Subscribe to Gizbot

ಗೂಗಲ್ ನಿಂದ ತಿಂಗಳಿಗೆ 10GB ಡೇಟಾ: ಗೂಗಲ್ ಪ್ಲಾನ್ ಏನು..?

Written By:

ವಿಶ್ವದಲ್ಲಿ ಅತೀ ಹೆಚ್ಚು ಯುವಜನತೆಯನ್ನು ಹೊಂದಿರುವ ದೇಶ ಭಾರತವಾಗಿದ್ದು, ಈ ಹಿನ್ನಲೆಯಲ್ಲಿ ಬಹುತೇಕರು ಇದರ ಲಾಭವನ್ನು ಪಡೆದುಕೊಳ್ಳಲು ಮುಂದಾಗಿದ್ದಾರೆ. ಈ ಸ್ಪರ್ಧೆಯ ಮುಂಚುಣಿಯಲ್ಲಿ ಗೂಗಲ್ ನಿಂತಿದೆ.

ಗೂಗಲ್ ನಿಂದ ತಿಂಗಳಿಗೆ 10GB ಡೇಟಾ: ಗೂಗಲ್ ಪ್ಲಾನ್ ಏನು..?

ಓದಿರಿ: ಜಿಯೋ ಸಮ್ಮರ್ ಸರ್‌ಪ್ರೈಸ್: ಮತ್ತೆ ಮೂರು ತಿಂಗಳು ಉಚಿತ ಸೇವೆ ಪಡೆದುಕೊಳ್ಳುವುದು ಹೇಗೆ..?

ಯುವ ಜನತೆಯೂ ಇಂದಿನ ದಿನಗಳಲ್ಲಿ ಇಂಟರ್ನೆಟ್‌ನಲ್ಲಿ ಸಾಕಷ್ಟು ಸಮಯ ಕಳೆಯುತ್ತಿರುವುದನ್ನೇ ಬಂಡವಾಳ ಮಾಡಿಕೊಳ್ಳಲು ಮುಂದಾಗಿರುವ ಗೂಗಲ್ ಪ್ರತಿ ತಿಂಗಳು ಪ್ರತಿ ಭಾರತೀಯನಿಗೂ 10 GB ಡೇಟಾವನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗ್ರಾಮೀಣ ಭಾಗಕ್ಕೂ ಇಂಟರ್‌ನೆಟ್ ಸೇವೆ:

ಗ್ರಾಮೀಣ ಭಾಗಕ್ಕೂ ಇಂಟರ್‌ನೆಟ್ ಸೇವೆ:

ಗ್ರಾಮೀಣ ಭಾಗಕ್ಕೂ ಇಂಟರ್‌ನೆಟ್ ಸೇವೆಯನ್ನು ವಿಸ್ತರಿಸುವ ಯೋಜನೆಯನ್ನು ರೂಪಿಸಿರುವ ಗೂಗಲ್, ಭಾರತೀಯ ಮಾರುಕಟ್ಟೆಯಲ್ಲಿ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲು ಸಿದ್ಧತೆ ನಡೆಸಿದೆ. ದೇಶದಲ್ಲಿ ಮೊಬೈಲ್ ಬಳಕೆದಾರರಿಗೆ ಇಂಟರ್‌ನೆಟ್‌ ಸೇವೆಯು ದೊರೆತರೆ ತನಗೆ ಲಾಭ ಎಂದು ಅರಿತಿರುವ ಗೂಗಲ್, ಈಗಾಗಲೇ ದೇಶದ ಹಲವು ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೇವೆಯನ್ನು ನೀಡಲು ಮುಂದಾಗಿದೆ.

 ಉಚಿತ ವೈ-ಫೈ ಸೇವೆ

ಉಚಿತ ವೈ-ಫೈ ಸೇವೆ

ಗೂಗಲ್ ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೇವೆಯ ಮಾದರಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿಯೂ ಜನರಿಗೆ ಉಚಿತ ಇಂಟರ್‌ನೆಟ್ ಸೇವೆಯನ್ನು ನೀಡಿ, ಆನ್‌ಲೈನ್ ವ್ಯವಹಾರಗಳು, ಸೋಶಿಯಲ್ ಮೀಡಿಯಾ ಬಳಕೆಯನ್ನು ಮತ್ತಷ್ಟು ಹೆಚ್ಚಿಸಲು, ಹಾಗೇ ಸುಲಭವಾಗಿಸಲು ಸರಕಾರದೊಂದಿಗೆ ಕೈ ಜೋಡಿಸಲಿದೆ.

10 GB ಡೇಟಾ:

10 GB ಡೇಟಾ:

ಈ ಕುರಿತು ಆಂಗ್ಲ ಮಾಧ್ಯಮದೊಂದಿಗೆ ಮಾತನಾಡಿರುವ ಭಾರತದ ಗೂಗಲ್ ಮುಖ್ಯಸ್ಥ ಗುಲ್ಜರ್ ಆಜಾದ್, ದೇಶದಲ್ಲಿ ಪ್ರತಿಯೊಬ್ಬರಿಗೂ ತಿಂಗಳಿಗೆ ಕನಿಷ್ಟ ಪಕ್ಷ 10 GB ಡೇಟಾ ಬಳಕೆ ದೊರೆಯುವಂತೆ ಮಾಡುವುದು ನಮ್ಮ ಗುರಿ, ನಾವು ಈ ಗುರಿಯನ್ನು ಇನ್ನು 4-5 ವರ್ಷಗಳಲ್ಲಿ ತಲುಪಲಿದ್ದೇವೆ, ಈ ಮೂಲಕ ಭಾರತದಲ್ಲಿ ಡಿಜಿಟಲ್ ಕ್ರಾಂತಿಗೆ ಗೂಗಲ್ ತನ್ನ ಕೊಡುಗೆಯನ್ನು ನೀಡಲಿದೆ. ಅಲ್ಲದೇ ಗೂಗಲ್ ಈ ಕಾರ್ಯದಲ್ಲಿ ಈಗಾಗಲೇ ತೊಡಗಿಕೊಂಡಿದೆ ಎಂದು ಹೇಳಿದ್ದಾರೆ.

ಡೇಟಾ ಕ್ರಾಂತಿಯಿಂದ ಲಾಭ:

ಡೇಟಾ ಕ್ರಾಂತಿಯಿಂದ ಲಾಭ:

ಕೆಲವು ಕಡೆಗಳಲ್ಲಿ ಉಚಿತ ವೈ-ಫೈ ನೀಡುವ ಮಾದರಿಯಲ್ಲೇ ಕಡಿಮೆ ಬೆಲೆಗೆ ಡೇಟಾವನ್ನ ನೀಡುವ ಕುರಿತು ಯೋಜನೆಯನ್ನು ರೂಪಿಸಲಾಗುತ್ತಿದ್ದು, ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಆಲೋಚನೆಯೂ ಇದೇ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ದೇಶದಲ್ಲಿ ಡೇಟಾ ಕ್ರಾಂತಿಯನ್ನು ಹುಟ್ಟುಹಾಕಿ, ಆ ಮೂಲಕ ಲಾಭಗಳಿಸುವ ಆಲೋಚನೆಯಲ್ಲಿದೆ ಗೂಗಲ್.

ಜಿಯೋ ಹಾದಿ:

ಜಿಯೋ ಹಾದಿ:

ಜಿಯೋ ದೇಶದಲ್ಲಿ ಉಚಿತ ಇಂಟರ್ನೆಟ್ ನೀಡಿದ ಸಂದರ್ಭದಲ್ಲಿ ದೇಶದಲ್ಲಿ ಡೇಟಾ ಬಳಕೆಯೂ ನಾಟಕೀಯವಾಗಿ ಏರುಗತಿಯಲ್ಲಿ ಸಾಗಿದನ್ನು ನೋಡಿದ ಗೂಗಲ್, ಇದೇ ಮಾದರಿಯಲ್ಲಿ ಜನರಿಗೆ ಡೇಟಾವನ್ನು ಓದಗಿಸಿ ಗೂಗಲ್ ಬಳಕೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಆದಾಯಗಳಿಸುವ ಪ್ಲಾನ್ ಸಿದ್ದಪಡಿಸುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
Google has a plan to get Indians hooked on to data and it sees Wi-Fi as the cornerstone for that plan. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot