೂಸಿಕ್ ಆಗಿ ಒಂದೊಂದಂತೆ ಅನೇಕ ಆಪ್ ಗಳನ್ನು ನೀಡಿದೆ. ಅಲ್ಲಿಯೇ ಎಲ್ಲವನ್ನು ನೀಡುವ ಕಾರ್ಯವನ್ನು ಮಾಡುತ್ತಿದೆ.
ರಿಲಯನ್ಸ್ ಮಾಲೀಕತ್ವದ ಜಿಯೋ ಕೇವಲ 4G ಸೇವೆಯನ್ನು ಮಾತ್ರವಲ್ಲದೇ ತನ್ನ ಗ್ರಾಹಕರಿಗೆ ಅನೇಕ ಸೇವೆಗಳನ್ನು ನೀಡುತ್ತಿದೆ. ಅದರಲ್ಲೂ ತನ್ನದೇ ಆದ ಹಲವಾರು ಆಪ್ ಬಿಡುಗಡೆ ಮಾಡಿದ್ದು, ಮೂವಿಗಾಗಿ, ವಿಡಿಯೋಗಾಗಿ, ಮ್ಯೂಸಿಕ್ ಆಗಿ ಒಂದೊಂದಂತೆ ಅನೇಕ ಆಪ್ ಗಳನ್ನು ನೀಡಿದೆ. ಅಲ್ಲಿಯೇ ಎಲ್ಲವನ್ನು ನೀಡುವ ಕಾರ್ಯವನ್ನು ಮಾಡುತ್ತಿದೆ.

ಓದಿರಿ: BSNL 4GB ಡೇಟಾ, ಏರ್ಟೆಲ್ 1000GB ಡೇಟಾ ಮತ್ತು ಜಿಯೋ 20% ಹೆಚ್ಚುವರಿ ಡೇಟಾ ಆಫರ್ ಹಾಗೂ ಇನ್ನು ಹಲವು..!!!
ಅವುಗಳಲ್ಲಿ ಹೆಚ್ಚಿನ ಖ್ಯಾತಿಯನ್ನು ಗಳಿಸಿಕೊಂಡಿರುವ ಜಿಯೋ ಟಿವಿ ಆಪ್ ಈಗ ಸದ್ಯ ಆಪ್‌ಡೇಟ್ ಆಗಿದ್ದು, ಅತೀ ಹೆಚ್ಚಿನ ಟಿವಿ ಚಾನಲ್ ಗಳನ್ನು ತನ್ನ ಬಳಕೆದಾರರಿಗೆ ನೀಡಲು ಮುಂದಾಗಿದೆ. ಸದ್ಯ ಆಪ್ ಮಾರುಕಟ್ಟೆಯಲ್ಲಿ ಟಿವಿ ಆಪ್ ಗಳ ಸ್ಪರ್ಧೆ ಹೆಚ್ಚಾದ ಹಿನ್ನಲೆಯಲ್ಲಿ ಜಿಯೋ ಬೆಸ್ಟ್ ಸೇವೆಯನ್ನು ನೀಡಬೇಕು ಎನ್ನುವ ಸಲುವಾಗಿ ಆಪ್ಡೇಟ್ ನೀಡಿದೆ.
400ಕ್ಕೂ ಹೆಚ್ಚಿನ ಚಾನಲ್ ಗಳ ಸೇವೆಯನ್ನು ನೀಡುತ್ತಿರುವ ಜಿಯೋ ಟಿವಿ ಆಪ್ ನಲ್ಲಿ 15ಕ್ಕೂ ಹೆಚ್ಚಿನ ಭಾಷೆಗ ಟಿವಿ ಚಾನಲ್ ಗಳನ್ನು ಕಾಣಬಹುದಾಗಿದೆ. ಇದನ್ನು ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟಿನಲ್ಲಿ ಬಳಕೆ ಮಾಡಬಹುದಾಗಿದೆ. ಸದ್ಯ ದೊರೆತಿರುವ ಆಪ್ ಡೇಟ್ ಕೇವಲ ಐಎಸಓ ಬಳಕೆದಾರಿಗಾಗಿದೆ.

ಓದಿರಿ: ವೈರಲ್ ಆಗಿರುವ ಈ ಪೋಟೋ ವಿಶೇಷತೆ ಏನು..? ನೀವು ಕಂಡುಹಿಡಿಯಲ್ಲ..!!!
ಹೊಸ ಆಪ್‌ಡೇಟ್ ನಲ್ಲಿ ಆಪ್‌ನ ವಿನ್ಯಾಸವನ್ನು ಕೊಂಚ ಬದಲಾಯಿಸಲಾಗಿದೆ, ಅಲ್ಲದೇ ಬಣ್ಣಕೂಡ ಕೊಂಚ ಬದಲಾದಂತೆ ಕಾಣುತ್ತಿದೆ. ಅಲ್ಲದೇ ಆಪ್ ಅನ್ನು ಲೈಟರ್ ಆಗಿ ಮಾಡಿದ್ದು, ಕಡಿಮೆ ಬ್ಯಾಂಡ್ ವಿಡ್ತ್ ನಲ್ಲಿಯೂ ಕಾರ್ಯನಿರ್ವಹಿಸುವಂತೆ ಮಾಡಿದೆ. ಅಲ್ಲದೇ ನೊಟಿಫಿಕೇಷನ್ ನಲ್ಲಿಯೂ ಕೊಂಚ ಬದಲಾವಣೆಯನ್ನು ಮಾಡಿದೆ.
ಈ ಆಪ್‌ಡೇಟ್ ಆಪಲ್ ಸ್ಟೋರಿನಲ್ಲಿ ಲಭ್ಯವಿದ್ದು, ವರ್ಷನ್ ನಂ 2.0.1 ಆಗಿದ್ದು, 46.7MB ಗಾತ್ರದಲ್ಲಿದೆ. ಈ ಆಪ್ಡೇಟ್ ಶೀಘ್ರವೇ ಆಂಡ್ರಾಯ್ಡ್ ಬಳಕೆದಾರಿಗೂ ದೊರೆಯುವ ಸಾಧ್ಯತೆ ಇದೆ.


Click it and Unblock the Notifications








