ಜಿಯೋ DTH ಮೂರು ತಿಂಗಳಲ್ಲ, 6 ತಿಂಗಳು ಫ್ರೀ...!!

|

ದೇಶವೇ ಎದುರು ನೋಡುತ್ತಿರುವ ಜಿಯೋ DTH ಸೇವೆಯ ಕುರಿತಂತೆ ಮಾಹಿತಿ ಲಭ್ಯವಾಗಿದ್ದು, DTH ಸೇವೆಯ ಲಾಂಚ್‌ಗೆ ಜಿಯೋ ಸದ್ದಿಲ್ಲದೇ ಸಿದ್ಧತೆ ನಡೆಸಿದೆ, ಟೆಲಿಕಾಂ ವಲಯದಲ್ಲಿ ಮಾಡಿದಂತಹ ಕ್ರಾಂತಿಕಾಕರ ಬದಲಾವಣೆಯನ್ನು DTH ಲೋಕದಲ್ಲೂ ಮಾಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಜಿಯೋ DTH ಮೂರು ತಿಂಗಳಲ್ಲ, 6 ತಿಂಗಳು ಫ್ರೀ...!!

ಓದಿರಿ: ಏಪ್ರಿಲ್ 15ರ ನಂತರವೂ ಜಿಯೋ ಉಚಿತ ಸೇವೆ ಕೊನೆಯಾಗಿಲ್ಲ ಏಕೆ?

ಸದ್ಯ ರಿಲಯನ್ಸ್ ಮಾಲೀಕತ್ವದ ಜಿಯೋ ಮೇಲೆ ಸಾರ್ವಜನಿಕರ ನಂಬಿಕೆಯೂ ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ಜನರ ನಂಬಿಕೆಯನ್ನು ಉಳಿಸಿಕೊಂಡು, ತಾನು ಮಾರುಕಟ್ಟೆಯಲ್ಲಿ ಭದ್ರವಾಗಿ ಉಳಿದುಕೊಳ್ಳುವ ಸಲುವಾಗಿ ಜಿಯೋ ಹೊಸ ಯೋಜನೆಯನ್ನು ರೂಪಿಸುತ್ತಿದೆ ಎನ್ನಲಾಗಿದೆ.

ಓದಿರಿ: ಉಚಿತವಾಗಿ ಆನ್‌ಲೈನಿನಲ್ಲಿ ಪಾಸ್‌ಪೋರ್ಟ್ ಮಾಡಿಸಿಕೊಳ್ಳುವುದು ಹೇಗೆ..? ಇಲ್ಲಿದೇ ಮಾಹಿತಿ

ಜಿಯೋ DTH ಬಿಡುಗೆಡೆಯ ದಿನಾಂಕ:

ಜಿಯೋ DTH ಬಿಡುಗೆಡೆಯ ದಿನಾಂಕ:

ಸದ್ಯ DTH ಸೇವೆಯನ್ನು ಆರಂಭಿಸುತ್ತಿರುವ ಜಿಯೋ ಈಗಾಗಲೇ ಸೆಟಪ್ ಬಾಕ್ಸ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದು, DTH ಸೆಟಪ್ ಬಾಕ್ಸ್ ಹೇಗಿರಲಿದೆ ಎಂಬ ಮಾಹಿತಿಯೂ ದೊರೆತಾಗಿದೆ. ಈ ಹಿನ್ನಲೆಯಲ್ಲಿ ಮೇ ಮೊದಲ ವಾರದಲ್ಲಿ ಜಿಯೋ DTH ಲಾಂಚ್ ಆಗಲಿದೆ ಎಂದು ಮೂಲಗಳು ತಿಳಿಸಿವೆ. ಏಪ್ರಿಲ್ 20ರ ನಂತರ ಲಾಂಚಿಂಗ್ ಡೇಟ್ ಕುರಿತು ಮಾಹಿತಿ ಲಭ್ಯವಾಗಲಿದೆ.

ಜಿಯೋ DTH ಚಾನಲ್‌ಗಳು:

ಜಿಯೋ DTH ಚಾನಲ್‌ಗಳು:

ಜಿಯೋ ದೇಶದಲ್ಲಿ ಲಭ್ಯವಿರುವ ಎಲ್ಲಾ ಚಾನಲ್ ಗಳನ್ನು ತನ್ನ DTH ಸೇವೆಯಲ್ಲಿ ಗ್ರಾಹಕರಿಗೆ ನೀಡಬೇಕು ಎಂಬ ಯೋಜನೆಯನ್ನು ರೂಪಿಸಿದೆ. ಮೂಲಗಳ ಪ್ರಕಾರ ಜಿಯೋ DTH ಸುಮಾರು 432 ಚಾನಲ್‌ಗಳನ್ನು ಪ್ರಸಾರ ಮಾಡಲಿದೆ. ಇದರಲ್ಲಿ 350 SD ನಾರ್ಮಲ್ ಚಾನಲ್‌ಗಳು, 50ಕ್ಕೂ ಹೆಚ್ಚು HD ಚಾನಲ್‌ಗಳು ಲಭ್ಯವಿರಲಿದ್ದು, ಇದೇ ಮೊದಲ ಬಾರಿಗೆ 4K ವಿಡಿಯೋಗಳನ್ನು ನೋಡುವ ಅವಕಾಶವನ್ನು ಜಿಯೋ ತನ್ನ ಗ್ರಾಹಕರಿಗೆ ಮಾಡಿಕೊಡುತ್ತಿದೆ.

ಜಿಯೋ DTHನೊಂದಿಗೆ ಕೈ ಜೋಡಿಸಿರುವ ನೆಟ್‌ವರ್ಕ್‌ಗಳು:

ಜಿಯೋ DTHನೊಂದಿಗೆ ಕೈ ಜೋಡಿಸಿರುವ ನೆಟ್‌ವರ್ಕ್‌ಗಳು:

ಜಿಯೋ DTH ಸೇವೆಯನ್ನು ನೀಡುತ್ತಿರುವ ಹಿನ್ನಲೆಯಲ್ಲಿ ದೇಶದಲ್ಲಿ ಹೆಚ್ಚಿನ ಚಾಲನ್‌ಗಳನ್ನು ಹೊಂದಿರುವ ನೆಟ್‌ವರ್ಕ್‌ಗಳೊಂದಿಗೆ ಕೈ ಜೋಡಿಸಿದೆ. ಕಲರ್ಸ್ ಚಾನಲ್‌ಗಳು, ಸೋನಿ ಚಾನಲ್‌ಗಳು, ಸ್ಟಾರ್‌ ನೆಟ್‌ವರ್ಕ್, ZEE ನೆಟ್‌ವರ್ಕ್‌, ಸ್ಟಾರ್ ಸ್ಪೋಡ್ಸ್ ಚಾನಲ್‌ಗಳು, ಟೆನ್ ಸ್ಪೋಡ್ಸ್ ಚಾನಲ್‌ಗಳು, ಡಿಡಿ ಚಾನಲ್‌ಗಳು, ಸೇರಿದಂತೆ ಪ್ರಾದೇಶಿಕ ಭಾಷೆಗಳ ಚಾನಲ್‌ಗಳೊಂದಿಗೂ ಒಪ್ಪಂದ ಮಾಡಿಕೊಂಡಿದೆ.

ಜಿಯೋ DTH ಬೆಲೆ:

ಜಿಯೋ DTH ಬೆಲೆ:

ಜಿಯೋ DTH ವಲಯದಲ್ಲಿಯೂ ದರ ಸಮರಕ್ಕೆ ಮುಂದಾಗಲಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಈ ಹಿನ್ನಲೆಯಲ್ಲಿ ನೋಡುವುದಾದರೆ ಜಿಯೋ ಆರಂಭದಲ್ಲಿ ರೂ. 180 ರಿಂದ ರೂ.200ರ ಒಳಗೆ ಮಾಸಿಕ ಬೆಲೆಯನ್ನು ನಿಗಧಿಪಡಿಸಲಿದೆ. ಅಲ್ಲದೇ ಸದ್ಯ ಮಾರುಕಟ್ಟೆಯಲ್ಲಿ ಇರುವ ಬೆಲೆಗಿಂತ ಕಡಮೆ ಬೆಲೆಗೆ ಗುಣಮಟ್ಟದ ಸೇವೆಯನ್ನು ನೀಡಲಿದೆ, 4G ಡೇಟಾವನ್ನು ಕಡಿಮೆ ಬೆಲೆಗೆ ನೀಡಿದ ಮಾದರಿಯಲ್ಲೇ ಇಲ್ಲಿಯೂ ಕ್ರಾಂತಿಯನ್ನು ಮಾಡಲಿದೆ.

ಜಿಯೋ DTH ವೆಲ್‌ಕಮ್ ಆಫರ್: 6 ತಿಂಗಳು ಉಚಿತ

ಜಿಯೋ DTH ವೆಲ್‌ಕಮ್ ಆಫರ್: 6 ತಿಂಗಳು ಉಚಿತ

ಈಗಾಗಲೇ ಜಿಯೋ ಲಾಂಚ್ ಸಂದರ್ಭದಲ್ಲಿ ಪ್ರಮೋಷನ್‌ಗಾಗಿ ಮೂರು ತಿಂಗಳ ಉಚಿತ ಸೇವೆಯನ್ನು ನೀಡಿದ್ದ ಮಾದರಿಯಲ್ಲೇ ಜಿಯೋ ಡಿಟಿಹೆಚ್ ಲಾಂಚ್ ವೇಳೆಯಲ್ಲಿಯೂ ಉಚಿತ ಸೇವೆಯನ್ನು ನೀಡಲು ಜಿಯೋ ಚಿಂತನೆ ನಡೆಸಿದ್ದು, ಜಿಯೋ ಸೆಟಪ್‌ ಬಾಕ್ಸ್ ಕೊಳ್ಳಲು ಗ್ರಾಹಕರು ಹೆಚ್ಚಿನ ಬೆಲೆ ನೀಡಬೇಕಾಗಿರುವುದರಿಂದ ಮೊದಲ 6 ತಿಂಗಳು ಉಚಿತ ಸೇವೆಯನ್ನು ನೀಡಲಿದೆ ಎನ್ನಲಾಗಿದೆ.

ಜಿಯೋ DTH ಪ್ಯಾಕ್ಸ್‌:

ಜಿಯೋ DTH ಪ್ಯಾಕ್ಸ್‌:

ಜಿಯೋ DTH ಲಾಂಚ್ ಆಗುವ ವೇಳೆಯಲ್ಲಿ ವಿವಿಧ ಪ್ಲಾನ್‌ಗಳನ್ನು ಗ್ರಾಹಕರಿಗೆ ನೀಡಲಿದ್ದು, ಮೂಲ ಗಳ ಪ್ರಕಾರ ಈ ಕೆಳಗಿನ ಪ್ಲಾನ್‌ಗಳನ್ನು ಘೋಷಣೆ ಮಾಡಲಿದೆ.

 • ಜಿಯೋ DTH ಬೇಸಿಕ್ ಹೋಮ್ ಪ್ಯಾಕ್
 • ಜಿಯೋ DTH ಸಿಲ್ವರ್ ಪ್ಲಾನ್
 • ಜಿಯೋ DTH ಗೋಲ್ಡ್ ಪ್ಲಾನ್
 • ಜಿಯೋ DTH ಪ್ಲಾಟಿನಂ ಪ್ಲಾನ್
 • ಜಿಯೋ DHT ಮೈ ಪ್ಲಾನ್
ಜಿಯೋ DHT ಪ್ಲಾನ್ ಬೆಲೆಗಳು:

ಜಿಯೋ DHT ಪ್ಲಾನ್ ಬೆಲೆಗಳು:

 • ಸಾಧಾರಣ ಪ್ಯಾಕ್ - ರೂ. 49 - ರೂ. 55
 • ಸ್ಪೋಡ್ಸ್ ಚಾನಲ್ (HD) - ರೂ. 60 - ರೂ. 69
 • ಪ್ರಮುಖ ಚಾನಲ್‌ಗಳು - ರೂ. 120 - ರೂ. 150
 • ಮಕ್ಕಳ ಚಾನಲ್‌ಗಳು - ರೂ. 180 - 190
 • ಮೈ ಫ್ಯಾಮಿಲಿ ಪ್ಲಾನ್ - ರೂ. 200 - ರೂ. 250
 • ಮೈ ಪ್ಲಾನ್ - ರೂ. 50 - ರೂ. 54

 • ಅಲ್ಟ್ರಾ ಪ್ಯಾಕ್ - ರೂ. 199 - ರೂ. 220

 • ಮೆಟ್ರೋ ಪ್ಯಾಕ್ - ರೂ. 199 - ರೂ. 250
 • ಧೂಮ್ ಪ್ಯಾಕ್ - ರೂ. 99 - ರೂ. 109
 • ಜಿಯೋ DHT ದಕ್ಷಿಣ ಭಾರತ ಪ್ಲಾನ್‌ಗಳು:

  ಜಿಯೋ DHT ದಕ್ಷಿಣ ಭಾರತ ಪ್ಲಾನ್‌ಗಳು:

  ಜಿಯೋ DHT ಪ್ರಾದೇಶಿಕವಾಗಿಯೂ ಗ್ರಾಹಕರನ್ನು ಸೆಳೆಯಲು ಮುಂದಾಗಿದ್ದು, ಇದಕ್ಕಾಗಿ ದಕ್ಷಿಣ ಭಾರತಕ್ಕಾಗಿಯೇ ಪ್ಯಾಕ್‌ಗಳನ್ನು ಬಿಡುಗಡೆ ಮಾಡಲಿದೆ.

  • ಸೌಥ್ ಇಂಡಿಯನ್ ವ್ಯಾಲ್ಯು ಪ್ಯಾಕ್ - ರೂ. 120 - ರೂ. 130
  • ಸೌಥ್ ಮ್ಯಾಕ್ಸಿಮಮ್ ಪ್ಯಾಕ್- ರೂ. 134- ರೂ. 145
  • ಮೈ ಸ್ಪೋಡ್ಸ್: ರೂ.145 - ರೂ. 150
  • ಮೆಗಾ ಪ್ಯಾಕ್‌: ರೂ. 199 - ರೂ. 299
  • ಸೌಥ್ ಆಲ್ಟ್ರಾ ಪ್ಯಾಕ್‌: ರೂ. 199 - ರೂ. 250
  ಜಿಯೋ DHT ಸೆಟಪ್ ಬಾಕ್ಸ್ ವಿಶೇಷತೆ:

  ಜಿಯೋ DHT ಸೆಟಪ್ ಬಾಕ್ಸ್ ವಿಶೇಷತೆ:

  ಜಿಯೋ DHT ಬೇರೆ ಸೆಟಪ್ ಬಾಕ್ಸ್ ಗಳಿಗಿಂತ ವಿಭಿನ್ನವಾಗಿರಲಿದ್ದು, HDMI ಸಫೋರ್ಟ್ ಮಾಡಲಿದೆ. ಇದರಲ್ಲಿ 4K ವಿಡಿಯೋ ರೆಕಾರ್ಡಿಂಗ್ ಮಾಡುವ ಸಾಧ್ಯತೆ ಇರಲಿದೆ. ಅಲ್ಲದೇ UHD ವಿಡಿಯೋ ಪ್ರಸಾರದ ಗುಣಮಟ್ಟವನ್ನು ಹೊಂದಿದೆ. ಇದರೊಂದಿಗೆ ವೈ-ಫೈ, ಬ್ಲೂಟೂತ್, ಗೂಗಲ್ ಕ್ರೋಮ್ ಕಾಸ್ಟ್, ರಿಮೋಟ್ ಕಂಟ್ರೋಲ್ ಮತ್ತು ಆಂಡ್ರಾಯ್ಡ್ ಟಿವಿ ವೈಶಿಷ್ಟವನ್ನು ಹೊಂದಿದೆ.

  ಜಿಯೋ DHTಗೆ ಸ್ಪರ್ಧೆ ಹೇಗಿದೆ:

  ಜಿಯೋ DHTಗೆ ಸ್ಪರ್ಧೆ ಹೇಗಿದೆ:

  ಜಿಯೋ DHT ಸೇವೆ ಆರಂಭದಲ್ಲಿ ಮೂರು ತಿಂಗಳಲ್ಲ, ಆರು ತಿಂಗಳು ಉಚಿತ ಎನ್ನುವ ಮಾಹಿತಿ ದೊರೆತ ಹಿನ್ನಲೆಯಲ್ಲಿ ಮತ್ತು ಬೆಲೆಗಳು ಅತೀ ಕಡಿಮೆ ಇರುವ ಕಾರಣದಿಂದ ಈಗಾಗಲೇ ಮಾರುಕಟ್ಟೆಯಲ್ಲಿ ದರ ಸಮರ ಆರಂಭವಾಗಲಿದೆ. ಏರ್‌ಟೆಲ್ ಇದಕ್ಕಾಗಿ ತಯಾರಿ ನಡೆಸಿದೆ ಎನ್ನಲಾಗಿದೆ. ಬೇರೆ ಕಂಪನಿಗಳೂ ಗ್ರಾಹಕರ ಮನವೊಲಿಕೆಗೆ ಮುಂದಾಗಲಿವೆ.

  Most Read Articles
  Best Mobiles in India

  Read more about:
  English summary
  reliance Jio has created a buzz in the telecom segment with its disruptively priced plans and free services. Since the launch of its 4G services, Jio is rumored to be working on its own DTH service. to know more visit kannada.gizbot.com

  ಉತ್ತಮ ಫೋನ್‌ಗಳು

  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more