ಸಚಿನ್ ತೆಂಡೂಲ್ಕರ್ ಸೆಕೆಂಡ್ ಇನ್ನಿಂಗ್ಸ್: ಸಚಿನ್ 100MB ಆಪ್..!

Written By:

ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ, ಅದು ಗಾಯಕನಾಗಿ. ತಮ್ಮದೇ ಆಪ್ ಬಿಡುಗೆಡೆ ಮಾಡಿರುವ ಸಚಿನ್, '100MB ಆಪ್' ಗಾಗಿ ಪ್ರೋಮೊಷನ್ ಹಾಡನ್ನು ಹಾಡುವ ಮೂಲಕ ತಾವು ಗಾಯಕರು ಎಂಬುದನ್ನು ಜಗತ್ತಿಗೆ ತೋರಿಸಿದ್ದಾರೆ.

ಸಚಿನ್ ತೆಂಡೂಲ್ಕರ್ ಸೆಕೆಂಡ್ ಇನ್ನಿಂಗ್ಸ್: ಸಚಿನ್ 100MB ಆಪ್..!

ಓದಿರಿ: ಗೂಗಲ್ ನಿಂದ ತಿಂಗಳಿಗೆ 10GB ಡೇಟಾ: ಗೂಗಲ್ ಪ್ಲಾನ್ ಏನು..?

ಇಷ್ಟು ದಿನ ಬ್ಯಾಟ್ ಬೀಸುತ್ತಿದ್ದ ಸಚಿನ್, ಈಗ ಸಿನಿಮಾ, ಹಾಡು ಶುರು ಮಾಡಿಕೊಂಡಿದ್ದಾರೆ. ಸದ್ಯ ತಮ್ಮ ಅಭಿಮಾನಿಗಳಿಗಾಗಿ '100MB ಆಪ್ ಬಿಡುಗಡೆ ಮಾಡಿದ್ದಾರೆ. ಇತ್ತಿಚೀನ ದಿನಗಳಲ್ಲಿ ಸೆಲೆಬ್ರಿಟಿಗಳು ತಮ್ಮದೇ ಆಪ್ ಬಿಡುಗಡೆ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಸಚಿನ್ ಸಹ ತಮ್ಮದೇ ಆಪ್ ಬಿಡುಗಡೆ ಮಾಡುವ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಸೇರಲು ಮುಂದಾಗಿದ್ದಾರೆ.

ಫುಣೆ ಮೂಲದ ಡಿಜಿಟಲ್ ಮಿಡೀಯಾ ಅಂಡ್ ಎಂಟರ್‌ಟೆನ್ ಮೆಂಟ್ ಗ್ರೂಪ್ ಈ '100MB ಆಪ್' ಅಭಿವೃದ್ದಿ ಮಾಡಿದ್ದು, ಸದ್ಯ ಈ ಆಪ್ ಆಂಡ್ರಾಯ್ಡ್ ಮತ್ತು ಐಎಸ್ಓಗಳಲ್ಲಿ ಬಳಕೆ ಲಭ್ಯವಿದ್ದು, ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್‌ಗಳಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಸಚಿನ್ ತೆಂಡೂಲ್ಕರ್ ಸೆಕೆಂಡ್ ಇನ್ನಿಂಗ್ಸ್: ಸಚಿನ್ 100MB ಆಪ್..!

ಓದಿರಿ: ಜಿಯೋ ಸಮ್ಮರ್ ಸರ್‌ಪ್ರೈಸ್: ಮತ್ತೆ ಮೂರು ತಿಂಗಳು ಉಚಿತ ಸೇವೆ ಪಡೆದುಕೊಳ್ಳುವುದು ಹೇಗೆ..?

ಈ ಮೊಬೈಲ್ ಆಪ್ ಸಚಿನ್ ಫ್ಯಾನ್‌ಗಳಿಗಾಗಿಯೇ ನಿರ್ಮಾಣ ಮಾಡಲಾಗಿದ್ದು, ಇದರಲ್ಲಿ ಸಚಿನ್ ಜೀವನ ಕುರಿತ ಎಲ್ಲಾ ಮಾಹಿತಿಗಳು ಲಭ್ಯವಾಗಲಿದೆ ಎನ್ನಲಾಗಿದೆ. ಸಚಿನ್ ಕ್ರಿಕೆಟ್ ಜೀವನದ ಎಲ್ಲಾ ಅಂಕಿ-ಅಂಶಗಳು ಇದರಲ್ಲಿ ಅಡಕವಾಗಿದೆ ಎಂದು ಹೇಳಲಾಗಿದೆ.

ಈ ಆಪ್ ಪ್ರೋಮೊಷನ್‌ಗಾಗಿ ಸಚಿನ್-ಸೋನು ನಿಗಮ್ ಜೊತೆಯಾಗಿ ಹಾಡೊಂದನ್ನು ಹಾಡಿದ್ದಾರೆ. ಇದು ಸಹ ಯೂಟೂಬ್‌ನಲ್ಲಿ ಸಖತ್ ಹಿಟ್ ಆಗಿದೆ. ಈ ಆಪ್‌ನಲ್ಲಿ ಬಳಕೆದಾರಿಗಾಗಿ ಕ್ವಿಜ್ ಗಳಿರಲಿದ್ದು, ರನ್ ಗಳಿಸಬಹುದಾಗಿದೆ. ಈ ಆಪ್ 8MB ಗಾತ್ರದಲ್ಲಿದೆ ಎನ್ನಲಾಗಿದೆ.

Read more about:
English summary
Cricket Wali Beat Pe, a song sung by Sachin Tendulkar himself and singer Sonu Nigam was premiered on the 100MB app. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot