ಉಬರ್‌ನಿಂದ ಫುಡ್ ಡಿಲಿವರಿ ಆಪ್ 'ಉಬರ್ ಈಟ್ಸ್'

Written By:

ಆಪ್ ಆಧಾರಿತ ಕಾಬ್ ಸೇವೆಯನ್ನು ನೀಡುವುದರಲ್ಲಿ ಮುಂಚುಣಿಯಲ್ಲಿರುವ ಉಬರ್ ಸಂಸ್ಥೆ ಭಾರತದಲ್ಲಿ ಫುಡ್ ಡಿಲಿವರಿ ಸೇವೆಯನ್ನು ಆರಂಭಿಸಲು ಸಿದ್ಧತೆಯನ್ನು ನಡೆಸಿದೆ ಎನ್ನಲಾಗಿದೆ. 'ಉಬರ್ ಈಟ್ಸ್' ಎಂದು ಇದಕ್ಕೆ ಹೆಸರಿಡಲಾಗಿದೆ. ಈ ವರ್ಷ ಎರಡನೇ ಭಾಗದಲ್ಲಿ ಈ ಆಪ್ ಲಾಂಚ್ ಆಗುವ ಸಾಧ್ಯತೆ ಇದೆ.

ಉಬರ್‌ನಿಂದ ಫುಡ್ ಡಿಲಿವರಿ ಆಪ್ 'ಉಬರ್ ಈಟ್ಸ್'

ಓದಿರಿ: ಉಚಿತವಾಗಿ ಆನ್‌ಲೈನಿನಲ್ಲಿ ಪಾಸ್‌ಪೋರ್ಟ್ ಮಾಡಿಸಿಕೊಳ್ಳುವುದು ಹೇಗೆ..? ಇಲ್ಲಿದೇ ಮಾಹಿತಿ

ಈಗಾಗಲೇ ಉಬರ್ ಭಾರತದಲ್ಲಿ ಹಲವಾರು ರೆಸ್ಟೊರೆಂಟ್ ಗಳ ಪಾಟನರ್ಶಿಪ್ ಪಡೆದುಕೊಂಡಿದ್ದು, ಭಾರತದಲ್ಲಿ ಮೊದಲು 6 ನಗರಗಳಲ್ಲಿ ತನ್ನ ಫುಡ್ ಡಿಲಿವರಿ ಸೇವೆಯನ್ನು ಆರಂಭಿಸಲಿದೆ. ಬೆಂಗಳೂರು, ಹೈದರಬಾದ್, ಪುಣೆ, ಮುಂಬೈ, ಚೆನ್ನೈ ಮತ್ತು ಗುರುಗಾವ್ ಗಳಲ್ಲಿ ಮೊದಲು ಉಬರ್ ಈಟ್ಸ್ ಗೆ ಚಾಲನೆ ದೊರೆಯಲಿದೆ ನಂತರದಲ್ಲಿ ಈ ಸೇವೆಯನ್ನು ಎಲ್ಲಾ ನಗರಗಳಿಗೂ ವಿಸ್ತರಿಸುವ ಸಾಧ್ಯತೆಗಳಿದೆ.

ಈಗಾಗಲೇ 'ಉಬರ್ ಈಟ್ಸ್' ಫುಡ್ ಡಿಲಿವರಿ ಸೇವೆಯೂ 65 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮೊದಲಿಗೆ ಅಮೆರಿಕಾದ ಲಾಸ್‌ ಎಂಜಲಿಸ್‌ನಲ್ಲಿ ಕಾರ್ಯಾರಂಭ ಮಾಡಿತು ಎನ್ನಲಾಗಿದೆ. ಈ ಆಪ್ ಪ್ಲೇ ಸ್ಟೋರ್‌ ಮತ್ತು ಆಪ್‌ ಸ್ಟೋರ್‌ನಲ್ಲಿ ಲಭ್ಯವಿರಲಿದೆ ಎನ್ನಲಾಗಿದೆ.

ಉಬರ್‌ನಿಂದ ಫುಡ್ ಡಿಲಿವರಿ ಆಪ್ 'ಉಬರ್ ಈಟ್ಸ್'

ಓದಿರಿ: ಜಿಯೋ DTH ಮೂರು ತಿಂಗಳಲ್ಲ, 6 ತಿಂಗಳು ಫ್ರೀ...!!

'ಉಬರ್ ಈಟ್ಸ್' ಸದ್ಯ ಫುಡ್ ಡಿಲಿವರಿ ಮಾರುಕಟ್ಟೆಯಲ್ಲಿರುವ ಜೋಮಾಟೋ, ಸ್ವಾಗಿ, ಫಾಸೋಸ್, ಯಮಿಸ್ಟ್ ಮತ್ತು ಫುಡ್ ಪಾಂಡಗಳಿಗೆ ನೇರ ಸ್ಪರ್ಧೆಯನ್ನು ನೀಡಲಿದೆ ಎನ್ನಲಾಗಿದೆ. ಉಬರ್ ಕ್ಯಾಬ್ ಮತ್ತು ಉಬರ್ ಈಟ್ಸ್ ಎರಡನ್ನು ಉಬರ್‌ನ ಬೇರೆ ಬೇರೆ ತಂಡಗಳು ನಿರ್ವಹಿಸಲಿದ್ದು, ಈಗಾಗಲೇ ತಯಾರಿ ಆರಂಭವಾಗಲಿದೆ ಎನ್ನಲಾಗಿದೆ.

ಓದಿರಿ: ಜಿಯೋ ಪ್ರೈಮ್ ಸದಸ್ಯತ್ವ ಕೊನೆ ಆಯ್ತು: ಉಳಿದ ಜಿಯೋ ಗ್ರಾಹಕರ ಕಥೆ ಏನು..?

ಫುಡ್ ಡಿಲಿವರಿ ವಿಭಾಗದಲ್ಲಿ ಹೊಸ ದಾರಿಯನ್ನು ಹುಡುಕುತ್ತಿರುವ ಉಬರ್ ಹೊಸ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದ್ದು, ದೊಡ್ಡ ಮಟ್ಟದಲ್ಲಿ ತನ್ನ ಜಾಲಗಳನ್ನು ವಿಸ್ತರಿಸಿಕೊಳ್ಳಲಿದೆ. ಇದಕ್ಕಾಗಿ ಈಗ ತಂಡವನ್ನು ಕಟ್ಟುವ ಕೆಲಸವೂ ಜೋರಾಗಿ ನಡೆದಿದೆ. ಮೊದಲು ಆರು ನಗರದಲ್ಲಿ ಯಶಸ್ಸು ಕಂಡ ನಂತರ ಈ ವರ್ಷದ ಕೊನೆಗೆ ಎಲ್ಲಾ ನಗರಗಳಿಗೂ ತನ್ನ ಸೇವೆಯನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ.

Read more about:
English summary
The food delivery space in India is getting hotter. UberEATS is set to launch in India in the second quarter of 2017. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot